ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥಾ ಬಾಲಕನಿವನು ಎಷ್ಟೆಂದ್ಹೇಳಲಿ ನಾನು ಪಂಥಗಾರಿಕೆಯಂಗ ಪರಮ ಪುರುಷರಂಗ ಅಂತವ ತಿಳಿಗುಡನು ಗೋಪೆಮ್ಮಾ ಪ ನೋಟಾವೇಟದಿ ನಲುವಾ ನಡೆಯಾಲೊಲ್ಲದೆ ನಿಲುವಾ ಸ್ಫೋಟ ಹೃದಯವಾಗುವ ಪರಿಯಂಜಿಸುವ ಮಗು ನೀಟ ಘಾತಪಾತಕನಮ್ಮಾಗೋಪೆಮ್ಮ ನಿತ್ಯ ಬೆಣ್ಣೆಯ ಸವಿದು ಕಾಟಕಾರವೆ ಭಂಡಾ ತುರುಗಾವರೋಳು ಪುಂಡಾ ಆಟಕೆ ಗುಣವೇನ ಗೋಪೆಮ್ಮಾ 1 ನಯ ಮಾತಿಲಿ ಬರುವಾ ನೋಡಲು ಕಠಿಣಿರುವಾ ತಾಯಡಬಲ ನೋಡಾ ತರುಣಿಯರನ ಬಿಡಾ ಬಾಯಾದೆರೆದು ಬೇಡವಾ ಗೋಪೆಮ್ಮಾ ತಾಯಿಂಗಂಜನು ನಿನಗೆ ತಡೆದುರೋಗವ ಹೊರಗೆ ಮಾಯಾಗಾರನೆ ಗೋವಾ ಮತಿಯ ಕಡುವನಿವ ಸಾಯಸ ಕಲಿಯಮ್ಮ ಗೋಪೆಮ್ಮಾ 2 ಇದರೇರಿ ಚಿನ್ನವರಾ ಇಕ್ಕಿ ಅಂಗವ ತೋರಾ ಕಾಲ ಕೆದರಿ ಪೊರೆವ ಬಾಲಾ ಅದ್ಭುತ ವಿಕ್ರಮನೆ ಗೋಪೆಮ್ಮಾ ಉದ ಧಿಗಂಜನು ಧುಮುಕಿ ಉಲುವಾ ಬುದ್ದಿಯ ಸೊಕಿ ಮುದದಿ ವಾಜಿರಿಸೇ ಮಹಿಪತಿಸುತ ಪ್ರಭು ಬುಧ ಜನರೊಲುವಂತೆ ಗೋಪೆಮ್ಮಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಒಂದಿಲ್ಲದ ಮೇಲೆರಡುಂಟೇ ಭಕ್ತಿ ಒಂದಲ್ಲದೆ ಹರಿಯೊಲವುಟೇ ಪ ರುಚಿ ಔಷಧಿಯುಂಟೇ ನೊಂದಲ್ಲದೆ ರಂಗಾ ಎಂಬುವುದುಂಟೇ ಅ.ಪ ಗಿಡಮರವಾಗದೆ ಕೃಮಿಯಾಗುವೆನೇ ಅಡವಿಯೊಳಿರದೆ ಗೋವಾಗುವೆನೇ ಪಡೆಯದೆ ಪುಣ್ಯವ ನರನಾಗುವೆನೇ ಮೃಡನ ಪೂಜಿಸದೇ ದ್ವಿಜನಾಗುವೆನೇ 1 ಸುಗುಣವಿರದೆ ಮಾತಿನಿದಾಗುವುದೇ ಸೊಗಮಿಲ್ಲದೆ ಬಾಯಿ ನಗೆದೋರುವುದೇ ಸುಗುಣವಿಲ್ಲದೆ ನಿರ್ಗುಣಬಹುದೇ ಮುಗಿಲಿಲ್ಲದೆ ಮಳೆ ಧರೆಗೆ ಬೀಳುವುದೇ 2 ತಂಗಿದ್ದಲ್ಲದೆ ಭಾವ ಎಂಬೋದುಂಟೋ ಹಂಗಿ[ಗ]ಲ್ಲದೆ ಮರೆ ಹಿತಕುಂಟೋ ತಂಗಿನೋಡಲು ಭಾವ ಮರೆಯಹುದುಂಟೋ ಮಾಂಗಿರಿರಂಗ ನೀನೆನ್ನಯ ನಂಟೋ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕೃಷ್ಣನ ನೋಡಿರೈ ಭಕ್ತಿ ತುಷ್ಟನ ಪಾಡಿರೈ ಕೃಷ್ಣೆಗೆ ಬಲಿದತಿ ದುಷ್ಟ ರಾಯರನು ತರಿದಾ ಜಗದೊಳು ಮೆರೆದಾ ಪ ನಂದ ವ್ರಜದಲಿ ಕಂದನಾಗಿ ತಾ ಬೆಳೆದಾ ದೈತ್ಯನರಳಿದಾ ಕೂಡಿ ಪರಿಪರಿಯಾಡಿ ತೋರಿಸಿದಾ ಮೋಹ ಚರಿಸಿದ ಕಾವಾ ವರಗಳನೀವಾ 1 ಕದ್ದಾ ತೀವ್ರದಿ ಮೆದ್ದಾ ಗೋವಾ ಕಾಯ್ದನು ದೇವಾ ಪೊರೆದ ಗರ್ವವ ಮೆರೆದಾ ಸುರದಿಂದ ಮೆರೆದಾ 2 ಮಧುರ ಪಟ್ಟಣದಲಿ ಕದನ ಕರ್ಕಶರ ಕೊಂದಾ ಸಚ್ಚಿದಾನಂದಾ ಸದುಗುಣ ನಿಧಿಯ ಪಡೆದವಳ ಜನಕಗೆ ಪಟ್ಟಾ ಗಟ್ಟದ ದಿಟ್ಟಾ ಪುರದಿಂದಾ ಸುರಪಮ ತಂದ ಪದುಮಜಾಂಡಧರ ಜಗನ್ನಾಥ ವಿಠಲ ಗೀತಾ ತ್ರಿಗುಣಾತೀತಾ3
--------------
ಜಗನ್ನಾಥದಾಸರು