ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕ್ಷಮಾಸಮುದ್ರನೆ ನಮಾಮಿ ಗುರು ನಿನ್ನ ಸಮಾನರ್ಯಾರಿನ್ನೂ |ಪ|| ಕಮಲ ಭ್ರಮರ ತವಪದ | ನಮಿಸುವೇ ಅ.ಪ. ತತ್ವ ಪ್ರದರ್ಶಕ ಶೃತ್ಯರ್ಥ ಬೋಧಕಗೀತಾರ್ಥ ಸಂಗ್ರಹ ಕೃತೇ ನಮೋ |ಪ್ರತ್ಯರ್ಥಿಮತ್ತೇಭ ಪಂಚಾಸ್ಯ ನಿನ್ನಯಭೃತ್ಯನ ಅಪಮೃತಿ ತಪ್ಪಿಸಿದೇ 1 ಅದ್ವೈತ ದುಸ್ಸಹ ವಾಸನ ನಿರಸನಖದ್ಯೋತ ಸಮ ವ್ಯಾಪ್ತ ಪರಿಮಳಾ |ಸದ್ವೈಷ್ಣ್ವ ಕುಮುದೇಂದು ವಿದ್ವಾಂಸನತ ಪದದ್ವಂದ್ವಾ ವಿಮಲ ಕಮಲಾ 2 ಕುಷ್ಠಾದಿ ರೋಗಹರ ಕಷ್ಟ ನಿವಾರಣಶ್ರೇಷ್ಠ ನಿಮ್ಮಯ ಸ್ಮರಣಾ |ನಿಷ್ಟೇಲಿ ಭಜಿಪರ ಇಷ್ಟಾರ್ಥ ಸಲಿಸುವ ದುಷ್ಟವಾದಿಯ ದಮನಾ3 ಪ್ರಹ್ಲಾದ ಬಾಲನೆ ವಿಮಲಾ ವಿಭೀಷಣಬಾಹ್ಲೀಕ ಸೂನಾದೆ ಪ್ರತೀಪಗೆ |ವಿಹ್ವಲ ಹೃದಯರ ಚಂದ್ರಿಕೆಯಿಂದಲಿಆಹ್ಲಾದ ಪಡಿಸಿದ ಸಲ್ಹಾದಾಗ್ರಜನೇ 4 ಸದನ ಗುರುವೇ |ಮಂತ್ರಾಗಮ್ಯ ಗುರು ಗೋವಿಂದ ವಿಠಲನಅಂತರದಿ ತೋರಿಸಿ ರಕ್ಷಿಸಯ್ಯಾ 5
--------------
ಗುರುಗೋವಿಂದವಿಠಲರು
ತಂದು ತೋರೆ ಶ್ರೀ ಮುಕುಂದನ ಗೋವಿಂದನಎಂದೆಂದುಡುಪಿಲಿ ನಿಂದನ ಗೋವಿಂದನ ಪ. ದಂಡಪಾಶಧರನು ಭೂಮಂಡಲದಿ ಮುನಿಗಳಹೆಂಡರಿತ್ತ ಭಿಕ್ಷೆಯುಂಡನ ಚೆಲ್ವಕುಂಡಲ ಮಂಡಿತ ಗಂಡನ ಉ -ದ್ದಂಡ ಕಠೋರ ಪ್ರಚಂಡನ ಗೋವಿಂದನ 1 ಹಾರ ಪದಕ ಕಂಕಣ ಕಿರುಗೆಜ್ಜೆ ಉಡು -ದಾರ ವೀರ ಪೆಂಡ್ಯಗಳಿಟ್ಟನ ತನ್ನಸೇರ್ದರಿಗಿಷ್ಟವ ಕೊಟ್ಟನನೀರಸ ಜನರ ಬಿಟ್ಟನ ಗೋವಿಂದನ2 ಮಂದಹಾಸವೆಂಬ ನವಚಂದ್ರಿಕೆಯಿಂದೆಸೆವ ಮುಖಇಂದುವಿನ ನೀರಜಾಕ್ಷನ ನವಚಂದನ ಕರ್ಚಿತವಕ್ಷನಎಂದೆಂದು ಭಕ್ತರ ಪಕ್ಷನ ಗೋವಿಂದನ 3 ಮಂದಜಜಾಂಡಾದಿಂದ್ರ ಮುಖ್ಯ ವೃಂದಾರಕರೊಡೆಯನಇಂದಿರೆಯಪ್ಪುವ ತೋಳ್ಗಳ ಶುಭಕುಂದ ಕುಟ್ಮಲ ಪಲ್ಗಳಅಂದುಗೆ ಒಪ್ಪುವ ಕಾಲ್ಗಳ ಗೋವಿಂದನ 4 ಇಂದು ಹಯವದನನ್ನ ಸಂದೇಹವ ಕಳೆಯುತ್ತ ಆ-ನಂದದಿಲ್ಲಿಗೆ ಬಂದನಚಂದದಿ ವೇದವ ತಂದನ ಆನಂದನ ರಾಣಿಯ ಕಂದನ ಗೋವಿಂದನ 5
--------------
ವಾದಿರಾಜ
ವರದೇಶವಿಠಲರ ಹಾಡು ದಾಸರಾಯರ ದಿವ್ಯ ಚರಣ ಭಜಿಸಿ |ಶ್ರೀಶ ಪ್ರಾಣೇಶ ದಾಸಾರ್ಯ ಗುರುವರ್ಯ ಪ ಪಾದ ಭಜಿಪ ಸದ್ಭಕ್ತರ |ಏಸು ಜನ್ಮದ ಪಾಪರಾಶಿ ಪರಿಹರ ವೋ ||ಶ್ರೀಶನಲಿ ಸದ್ಭಕ್ತಿ ಲೇಸಾಗಿ ಪುಟ್ಟುವದು |ಲೇಶ ಸಂಶಯವಿಲ್ಲ ಆಲಸವು ಸಲ್ಲ 1 ಮರುತ ಮತ ತತ್ವಗಳ ಥೆರೆಗಳಿಂಸೂಸುತ |ಧರಣಿ ದ್ವಿಜರಿಗೆ ರಾಮನಾಮ ಮೃತ ||ನಿರುತ ಭಜಿಸಲು ಜ್ಞಾನ ವೈರಾಗ್ಯ ತರಮಣಿಯ |ಹರಿಭಕುತಿ ಧೇನುವಂ ನೀಡ್ವ ಪಾಲ್ಗಡಲೆನಿಪ 2 ಸುಜ್ಞಾನವೆಂಬಂಥ ಕಿರಣಗಳ ಪಸರಿಸುವ |ಅಜ್ಞಾನ ತಿಮಿರವನು ದೂರೋಡಿಪ |ಸೂಜ್ಞರೆಂಬುವ ತಾವರೆಗಳರಳಿಸುವಂಥ |ಅಜ್ಞ ಕುಮುದಗಳ ಬಾಡಿಸುವ ಭಾಸ್ಕರ ನೆನಿಪ 3 ನಮಿತ ಜನ ಭವತಾಪ ಕಳೆದು ಸದ್ಭಕ್ತಿಯಿಂ |ಬಮಿತ ಆಹ್ಲಾದವನು ಬೀರುವಂಥ ||ಶಮದಮಾದಿಗಳ ಚಂದ್ರಿಕೆಯಿಂದ ಶೋಭಿಸುವ |ವಿಮಲ ಹರಿಜನ ಚಕೋರಕೆ ಚಂದ್ರನೆಂದೆನಿಪ 4 ದಾಸ ಕುಲತಿಲಕ ಪ್ರಾಣೇಶರಾಯರ ಕವನ |ಶ್ರೀಶ ಕಥೆಗಳ ರಾಶಿ ಮೀಸಲಾಗಿರಲು |ಆಸು ಭಕ್ತರಿಗೆ ಸಂತೋಷಗೊಳಿಸಲು ಸರ್ವ |ದೇಶದಲಿ ಮೆರಿಸಿ ಸತ್‍ಕೀರ್ತಿಯನು ಪಡೆದಂಥ 5 ಈ ಗುರುಗಳ ಪಾದಕ್ಕೆರಗಿದ್ದ ಶಿರಧನ್ಯ |ಈ ಗುರುಗಳೀಕ್ಷಿಸಿದ ನೇತ್ರ ಧನ್ಯ ||ಈ ಗುರುಗಳ ವಾಣಿ ಕೇಳಿದ ಕಿವಿಧನ್ಯ |ಈ ಗುರುಗಳನು ಮನದಿ ನೆನೆವ ನರಧನ್ಯ 6 ರಾಗ ದ್ವೇಷಾದಿಗಳ ಗೆದ್ದು ಸದ್ಭಕ್ತಿಯಂ |ಶ್ರೀಗುರು ಪ್ರಾಣೇಶ ಭಜಕರೆನಿಪ |ನಾಗ ಪರ್ಯಂಕ ವರದೇಶ ವಿಠಲನ ಪ್ರಿಯಯೋಗಿ ವರದೇಂದ್ರ ಮುನಿಗಳ ಪಾದಭೃಂಗ 7
--------------
ಶ್ರೀಶಪ್ರಾಣೇಶವಿಠಲರು
ಶ್ರೀಶ್ರೀಪ್ರಾಣೇಶದಾಸರಾಯರ ಸ್ತೋತ್ರ ದಾಸರಾಯರ ದಿವ್ಯ ಚರಣ ಭಜಿಸಿ ಶ್ರೀ ಪ್ರಾಣೇಶದಾಸಾರ್ಯ ಗುರುವರ್ಯಾ ಪ ಪಾದ ಭಜಿಪ ಸದ್ಭಕ್ತರ ಏಸುಜನುಮದ ಪಾಪರಾಶಿ ಪರಿಹರವು ಲೇಶ ಸಂಶಯವಿಲ್ಲ ಆಲಸವು ಸಲ್ಲ 1 ಮರುತಮತ ತತ್ವದ ತೆರೆಗಳಿಂ ಸೂಸುತ ಧರಣಿಸುರರಿಗೆ ರಾಮನಾಮಾಮೃತ ನಿರುತಭಜಿಸಲು ಙÁ್ಞನವೈರಾಗ್ಯ ತರುಮಣಿಯ ಹರಿಭಕುತಿ ಧೇನುವನ್ನೀವÀ ಪಾಲ್ಗಡಲೆನಿಪ 2 ಸುಜ್ಞಾನವೆಂಬಂಥ ಕಿರಣಗಳ ಪಸರಿಸುವ ಅಜ್ಞಾನತಿಮಿರವನು ದೂರೋಡಿಪ ಸೂಜ್ಞರೆಂಬುವ ತಾವರೆಗಳರಳಿಸುವಂಥ ಅಜ್ಞಕುಮುದುಗಳ ಬಾಡಿಸುವ ಭಾಸ್ಕರನೆನಿಪ 3 ನಮಿಪಜನ ಭವತಾಪಕಳೆದು ಸದ್ಭಕ್ತಿಯಂ - ಬಮಿತ ಅಹ್ಲಾದವನು ಬೀರುವಂಥ ಶಮದಮಾದಿಗಳ ಚಂದ್ರಿಕೆಯಿಂದ ಶೋಭಿಸುವ ವಿಮಲ ಹರಿಜನ ಚಕೋರಕೆ ಚಂದ್ರನೆಂದೆನಿಪ 4 ದಾಸಕುಲತಿಲಕ ಪ್ರಾಣೇಶರಾಯನ ಕವನ ಶ್ರೀಶಕಥೆಗಳ ರಾಶಿಮೀಸಲಾಗಿರಲು ಆ ಸುಭಕ್ತರಿಗೆ ಸಂತೋಷಗೊಳಿಸುಲು ಸರ್ವ ದೇಶದಲಿ ಮೆರೆಸಿ ಸತ್ಕೀರ್ತಿಯನು ಪಡೆದಂಥ5 ಈ ಗುರುಗಳ ಪಾದಕೆರಗಿದ್ದ ಶಿರಧನ್ಯ ಈ ಗುರುಗಳೀಕ್ಷಿಸಿದ ನೇತ್ರ ಧನ್ಯ ಈ ಗುರುಗಳ ವಾಣಿ ಕೇಳಿದ್ದ ಕಿವಿ ಧನ್ಯ ಈ ಗುರುಗಳನು ಮನದಿ ನೆನೆವÀನರ ಧನ್ಯ 6 ರಾಗದ್ವೇಷಾದಿಗಳ ಗೆದ್ದು ಸದ್ಭಕ್ತಿಯಿಂ ಶ್ರೀಗುರುಪ್ರಾಣೇಶ ಭಜಕರೆನಿಪ ನಾಗಪರಿಯಂತ ವರದೇಶ ವಿಠಲನ ಪ್ರೀಯ ಪಾದ ಭೃಂಗ 7
--------------
ವರದೇಶವಿಠಲ
ಶ್ರೀ ವಾದಿರಾಜ ಸಲಹೆನ್ನ ರಾಜಸೇವಕರಿಗಮರಭೂಜರಾಜಪ.ಪಾವನ ಸುಕೀರ್ತಿ ಚಂದ್ರಿಕೆಯಿಂದ ಥಳಥಳಿಸಿಭೂವಲಯಕಾಹ್ಲಾದವನಿತ್ತೆ ರಾಜ ಅ.ಪ.ಚತುರ ಹಯಗ್ರೀವ ವಹಿಸಿ ಹೊಳೆವ ದಶಮತಿಶಾಸ್ತ್ರ್ತರಥವ ನಿರ್ಮಿಸಿಶ್ರುತಿಪಂಚರಾತ್ರವನ್ನು ವಾಜಿಗೈದುಋತು ಭೇದಶರ ಒಗ್ಗೂಡಿಸಿನ್ನೆಸೆದುಕ್ಷಿತಿಯರ ದುರ್ವಾದಿಗಳ ಜೈಸಿದೆ ಅಪ್ರತಿಮಹಾರಥಿಕನೆನಿಸುವ ಚಕ್ರವರ್ತಿ ರಾಜ1ಬೇಕಾದ ಪುರುಷಾರ್ಥವ ಕೊಡುವಗುಣಶಾಖೆಗಳ ಸೊಬಗುದೋರೆಶ್ರೀಕರ ಗ್ರಂಥರಚನೆಗಳ ವನೇಕ ಪತ್ರದವುಗಳಿರೆಆ ಕರುಣ ಲೋಚನ ಕುಸುಮರಸವನುಂಡುಝೇಂಕರಿಪಕವಿಮಧು ಮಕರಂದ ರಾಜಿಸುವ ರಾಜ2ಸಾರಾರ್ಥ ಚೋರ ಕುಲದಗಲ ಭೇದಿಸಿ ಸಂಚಾರ ಧರೆಯೊಳಗಿಡಿಸಿಈರಮತಸದ್ವನದಿಹಪಂಡಿತಚಕೋರಗಳ ನಲಿನಲಿಸಿದೆಧೀರ ವಾಗೀಶಕರವಾರಿಧಿಭವ ವಾದಿವಂದ್ಯವಾರಿನಿಧಿ ನಂದಕರ ಪ್ರಸನ್ವೆಂಕಟಪ್ರಿಯ 3
--------------
ಪ್ರಸನ್ನವೆಂಕಟದಾಸರು