ಒಟ್ಟು 9 ಕಡೆಗಳಲ್ಲಿ , 2 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೇನು ಬೇಕಯ್ಯ ಶ್ರೀ ಹರಿಯೆ ನಿನಗೇ ನೀನೆ ಗತಿಯೆಂದು ಸರ್ವಸ್ವವೊಪ್ಪಿಸುವೇ ಪ ತರಳನಾಗಿಹ ಧೃವನು ಘೋರ ತಪವಂಗೈಯ ಹರುಷದಿಂ ಬಾಲಕಗೆ ವರ ಪದವಿಯಿತ್ತೇ ಕರುಣಾಳು ಶ್ರೀ ಹರಿಯೇ ನಿಂನ ಮೆಚ್ಚಿಸಲಿಕ್ಕೆ ಉರುತರದ ತಪವು ಬೇಕೇನೊ ನಾನರಿಯೇ 1 ದೊರೆಯು ರುಕುಮುಂಗದನು ಯೇಕಾದಶೀವ್ರತವ ಸರಸದಿಂದಾಚರಿಸೆ ನಿಜಭಕ್ತಗೊಲಿದೇ ಕರುಣಾಳು ಶ್ರೀಹರಿಯ ನಿನ್ನ ಮೆಚ್ಚಿಸಲಿಕ್ಕೆ ಉರುತರದ ವ್ರತವು ಬೇಕೇನೊ ನಾನರಿಯೇ 2 ತರಳ ಪ್ರಲ್ಹಾದ ತಾ ಹರಿನಾಮ ಕೀರ್ತಿಸಲು ದುರುಳ ತಾತನ ಕೊಂದು ಕಂದನನು ಪೊರೆದೆ ಕರುಣಾಳು ಶ್ರೀ ಹರಿಯೆ ನಿಂನÀ ಮೆಚ್ಚಿಸಲಿಕ್ಕೆ ಉರುತರದ ಕೀರ್ತನೆಯು ಬೇಕೋ ನಾ ನಾನರಿಯೇ 3 ಭರದಿ ದುಶ್ಯಾಸನನು ಮಾನವಂ ಕಳಯುತಿರೆ ಸರಳೆಗೇ ನೀನೊಲಿದು ಅಕ್ಷಯವನಿತ್ತೇ ಕರುಣಾಳು ಶ್ರೀಹರಿಯೆ ನಿನ್ನ ಮೆಚ್ಚಿಸಲಿಕ್ಕೆ ಉರುತರದ ಸ್ತೋತ್ರಗಳು ಬೇಕೋ ನಾನರಿಯೇ4 ಧರಣಿಸುತೆ ಜಾನ್ಹಕಿಯೆ ಹುಡುಕಲ್ಕಿ ವಿಕ್ರಮದಿ ಶರಧಿಯನು ದಾಟಿದಗೆ ಭರದಿಂದಲೊಲಿದೇ ಕರುಣಾಳು ಶ್ರೀಹರಿಯ ನಿನ್ನ ಮೆಚ್ಚಿಸಲಿಕ್ಕೆ ಉರುತರದ ದಾಸ್ಯತ್ವ ಬೇಕೋ ನಾನರಿಯೇ 5 ನಿರುತದಾಸರು ನಿನ್ನ ಸೇವೆಯನು ಮಾಡಲ್ಕೆ ಕರುಣದಿಂ ದಾಸರಿಗೆ ಪ್ರತ್ಯಕ್ಷನಾದೇ ಕರುಣಾಳು ಶ್ರೀ ಹರಿಯ ನಿನ್ನ ಮೆಚ್ಚಿಸಲಿಕ್ಕೆ ಉರುತರದ ಸೇವೆ ಬೇಕೇನೊ ನಾನರಿಯೇ 6 ವರ ದುರ್ವಾಪುರದಲ್ಲಿನಿತ್ತು ಮೆರೆಯುವಿಯೆಂದು ಸಿರಿ ಚನ್ನಕೇಶವನೆ ಪರಮಾತ್ಮನಂದೂ ಕರುಣಾಳು ಶ್ರೀ ಹರಿಯೆ ನಿನ್ನ ನಂಬುತಲಿಂದು ಮರೆಹೊಕ್ಕೆ ಕಾಯೋ ಶ್ರೀ ಈಶ ಸರ್ವೇಶಾ 7
--------------
ಕರ್ಕಿ ಕೇಶವದಾಸ
ಕಂಡೆ ನಾಕಂಡೆ ನಾಕಂಡೆ ಕಾಳಿಂಗನ ಮಂಡೆಯಮೇಲೆ ಕುಣಿವ ಕೃಷ್ಣನ್ನ ಪ ತಕ ತಕ ಧಿಮಿ ಧಿಮ್ಮಿ ಧಿಮ್ಮಿ ಧಿ- ಮ್ಮಿಕೆಂದು ಕುಣಿವ ಕೃಷ್ಣನ್ನ ನಾಕಂಡೆ ಅ.ಪ ಹೆಡೆಯ ಮೇಲೆ ತಾ ಎಡಗಾಲಿರಿಸಿ ಎಡಗೈಯಲಿ ಬಾಲ ಹಿಡಿದವನ ಬಿಡದೆ ಅಭಯಹಸ್ತವ ತೋರೊ ಒಡೆಯ ಕೃಷ್ಣಮೂರುತಿಯ ನಾಕಂಡೆ ಸ್ವಪ್ನದಲಿ ನಾಕಂಡೆ ಕಂಡೇನೊ ಸಂಪನ್ನಮೂರ್ತಿಯ ಕಂಡೇನೊ 1 ಗೋವಲರ ಮನೆಯ ಪಾಲುಂಡವನ ಗೋವುಗಳ ಕಾಯ್ದ ಗೋಪಾಲನ್ನ ಗೋವಿಂದನೆಂಬ ದೇವರದೇವನ್ನ ಓವಂತೆ ನಾನು ಕಂಡೇನು ಕಂಡೇನು ಕುಣಿಯುತ ಬಂದ ಕೃಷ್ಣನ್ನ ತಣಿಯುವ ಹಾಗೆ ನೋಡಿದೆನು 2 ಗೋವಿಂದನಾಗಿ ತಲೆಕಾಯ್ವವನ ಗೋವರ್ಧನವನೆ ಕೊಡೆಯಾದವನ ಗೋವನಿತೆಯರ ಮಾಮಾಯನನ್ನ ಅವ್ವಯ್ಯ ಚೆನ್ನಾಗಿ ಕಣ್ತುಂಬ ಕಂಡೆ ಆ ಮುದ್ದು ಬಾಲಕೃಷ್ಣನ್ನ ಕಂಡೆ ಸಾಮುದ್ರಿಕಾ ಸಿರಿಯನ್ನಕಂಡೆ 3 ಅಸುರ ಕಂಸನ ಅಸುವನ್ನು ನೀಗಿದನ ಬೆಸೆದ ಕುಬ್ಜೆಯ ಡೊಂಕ ತಿದ್ದಿದವನ ಅಸುತೆಗೆಯ ಬಂದವಳ ಅಸುವನೆ ಹೀರಿದನ ಮಿಸುಕದಂತೆ ಕಂಡೆ ನಾಕಂಡೆ ನಾಕಂಡೆ ಜಾಜಿಪುರೀಶನ ಕಂಡು ಧನ್ಯನಾದೆ ಸಾಜದಿ ದಾಸಾನುದಾಸನಾದೆ 4 ಪಾಪಿನಾ ಕರುಣೆಯ ತೋರಿ ಸಲಹೊ ಭಾಪುರೆ ಗಟ್ಟಿಸುವ ಪುಟ್ಟಪಾದವಿಟ್ಟು ಮೋಪಾಗಿ ಮೆರೆವ ದುಷ್ಟರ ಮೆಟ್ಟೊ ಪುಂಡರ ಪುಂಡರಿಗೆ ಪುಂಡನಾದವನೆ ಪುಂಡರೀಕಾಕ್ಷ ಚನ್ನಕೇಶವನೆ 5
--------------
ನಾರಾಯಣಶರ್ಮರು
ಕೇಶವ ಚರಣವಭಜಿಪÉ ಭಕ್ತಿಯಲೀ ಪ ಶ್ರೀಹರಿ ಕಥೆಗಳ ಲಾಲಿಸುವೆನು ನಿತ್ಯ ಶ್ರೀಹರಿ ಕೀರ್ತನೆ ಮಾಡುವೆ ನಿತ್ಯ ಶ್ರೀಹರಿ ಸ್ಮರಣೆಯ ಗೈಯುತಿಪ್ಪೆನು ನಿತ್ಯ ನಿತ್ಯ 1 ಶ್ರೀಹರಿ ರೂಪವ ಪೂಜಿಸುವೆನು ನಿತ್ಯ ಶ್ರೀಹರಿ ಚರಣವ ವಂದಿಪೆ ನಿತ್ಯ ಶ್ರೀಹರಿ ದಾಸ್ಯತ್ವ ವಹಿಸುವೆನೂ ನಿತ್ಯ ನಿತ್ಯ 2 ಶ್ರೀಹರಿಗಾತ್ಮವನರ್ಪಿಸುವೆನು ನಿತ್ಯ ಶ್ರೀಹರಿ ಚರಣದೊಳುರುಳುವೆ ನಿತ್ಯ ಭವ ಭಯ ಶ್ರೀಹರಿ ಚನ್ನಕೇಶವನೆ ಗತಿಯೆಂಬೇ 3
--------------
ಕರ್ಕಿ ಕೇಶವದಾಸ
ನಂಬಿದೆನು ಚರಣಗಳ ಪಾಲಿಸೈ ಹರಿಯೇ ನಂಬಿದೆನು ಶ್ರೀ ಚನ್ನಕೇಶವನೆ ದೊರಿಯೇ ಪ ಸರಳೆ ದ್ರೌಪದಿಯಂತೆ ಕರಿರಾಜ ಧೃವರಂತೆ ದುರುಳ ಕನಕಾಸುರನ ನಿಜತನುಜನಂತೇ ಖಗರಾಜ ಕಪಿಯಂತೆ ವರತತ್ತ್ವ ಭೋಧಿಸಿದ ಯತಿಗಣಗಳಂತೇ 1 ಗೌತುಮನ ಸತಿಯಂತೆ ಯಾದವರ ಪಡೆಯಂತೆ ಭೂತಳದಿ ಪೆಸರಾದ ಹರಿದಾಸರಂತೇ ಕೋತಿ ಜಾಂಬವನಂತೆ ಅಮರೇಶ ಸುತನಂತೆ ಆತುರದಿ ನಂಬಿರುವ ಶ್ರೀ ಲಕ್ಷ್ಮೀಯಂತೆ 2 ನಾನಿತ್ತ ಪೂಜೆಯಿಂ ನಾಗೈದ ಭಜನೆಯಿಂ ನಾನಿಂದು ಮಾಡಿದಾ ಹರಿಸ್ಮರಣೆಯಿಂದ ನೀನೊಲಿದೆಯಿಂತೆಂದು ದೃಢವಾಗಿ ನಂಬಿದೆನು ಹೀನನನು ಸಲಹಯ್ಯ ಸ್ವಾಮಿ ಕೇಶವನೇ 3
--------------
ಕರ್ಕಿ ಕೇಶವದಾಸ
ನಮೋ ನಮೋ ನಾರಾಯಣನೇ ಓಂ ನಮೋ ಚನ್ನಕೇಶವನೆ ಪ ಅಚ್ಯುತ ಪಾದದಿ ಸೇರಿಸೊ ಅನಂತ ಅ.ಪ ನಮೋ ನಮೋ ವೆಂಕಟರಮಣನೆ ಸಂಕಟಹರಿಸೋ ಶ್ರೀವರನೆ 1 ನಮೋ ನಮೋ ವರದರಾಜನೆ ವರವ ನೀಡೋ ಪುರುಷೋತ್ತಮನೆ 2 ನಮೋ ನಮೋ ಶ್ರೀರಂಗನಾಥನೆ ಸುರಕ್ಷೆಯ ಕೊಡೊ ಭಕ್ತವತ್ಸಲನೆ 3 ನಮೋ ನಮೋ ಸಂಪತ್ಕುಮಾರನೆ ಸಂಪತ್ತನು ಹರಿಸೋ ಶ್ರೀಹರಿಯೆ 4 ನಮೋ ನಮೋ ಮುದಿಗೆರೆ ರಂಗನೆ ಮುದದಿ ಕಾಪಾಡೋ ಮಾಧವನೆ 5 ನಮೋ ನಮೋ ಯದುಗಿರಿ ಚಲುವನೆ ಸದಯದಿ ಸಲಹೋ ದಾಮೋದರನೆ 6 ನಮೋ ನಮೋ ಜಾಜಿಪುರೀಶನೆ ನೀ ಜೋಪಾನಮಾಡೆನ್ನ ಪರಮಪಾವನನೆ 7
--------------
ನಾರಾಯಣಶರ್ಮರು
ಬನ್ನಿರಿ ದಾಸರೇ ಪೋಗುವಾ ನಮ್ಮ ಚನ್ನಕೇಶವನೆಂಬ ಹರಿಮಂದಿರಕೇ ಪ ಬನ್ನಿರಿ ಪೋಗುವಾ ಗುಡಿಯೊಳು ತಿನ್ನುವಾ ಚನ್ನಗೆ ಅರ್ಪಿಸಿ ತಂದ ಪಕ್ವಗಳ ಅ.ಪ. ನಾ ತಂದಿರುವೆನು ಪರಮಾನ್ನವನ್ನು ತಾತನ ನಾಮಕ್ಕೆ ಬೆರಿಸಿ ಮಾಡಿದೆನು ನೀತಿಯೊಳಾಭಕ್ತಿ ಮಧುಕ್ಷೀರವನ್ನು ಸತ್ಯದಿ ಕೂಡಿಸಿ ಸೇವಿಸುವಾ 1 ಪರಹಿತವೆನ್ನುವ ಸಕ್ಕರೆ ತಂದು ನಾ ಬೆರಿಸುವೆ ಧರ್ಮಗಳೆಂಬ ಪಾಯಸಕೇ ಹರಿಯ ಕೀರ್ತನೆಗಳ ಅಮೃತವ ಸೇರಿಸಿ ಪರಮಾನ್ನವೀ ರೀತಿ ಮಾಡಿರುವೆನಯ್ಯ 2 ಹರಿಭಕ್ತಿಯೆಂಬುವ ತಂಡುಲವನೆ ತಂದು ಹರಿಯ ಸ್ಮರಣೆಯೆಂಬ ವುದಕದಿ ತೊಳೆದು ಹರಿಯ ಭಜನೆಯೆಂಬ ಬೆಂಕಿಯ ಮೇಲಿಟ್ಟು ಸರಸದಿ ನಾ ಪಾಕವ ಮಾಡಿರುವೆ 3 ಸನ್ನುತ ದೂರ್ವಾಪಟ್ಟಣದಿ ನಿತ್ತಿರುವಂಥ ಪನ್ನಗಶಯನ ಶ್ರೀ ಹರಿಯ ನೆನೆಯುತ್ತ ಉನ್ನತ ಸೇವೆಯಿಂದಾತನ ಮೆಚ್ಚಿಸಿ ತಿನ್ನುವಾ ಕೇಶವ ನೀಯುವ ವರವಾ 4
--------------
ಕರ್ಕಿ ಕೇಶವದಾಸ
ಯಾಕೆ ಈ ದಾಸನನು ಸಲಹಲೊಲ್ಲೆ ಶ್ರೀಕಾಂತ ಭಕ್ತನನು ಕಾಯಲೊಲ್ಲೆ ಪ ತರಳತನದಲಿ ನಾನು ಪಾಪಗಳ ಮಾಡಿದರೆ ಪರಮಾತ್ಮ ಸದ್ಗುರುವೆ ತಿಳಿದು ಮಾಡಿದನೇ ನಿರುತ ಯೌವನದಲ್ಲಿ ಪಾಪಗಳ ಮಾಡಿದರೆ ಅರಿತು ಮಾಡಿದೆನೆಂದು ಬಗೆದೆಯಾ ಹರಿಯೇ 1 ಈಗ ವಾರ್ಧಿಕ್ಯದಲಿ ಪಾಪಮಾಡಿದೆನೆಂದು ನಾಗೇಶಶಯನನೇ ಮುನಿದೆಯಾ ಹರಿಯೇ ಜಾಗುಮಾಡದೆ ನೀನು ಅಜಮಿಳಗೆ ವಲಿದಂತೆ ಬೇಗನೇ ಸಲಹಯ್ಯ ನಾಮಸ್ಮರಿಸುವೆನೊ2 ಹರಿಸೇವೆಯನ್ನು ನಾ ಭಕ್ತಿಯಲಿ ಗೈವೇ ಹರುಷದಿಂ ಹರಿಯೆಂನ ಪಾಪಗಳ ಕ್ಷಮಿಸುತ್ತ ಸಿರಿ ಚನ್ನಕೇಶವನೆ ಮುನಿಯದಿರು ತಂದೆ 3
--------------
ಕರ್ಕಿ ಕೇಶವದಾಸ
ಸ್ವಾಮಿ ನೀನೇ ತಂದೆ ನೀನೇ ಯೆನ್ನಯ ಬಂಧು ಪ್ರೇಮದಿಂದಲಿ ಯೆನ್ನ ಸಲಹಯ್ಯ ಬಂದೇ ಪ ಐದು ಹುಲಿಗಳು ಬಂದು ಗಾರುಮಾಡುತಲೆನ್ನ ಕೈದಿನಲ್ಲಿಟ್ಟಿಹವು ಬಿಡಿಸಯ್ಯ ಹರಿಯೇ ಕೈದಿನಲ್ಲಿಟ್ಟೆನ್ನ ಕೆಲಸಕ್ಕೆ ಎಳತಂದು ಬÁಧೆಯ ಕೊಡುತಿಹವು ಬಿಡಿಸಯ್ಯ ಹರಿಯೇ 1 ಭವವೆಂಬ ಮೃಗರಾಜ ಬಗೆಯುತ್ತ ದೇಹದ ಜವದಿಂದ ತಿನ್ನುವಾ ಬಿಡಿಸಯ್ಯ ಹರಿಯೇ ಅವನಿಯೊಳು ಹುಟ್ಟು ಸಾವೆಂಬ ಗಜನಕ್ರಗಳು ತಿವಿದೆನ್ನ ಹೆಳೆಯುದರು ಬಿಡಿಸಯ್ಯ ಹರಿಯೇ 2 ಆರು ವೈರಿಗಳೆÀನ್ನ ಕಾಯವನು ಪಿಡಿದೊಯ್ದು ಯೆರಿಸೀ ಸುಡುತಿಹರು ಬಿಡಿಸಯ್ಯ ಹರಿಯೇ ಮಾರಿ ವಶಮಾಡುವದು ಬಿಡಿಸಯ್ಯ ಹರಿಯೇ 3 ಅನ್ಯರನು ಕಾಣೆ ನಾದೇವ ನಿನ್ನುಳಿದೀಗ ನೀನೆನ್ನ ಅಪರಾಧ ಕ್ಷಮಿಸೋ ಮರೆಹÉೂಕ್ಕೇ ಗಮನ ಶ್ರೀ ಚನ್ನಕೇಶವನೆ ಸನ್ನುತದಾಸನನು ಬಾಲನೆಂತೆಣಿಸೋ 4
--------------
ಕರ್ಕಿ ಕೇಶವದಾಸ
ಹರಿನಾಮ ಮರೆಯ ಬೇಡಯ್ಯ ಪರಿ ದುರಿತಗಳನ್ನು ಅದು ನೀಗುವುದಯ್ಯಾ ಪ ತರಳಪ್ರಲ್ಹಾದನಿಗೊಲಿದ ನಾಮವುಯಿದು ದುರುಳ ರಕ್ಕಸರನ್ನು ತರಿದ ನಾಮವೋ 1 ನಿರುತದಿ ಭಕ್ತರಿಗೊಲಿವ ನಾಮವುಯಿದು ಸರಸದಿ ಭಜಕರ ಪೊರೆವ ನಾಮವೋ 2 ಭಾಮೆಗಕ್ಷಯವಿತ್ತ ಪರಮನಾಮವುಯಿದು ಪ್ರೇಮದಿ ದಾಸರಿಗೊಲಿವ ನಾಮವೋ 3 ಕಾಮಿತ ವರಗಳನೀವ ನಾಮವುಯಿದು ನಿತ್ಯ ಭಜಿಪ ನಾಮವೋ 4 ದಶರೂಪ ಧರಿಸಿದ ದಿವ್ಯ ನಾಮವುಯಿದು ದಶಕಂಠನನು ಕೊಂದ ಶ್ರೀನಾಮವೋ 5 ಕೇಶವ ರೂಪದಿ ಮೆರೆವ ನಾಮವುಯಿದು ಪಾಶವ ಕಡಿಯುವ ನಿಜ ನಾಮವೋ 6 ವರ ದೂರ್ವಾಪುರದ ಶ್ರೀಹರಿಯ ನಾಮವುಯಿದು ಮರೆಯದೆ ಭಕ್ತರ ಪೊರೆವ ನಾಮವೋ 7 ಸಿರಿ ಚನ್ನಕೇಶವನೆಂಬ ನಾಮವೋ 8
--------------
ಕರ್ಕಿ ಕೇಶವದಾಸ