ಒಟ್ಟು 3 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಿ ನೋಡಿದರಲ್ಲಿ ಚನ್ನಕೇಶವನು ಪುಲ್ಲಲೋಚನನಾದ ಶ್ರೀ ಕೃಷ್ಣನು ಪ ಭೂತಳ ಪಾತಾಳ ಸಕಲ ಲೋಕಗಳಲ್ಲಿ ಭೂತ ಪ್ರೇತಾಳ ಕ್ರಿಮಿ ಜಂತುಗಳಲ್ಲಿ ಮಾತು ಚೇಷ್ಟಗಳಲ್ಲಿ ಕೆರೆ ಭಾವಿ ವನದಲ್ಲಿ ಕೋತಿ ಖಗವೃಂದ ಪಶುವರ್ಗಂಗಳಲ್ಲಿ 1 ವೇದ ಶಾಸ್ತ್ರಗಳಲ್ಲಿ ಸರ್ವ ಧರ್ಮಗಳಲ್ಲಿ ಬೋಧಕ ಮೊದಲಾದ ಗುರು ವರ್ಗದಲ್ಲಿ ಪಾದ ಪಾದಗಳಲ್ಲಿ ಸಾಧು ಸಜ್ಜನರಲ್ಲಿ ವಾದ್ಯ ಮೃದಂಗಾಗಿ ನಾದಂಗಳಲ್ಲಿ 2 ಕಣ್ಣುಗಳಿಗೆಸೆಯುವ ಸಕಲ ವಸ್ತುಗಳಲ್ಲಿ ಮಣ್ಣಿನಲಿ ಸರ್ವತ್ರ ಘನ ಸೃಷ್ಟಿಯಲ್ಲಿ ಬಣ್ಣಿಸಲ್ಕಾಗದ ಹರಿ ಕೀರ್ತನೆಗಳಲ್ಲಿ ಹೆಣ್ಣು ಹೊನ್ನು ಮಣ್ಣು ತ್ರಿವರ್ಗದಲ್ಲಿ 3 ಸಕಲ ಚರ ಪ್ರಾಣಿಯಲಿ ಅಚರ ಜೀವಗಳಲ್ಲಿ ಸಕಲ ಸ್ತ್ರೀ ಪುರುಷರಲಿ ಸುರದನುಜರಲ್ಲಿ ಸಕಲ ಧಾನ್ಯಗಳಲಿ ತಿಂಡಿ ತಿನಸುಗಳಲ್ಲಿ ಸುಖ ದುಃಖ ಬಹಿರಂಗ ಅಂತರಂಗದಲಿ 4 ದಿನದಲ್ಲಿ ನಿಶೆಯಲ್ಲಿ ಅನ್ನಪಾನಗಳಲ್ಲಿ ಅಣುರೇಣು ತೃಣಕಾಷ್ಟ ಸರ್ವ ದಿಕ್ಕಿನಲೀ ಕನಸಿನಲಿ ಮನಸಿನಲಿ ಪಂಚ ಭೂತಗಳಲ್ಲಿ ಜನನ ಮರಣಾತೀತ ಚನ್ನಕೇಶವನು 5
--------------
ಕರ್ಕಿ ಕೇಶವದಾಸ
ಪಾಲಿಸು ಜಗದೀಶಾ ಸರ್ವೇಶಾ ಪಾಲಿಸು ಜಗದೀಶಾ ಪ ಪಾಲಿಸು ಸರ್ವೇಶ ದೇವ ದೇವೇಶ ಪಾಲಿಸು ಬಾಲನ ರಾಮ ರಮೇಶ ಅ.ಪ. ಶರಣರ ತಂದೆ ನೀನು ಸರ್ವೇಶಾ ದುರುಳರಾಂತಕನು ನೀನು ಪರಿಯಿಂದ ಬಳಲುವ ಪರಮ ದಾಸರಿಗೆಲ್ಲಾ ಪೊರೆಯುವ ರಾಜಾಧಿರಾಜನೇ ನೀನು 1 ಮಾನಿನಿ ಕಾಯ್ದೆ ನೀನು ಸರ್ವೇಶಾ ಮಾನವ ನೀಡೋ ನೀನು ಹೀನರ ಸಲಹುವ ಪರಮ ನಾಯಕ ನೀನು ದೀನರ ರಕ್ಷಿಪ ತಾತನೇ ನೀನು 2 ಸುಜನರ ದೇವ ನೀನು ಸರ್ವೇಶಾ ಭಜಕರ ನಾಥ ನೀನು ಕುಜನರ ಕಾಲನು ದೂರ್ವಾಪುರೇಶನು ದ್ವಿಜವೃಂದ ವಂದ್ಯನು ಚನ್ನಕೇಶವನು 3
--------------
ಕರ್ಕಿ ಕೇಶವದಾಸ