ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಊ) ಕ್ಷೇತ್ರ ವರ್ಣನೆ 1. ಬೇಲೂರು ಚನ್ನಕೇಶವರಾಯ ಚೆಲುವ ಚೆನ್ನಿಗರಾಯಾ ನಿನ್ನ ಕಾಣದೇ ನಿಲ್ಲಲಾರೆ ಬೇಲೂರ ಪ ವಜ್ರ ಪದುಮ ಪತಾಕಾಂಕುಶಗಳು ನಿಜಸತಿ ಲಕುಮಿದೇವಿಯರಾ ಭುಜ ಕುಚ ಕುಂಕುಮಾಂಕಿತ ಧರಾಂಕಿತ ಭಜಕರ ಭಾಗ್ಯೋದಯ ಪಾದಯುಗಳದಾ 1 ಸುರ ವೈರಿಗಳೆದೆ ಥಲ್ಲಣವೆನಿಸುವಾ ಬಿರುದಿನ ಖಡ್ಡೆಯಪ್ಪ ಚರಣಂಗಳಾ ಗರುಡನ ಹೆಗಲೇರಿ ಉದರದಿ ವಿರಿಂಚಿಯು ಉದುಭವಿಸಿದ ವರನಾಭಿಯ ಚೆಲುವಿನಾ 2 ಪೊಂಬಟ್ಟೆಯಿಂದೆಸೆವ ಪೀತಾಂಬರ ಚೆಂಬೊನ್ನದ ಕಾಂಚಿಯದಾಮದಾ ಅಂಬುಜ ಕೌಮೋದಕಿ ಸುದರುಶನ ಕಂಬುವ ಧರಿಸಿಹ ಚತುರುಭುಜಂಗಳಾ 3 ಶ್ರೀಯಾಲಿಂಗಿಸಿ ಸುಖವ ಕಾಮಿನಿಯರ ಶ್ರೀಯೋಗವ ತೋರಿಸೆನಗೊಮ್ಮೆ ಹಾಯೆಂದು ಬಿಗಿದಪ್ಪಿ ನಂಬಿಸಿ ಚುಂಬಿಸಿ ಬಾಯ ತಂಬುಲವಿತ್ತು ಬಂದೆನ್ನ ನೆರೆಯಾ 4 ಕರೆವೆನ್ನ ಮನದಲ್ಲಿ ಕರೆವ ನಾಲಿಗೆಯಲ್ಲಿ ಕರೆವೆನ್ನ ಕಣ್ಣುಸನ್ನೆಯಲೀ ಕರೆವೆ ನೆರೆವೆ ನಿನ್ನ ಚರಣಕೆರಗುವೆ ನಾ ವರವೈಕುಂಠಕೇಶವ ಬೇಲೂರ 5
--------------
ಬೇಲೂರು ವೈಕುಂಠದಾಸರು
ಕಂಡೆನಯ್ಯ ಚನ್ನಕೇಶವರಾಯನ ವೇಲಾಪುರದರಸನ ಸುಕೃತ ಫಲದಿಂದ ಪ ಹೇಯ ವಿಷಯದಿ ರಂಗನಾಕನ ಮರೆದ ಪಶುವಾನು ಹೇಯನಲ್ಲದೆ ನರಕದಲಿ ಬೀಳ್ವವನು1 ಕಂಡೆ ಶಂಖ ಚಕ್ರ ಪದುಮಧರನ ಕಿರೀಟ ಕುಂಡಲಧರನ ಪೀತಾಂಬರಧರನ 2 ಸುರಸಿಂಧು ಜನನ ಕಾರಣ ಚರಣಕಮಲ ವಿಕಾಸ ಧರನ ಕರುಣಾಪವರಧರನ ರಂಗನಾಯಕನ 3
--------------
ಬೇಲೂರು ವೈಕುಂಠದಾಸರು
ಕನ್ನಡಿಯ ಪೋಲುವೊ ಚೆನ್ನ ಕೆನ್ನೆಯ ತೋರು ಪ. ಚನ್ನ ಚೆಲುವೆ ಬಣ್ಣದರಿಶಿಣವ ಪೂಸುವೆನು ರನ್ನದ ಲಲಾಟಕೆ ಚನ್ನ ಕುಂಕುಮ ತಿಲಕ ಚಿನ್ನದಾ ಬೊಂಬೆ ಪದ್ಮಾವತಿ ನಿನಗೆ ತಿದ್ದುವೆನೆ ಚನ್ನಕೇಶವರಾಯ ನಿನ್ನ ಚೆಲುವಿಕೆಗೆ ಮೆಚ್ಚಿ ಬಂದಿಹೆನೆ 1 ಅರವಿಂದದಳನಯನೆ ಅಡವಿಯಲಿ ಯನ ಮೇಲೆ ಅರಸಿ ನೀ ಕಲ್ಲುಗಳ ಬೀಸಿದಾ ಕರಕೆ ಗಂಧ ಸರಸದಲಿ ಹಚ್ಚುವೆನೆ ಸರಸಿಜಾಕ್ಷಿಯೆ ಕೊರಳ ಹರುಷದಲಿ ತೋರೀಗ ನಿನ್ನ ಸರಸಿಜಾಕ್ಷಗೆ ಅರಸಿ ಪದ್ಮಿನಿಯೆ 2 ಸರ್ಪವೇಣಿಯೆ ನಿನಗೆ ಕಂದರ್ಪಪಿತ ಮಲ್ಲಿಕಾ ಪುಷ್ಪ ದಂಡೆಯನು ಮುಡಿಸುವೆನು ಕಮಲನಯನೆ ಸರ್ಪಶಯನನು ನಿನಗೆ ಅರ್ಪಿಸುವೆ ಸುತಾಂಬೂಲ ದರ್ಪವನು ಬಿಟ್ಟು ಕೈಕೊಳ್ಳೆ ವೀಳ್ಯವ ಅರಸಿ ಸರ್ವರಿಗೆ ಅಪ್ಪ ಶ್ರೀ ಶ್ರೀನಿವಾಸಾನೆಂದು ತಿಳಿಯೆ ದೇವಿ 3
--------------
ಸರಸ್ವತಿ ಬಾಯಿ
ಕೇಶವಾಯೆನ್ನಿರಯ್ಯ ಹಾಗಂದೂ ಪಾಶವ ಕಡಿಯಿರಯ್ಯ ಪ ಕೇಶವ ನಾಮವ ಭಜಿಸುತ್ತಲೀಗ ಆಸÉ ಕ್ಲೇಶಗಳನ್ನು ನೀಗಿರಿ ಬೇಗ ಅ.ಪ. ವರದೂರ್ವಾಪುರದಲ್ಲಿ ನಿರುತನಾಗಿದ್ದು ತಾ ಪರಮ ದಾಸರಿಗೆಲ್ಲ ಹರಿ ಭಾಸವಪ್ಪಾ ಶರಣರ ಪಾಲಕ ಚನ್ನಕೇಶವರಾಯ ಪರಬ್ರಹ್ಮ ರೂಪದಿ ಮೆರೆವ ಗೋಪಾಲ 1 ತರಳ ಪ್ರಲ್ಹಾದ ಕೇಶವನನ್ನು ಸ್ಮರಿಸಲು ದುರುಳ ತಾತನ ಕೊಂದು ಕಂದನ ಪೊರೆದಾ ಸರಳೆ ಪಾಂಚಾಲೆಯು ಸಭೆಯಲ್ಲಿ ಮೊರೆಯಿಡೆ ತರುಣಿಗಕ್ಷಯವಿತ್ತು ಶ್ರೀಹರಿ ಪೊರೆದಾ 2
--------------
ಕರ್ಕಿ ಕೇಶವದಾಸ
ನಿನ್ನ ನಂಬಿದೆನಯ್ಯ ಚನ್ನಕೇಶವರಾಯ ಇನ್ನಾದಾರೂ ಕೃಪೆಯ ತೋರಿಸಯ್ಯ ಪ ಎನ್ನ ಕರ್ಮದ ಫಲದಿ ಬನ್ನಗೊಂಡಿಹೆನಯ್ಯ ನಿನ್ನ ಚರಣವನೆನಗೆ ಸನ್ನಿಹಿತ ಮಾಡಯ್ಯ ಅ.ಪ ನಡೆವುದೂ ನಿನಗಾಗಿ ನುಡಿವುದೂ ನಿನಗಾಗಿ ಪಡೆವುದೂ ನಿನಗಾಗಿ ಎನ್ನಿಸಯ್ಯ ಕೊಡುವವನು ನೀನಾಗಿ ಪಡೆವವನು ನಾನಾಗಿ ಪೊಡವಿಯಲೆಷ್ಟುದಿನ ಬಾಳ್ವುದಯ್ಯ 1 ಕಲಿಯುಗದಿ ಭಜನೆಯಿಂದಲೆ ಭವವು ಕಳೆವುದೆಂದು ಉಲಿದರೈ ವ್ಯಾಸಾದಿ ಮುನಿವರ್ಯರು ಕಲುಷ ಪೂರಿತನಾಗಿ ಬಲುನೊಂದೆ ಕೈ ಪಿಡಿಯೊ ಮಾಂಗಿರಿರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್