ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಲುನಿಲು ಘನಲೀಲಾ ನಲಿನಲಿ ಗೋಪಾಲ ಪ ಕಿಲಕಿಲನಗು ಬಾಲಾ ಒಲಿಒಲಿ ಶ್ರೀಲೋಲಾ ಅ.ಪ ಅಡಿಯಿಡು ಸಡಗರದಿ ನುಡಿನುಡಿ ಕಡುಮುದದಿ ಪಿಡಿಕೊಳಲನು ಕರದಿ ನುಡಿಸಿ ಮುದ್ದಾಡುವೆ ನಾನು 1 ತೊದಲುನುಡಿಗೆ ನಲಿವೆನು ಬಾ ಬಾ ಚದುರತನವ ನೀ ತೋರುತೆ ಬಾ ಬಾ ಮುದದಿ ಕುಣಿಯುತೆ ಮಣಿಯುತೆ ಬಾ ಬಾ ಇದೆಗೋ ಎತ್ತಿಕೊಂಡೊಯ್ವೆನು 2 ಜೋಗುಳಗಳ ಹಾಡಿ ರಾಗದಿ ಕೊಂಡಾಡಿ ಬಾಗಿ ಬಿಗಿದು ಕುಣಿದಾಡಿ ನಾಗಸಂಪಿಗೆ ಸೂಡಿ3 ಸಂತಸದಿಂದೋಡು ಅಂತರಿಕ್ಷವ ನೋಡು ಕಂತುಕವೆಸೆದಾಡು ಶಾಂತಿಯ ಮನಕೆ ಕೊಡು 4 ಚಂದಿರನಂದದ ಕಂದಾ ನೊಂದಿಹ ಮನಕಾನಂದಾ ಸುಂದರ ಮುಖಾರವಿಂದಾ ಅಂದದ ನಗು ಮಿಗಿಲಾನಂದಾ5 ಗೋಲಿಯನಾಡುವೆ ಬಾ ಗಾಲಿಯನೋಡಿಸು ಬಾ ಬಾಲಭಾಷೆಯ ಪೇಳುವ ಬಾ ಲೀಲೆಯನೀಕ್ಷಿಸಿ ದಣಿವೆ 6 ಕುಣಿ ಕುಣಿ ಅರಗಿಣಿಯೆ | ಅಣಕಿಸು ಮನದಣಿಯೆ ಮಣಿ ಕಣ್ಮಣಿಯೆ | ತಣಿಯುವ ಮನಕೆಣೆಯೆ7 ಬಣ್ಣದ ಹೂಮುಡಿವೆ ಹಣ್ಣನು ಮೆಲಗುಡುವೆ 8 ನೊರೆಹಾಲ್ಕುಡಿ ನೀಲಾಂಗ ಮರೆಹೊಕ್ಕರ ಪೊರೆ ರಂಗಾ ಕರುಣಿಸೊ ಶಿರಬಾಗುವೆನಾಂ ಮಾಂಗಿರಿಯ ರಂಗಾ 9
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬಾಲಚಂದ್ರನ ರೂಪಾ ಭಯನಿವಾರಣ ನೋಡೋ ಬಾಲೆಯರೆಲ್ಲರು ಬಂದು ಕಾದಿರುವಾ ಲೊಲಾನವನ್ನು ಕಂಡು ಹೇಳಲು ನಾ ಬಂದೆ ಆಲಯಕ್ಕೆ ನೀ ಬಾ ಹಸೆಗೇಳೋ ಸೋಬಾನೆ 1 ಪನ್ನಂಗಶಯನ ಬಾರೊ ಚನ್ನಕೇಶವನಲ್ಲ ದಿನ್ನು ಬೇಕಾದ ಹೆಸರನ್ನು ಪಡೆದಿರುವೆ ಕನ್ನೆ ಸೀತೆಗೆ ಕೊಟ್ಟ ಹೊನ್ನವುಂಗರ ಕೊಡುವೆ ಬಿನ್ನಾಣದಿಂದ ಹಸೆಗೇಳೋ ಸೋಬಾನೆ 2 ಸುದತಿಯರೈವರು ಕದಳಿಹುವ್ವಿನ ಪೀಠ ಹದಮಾಡಿ ಕುಂತಿರುವರದೆ ಹೇಳಬಂದೆ ಮದನ ಜನಕ ಹಸೆಗೊದಗಿ ಅಲ್ಲಿನ ದಿವ್ಯ ಚದುರತನವನೋಡೊ ಹಸೆಗೇಳೋ ಸೋಬಾನೆ 3 ಋಷಿಗಳೆಲ್ಲರು ಜ್ಞಾನದೋಯ ಹಾಸನದೊಳೂ ಬಿಸಜಾಕ್ಷಿವರದನೆ ಗುರುವು ತುಲಸಿರಾಮಾ ಪಶುಪತಿಯಾದೆಯಾ ಹಸೆಗೇಳೋ ಸೋಬಾನೆ 4
--------------
ಚನ್ನಪಟ್ಟಣದ ಅಹೋಬಲದಾಸರು