ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದರ್ಪಣದಲಿ ಮುಖ ನೋಡಿಕೊಂಡನೆ ಪ ಮಲ್ಲಿಗೆ ಮುಗುಳಿನ ತೆರದಲಿ ಶೋಭಿಪ ಪಲ್ಲುಗಳಲೆ ಸಿರಿಯುಗಲ್ಲವು ಭೂಪತಿಯಂದದಿ ಬೃಸ್ವರಾಬಿಲ್ಲಿನ ಸೌಭಗವು1 ಶರದುದಿತಾಮಲ ತರುಣಿಕರಾರ್ಚಿತ ಸರಸಿಜದಳನಯನಾಕರುಣಪೂರ್ಣ ಕಟಾಕ್ಷ ರಕ್ಷಣ ವರಪಲ್ಲವರರಸನು 2 ರತ್ನಕುಂಡಲದ್ವಯ ಸಂಶೋಭಿತ ಸ್ತೋತ್ರಯುಗಳ ನೇಮಮಸ್ತಕದಲಿ ಮಾಣಿಕ ಮುಕುಟ ಶ್ರೀ ಉತ್ತಮ ಮುಖಧಾಮ 3 ನಿತ್ಯಾನಂದ ಚಿದಾತ್ಮಕ ಶಕ್ತನು ಭಕ್ತಕಾಮಿತದಾತಎತ್ತುವೆ ಕರಯುಗ ತವ ಕಮಲಕೆ ಚಿತ್ರ ಚರಿತ್ರ ಗಾತ್ರಾ 4 ನಾಸಕ ಚಂಪಕ ಕೋಶವು ಬಿಂಬಾಧರ ಯುಗಳದೋಷರಹಿತ ಸುರಾಹ ಸರೋಜ ಇಂದಿರೇಶ ವದನ 5
--------------
ಇಂದಿರೇಶರು
ನಿತ್ಯ ಚಿದಾತ್ಮಕ ಸತ್ಯ ರುಕ್ಮಿಣಿಯರು ಜೊತ್ತಿಲಾಡುತ ತಮ್ಮ ಪತಿಯ ಉತ್ತಮಗುಣಗಣ ವರ್ಣಿಸುವದಕನುವೃತ್ತರಾಗುತ ವಾದಿಸಿದರು ಪ. ಅಕ್ಕ ಕೇಳರಿಗಳ ವಶರಾಗಿ ಸೆರೆಯೊಳು ಸಿಕ್ಕಿದವರ ಮಗನಿವನು ಚಿಕ್ಕತನದಿ ಗೋವ ವಕ್ಕಲಿಗರು ಬಾಯೊ- ಳಿಕ್ಕಿದನ್ನವನುಂಡದೇನು 1 ನಿರಪರಾಧಿಯನೀತ ತರಿದನೆಂಬಕೀರ್ತಿ ಬರದಂತೆ ಸೆರೆಯೊಳುದಿಸಿದ ಸುರರೆಲ್ಲ ಗೋಪರಾಗಿರುವುದರಿತು ಸೇವ- ಕರಿಗೊಲಿವುತ್ತಲಿ ಮೆರೆವ 2 ಪಾಂಡುಕುಮಾರನ ಭಂಡಿ ಹೊಡಲು ಪಾಲ ನುಂಡನು ವಿದುರನ ಗೃಹದಿ ಗಂಡರಾಳುವ ಗರತೇರ ನೆರೆದವನ ಹೆಂಡರಾಗಿರುವದಿನ್ನೆಂತು 3 ಭಕ್ತವತ್ಸಲನೆಂಬ ಬಿರುದ ತೋರುವದತಿ ಶಕ್ತಿ ಹರಿಗೆ ಶೋಭಾಕರವು ತೊತ್ತಿನ ಮಗನಿಂದಲಿತ್ತ ಕೌರವನೆಂಬ ತತ್ವ ತೋರಿದನಲ್ಲವೇನೆ 4 ಧರೆಯನಾಳದೆ ತನ್ನ ಪರಿವಾರ ಸಹಿತಾಗಿ ಶರಧಿಯೊಳಗೆ ವಾಸವಾಗಿ ದುರುಳ ಜರಾಸಂಧ ಬರುವ ಭೀತಿಯ ತಾಳಿ ಲ್ಲಿರುವ ಕಾರಣವೇನೆ ಜಾಣೆ 5 ಈರೆಂಟು ಮತ್ತೊಂದು ಭಾರಿ ಸಮರದಲ್ಲಿ ಬಾರುಹದ್ರಥನನ್ನು ಗೆಲಿದ ಧೀರನೀತನು ಭಕ್ತ ಮಾರುತಿಯಲಿ ಜಯ ತೋರಲಂತಿರುವನು ಕಾಣೆ 6 ಜಾರ ಚೋರರಿಗೆಲ್ಲ ಗುರು ನಿಮ್ಮ ಪತಿಯೆಂದು ವೂರನಾರಿಯರೆಲ್ಲ ನುಡಿವ ಕ್ರೂರ ಮಾತನು ಕೇಳಲಾರೆನಕ್ಕಯ್ಯ ಯಿ ನ್ಯಾರಿಗೆಂದುತ್ತರ ಕೊಡುವೆ 7 ಘತಿತ ಪಾವನ ಪದ್ಮಜಾತಜನಕ ಶ್ರೀ ಪತಿ ಸುಜನಾನಂದದಾಯಿ ವಿತತ ವಿಡಂಬನ ತೋರುವ ವೆಂಕಟ ಪತಿ ದೋಷಹರ ಶೇಷಶಾಯಿ 8 ಹಸೆಗೆ ಕರೆವ ಮತ್ತು ಆರತಿಯ ಹಾಡುಗಳು
--------------
ತುಪಾಕಿ ವೆಂಕಟರಮಣಾಚಾರ್ಯ