ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದುರಿತಗಜ ಪಂಚಾನನ-ನರಹರಿಯೆ ದೇವರ ದೇವ ಕಾಯೊ ಗೋವಿಂದ ಪ ಹೆಸರುಳ್ಳ ನದಿಗಳು ಒಳಗೊಂಬೊ ಸಮುದ್ರನುಬಿಸುಡುವನೆ ಕಾಲುಹೊಳೆಗಳ ಗೋವಿಂದ 1 ಒಂದು ಮೊಲಕೆ ಆರು ಹುಲಿ ಬಂದು ಕವಿದಿದೆಬಂಧನ ಬಿಡೆಸೆನ್ನ ತಂದೆ ಗೋವಿಂದ 2 ಹೆತ್ತ ಮಕ್ಕಳು ಹುಚ್ಚರಾದರೆ ತಾಯಿ ತಂದೆಎತ್ತದೆ ನೆಲಕೆ ಬಿಸುಡುವರೆ ಗೋವಿಂದ 3 ಕರ್ಮ ಬೆನ್ನ ಬಿಡದಿದ್ದರೆನಿನ್ನ ವಾಲೈಸಲ್ಯಾಕೆ ಗೋವಿಂದ4 ಆಪÀತ್ತು ತಾಪತ್ರಯ ಬೆನ್ನ ಬಿಡದಿದ್ದರೆಶ್ರೀಪತಿ ಶರಣೆನ್ನಲ್ಯಾಕೆ ಗೋವಿಂದ5 ಅರಸು ಮುಟ್ಟಲು ದಾಸಿ ರಂಭೆಯಾದಳು ದೇವಪರುಷ ಮುಟ್ಟಲು ಲೋಹ ಸ್ವರ್ಣ ಗೋವಿಂದ 6 ಮಾನಾಭಿಮಾನದೊಡೆಯ ರಂಗವಿಠಲಜ್ಞಾನಿಗಳರಸನೆ ಕಾಯೋ ಗೋವಿಂದ 7
--------------
ಶ್ರೀಪಾದರಾಜರು
ಪರಮ ಪುರುಷ ಹರಿ ಗೋವಿಂದ - ಸಿರಿವರ ನಾರಾಯಣ ಗೋವಿಂದ ಪ ನಿಶೆವೆಸರಸುರನ ಉಸಿರ ತೊಲಗಿಸಿದೆಕುಸುಮ ಶರನ ಪಿತ ಗೋವಿಂದವಸು ಪೂರಿತ ಶ್ರುತಿ ಮಸುಳಿಸದೆ ತಂದೆಬಿಸಜ ಸಂಭವನಯ್ಯ ಗೋವಿಂದ 1 ಮಂದರ ಸಿರಿ ಗತವಾಗದ ಮುನ್ನಕ್ಷಿತಿ ಪೆತ್ತನಯ್ಯ ಗೋವಿಂದ 2 ಭೂತಳವೆರಸಿ ರಸಾತಳಕಿಳಿದಿಹಪಾತಕನ ಕಂಡೆ ಗೋವಿಂದಆತನೊಡನೆ ಕಾದಾತನ ಗೆಲಿದು ಮ-ಹೀತಳವನು ತಂದೆ ಗೋವಿಂದ 3 ದುರುಳಾಸುರನ ನಡುಗರುಳ ಮಾಲೆ ಮುಂ-ಗೊರಳೊಳು ಧರಿಸಿದೆ ಗೋವಿಂದಗರಳ ಕೊರಳನು ಬೆರಳೆತ್ತಿ ಪೊಗಳಲುತರಳಗೊಲಿದೆ ನೀ ಗೋವಿಂದ4 ವಾಮನನಾಗಿ ನಿಸ್ಸೀಮ ಬಲಿಯ ಕೈಯಭೂಮಿಯನಳೆಕೊಂಡೆ ಗೋವಿಂದತಾಮರಸ ಪದದಿ ಕನಕ ಗರ್ಭಯೋಗವ್ಯೋಮ ಗಂಗೆಯ ತಂದೆ ಗೋವಿಂದ 5 ಸುರ ಪಶುವಿಗೆ ಋಷಿಯನು ಕೊಂದನ ಬಹುಕರ ಬಲ ಮುರಿದೆಯೊ ಗೋವಿಂದತರ ಹರಿಸದೆ ವಸುಧೆಯ ಒಡೆತನ ಭೂಸುರರಿಗೆ ನೀಡಿದೆ ಗೋವಿಂದ 6 ತ್ರಿಣಯನ ತಾತ್ಪರ್ಯ ರಾವಣನ ಶಿರರಣದೊಳುರುಳಿಸಿದೆ ಗೋವಿಂದಕ್ಷಣಮೆಣಿಸದೆ ಸದ್ಗುಣವಂತ ವಿಭೀ-ಷಣಗಭಯವಿತ್ತೆ ಗೋವಿಂದ 7 ಕ್ರತು ಸಿರಿ ಭೂಭಾರೋತ್ತಾರಣ ಬಲಯುತ ಗೋವಿಂದ 8 ಕಥೆಯನು ನಿರ್ಮಿಸಿ ಪತಿವ್ರತೆಯರ ಘನವ್ರತಗಳ ಕೆಡಿಸಿದೆ ಗೋವಿಂದಜತೆಯಗಲದ ಪುರ ತ್ರಿತಯ ಗೆಲಿದು ದೇ-ವತೆಗಳ ಸಲಹಿದೆ ಗೋವಿಂದ 9 ಜಾಜಿಯ ಮರಕತ ತೇಜಿಯನೇರಿ ವಿ-ರಾಜಿಪ ರಾವುತ ಗೋವಿಂದಸೂಜಿಯ ಬೆನ್ನೊಳು ರಾಜಿಪ ತೆರದಿ ಸ-ಹಜರೊಳಡಗಿರ್ಪ ಗೋವಿಂದ 10 ಮೇದಿನಿಗೋಸುಗ ಕಾದಿ ಕಲಹದಿ ವಿ-ರೋಧಿಗಳ ಕೊಂದೆ ಗೋವಿಂದಸಾಧುಗಳಿಗೆ ಸುಖವೀಯುವ ಬಾಡದಶ್ರೀಧರ ಕೇಶವ ಗೋವಿಂದ 11
--------------
ಕನಕದಾಸ
ವಾಸುದೇವ ಶ್ರೀ ಗೋವಿಂದ ವರದ ಶ್ರೀ ಗೋವಿಂದ 1 ಪಾಲಕ ಗೋವಿಂದ ಸಾಗರಗೃಹ ಶರಣಾಗತವಾಂಛಿತ ಭಾಗವತಪ್ರಿಯ ಗೋವಿಂದ 2 ಮಾಧವ ಗೋವಿಂದ ಪ್ರೇರಣ ಕರ್ತುವಿಚಾರಣ ಭಕ್ತೋದ್ಧಾರಣ ಶ್ರೀಹರಿ ಗೋವಿಂದ3 ಭೂಮಂಡಲನಾಯಕ ಗೋವಿಂದ ಕರದಂಡದಳಾಕ್ಷ ಶ್ರೀ ಗೋವಿಂದ4 ನಮೋ ನಮೋ ಗೋವಿಂದ ಮತಂಗವರದ ಶ್ರೀ ಗೋವಿಂದ 5 ಶಕ್ರಾರ್ಚಿತ ವಟುವಾಕೃತಿಧರ ಕರಚಕ್ರಾಂಕಿತ ಹರಿ ಗೋವಿಂದ ಅಕ್ರೂರವರದ ಅಖಿಳಪ್ರದ ತ್ರಿವಿಕ್ರಮರಾಯ ಶ್ರೀ ಗೋವಿಂದ 6 ಉಗ್ರಕುಠಾರ ನೃಪಾಗ್ರಣಿವಿಪಿ£ ಶ್ರೀ ಭಾರ್ಗವರಾಮ ಶ್ರೀ ಗೋವಿಂದ ಅಗ್ರಗಣ್ಯ ಶುಭವಿಗ್ರಹ ನೃಪಕುಲವರ್ಗವಿದಾರಣ ಗೋವಿಂದ7 ನೂತನ ಲೀಲ ಶ್ರೀ ಗೋವಿಂದ ವಾತಜವರದ ಸಾಕೇತಾಧಿಕ ನಿರ್ಭೀತ ಶ್ರೀ ರಾಮ ಗೋವಿಂದ 8 ಕರುಣಾಲಯದೇವ ಶ್ರೀ ಗೋವಿಂದ ಕುಚೇಲವರದ ಶ್ರೀ ಗೋವಿಂದ9 ಬುದ್ಧಾಕೃತಿಧರ ಗೋವಿಂದ ಶುದ್ಧಾತ್ಮಕ ಭವವೈದ್ಯ ವಿಬುಧಾರಾದ್ಯಚರಣ ಶ್ರೀ ಗೋವಿಂದ 10 ಸುರರಾಜಾಧಿರಾಜ ಶ್ರೀ ಗೋವಿಂದ ಪ್ರೌಢ ಶ್ರೀ ಗೋವಿಂದ11 ಶ್ರೀ ಕಪ್ಪುಗೊರಳಪ್ರಿಯ ಗೋವಿಂದ ಸರ್ಪಾಚಲದಿಂದೊಪ್ಪಿಲ್ಲಿಯೆ ನೆಲಸಿಪ್ಪ ತಿಮ್ಮಪ್ಪ ಶ್ರೀ ಗೋವಿಂದ 12 ತಾನೆ ಭಕ್ತರ ಸನ್ಮಾನದಿ ಸಲಹಲು ತಾನೆತಂದ ಶ್ರೀ ಗೋವಿಂದ ಲಕ್ಷ್ಮೀನಾರಾಯಣ ಹರಿ ಗೋವಿಂದ13
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಶ್ರೀ ವೆಂಕಟಾಚಲ ನಿವಾಸ ನಿನ್ನ ಸೇವಾನುಸೇವಕರ ದಾಸಾ ಎನಿಸಿ ಜೀವಿಸುವ ನರಗೆ ಆಯಾಸಾ ಯಾಕೆ ಶ್ರೀವರನೆ ಕೊಡು ಎಮಗೆ ಲೇಸಾ 1 ಕಂಸಾರಿ ಪ್ರಭು ನಿನ್ನ ದಿವ್ಯ ನಾಮ ಒದಗಲು ಜಿಹ್ವೆಗೆನ್ನಾ ದೋಷ ಸೀಮೆಗಾಣದಿದ್ದರೆನ್ನ ಸ್ವಾಮಿ ನೀ ಮರೆಯಲಾಗದು ಸುಪ್ರಸನ್ನ 2 ನೀಚ ಯೋನಿಗಳಲ್ಲಿ ಬಂದೆ ಇನ್ನು ನಾಚಿಕಿಲ್ಲವೊ ಎನಗೆ ತಂದೆ ನೀನೆ ಮೋಚಕನು ಬಿನ್ನಪ ವಿದೆಂದೆ ಸವ್ಯ ಸಾಚಿಸಖ ಕೈಪಿಡಿಯೋ ತಂದೆ 3 ನಾನೊಬ್ಬನೇ ನಿನಗೆ ಭಾರವಾದೆ ನೇನೊ ಸಂತತ ನಿರ್ವಿಕಾರ ಎನ್ನ ಹೀನತ್ವ ನೋಡಲ್ಕಪಾರ ಚಕ್ರ ಪಾಣಿ ಮಾಡಿದಿರೆನ್ನ ದೂರ 4 ಕಂಡ ಕಂಡವರಿಗಾಲ್ಪರಿದು ಬೇಡಿ ಬೆಂಡಾದೆ ನಿನ್ನಂಘ್ರಿ ಮರೆದು ದಿಟ ತೊಂಡವತ್ಸಲನೆಂಬ ಬಿರುದು ಕಾಯೊ ಪುಂಡರೀಕಾಕ್ಷ ನೀನರಿದು 5 ಈ ಸಮಯದೊಳೆನ್ನ ತಪ್ಪ ನೋಡಿ ನೀ ಸಡಿಲ ಬೇಡುವರೇನಪ್ಪ ನಿನ್ನ ದಾಸರ್ಪೆಸರ್‍ಗೊಳಲು ಬಪ್ಪಾ ದೋಷ ನಾಶವಾಗೋದು ತಿಮ್ಮಪ್ಪ 6 ಕಾಮಾದಿಗಳ ಕಾಟದಿಂದ ನಿನ್ನ ನಾ ಮರೆದೆ ಸಚ್ಚಿದಾನಂದ ಎನ್ನ ಈ ಮಹಾ ದೋಷಗಳ ವೃಂದ ನೋಡದೆ ನೀ ಮನ್ನಿಸೆನ್ನ ಮುಕುಂದ 7 ನೀ ಪಿಡಿದವÀರ ಸಹಸ್ರಾರ ಸುಜನ ಪಾಪಾಟವಿಗೆ ಸುಕುಠಾರಾ ಜಗ ದ್ವ್ಯಾಪಕನೆ ಎನ್ನ ಸಂಸಾರ ಘೋರ ಕೊಪದಿಂದೆತ್ತಯ್ಯ ಧೀರ 8 ಸಿಂಧೂರ ರಾಜ ಪರಿಪಾಲ ಕೋಟಿ ಕಂದರ್ಪ ಲಾವಣ್ಯ ಶೀಲ ಧರ್ಮ ಮಂದಾರ ಭೂಜಾಲಪಾಲ ಯೋಗಿ ಸಂದೋಹ ಹೃತ್ಕುಮುದ ಶೀಲಾ 9 ಶಿವನ ವೈರಿಯ ಕೊಂದ ಶಕ್ತ ಪುಣ್ಯ ಶ್ರವಣ ಕೀರ್ತನ ನಿನ್ನ ಭಕ್ತಾ ಜನರ ಭವದೊಳಗೆ ದಣಿಸುವುದು ಯುಕ್ತವೇನೊ ಭುವನ ಪಾವನ ನಿತ್ಯಮುಕ್ತ 10 ಶ್ರೀಕರ ಶ್ರೀಮದಾನಂತ ನಿಖಿಳ ಲೋಕೈಕನಾಥ ನಿನ್ನಂಥ ಸಖರ ನಾ ಕಾಣೆನೆಲ್ಲಿಯೂ ಮಹಂತಾ ಎನ್ನ ನೀ ಕಾಯೋ ಕಂಡ್ಯ ಭೂಕಾಂತಾ 11 ಕರ್ಮ ಚಿತ್ರತ್ವಗ್ರಸನ ಕಾಯ ಕರಣ ಮನಹಂಕಾರ ಘ್ರಾಣಾ ಬುದ್ದಿ ಚರಣ ಪಾಯೂಪಸ್ಥ ನಯನಜಾತ ಉರುಪಾಪ ಕ್ಷಮಿಸು ಶ್ರೀ ರಮಣಾ 12 ಅನಿಮಿತ್ತ ಬಂಧು ನೀಯೆನ್ನ ಬಿಡುವು ದನುಚಿತವೋ ಲೋಕಪಾವನ್ನ ಚರಿತ ಮನ ವಚನ ಕಾಯದಲಿ ನಿನ್ನ ಪಾದ ವನಜ ನಂಬಿದೆ ಸುಪ್ರಸನ್ನಾ 13 ನೀನಲ್ಲದೆನಗೆ ಗತಿಯಿಲ್ಲ ಪವ ಮಾನವಂದಿತ ಕೇಳೋ ಸೊಲ್ಲ ಎನ್ನ ಜ್ಞಾನೇಚ್ಛೆ ಕ್ರಿಯಂಗಳೆಲ್ಲಾ ನಿನ್ನ ಧೀನವಲ್ಲವೆ ಲಕ್ಷ್ಮೀನಲ್ಲಾ 14 ಪ್ರಾಚೀನ ಕರ್ಮಾಂಧ ಕೂಪದೊಳಗೆ ಯೋಚಿಸುವ ನರರ ಸಂತಾಪ ನಿನಗೆ ಗೋಚರಿಸದೇನೋ ಬಹುರೂಪ ವೆಂಕ ಟಾಚಲನಿಲಯ ಪಾಹಿ ಶ್ರೀಪಾ 15 ಯಾಕೆ ದಯ ಬಾರದೆನ್ನಲ್ಲಿ ನರಕ ನಾಕ ನರಕ ಭೂ ಲೋಕಂಗಳಲ್ಲಿ ಚರಿಸಿ ನಾ ಕಷ್ಟಪಟ್ಟ ಬಗ್ಗೆ ನೀ ಬಲ್ಲಿ ವೀತ ಶೋಕ ಕೊಡು ಭಕುತಿ ನಿನ್ನಲ್ಲಿ 16 ಬನ್ನ ಬಡಿಸುವರೇನೋ ಬಿಡದೆ ನಾನು ಮುನ್ನ ಮಾಡಿದ ಪಾಪ ಕೆಡದೆ ನೀ ಪ್ರ ಪನ್ನ ವತ್ಸಲನೆಂದು ನುಡಿದೆ 17 ತಾಪತ್ರಯಗಳಿಂದ ನೊಂದೆ ಮಹಾ ಪಾಪಿಷ್ಠರಲ್ಲನ್ನ ತಿಂದೆ ಇನ್ನು ಆಪರೇತೇಶ್ವರನ ಮುಂದೆ ಪೋಗಿ ನಾ ಪೇಕೊಳಲೇನು ತಂದೆ 18 ದೇಹ ಸಂಬಂಧಿಗಳ ಸಹಿತವಾಗಿ ನಾ ಹೊಂದಿದೆನು ಲೋಕಮೋಹಿತ ಎನ್ನ ಮೋಹಿಪ್ರದು ನಿನ್ನಗೇನು ವಿಹಿತ ಹೃದಯ ಬಾಹಿರಂತರದಿ ಸನ್ನಿಹಿತ 19 ಪೋಗುತಿದೆ ದಿವಸ ಕಮಲಾಕ್ಷ ಪರಮ ಅಪರೋಕ್ಷ ಎನಗೆ ಹೇಗಾಗುವುದೊ ಸುರಾಧ್ಯಕ್ಷ ದುರಿತ ನೀನು ಕಾಮಿತ ಕಲ್ಪವೃಕ್ಷ 20 ಗತಿಯಾರು ನಿನ್ನುಳಿದು ದೇವ ರಮಾ ಸಂಜೀವ ಎನ್ನ ಸತಿಸುತರ ಅನುದಿನದಿ ಕಾವ ಭಾರ ಸತತ ನಿನ್ನದು ಮಹಾನುಭಾವ 21 ದೊಡ್ಡವರ ಕಾಯ್ವುದೇನರಿದು ಪರಮ ದಡ್ಡರನು ಕಾಯ್ವದೇ ಬಿರುದು ಎನ್ನ ಗುಡ್ಡದಂತಹ ಪಾಪ ತರಿದು ಕಾಯೋ ವಡ್ಡಿ ನಾಯಕ ಸಾರೆಗರದೊ 22 ಜ್ಞಾನಿಗಳು ನೀಚರಲಿ ಕರುಣಾ ಮಾಡ ರೇನೋ ಬಿಡುವರೇ ರಥಚರಣ ಪಾಣಿ ಭಾನು ಚಂಡರವಿಕಿರಣ ಬಿಡದೆ ತಾನಿಪ್ಪನೆ ರಮಾರಮಣ23 ಆಡಲ್ಯಾತಕೆ ಬಹಳ ಮಾತಾ ಪರರ ಬೇಡಲಾರೆನೋ ಜಗತ್ರಾತಾ ಹೀಗೆ ಮಾಡುವರೇ ಕೆಳೆನ್ನ ಮಾತ ನೀನೆ ನೀಡೆನಗೆ ಪುರುಷಾರ್ಥ ದಾತಾ 24 ಬೇಡಲೇತಕೆ ಬಹಳ ಮಾತಾ ಎನ್ನ ಕೇಡು ನಿನ್ನದಲ್ಲೇ ಬಲಿದೌತ ಪಾದ ಬೇಡಿಕೊಂಬುವೆ ನಾನನಾಥ ದೂರ ನೋಡಲಾಗದು ಪಾರ್ಥಸೂತ 25 ನಿತ್ಯ ಬಿಡದೆ ಶಾರದೇಶನ ನುತಿಪ ಭಕ್ತ ಜನರ ಪಾರ ಸಂತೈಸುವುದು ಮಿಥ್ಯವಲ್ಲ ಶ್ರೀರಮಣ ಸಾಕ್ಷಿದಕೆ ಸತ್ಯಾ 26 ಪರಿಯಂತ ಶಯನ ಪ್ರಣತಾರ್ತಿ ಹರನೆಂಬೊ ಅಂಕಾ ಕೇಳಿ ಮಣಿದ ನಿನ್ನಂಘ್ರಿಗೆ ಶಶಾಂಕಾ ಭಾಸ ದಣಿಸಲಾಗದು ನಿಷ್ಕಳಂಕಾ27 ಕಾರ್ತವೀರ್ಯಾಜುನನ ಕೊಂದ ಭವ್ಯ ಕೀರ್ತಿ ನಿನ್ನಾನಂದ ವೃಂದ ಸತತ ಕೀರ್ತಿಸುವ ನರರ ಬಹುಕುಂದ ನೋಡ ದಾರ್ತನ್ನ ಪೊರೆಯೊ ಗೋವಿಂದ 28 ದಯದಿಂದ ನೋಡೆನ್ನ ಹರಿಯೆ ಜಗ ನ್ಮಯನೆ ಜ್ಞಾನಾನಂದ ವೃಂದ ಸಿರಿಯೆ ಮನಾ ಭಯದೂರರಿನ್ನೊಬ್ಬರರಿಯೇ 29 ನರಸಿಂಹ ನಿನ್ನುಳಿದು ಜಗವ ಕಾಯ್ವ ಪರಮೋಷ್ಠಿ ರಾಯನು ನಗುವ ನಿತ್ಯ ನಿರಯಾಂಧ ರೂಪದೊಳು ಹುಗಿವಾ 30 ದಾಸ ದಾಸರ ದಾಸನೆಂದು ಬಿಡದೆ ನೀ ಸಲಹೋ ಎನ್ನನೆಂದೆಂದೊ ನಿನ್ನ ನಾ ಸೇವಿಸುವೆ ಕೃಪಾಸಿಂಧು ಎಮ್ಮನು ದಾಸಿಸದÀನಿಮಿತ್ತ ಬಂಧೂ 31 ಎಂದೆಂದು ನೀ ಬಡವನಲ್ಲ ನಿನ್ನ ಮಂದಿರದೊಳಗೆ ಬಲ್ಯಲ್ಲಾ ಚಿದಾ ನಂದ ನೀ ಭಕ್ತ ವತ್ಸಲ್ಲಾ 32 ಕಾಮಿತಪ್ರದನೆಂಬ ಬಿರಿದು ಕೇಳಿ ನಾ ಮುದದಿ ಬಂದೆನೋ ಅರಿದು ಎನ್ನ ತಾಮಸ ಮತಿಗಳೆಲ್ಲ ತರಿದು ಮಮ ಸ್ವಾಮಿ ನೋಡೆನ್ನ ಕಣ್ದೆರದು33 ಹಿತವರೊಳು ನಿನಗಧಿಕರಾದ ತ್ರಿದಶ ತತಿಗಳೊಳು ಕಾಣೆನೋ ಪ್ರಮೋದ ನೀನೆ ಗತಿಯೆಂದು ನಂಬಿದೆ ವಿವಾದವ್ಯಾಕೊ ಪತಿತಪಾವನ ತೀರ್ಥಪಾದ 34 ಮಡದಿ ಮಕ್ಕಳು ತಂದೆ ತಾಯಿ ಎನ್ನ ಒಡಹುಟ್ಟಿದವರ ನೀ ಕಾಯಿ ಲೋಕ ದೊಡೆಯ ನೀನಲ್ಲದಿನ್ನಾರೈ ಎನ್ನ ನುಡಿ ಲಾಲಿಸೋ ಶೇಷಶಾಯಿ 35 ಅನುಬಂಧ ಜನರಿಂದ ಬಪ್ಪ ಕ್ಲೇಶ ವನುಭವಿಸಲಾರೆ ಎನ್ನಪ್ಪ ಉದಾ ಸೀನ ಮಾಡಿ ದಯಮಾಡದಿಪ್ಪರೇನೋ ಘನ ಮಹಿಮ ಫಣಿರಾಜತಲ್ಪ 36 ಹದಿನಾಲ್ಕು ಲೋಕಂಗಳನಾಳ್ವ ಬ್ರಹ್ಮ ಮೊದಲಾದವರು ನಿನ್ನ ಚಲ್ವನಖದ ವಿಧಿಸಲಾಪೆನೆ ನಿನ್ನ ಸಲ್ವಾ 37 ಧನ ಧಾನ್ಯ ಪಶು ಪತ್ನಿ ಗೇಹ ಜನನೀ ಜಾಮಾತ ಸಖ ನೇಹ ಅನುಜ ತನುಜಾಪ್ತವರ್ಗದಿಂದಾಹ ಸೌಖ್ಯ ನಿನಗರ್ಪಿಸಿದೆ ಎನ್ನ ದೇಹಾ 38 ನೀನಿತ್ತ ಸಂಸಾರದೊಳಗೆ ಸಿಲುಕಿ ನಾನೊಂದೆ ಕರೆ ನಿನ್ನ ಬಳಿಗೆ ಚರಣ ಧ್ಯಾನ ದೊರಕಲು ಭವದಿ ಮುಳುಗೆ ನಿನ್ನ ಕಾಣದಿರಲಾರೆನರ ಘಳಿಗೆ 39 ಸಲುಗೆ ಬಿನ್ನಪವ ನೀ ಕೇಳೋ ಎನ್ನ ಬಲು ದುರುಳತನವ ನೀ ತಾಳೋ ನೀನೆ ನೆಲೆಯಲ್ಲದೆನಗಾರು ಪೇಳೋ ಎನ್ನ ಕುಲದೈವ ಬಹುಕಾಲ ಬಾಳೋ40 ಸಾಂದೀಪ ನಂದನನ ತಂದ ನಂದ ಭವ ವೃಂದ ಕಳೆದು ಎಂದೆಂದು ಕುಂದದಾನಂದವೀಯೋ ಇಂದಿರಾರಮಣ ಗೋವಿಂದ41 ತೈಜಸ ಪ್ರಾಜ್ಞ ತುರಿಯಾ ಎನ್ನ ದುಸ್ವಭಾವವ ನೋಡಿ ಪೊರೆಯದಿಹರೆ ನಿಸ್ಪøಹ ನಾನಿನ್ನಂಘ್ರಿ ಮೊರೆಯ ಪೊಕ್ಕೆ ಅಸ್ವತಂತ್ರನ ಕಾಯೋ ಪಿರಿಯಾ42 ಇಹಪರದಿ ಸೌಖ್ಯ ಪ್ರದಾತ ನೀನೆ ಅಹುದೋ ಲೋಕೈಕ ವಿಖ್ಯಾತ ಮಹಾ ಮಹಿಮ ಗುಣಕರ್ಮ ಸಂಜಾತ ದೋಷ ದಹಿಸು ಸಂಸಾರಾಬ್ದಿ ಪೋತಾ 43 ಲೋಕಬಾಂಧವನೆಂಬ ಖ್ಯಾತಿಯನ್ನು ನಾ ಕೇಳಿದೆನು ಖಳಾರಾತಿ ಮನೋ ಶೋಕ ಮೋಹಾಜ್ಞಾನ ಭೀತಿ ಬಿಡಿಸು ಶ್ರೀ ಕರಾರ್ಚಿತ ಸ್ವಯಂ ಜ್ಯೋತಿ44 ಒಂದು ಗೇಣೊಡಲನ್ನಕಾಗಿ ಅಲ್ಪ ಮಂದಭಾಗ್ಯರ ಮನೆಗೆ ಪೋಗಿ ದೈನ್ಯ ದಿಂದ ಸತ್ಕರ್ಮಗಳ ನೀಗಿ ಕಂದಿ ಕುಂದಿದೆನೋ ಸಲಹೋ ಲೇಸಾಗಿ45 ಪಾತಕರೊಳಗಧಿಕ ನಾನಯ್ಯ ಜಗ ತ್ಪಾತಕವ ಕಳೆವ ಮಹಾರಾಯ ನಿನ್ನ ದೂತನಲ್ಲವೆ ಜೀಯ ಜಗ ನ್ನಾಥ ವಿಠ್ಠಲ ಪಿಡಿಯೋ ಕೈಯಾ 46
--------------
ಜಗನ್ನಾಥದಾಸರು
ಹರಿ ಹರಿ ಕೃಷ್ಣ ಗೋವಿಂದ ಪ ಮಾಧವ ಗೋವಿಂದ ಅ.ಪ ಕೇಶವ ನಾರಾಯಣ ಗೋವಿಂದ ವಾಸುದೇವ ಶ್ರೀ ಗೋವಿಂದ ಶ್ರೀಶ ಜನಾದರ್Àನ ಗೋವಿಂದ | ಹರಿ ದಾಸ ಜನಾವನ ಗೋವಿಂದ1 ವಾಮನ ದಾಮೋದರ ಗೋವಿಂದ ಕಾಮಿಕದಾಯಕ ಗೋವಿಂದ ರಾಮ ರಘೂತ್ತಮ ಗೋವಿಂದ | ಗುಣ ಧಾಮ ದಯಾನಿಧೇ ಗೋವಿಂದ 2 ಶ್ರೀಧರ ಭೂಧರ ಗೋವಿಂದ ಆದಿಮೂಲ ಶ್ರೀ ಗೋವಿಂದ ವೇದ ವೇದ್ಯ ಹರಿ ಗೋವಿಂದ | ನಿಜ ಪಾದ ಭಜಕಪ್ರಿಯ ಗೋವಿಂದ 3 ಪದ್ಮದಳಾಂಬಕ ಗೋವಿಂದ ಪದ್ಮನಾಭ ಶ್ರೀ ಗೋವಿಂದ ಪದ್ಮಿನಿ ಅರಸನೆ ಗೋವಿಂದ | ಕರ ಪದ್ಮದಿ ಪಿಡಿ ಎನ್ನ ಗೋವಿಂದ4 ಕರಿಗಿರೀಶ ನರಹರಿ ಗೋವಿಂದ ಪರತರ ಮುರಹರ ಗೋವಿಂದ ಗರುಡಗಮನ ಶ್ರೀ ಗೋವಿಂದ | ಹರಿ ಹರಿ ಹರಿ ಹರಿ ಹರಿ ಗೋವಿಂದ 5
--------------
ವರಾವಾಣಿರಾಮರಾಯದಾಸರು