ಒಟ್ಟು 7 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದು ಥರವೇ ಥರವೇ ದೇವಾ ಥರವೇ ನಿನ್ನವರ ವಂಚಿಸಿ ನೀ ಮರೆಯಲ್ಲಿ ಇರುವುದು ಥರವೆ ಪ. ಪರಿಪರಿಯಲಿ ಸ್ತುತಿಗೈಯುತಲಿ ನಿನ್ನ ಪರಮ ಮಂಗಳ ಪಾದಗಾಣದೆ ಮರುಗುತಿರುವಾ ವರ ಭಕುತರಿಗೆ ಕರುಣದೋರದೆ ಇರುವೆ ವೆಂಕಟ ಅ.ಪ. ಅಜಭವಾದಿಗಳು ಸ್ತುತಿಸಿ ಪೂಜಿಸಿದ ಪಾದ ತ್ರಿಜಗವಂದಿತ ಕೃಷ್ಣ ನಿನ್ನಪಾದ ಭಜನೆಯನು ಮಾಡುತ ನಿನ್ನ ತ್ಯಜಿಸದನುದಿನ ಸುಜನರೆಲ್ಲರು ಸ್ತುತಿಸಿ ಪಾಡುತಿರೇ ತ್ರಿಜಗ ಪೂಜಿತನಾಗಿ ಭಕುತರ ಭಜನೆ ನಿನಗರಿವಿಲ್ಲೇ ದೇವನೆ ಸ್ವಜನರನು ಪಾಲಿಸುವ ಬಿರುದನು ತ್ಯಜಿಸುವರೆ ಸಿರಿಯರಸ ವೆಂಕಟ 1 ಮಚ್ಛಕೂರ್ಮವರಾಹನಾಗಿ ದೈತ್ಯರ ಸ್ವಚ್ಛಭಕುತರ ಸಲಹೆ ಸಂಹರಿಸಿ ಅಚ್ಛಪ್ರಲ್ಹಾದನಿಗೊಲಿದ ನರಹರಿಯಾಗಿ ಅಚ್ಛವಾಮನನಾಗಿ ಬಲಿಯತಲೆಯತುಳಿದು ಸ್ವಚ್ಛಗಂಗೆಯ ಇಂಬಿಡದೇ ದುಷ್ಟ ರಾಜರನಳಿದ ಭಾರ್ಗವ ದುಷ್ಟ ತಾಟಕಿ ಸಂಹರಿಸಿದನೆ ಕೃಷ್ಣರೂಪದಿ ಗೋಪೆರಿಗ್ವಲಿದನೆ ಉತ್ಕøಷ್ಟ ಬೌದ್ಧ ಕಲ್ಕಿ ವೆಂಕಟ 2 ಪರಮಪುರುಷ ಬಾ ವರದ ಮೂರುತಿ ಬಾ ಪರಿಪರಿ ಸ್ತುತಿಸಿ ವಂದಿಪೆ ಸಿರಿವರದ ಬಾ ಶರಧಿಶಯನ ನಿನ್ನ ಚರಣ ಸ್ಮರಣೆಯೀಯೆ ಶರಣಾಗತ ರಕ್ಷಾಮಣಿ ಬೇಗ ಬಾ ಸಿರಿಗೆ ಪೇಳದೆ ಬಂದು ಕರಿಯ ಪೊರೆದ ದೊರೆ ಶ್ರೀ ಶ್ರೀನಿವಾಸ ಬಾ ಗರುಡ ಗಮನನೆ ಶರಣಜನರನು ಮರೆಯದಲಿ ನೀ ಕರುಣ ವೆಂಕಟ 3
--------------
ಸರಸ್ವತಿ ಬಾಯಿ
ನಡಿರೆ ನಡಿರೆ ನೋಡುವ ಶ್ರೀ ಕೃಷ್ಣನ ನಡಿರೆ ನಡಿರೆ ನೋಡುವ ಧ್ರುವ ನಡಿರೆ ನೋಡುವ ಬನ್ನಿ ತುಡುಗ ಶ್ರೀ ಕೃಷ್ಣನ ಅಡಿಗಳಾಶ್ರೀಯ ಹಿಡುವ ಮಂಡಲದೊಳು1 ತುಡಗತನದಿ ಬಂದು ಕದಿವ ಬೆಣ್ಣೆಯ ಮೆದ್ದು ಒಡನೆ ಗೋಪೆರ ಕಾಡಿದ ನೋಡಮ್ಮ2 ಬಿಡದೆ ಕಾಳಿಂಗನ ಹೆಡೆಯ ಮೆಟ್ಟಿದ ನೋಡಿ ತಡಿಯದೆ ಧುಮುಕಿದ ಮಡುವಿನೊಳು 3 ಕ್ರೀಡಿಸಿ ಗೋಪೆರ ಉಡಿಗಿ ಸೆಳೆದುಕೊಂಡು ಒಡನೆ ಗಿಡನೇರಿದ ನೋಡಮ್ಮ 4 ಮಾಡದ ಮಾಡಿ ತಾ ಬಿಡದೆ ಬೇಡಿಸಿಕೊಂಡು ಒಡನೆ ಉಡಿಗಿ ನೀಡಿದ ನೋಡಮ್ಮ 5 ಆಡಿದಾನಂದದಾಟ ನೋಡಮ್ಮ 6 ಹಿಡಿಯ ಹೋಗಲು ಮೂಢ ಮಹಿಪತಿಯ ನೋಡಿ ಒಡಲ ಹೊಕ್ಕು ಕೂಡಿದ ಒಡಿಯನಮ್ಮ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಲುದೊಡ್ಡವನೇನೆಪ ಅಕ್ಕಕÉೀಳುವರೇನೆ ಅ.ಪ ಕೃಷ್ಣಸರಸಿಜೋದ್ಭವಗಿತ್ತನೆ ಗಾರುಡಿವಿದ್ಯವೆ 1 ಕೃಷ್ಣಸುರರಿಗೆ ಹಂಚಿಚನೆ ಅಂಗನೆಯಾಗಿ ಹೀಂಗೆ ಮಾಡೋದು ವಂಚನೆಯಲ್ಲವೆ ಇದು ವಂಚನೆಯಲ್ಲವೆ 2 ಭೂಮಿಯನೆತ್ತಿದನೆ ಇದುಮೋಸದ ವಿದ್ಯವೆ 3 ಕೃಷ್ಣನು ನರಹರಿ ಆದನೆ ಇದು ಘೋರಕೃತ್ಯವೆ 4 ಕೃಷ್ಣ ಇಂದ್ರನ ಸಲಹಿದನೆ ಇದು ಯಾತರೆ ನ್ಯಾಯವೆ 5 ಕೃಷ್ಣ ಭೂಪರ ತರಿದನೆ ಅವನು ಘಾತುಕನಲ್ಲವೆ 6 ಕೃಷ್ಣ ಅಡವಿಯೊಳ್ ಚರಿಸಿದನೆ ಒಡೆಂiÀiರ ಲಕ್ಷಣವೆ 7 ಕೃಷ್ಣಗೋಪೆರ ಕೂಡಿದನೆ ಪಾಪವಲ್ಲವೆ 8 ಕೃಷ್ಣ ದೈತ್ಯರ ನಳಿಸಿದನೆ ಭಂಡನಲ್ಲವೇ 9 ಕೃಷ್ಣ ಧರ್ಮವನುಳುಹುವನೆ ಅಕ್ಕ ಕೋಪ ಬೇಡವೇ 10 ಕೃಷ್ಣವಿಠಲನೆ ಅವನು ಶ್ರೀ ಕೃಷ್ಣವಿಠಲನೆ ಅತನು ಶ್ರೀಕೃಷ್ಣವಿಠಲನು ಅವನಾದರೆ ಜೀಯನೆ ಅವನೆಮಗೆ ಅಕ್ಕ ಜೀಯನೆ ಅವನೆಮಗೆ11
--------------
ಕೃಷ್ಣವಿಠಲದಾಸರು
ಮನದೊಳಗಿರು ಹರಿಯೆ ಮೂರ್ಲೋಕ ದೊರೆಯೆ ಪ. ಮನೆದೊಳಿ(?)ಗಿರು ಬಹು ಜನರು ಪೇಳುವ ದೂರು ಎಣಿಸಲು ಶಕ್ತನಾರು ಮುಖಾಬ್ಜ ತೋರು ಅ.ಪ. ಮೂರ್ತಿ ನೀನು ಪ್ರಾಕೃತ ಗುಣಸರ್ಗದಿ ಬರುವುದೇನು ಸರ್ಗರಕ್ಷಣ ಪಾಪವರ್ಗವೆಲ್ಲವನು ನಿಸರ್ಗ ಮೀರದೆ ಮಾಳ್ಪ ದುರ್ಗಮದ್ಭುತಕರ್ಮ ದೀರ್ಘದರ್ಶಿ ಮುನಿವರ್ಗಕೊಲಿದು ನಿಜ ಮಾರ್ಗ ತೋರ್ಪ ಶ್ರೀ ಭಾರ್ಗವೀ ರಮಣಾ 1 ಜಲದೊಳಗಾಡಿದನು ಬೇರನು ಕಿತ್ತಿ ಖಳರನು ಸೀಳಿದನು ನೆಲನನಳೆದು ತಾಯಿ ತಲೆಯ ತರಿದು ನಿಜಲಲನೆಗೋಸುಗ ದೈತ್ಯ ಕುಲವ ಸಂಹರಿಸಿದ ಶಿಲೆಯನು ರಕ್ಷಿಸಿ ಕಳವಳಿಸಿದ ಕಪಿ ತಿಲಕನ ಸ್ನೇಹವ ಬಳಸಿದನೆಂಬುದು 2 ಬಾಗಿಲ ಮುಚ್ಚಿದರೆ ಗೋಡೆಯ ಹಾರಿ ಹೋಗಿ ಮನೆಯ ಒಳಗೆ ಬಾಗಿಲ ಮರೆಯಲಿ ಬಾಗಿನೋಡುತ ಮೆಲ್ಲಗಾಗಿ ಬೆಣ್ಣೆಯ ಮೆದ್ದು ಸಾಗಿ ಬರುತಲಿರೆ ನಾಗವೇಣಿಯರು ಹಿಡಿಯಲು ನೀವಿಯ ನೀಗಿ ಪುರುಷರನು ಕೂಗಿದನೆಂಬರು3 ತೊಟ್ಟಿಲೊಳಗೆ ಮಲಗಿ ನಿದ್ರೆಯಗೈವ ಪುಟ್ಟ ಶಿಶುಗಳನೆಲ್ಲ ತಟ್ಟಿ ಎಬ್ಬಿಸಿ ಕಣ್ಣಾಕಟ್ಟಿ ವಸ್ತ್ರದಿ ತಾನೆ ಚಿಟ್ಟನೆ ಚೀರಿ ಒ- ತ್ತಟ್ಟು ಎಲ್ಲರು ಕೂಡಿ ಕಟ್ಟಿದ ಕರುಗಳ ಬಿಟ್ಟ ಮೊಲೆಗೆ ಒಳ- ಗಿಟ್ಟ ಹಾಲು ಮೊಸರೊಟ್ಟಿಲಿ ಸವಿವುದೆ 4 ವಿದ್ಯೆಯ ಕಲಿಯೆಂದರೆ ಅಮ್ಮಯ್ಯ ಎನಗೆ ನಿದ್ದೆ ಬರುವುದೆಂಬುವಿ ಹೊದ್ದಿಸಿ ತಟ್ಟಿದರೆದ್ದು ಓಡುವಿ ಗೋಪೆರಿದ್ದ ಠಾವಿಗೆ ನಾನಾ ಬದ್ಧವನು ಸುರುವಿ ಸಿದ್ಧವಾಗಿ ಕಾದಿರೆ ಕೈಗೆ ಸಿಕ್ಕದೆ ಉದ್ಧವ ಗೃಹದೊಳು ಬೌದ್ಧನಂತಿರುವಿ 5 ಕುದುರೆಯ ಹತ್ತಿದರೆ ಯಾರಾದರೂ ಕದನವ ಮಾಡಲಿಹರೆ ಹೃದಯ ಮಂಟಪದಿ ನೀ ಸದರವಾಡುತಲಿರೆ ಮದನ ಜನನಿವರ ಮದಮತ್ಸರಗಳ ಒದೆದು ತೀವ್ರದಲಿ ಪದಯುಗ ಪಾಲಿಸುವುದಯ್ಯ ಗಿರೀಶ 6
--------------
ತುಪಾಕಿ ವೆಂಕಟರಮಣಾಚಾರ್ಯ
ರಾಮ - ರಕ್ಕಸ ಸಂಕಲ ಭೀಮಮುನಿದರೆ ಲೋಕ ವಿರಾಮ | ಸಾಮಸನ್ನುತ ನಿಸ್ಸೀಮ ಪ ಕಾಮಿತಾರ್ಥ ಸುಮಹೋದಧೆ - ನಿಪ್ಕಾಮನ ಮಾಡೆಲೊ ವಾಮನ ಮೂರ್ತಿಅ.ಪ. ಧಾಮ ವೈರಿ ಸುತ್ರಾಮ ||ಕಾಮನಯ್ಯ ಕಮ | ನೀಯ ಮೂರುತಿಯೆಕಾಮಿಪೆ ನಿನ್ನನು | ಭೂಮ ಗುಣಾರ್ಣವ 1 ಪಾತಕ ಕಳೆಯೋ 2 ಬಾಲಾ - ಕೆಡಿಸಿದೆ ಗೋಪೆರ ಶೀಲಾ | ಜನನಿಗೆ ತೋರಿದೆ ಲೀಲಾವದನದಿ ಲೋಕ ವಿಶಾಲಾ | ಮಾವ ಕಂಸಗೆ ನೀ ಕಾಲಾ ||ಪಾಲು ಮೊಸರು ಬೆಣ್ಣೆ | ಲೀಲೆಯಿಂದಲಿ ಮೆದ್ದುಜಾಲತನದಿ ನಿಮ್ಮ | ಬಾಲರೆಂದ್ಹೇಳಿದೆ 3 ಶ್ರೀತಾಕೇಶಿ ನಿಷೂದನ ವೃಷ್ಟೀಶ | ಸೋಜಿಗವೇನಿದು ಸರ್ವೇಶಸಂತತ ಭಜಿಪರ ಅಘನಾಶ | ದಾಸ ಜನರ ಹೃತ್ತೋಷ ||ವಾಸವ ಮುಖ ದೇ | ವೇಶ ನಿನ್ನಯ ಪಾದಆಶ್ರಯ ದೊಳಗಿಟ್ಟು | ಪೋಷಿಸು ಎನ್ನ 4 ಕರ್ತಾ - ರಕ್ಷಿಸೆನ್ನ ತ್ರಿಜಗದ್ಭರ್ತ | ನೀ ಲೋಕೈಕ ಸಮರ್ಥಗುರು ಕರುಣದಿ ನಾನು ಕೃತಾರ್ಥ | ಒರೆವೆನೊ ನಾನೊಂದು ವಾರ್ತಾಆರ್ತೇಷ್ಟದ ಗುರು | ಗೋವಿಂದ ವಿಠಲಮೂರ್ತಿ ನೆಲಸೊ ಮಮ | ಹೃತ್ಕಮಲದಲಿ5
--------------
ಗುರುಗೋವಿಂದವಿಠಲರು
ವೆಂಕಟರಮಣ ಶ್ರೀ ವೆಂಕಟರಮಣ ಶ್ರೀವೆಂಕಟರಮಣನೇ ||ಅ|| ಪಂಕಜೋದ್ಭವ ಪಿತ ಪಿಳ್ಳಂಕೇರಿಯ ವಾಸವೆಂಕಟರಮಣನೇ ಅ.ಪ. ಭದ್ರ ಮೂರುತಿ ಸಣ್ಣ | ಆದ್ರಿಯಾಶ್ರಯಿಸಿ ನಿಂತಿದ್ದಿ ಕಾರಣವೇನೋ |ಶುದ್ಧ ಜನರು ಮಾಳ್ಪ | ಶುದ್ಧ ಸೇವೆಯ ಗೊಂಡುದ್ಧರಿಸಲು ಯೋನೋ 1 ನೀರೊಳು ಮುಳು ಮುಳಿಗಿ | ಭಾರಿ ಗಿರಿಯ ಪೊತ್ತುಕೋರೆಹಲ್ಲನು ತೋರೇನೋ |ಧೀರ ಕಂದನ ಕಾಯ್ದ | ನಾರಸಿಂಹನೆ ಬಲಿಯದ್ವಾರ ಕಾಯ್ದಿಹದೇನೋ 2 ನೃಪರ ಸವರಿ | ನಾರಿ ಚೋರನ ಕೊಂದುಚಾರ ಗೋಪೆರ ಕೂಡೇನೊ |ಸಾರಿ ತ್ರಿಪ್ಪುರವನ | ನಾರೇರ ವ್ರತ ಕೆಡಿಸಿವೀರ ರಾವುತನಾದದ್ದೇನೋ 3 ಪಂಚ ರೂಪದಿ ಪ್ರ | ಪಂಚವ ವ್ಯಾಪಿಸಿಪಂಚಾತ್ಮಕ ನಾದದ್ದೇನೋ |ಅಂಚೆ ಗಮನನಾದಿ | ಪಂಚ ಪಂಚರಲ್ಲಿಸಂಚು ಗೊಳಿಪುದೇನೋ | 4 ಇಂದ್ರಾ ವರಜ ದೇ | ವೇಂದ್ರ ಗಭೀಷ್ಟದಬಂದಲ್ಲಿ ನಿಂದಿರ್ಪುದೇನೋಇಂದು ಕುಲಜ ರಾ | ಜೇಂದ್ರ ಜನಮೇಜಯಗಂದು ಒಲಿದು ನಿಂತಿಲ್ಲೇನೋ 5 ತೊಂಡ ಮಾನಾನಂದಅಂಡಜವಾಹ ವಿಖ್ಯಾತಾ6 ಭಾವ ಶುದ್ಧೀಲಿ ಸ್ತವನ | ದೇವ ಶರ್ಮನು ಮಾಡೆಭಾವಕ್ಕೊಲಿದು ಮೋಕ್ಷವಿತ್ಯೋ |ಗೋವ ಕಾವ ಗುರು | ಗೋವಿಂದ ವಿಠಲ ಭಕ್ತಿಭಾವ ನಿನ್ನಯ ಪದದಲ್ಲಿಯೋ7
--------------
ಗುರುಗೋವಿಂದವಿಠಲರು