ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಮ್ಮಾದೇವಿ ನಮ್ಮ ದೇವರು ಬಂದರು ಕಾಣ ಪ. ಸೋಮಾಸುರನೆಂಬ ದೈತ್ಯನು ಸಾಮಕ ವೇದವನೊಯ್ಯಲು ಮಾ ಸೋಮಾಸುರನೆಂಬವನ ಕೊಂದು ಸಾಮಕವೇದವ ತಂದನು ಮಾ 1 ಗುಡ್ಡವು ಮುಳುಗಿ ಪೋಗಲು ನಮ್ಮದೇವ ಗುಡ್ಡವ ಬೆನ್ನಲ್ಲಿಟ್ಟನು ಮಾ ಗುಡ್ಡದಂಥÀ ದೈತ್ಯರನೆಲ್ಲ ಅಡ್ಡÀಕೆಡಹಿ ಬಿಸುಟನು ಮಾ 2 ಚಿನ್ನಗಣ್ಣಿನವನು ಬಂದು ಕನ್ನೆ ಪೆಣ್ಣನೊಯ್ಯಲು ಮಾ ವರ್ಣರೂಪವ ತಾಳಿ ಅವನ ಭಿನ್ನ ಭಿನ್ನವ ಮಾಡಿದನು ಮಾ 3 ಕಂಭದಿಂದಲೆ ಉದಿಸಿ ನಮ್ಮ ದೇವ ಜಂಭದಸುರನ ಬಡಿದನು ಮಾ ನಂಬಿದ ಪ್ರಹ್ಲಾದನ್ನ ಕಾಯಿದ ಅಂಬುಜನಾಭ ನರಸಿಂಗನು ಮಾ 4 ಬಲು ಮುರುಡನಾಗಿ ಭೂಮಿಯ ಬಲಿಯ ದಾನವ ಬೇಡಿದ ಮಾ ಇಳೆಯ ಈರಡಿಯ ಮಾಡಿ ಬಲಿಯ ಪಾತಾಳಕೊತ್ತಿದ ಮಾ 5 ಕೊಡಲಿಯನ್ನು ಪಿಡಿದು ನಮ್ಮದೇವ ಕಡಿದ ಕ್ಷತ್ರಿಯ ರಾಯರ ಮಾ ಹಡೆದ ತಾಯ ಶಿರವ ತರಿದು ಪಡೆದನಾಕೆÉಯ ಪ್ರಾಣವ ಮಾ 6 ಎಂಟೆರಡು ತಲೆಯ ಅಸುರನ ಕಂಠವ ಛೇದಿಸಿ ಬಿಟ್ಟನು ಮಾ ಒಂಟಿರೂಪವ ತಾಳಿ ಲಂಕೆಯ ಬಂಟ ವಿಭೀಷಣಗಿತ್ತನು ಮಾ 7 ಸೋಳಸಾಸಿರ ಗೋಪಿಯರೊಡನೆ ಕೇಳೀಮೇಳದಲಿಪ್ಪನು ಮಾ ಬಾಲಕನಾಗಿ ಪೆಣ್ಣರೂಪದಲಿ ಶ್ರೀ- ಲೋಲ ಲಕ್ಷ್ಮಿಯ ಅರಸನು ಮಾ 8 ಒಪ್ಪದಿಂದಲಿ ಬಂದು ನಮ್ಮ ದೇವ ಇಪ್ಪೆವನದೊಳಗಿಪ್ಪನು ಮಾ ಸರ್ಪಶರನಾಗಿ ಪೋಗಿ ತ್ರಿಪುರಸಂಹರ ಮಾಡಿದ ಮಾ 9 ಎಲ್ಲಮ್ಮಾ ಎಲ್ಲಮ್ಮಾ ನಮ್ಮದೇವ ಬಲ್ಲಿದ ಕಲ್ಕ್ಯವತಾರನು ಮಾ ಇಳೆಯ ಸ್ವರ್ಗ ಪಾತಾಳಕೊಡೆಯ ಚೆಲುವ ಹಯವದನನು ಮಾ 10
--------------
ವಾದಿರಾಜ
ಸೋಮಾಸುರನೆಂಬ ಅಸುರನು ಸಾಮಕವೇದವ ಒಯ್ಯಲು ಮಾ ಸೋಮಾಸುರದೈತ್ಯನ ಕೊಂದು ಸಾಮಕವೇದವ ತಂದನು ಮಾ 1 ಗುಡ್ಡವು ಮುಳುಗಿ ಪೋಗಲು ನಮ್ಮ ದೇವ ಗುಡ್ಡ ಬೆನ್ನೊಳಗಿತ್ತನು ಮಾ ಗುಡ್ಡದಂಥ ದೈತ್ಯರನೆಲ್ಲ ಅಡ್ಡ ಕೆಡಹಿ ಬಿಸುಟನು ಮಾ 2 ಚಿನ್ನಗಣ್ಣಿನವನು ಬಂದು ಕನ್ನೆ ಹೆಣ್ಣನೊಯ್ಯಲು ಮಾ ವರ್ಣರೂಪವ ತಾಳಿದಸುರನ ಛಿನ್ನಭಿನ್ನವ ಮಾಡಿದನು ಮಾ 3 ಕಂಬದಿಂದಲಿ ಬಂದು ನಮ್ಮ ದೇವ ಇಂಬಾದಸುರನ ಬಗಿದನು ಮಾ ನಂಬಿದ ಪ್ರಹ್ಲಾದನ ಕಾಯ್ದ ಅಂಬುಜನಾಭ ನೃಸಿಂಹನು ಮಾ 4 ಮುರುಡನಾಗಿ ಬಂದು ನಮ್ಮ ದೇವ ಬಲಿಯ ದಾನವ ಬೇಡಿದನು ಮಾ ಇಳೆಯ ಈರಡಿಯ ಮಾಡಿ ಬಲಿಯ ಪಾತಾಳಕ್ಕೊತ್ತಿದನು ಮಾ 5 ಕೊಡಲಿಯನು ಪಿಡಿದು ನಮ್ಮ ದೇವ ಕಡಿದ ಕ್ಷತಿಯರಾಯ (ಯರ?) ನು ಮಾ ಹಡೆದ ತಾಯಿಯ ಶಿರವ ತರಿದು ಪಡೆದನಾಕೆಯ ಪ್ರಾಣ(ಣವ?) ನು ಮಾ 6 ಎಂಟು ಎರಡು ತಲೆಯ ಅಸುರನ ಕಂಠವ ಛೇದಿಸಿ ಬಿಸುಟನು ಮಾ ಒಂಟೀ ರೂಪವ(?) ತಾಳಿದಸುರನ ಗಂಟ ವಿಭೀಷಭಣಗಿತ್ತನು ಮಾ 7 ಸೋಳಸಾಸಿರ ಗೋಪಿಯರೊಡನೆ ಕೇಳಿಮೇಳದೊಳಿದ್ದನು ಮಾ ಬಾಲಕನಾಗಿ ತನ್ನುದರದಲಿ ಲೋಲ ಲಕ್ಷ್ಮಿಗರಸನು ಮಾ 8 ಒಪ್ಪದಿಂದಲಿ ಬಂದು ನಮ್ಮ ದೇವ ಇಪ್ಪ್ಪೆವನದೊಳಗಿಪ್ಪನು ಮಾ ಸರ್ಪಶಯನನಾಗಿ ಪೋಗಿ ತ್ರಿಪುರಸಂಹಾರ ಮಾಡಿದನು ಮಾ 9 ಏನು ಮಾಯನು ಮಾಯನು ಮಾ ನಮ್ಮ ದೇವ ಬಲ್ಲಿದ ಕಲ್ಕ್ಯಾವತಾರನು ಮಾ ಇಳೆಯ ಸ್ವರ್ಗ ಪಾತಾಳಕ್ಕೊಡೆಯ ಚೆಲುವ ಶ್ರೀ ಹಯವದನನು ಮಾ 10
--------------
ವಾದಿರಾಜ