ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡೆ ನಾಕಂಡೆ ನಾಕಂಡೆ ಕಾಳಿಂಗನ ಮಂಡೆಯಮೇಲೆ ಕುಣಿವ ಕೃಷ್ಣನ್ನ ಪ ತಕ ತಕ ಧಿಮಿ ಧಿಮ್ಮಿ ಧಿಮ್ಮಿ ಧಿ- ಮ್ಮಿಕೆಂದು ಕುಣಿವ ಕೃಷ್ಣನ್ನ ನಾಕಂಡೆ ಅ.ಪ ಹೆಡೆಯ ಮೇಲೆ ತಾ ಎಡಗಾಲಿರಿಸಿ ಎಡಗೈಯಲಿ ಬಾಲ ಹಿಡಿದವನ ಬಿಡದೆ ಅಭಯಹಸ್ತವ ತೋರೊ ಒಡೆಯ ಕೃಷ್ಣಮೂರುತಿಯ ನಾಕಂಡೆ ಸ್ವಪ್ನದಲಿ ನಾಕಂಡೆ ಕಂಡೇನೊ ಸಂಪನ್ನಮೂರ್ತಿಯ ಕಂಡೇನೊ 1 ಗೋವಲರ ಮನೆಯ ಪಾಲುಂಡವನ ಗೋವುಗಳ ಕಾಯ್ದ ಗೋಪಾಲನ್ನ ಗೋವಿಂದನೆಂಬ ದೇವರದೇವನ್ನ ಓವಂತೆ ನಾನು ಕಂಡೇನು ಕಂಡೇನು ಕುಣಿಯುತ ಬಂದ ಕೃಷ್ಣನ್ನ ತಣಿಯುವ ಹಾಗೆ ನೋಡಿದೆನು 2 ಗೋವಿಂದನಾಗಿ ತಲೆಕಾಯ್ವವನ ಗೋವರ್ಧನವನೆ ಕೊಡೆಯಾದವನ ಗೋವನಿತೆಯರ ಮಾಮಾಯನನ್ನ ಅವ್ವಯ್ಯ ಚೆನ್ನಾಗಿ ಕಣ್ತುಂಬ ಕಂಡೆ ಆ ಮುದ್ದು ಬಾಲಕೃಷ್ಣನ್ನ ಕಂಡೆ ಸಾಮುದ್ರಿಕಾ ಸಿರಿಯನ್ನಕಂಡೆ 3 ಅಸುರ ಕಂಸನ ಅಸುವನ್ನು ನೀಗಿದನ ಬೆಸೆದ ಕುಬ್ಜೆಯ ಡೊಂಕ ತಿದ್ದಿದವನ ಅಸುತೆಗೆಯ ಬಂದವಳ ಅಸುವನೆ ಹೀರಿದನ ಮಿಸುಕದಂತೆ ಕಂಡೆ ನಾಕಂಡೆ ನಾಕಂಡೆ ಜಾಜಿಪುರೀಶನ ಕಂಡು ಧನ್ಯನಾದೆ ಸಾಜದಿ ದಾಸಾನುದಾಸನಾದೆ 4 ಪಾಪಿನಾ ಕರುಣೆಯ ತೋರಿ ಸಲಹೊ ಭಾಪುರೆ ಗಟ್ಟಿಸುವ ಪುಟ್ಟಪಾದವಿಟ್ಟು ಮೋಪಾಗಿ ಮೆರೆವ ದುಷ್ಟರ ಮೆಟ್ಟೊ ಪುಂಡರ ಪುಂಡರಿಗೆ ಪುಂಡನಾದವನೆ ಪುಂಡರೀಕಾಕ್ಷ ಚನ್ನಕೇಶವನೆ 5
--------------
ನಾರಾಯಣಶರ್ಮರು
ಸುಶೀಲ ಶ್ರೀಲೋಲ ಪ ಗೋಕುಲದಿ ಪುಟ್ಟಿ ಆಕಳನೆ ಕಾಯ್ದ ಗೋವರ್ಧನವನೆತ್ತಿ ಗೋಪವೃಂದ ಕಾಯ್ದ 1 ಬಾಲತನವ ನೋಡಿ ಪಾಲುಬೆಣ್ಣೆ ಸೂರೆ ಬಾಲಗೋಪರೊಡನೆ ಚೋರನೆನಿಸಿ ಮೆರೆದ 2 ಮುರಳಿನಾದಗೈದು ಪರಿಪರಿಯ ಜನರ ಮರುಳುಗೈಸಿ ಮೆರೆದ ಸುರಮುನಿ ವಂದ್ಯ 3 ಮಡದಿಯರು ಜಲದಿ ಮುದದಿಂದಾಡುತಿರಲು ಮದನನಯ್ಯ ವಸ್ತ್ರಗಳನೆ ಕದ್ದ ಚೋರ 4 ಕಾಳಿ ಮಡುವ ಧುಮುಕಿ ಕಾಳಸರ್ಪನ ತುಳಿದಕಾಮಜನಕ ಹರಿ ಶ್ರೀ ಕಮಲನಾಭ ವಿಠ್ಠಲ5
--------------
ನಿಡಗುರುಕಿ ಜೀವೂಬಾಯಿ
ಹರಿ ಹರಿ ನರಹರಿ ಎನ್ನಿಜನರು ಹರಿ ಹರಿ ಎಂದು ಕೊಂಡಾಡಿ ಸಜ್ಜನರು ಪ ನಂದನಂದನನಾ ಮಂದರಧರನಾ ಇಂದ್ರಾದಿ ಸನಕ ಸನಂದನ ವಂದಿತನಾ 1 ತಾಳಭಂಜನನಾ ವ್ಯಾಳಶಯನನÀ ಕಾಳಿಯ ಪೆಡೆಯ ಮೇಳ್ ಕುಣಿದ ಗೋವಳನ 2 ಶರಧಿ ಶಯನನ ವರ ಶಂಖಚಕ್ರಗದಾಬ್ಜ ಶ್ರೀಧರನ 3 ಮಾವ ಮರ್ದನನ ರಾವಣಾಂತಕನ ಗೋವರ್ಧನವನೆತ್ತಿ ಗೋವಕಾಯ್ದವನ 4 ಮಕರ ಕುಂಡಲನ ಮುಕುತಿದಾಯಕನ ಬಕನ ವೈರಿಯ ಕೋಣೆ ಲಕ್ಷ್ಮೀ ರಮಣನ 5
--------------
ಕವಿ ಪರಮದೇವದಾಸರು