ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಣಲೊಲ್ಲೆ ಯಾಕೋ ಅಣ್ಣಯ್ಯ ಉಣದೆ ಹೀಗೇಕೆ ಹಟ ಮಾಡುವಯ್ಯ ಪ ಉಣದಿರೆ ನನ್ನೆದೆ ತಳಮಳಗೊಳುವುದು ತಣಿಸೋ ಮನವನು ಉಂಡು ಕಂದಯ್ಯ ಅ.ಪ ನೀನನುದಿನವೂ ಉಣದಿದ್ದರೂ ಹೀಗೆ ಏನೂ ಹಸಿವಿಲ್ಲದೆ ಆಟವಾಡುವೆ ಹೇಗೆ ಏನಿದರ ಗುಟ್ಟು ಎಲ್ಲೂಟ ಮಾಡುವೆ ನಾನೇನ ಮಾಡಿಹೆನು ಉಣದಿರಲು ಹೀಗೆ 1 ಗೋಪಾಲಿಕೆಯರಲಿ ಆಕಳ ಹಾಲುಂಡು ಗೋಪಾಲಕರ ಕೂಡೆ ಬೆಣ್ಣೆಯ ಕದ್ದುಂಡು ಪಾಪಿಷ್ಠ ಬಲನೊಡನೆ ಮಣ್ಣನಾದರು ತಿಂದು ಅಪಾಟಿ ಹೊಟ್ಟೆಯ ತುಂಬಿಕೊಂಡಿಹೆಯೇನೊ 2 ಪೂತನಿಯ ಮೊಲೆಯುಂಡು ಜಡಗಟ್ಟಿತೊ ಪ್ರೀತಿಯಲಿ ಆ ಗೋಪಿಯರ ದಿಟ್ಟಿ ತಾಕಿತೊ ಆತುಕೊಂಡಾವ ಗೋಪಿಯು ಕೊಟ್ಟಳೆದೆಹಾಲ ಸೋತು ಹೋದೆನಯ್ಯ ನಿನಗುಣಿಸಲಾಗದೆ 3 ಅಣ್ಣಯ್ಯ ಕುಚೇಲ ನೀಡಿದ ಅವಲಕ್ಕಿಯುಂಡು ಕೃಷ್ಣೆ ಕೊಟ್ಟುಳಿದ ಅಗುಳನ್ನವುಂಡು ಚಿಣ್ಣ ಕಡುಭಕ್ತ ವಿದುರನ ಮನೆಯಲಿ ಹಾಲುಂಡು ಸಣ್ಣ ಹೊಟ್ಟೆ ತುಂಬಿತೆ ಕಂದ ಉಣಲೊಲ್ಲೆ ಯಾಕೊ4 ವಸುಧೆಯೊಳಗೆ ದಾಸರು ನಿನ್ನ ಪೂಜಿಸೆ ಏಸು ಪರಿಯಲಿ ನೈವೇದ್ಯ ನೀಡುವರೊ ಬಿಸಿಬಿಸಿ ಪರಮಾನ್ನ ಸಣ್ಣಕ್ಕಿಯೋಗರವು ಹಸಿದ ನಿನಗೆ ಬಲು ಇಷ್ಟವಾಯಿತೆ ಕೃಷ್ಣ 5 ವರಮಹಾಋಷಿಗಳ ವೇದ ಮಂತ್ರಗಳ ಪರಮ ಭಾಗವತರ ಪಲ್ಲಾಂಡುಗಳು ವರಜಾಜಿಪುರಿವಾಸ ನಿನ್ನ ಸೇವಿಸುತಿರಲು ನಿರುತ ಸಂತುಷ್ಟ ನೀ ಚೆನ್ನಕೇಶವನೆ 6
--------------
ನಾರಾಯಣಶರ್ಮರು
ಉದಯಕಾಲದೊಳೆದ್ದು ಗೋಪಿಯು ದಧಿಯ ಮಥಿಸುವ ಎಂಬ ಸಮಯದಿ ಉದರಗಣ್ಣನು ಎದ್ದು ತೊಟ್ಟಿಲೊಳ್ ತೊದಲು ನುಡಿಗಳಿಂ ಕರೆದ ತಾಯಿಯ 1 ನುಡಿಯ ಲಾಲಿಸಿ ನಳಿನನೇತ್ರನು ಕರೆದ ಹಾಲನು ಕೊಡುವೆನೆಂದರೆ ಕೊಡುವೆನೆಂದರೆ ಕಣ್ಣಮುಚ್ಚನು ಒಡನೆ ಮಲಗುವ ಮಲಗದೇಳುವ 2 ನಿದ್ರೆ ತೀರದೆ ನೀ ಎದ್ದ ಕಾರಣ ಬುದ್ಧಿ ಸಾಲದು ಮುದ್ದು ಮಗುವಿಗೆ ಒದ್ದು ಕೆಲಸವ ತಿದ್ದಿ ಉನ್ಮತ ಅಮ್ಮ ಬಾರೆಲೆ ಎನ್ನಗಲಬೇಡವೆ 3 ಗುಮ್ಮ ಬರುತದೆ ಗುಸುಗುಸೆನುತದೆ ಶ್ರೀದವಿಠಲನಾ ಶ್ರೀಲತಾಂಗಿಯು ಮೋದಪಡಿಸುವ ಮಾನವೀಯಳೇ ವೇದಗೋಚರ ನೀ ಏಳಬೇಡವೋ ಪಾದಕೆರಗುವೆ ಪವಡಿಸೆಂದಳು 4
--------------
ಶ್ರೀದವಿಠಲರು
ಎಂಥಾ ಮೋಹನನೇ ನೋಡಮ್ಮಯ್ಯಾ| ಸಂತತ ತೃಪ್ತನು ಬಾಲಕನಾದಾ|ಅ- ನಂತ ಚರಿತೆಯಾ ದೋರುವ ಕೃಷ್ಣ ಪ ಮೂಡಣ ದೇಶಕೆ ಪಡರಲು ಗೋಪಿಯು| ತಡೆಯದೆ ದುಮುಧುಮು ಧುಮುಕೆನುತ| ಕಡೆಯಲು ಧುಡು ಧುಡು ಧುಡುನಡೆಯುತ ಬಂದು| ಪಿಡಿದೆನ್ನ ಸೆರಗ ಬೆಣ್ಣೆ ಬೇಡುವಾ ಕೃಷ್ಣ 1 ಸಮಗೆಳೆಯರ ಸಂಗಡ ಧ್ವನಿವೇಣಿಯ| ಉಮಟೆಸುತಲಿ ಧಿಗಿಧಿಗಿಲೆನುತಾ| ಧಿಮಿಕಿಟ ಧಿರಕಿಟ ತಿರುಕಿಟವೆಂಬೋ| ಕ್ರಮದಿ ವಾದ್ಯವ ಬಾರಿಸುವಾ ಕೃಷ್ಣ 2 ಗುರು ಮಹೀಪತಿ ಪ್ರಭುವಿನ ಪದರಜ| ದೊರಕದು ಅಜಭವ ಮುಖ್ಯರಿಗೆ! ಹರುಷದಿ ತೋಳ್‍ದೊಡೆ ಮೇಲೆ ಓಡಾಡುವಾ| ಧರೆಯೊಳು ಯಶೋಧೆ ಸುಕೃತವೆಂತೋ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಒಂದಾನೊಂದು ದಿನ ನಂದ ಯಶೋದೆಯು ಕಂದನ ಪ್ರೀತಿಂದಾಡಿಸಲು ಅಂದುಗೆ ಅರಳೆಲೆ ಬಿಂದಿಗೆ ಮಾಗಾಯಿ ಚಂದದಿ ಮಗನನ ಮಾತಾಡಿಸಲು 1 ಉಂಗುರ ಉಡಿದಾರ ರಂಗು ಮಾಣಿಕವು ನೀ- ಲಾಂಗಗೆ ಎತ್ತಿ ಆಲಿಂಗನೆ ಮೋಹದಲಿ ರಂಗನ ಎತ್ತಿ ಆಲಿಂಗನ ಮಾಡುತ್ತಾ ಲಿಂಗನ ಸಹಿತ ಸಮೋಹದಲ್ಲಿ 2 ಅಂಗನೆ ಗೋಪಿಯು ನರಸಿಂಗವಿಠಲಗೆ ಮಂಗಳ ವಾಕ್ಯವು ಮೋಹರಿಸಿ ರಂಗಕುರಂಗ ಚಾತಕ ಸಂಗದಿ ಪಕ್ಷಿಗಳ ಕರೆಸಿ 3
--------------
ನರಸಿಂಹವಿಠಲರು
ಬಾಲಕೃಷ್ಣ ತುರುವು ಕಾಯಲು ಕಳುಹಿದಳು ತನ್ನಬಾಲನ ಗೋಪಿಯು ಮುದ್ದಿಸುತಿಹಳು ಪ ಕರೆದು ಪಾಲನು ಕುಡಿಸುತಿಹಳು ನಿಂಬುಪರಿಮಳುಪ್ಪಿನಕಾಯ ಬುತ್ತಿ ಕಟ್ಟಿದಳುಸುರಭಿಯ ಮೊಸರು ಬೆಣ್ಣೆಯನು ದೋಸೆಸುರುಳಿ ಹೋಳಿಗೆ ಮಂಡಿಗೆಯ ಕಟ್ಟಿದಳುಸಂಡಿಗೆಯ ಕಟ್ಟಿದಳು 1 ಕರುಗಳೆಲ್ಲ ಕೂಡಿಸಿದಳು ನಿನ್ನಪರಿವಾರದವರು ಬಂದಾರೆ ನೋಡುನೀನು ಬಲರಾಮನು ಜೋಡು ಇಲ್ಲೇಯಮುನಾ ತೀರದಲ್ಲಿ ಆಡೋಹತ್ತಿರದಲ್ಲಿ ಆಡೋ 2 ಕೂಸಿಗೆ ಕುಂಚಿ ಹೊಚ್ಚಿದಳು ಬಿದ್ದಕೇಶಗಳೆಲ್ಲವು ತೀಡುತ್ತಲಿಹಳುಭೂಷಣಂಗಳ ಇಡುತಿಹಳುಇಂದಿರೇಶನ ಕೈಯ್ಯಲ್ಲಿ ಕೋಲು ಕೊಟ್ಟಿಹಳು(ಮುರಲಿ) ಕೊಳಲ ಕೊಟ್ಟಿಹಳು 3
--------------
ಇಂದಿರೇಶರು
ಎರೆದು ಪೀತಾಂಬರÀವನುಡಿಸಿದಳಾಗವರಗೋಪಿಯು ಬೇಗಪಮುರುಳಿಯನೂದುತ ಪರಿಪರಿ ಗೆಳೆಯರುಪರಮಾತ್ಮನೆ ನಿನ್ನರಸುತಲಿಹರೆಂದು ಅಪಗುರುಳು ಕೂದಲು ಮುಖದಲ್ಲಿ ಹೊಸ ಬೆವರುಥಳಥಳಿಸುತಲಿಹುದುಎಳೆಯ ಶ್ರೀ ತುಳಸಿಯ ವನಮಾಲೆಗಳುಗಳದಲಿ ಶೋಭಿಪುದುಅರಳು ಮಲ್ಲಿಗೆ ಪುಷ್ಪದ ಹಾರಗಳುಮುತ್ತಿನ ಪದಕಗಳುಕೊರಳೊಳು ಮುತ್ತಿನ ಸರಗಳಿಂದೊಪ್ಪುತಮುರುಳಿಯ ನೂದುತ ಸರಸರ ಬಾರೆಂದು 1ಗುರುಳು ಕೂದಲೊಳೊಪ್ಪುವ ಅರಳೆಲೆಯುಸೊಗಸಿನ ನವಿಲ್ಗರಿಯುಬಿಗಿದು ಸುತ್ತಿದ ಸಿರದಲಿ ಕೇಶಗಳುಅತಿ ಶೋಭಿಸುತಿಹವುಚದುರಿದ ಕೇಶದಿ ಕೆಂದೂಳಿಗಳುಮಧುವೈರಿಯ ಕೇಳುವಿಧವಿಧ ರಾಗದಿ ಪಾಡುತ ನಿನ್ನನುಸದನದಿ ಪೂಜಿಸಿ ನೋಡುವೆ ಬಾರೆಂದು 2ನೊಸಲಲ್ಲಿ ಕುಡಿನಾಮವನಿಟ್ಟಿಹಳುನೋಡುತ ಹಿಗ್ಗುವಳುಎಸಳು ಕಣ್ಣಿಗೆ ಕಪ್ಪನೆ ತೀಡುವಳುಬಣ್ಣಿಸಿ ಕರೆಯುವಳುಎಸೆವೊ ಕರ್ಣಕೆ ನೀಲದ ಬಾವುಲಿಯೂರತ್ನದ ಚೌಕಳಿಯುಬಿಸುಜನಾಭ ನಿನ್ನ ಶಶಿಮುಖಿಯರುಗಳುರಸಕಸಿ ಮಾಳ್ಪರು ಹಸನಾಗಿ ಕೂಡೆಂದು 3ಅರಳುಕೆಂದಾವರೆ ಪೋಲುವಚರಣಸ್ಮರಿಸುವರಘಹರಣಸುರರುಕಿನ್ನರರೋಲೈಸುವಚರಣವರಸುಗುಣಾಭರಣಘಲುಘಲುಘಲುರೆಂದೊಪ್ಪುವಚರಣಸಜ್ಜನರಾಭರಣಅಡಿಯಿಡುತಲಿ ಬಾ ಮೃಡಸಖ ನಿನ್ನಯಅಡಿಗೆರಗುವರೈ ತಡೆಯದೆ ಬಾರೆಂದು 4ವರಹಸ್ತದಿ ಬೆಣ್ಣೆಯ ಮುದ್ದೆಯ ಕೊಡುವೆಬಾರೆನ್ನಯ ದೊರೆಯೆಜರದೊಲ್ಲಿಯ ಮುರಳಿಸಹಿತ ನಡುವಿಗೆ ಕಟ್ಟುವೆನುಬಾ ಭಕುತರ ಪೊರೆಯೆಉಗುರಿಂದ ಗಿರಿಯನು ಎತ್ತಿದ ಧಣಿಯೆಸುರಚಿಂತಾಮಣಿಯೆಹಗಲು ಇರಳು ನಿನ್ನಗಲಿರಲಾರೆ ಶ್ರೀ-ಕಮಲನಾಭವಿಠ್ಠಲ ಬೇಗಬಾರೆಂದು 5
--------------
ನಿಡಗುರುಕಿ ಜೀವೂಬಾಯಿ