ನಿನ್ನೊಳು ನೀನೆ ನಿನ್ನೊಳು ನೀನೆ
ನಿನ್ನೊಳು ನೀನೆ ನೋಡಿ ಪೂರ್ಣ
ಚನ್ನಾಗೇನಾರೆ ಮಾಡು ಪ್ರಾಣಿ ಧ್ರುವ
ಕಾಯಕ ವಾಚಕ ಮಾನಸದಿಂದ
ಸ್ಥಾಯಿಕನಾಗಿ ನೋಡಿ ಸ್ಥಾಯಿಕನಾಗಿ ನೋಡಿ
ಮಾಯಿಕಗುಣದೋರುದು ಬಿಟ್ಟು
ನಾಯಕನಾಗಿ ಕುಡು ಪ್ರಾಣಿ 1
ಸೆರಗ ಬಿಟ್ಟು ಮರಗಬ್ಯಾಡ
ಕರಗಿ ಮನ ಕೂರು ಕರಗಿ ಮನ ಕೂಡು
ಎರಗಿ ಗುರು ಪಾದಕ್ಕಿನ್ನು
ತಿರುಗಿ ನಿನ್ನ ನೋಡು ಪ್ರಾಣಿ 2
ಮರೆವು ಮಾಯ ಮುಸುಕ ಬಿಟ್ಟು
ಅರುವಿನೊಳು ಕೂಡು ಅರುವಿನೊಳು ಕೂಡು
ತರಳ ಮಹಿಪತಿ ನಿನ್ನ
ಗುರುತು ನಿಜ ಮಾಡು ಪ್ರಾಣಿ 3