ಒಟ್ಟು 6 ಕಡೆಗಳಲ್ಲಿ , 3 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕುಂದಣದ ಹಸೆಗೆ ಛಂದದಿಂದ ಬಾರೆ | ಸಿಂಧು ಕುಮಾರೆ | ಶೃಂಗಾರಮಯವಾದ ಕಂಗೊಳಿಸುವ ಬಹು ಸಹೋದರಿ 1 ಸಿಂಧುರಮಂದಗಮನೆ ಕುಂದಕುಟ್ಮಲರದನೆ ಇಂದು ಧರೆಯಲಿ ಸುರವೃಂದವಂದಿತ ಜನನಿ 2 ಕಾಮನ ಜನನಿ ಕಾಮಿತದಾಯಿನಿ ಗೋಮಿನಿರುಕ್ಮಿಣಿ ಶಾಮಸುಂದರನ ರಾಣಿ 3
--------------
ಶಾಮಸುಂದರ ವಿಠಲ
ಪಾಲಿಸೆನ್ನ ಮಾತೆ ಕರುಣದಿ ಪಾಲಾಂಬುಧಿ ಜಾತೆ ಪ ಕಾಲಕಾಲಕೆ ಕಮಲಾಲಯೆ ಗೋಪಿಯ ಬಾಲನಾಳುಗಳ ಊಳಿಗವಿತ್ತು ಅ.ಪ ಜಾನಕಿಶುಭಗಾತ್ರೆ ನಮಿಸುವೆ | ಮಾನಿತೆ ಚರಿತ್ರೆ ಸಾನುರಾಗದಿ ತವ ಸೂನುವೆನಿಪ ಪವ ಮಾನಸುಶಾಸ್ತ್ರದ ಜ್ಞಾನವಿತ್ತು ಸದಾ 1 ಶಂಭು ದೃಹಿಣಿ ವಿನುತೆ ತ್ರೈಜಗ ದಂಬೆ ಸುಗುಣ ಭರಿತೆ | ಕುಂಭಿಣಿ ಸುತೆ ದುರ್ಗಾಂಭ್ರಣಿ ಮಮಹೃದ ಯಾಂಬುಜದೊಳಿಹ ಬಿಂಬನ ತೋರಿ 2 ಪ್ರೇಮದಿಂದ ನೋಡೆ ಮನ್ಮನ | ಧಾಮದಿ ನಲಿದಾಡಿ | ಕಾಮಿನಿಮಣೀ ಗಜಗಾಮಿನಿ ಗೋಮಿನಿ ಶಾಮಸುಂದರನ ವಾಮಾಂಗಿಯೆ ಸದಾ 3
--------------
ಶಾಮಸುಂದರ ವಿಠಲ
ಬಾರೆ ಭಾಗ್ಯದ ನಿಧಿಯೆ | ಬಾರೆ ಜಾನಕಿಯೆ ಪ ಚಕೋರ ಸುಖಾಗ್ರಣೆ ಸೇರಿದೆ ತವಪದ ವಾರಿಜ ನಿಲಯೆ ಅ.ಪ ಕೃತಿ ಶಾಂತಿ ಜಯ ಮಾಯೆ ಕ್ಷಿತಿಜಕೋಮಲ ಕಾಯೆ ಶಿತಕಳೆವರ ವಿಧಿಶತಕ್ರತು ಸುಮನಸ ತತಿನುತೆ ಪಾವನೆ ರತಿಪತಿ ತಾಯೆ 1 ಮಂಗಳೆ ಮುದ ಭರಿತೆ ಇಂಗಡಲಜೆ ಕೃಪಾಂಗಿಯೆ ಎನ್ನಂತ ಮಾನವ ಸಿಂಗನ ತೋರೆ 2 ಶಾಮಸುಂದರ ರಾಣಿ ವಾಮಾಕ್ಷಿ ಕಾಲ್ಯಾಣಿ ಕಾಮಿನಿ ಮಣಿ ಸತ್ಯಭಾಮೆ ರುಕ್ಮಿಣಿ ಗೋಮಿನಿ ರಮೆ ಶುಭನಾಮ ಲಲಾಮೆ 3
--------------
ಶಾಮಸುಂದರ ವಿಠಲ
ಮಾಧವ ಅಂಗಜನಯ್ಯ ಪಾಂಡುರಂಗ ವಿಠಲನಿಗೆ ಪ. ಪುಂಡರೀಕವರಗೆ ಪೂರ್ಣಾತ್ಪೂರ್ಣಗೆ ಪಂಡರಿಪುರವರ ಪುಂಡರೀಕಾಕ್ಷಗೆ 1 ನಾಮದೇವಾದಿ ಸಂತಸ್ತೋಮ ಪರಿಣಾಮ ಶ್ರೀ- ರಾಮದಾಸನ ಪ್ರಿಯ ಶ್ರೀರಾಮಗೆ 2 ಏಕನಾಥನಾಲಯ ಚಾಕರನಾದವಗೆ ಗೋಕುಲಪಾಲಗೆ ಗೋಮಿನಿಲೋಲಗೆ 3 ಮಂದರಧಾರಗೆ ಮಥುರಾನಾಥಗೆ ಕಂದರ್ಪ ಶತಕೋಟಿ ಸುಂದರರೂಪಗೆ 4 ರುಕುಮಿಣಿಕಾಂತಗೆ ರುಜುಗಣಾಧೀಶಗೆ ಭಕ್ತವತ್ಸಲನಿಗೆ ಲಕ್ಷುಮಿನಾರಾಯಣಗೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ವಾರಿಧಿ ಸುತಿಗೆ ಸಾರ ಸಂಗೀತದಿಂದಲಿ ಪ ಸಕಲ ವಸ್ತುವೆನಿಸಿ ಮುಕುತಿದಾಯಕ ಹರಿಗೆ ಭಕುತಿಯಿಂದಲಿ ಬಿಡದೆ | ಸದಾಪೂಜಿಪ ಸಿರಿಗೆ ವಿಖನ ಸಾದ್ಯಮರ ಗಣಕೆ | ಸುಖ ಕೊಡುವಳಿಗೆ ಮಕರಧ್ವಜನ ಮಾಲೆಯಾದ ರುಕುಮನನುಜಗೆ 1 ಚಾರುಶ್ರಾವಣ ಭಾರ್ಗವ ಶುಭವಾರದ ದಿನದಿ ಭೂರಿ ಭಕ್ತಿ ಭರಿತಳಾಗಿ ನಮಿಸುತ ಮನದಿ ನೀ ಆರಾಧಿಸೆ ಘೋಡಶ ಉಪಚಾರದಿ ಮುದದಿ ಕೋರಿಕೆಯನು ಗರೆಯುವ ವರಲಕ್ಷ್ಮಿಗೆ ಜಯದಿ2 ತಾಮರಸ ಸುಧಾಮಳಾದ ಸೋಮವದನಿಗೆ ಗೋಮಿನಿ ಸೌದಾಮಿನಿ ಸಮ ಕೋಮಲಾಂಗಿಗೆ ಶಾಮಸುಂದರ ಸ್ವಾಮಿಯ ಸುಪ್ರೇಮದ ಸತಿಗೆ ಕಾಮಿತ ಫಲದಾಯಿನಿ ಶ್ರೀ ಭೂಮಿಜೆ ರಮಗೆ3
--------------
ಶಾಮಸುಂದರ ವಿಠಲ
ಮಂಗಲಂ ಜಯಜಯಮಾಧವದೇವಗೆಅಂಗಜನಯ್ಯಪಾಂಡುರಂಗ ವಿಠಲನಿಗೆಪ.ಪುಂಡರೀಕವರಗೆ ಪೂರ್ಣಾತ್ಪೂರ್ಣಗೆಪಂಡರಿಪುರವರ ಪುಂಡರೀಕಾಕ್ಷಗೆ 1ನಾಮದೇವಾದಿ ಸಂತಸ್ತೋಮ ಪರಿಣಾಮ ಶ್ರೀ-ರಾಮದಾಸನ ಪ್ರಿಯ ಶ್ರೀರಾಮಗೆ 2ಏಕನಾಥನಾಲಯ ಚಾಕರನಾದವಗೆಗೋಕುಲಪಾಲಗೆ ಗೋಮಿನಿಲೋಲಗೆ 3ಮಂದರಧಾರಗೆ ಮಥುರಾನಾಥಗೆಕಂದರ್ಪಶತಕೋಟಿ ಸುಂದರರೂಪಗೆ4ರುಕುಮಿಣಿಕಾಂತಗೆ ರುಜುಗಣಾಧೀಶಗೆಭಕ್ತವತ್ಸಲನಿಗೆ ಲಕ್ಷುಮಿನಾರಾಯಣಗೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ