ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಾ ತೋರದದೇನೊ ನರಹರಿಯೆ ನಿನ್ನ ಕರುಣೆ ತೋರದೆ ಇರುವ ಪರಿಯೆನ್ಹರಿಯೇ ನಿನ್ನಯ ಕಮಲ ಸ್ಮರಣೆಯ ಇಹಪರಕೆ ಗತಿಯಂ ದಿರುವ ಮನಜರಿಗ್ಹರುಷದಿಂದಲಿ ಪ ಸುಸಾಮಗಾನಪ್ರಿಯ ನರಸಿಂಗ ದೈತ್ಯಾರಿ ಭಕ್ತಾಧೀನ ಗರುಡತುಂಗ ಕರುಣಾಂತರಂಗ ಶೌರಿ ಪುರಾಣಪುರುಷ ದಾನವಾಂತಕ ಶ್ರೀನಿವಾಸನೆ ಶರಪಾಣೆ ವಿಷ್ಟಕ್ಸೇನವರ ಗೀರ್ವಾಣವಂದಿತ ಜಾನಕೀಧರ ನೀನೇ ಸಲಹೆನೇ 1 ಸಂಯಮಿ ವೃಂದನುತ ಮುಚ- ಪಾಲನ ಕೃಪಾಸಿಂಧು ಶ್ರೀ ಗೋವಿಂದ ಇಂದಿರಾನಂದ ನಂದ ಗೋಪಿಯಾನಂದ ನಾಚ್ಯುತ ಮಂದರಧರ ಮಾಪತೆ ಕಂಬುಕಂಧರ ಇಂದು ಮುಖ ಶ್ರೀ ಸುಂದರಾಂಗನೆ ರೂಪದಿ ಬಂದು ಸ್ತಂಭದಿ ರಕ್ಷಿಸೆಂದೆನಲು ಹರಿ 2 ತ್ರಿಜಗದ್ಭರಿತ ಕೌಸ್ತುಭಹಾರ ನರಮೃಗಾಕಾರ ಮಂಗಳಕರ ಮಹಿಮಾ ಶರಣು ಭಾಸುರ ಕಿರೀಟನೆ ನಿರತದಲಿ `ಹೆನ್ನೆಪುರ ನಿಲಯ' ಸಿರಿಯರಸ ನಿನ್ನಯ ಮೊರೆಯ ಹೊಕ್ಕರೆ ತ್ವರದಲಿ ನೀ 3
--------------
ಹೆನ್ನೆರಂಗದಾಸರು
ಜೋ ಜೋ ದೇವಕಿಕಂದ ಮುಕುಂದ ಜೋ ಜೋ ಗೋಪಿಯಾನಂದ ಗೋವಿಂದಾ ಪ ಜೋ ಜೋ ಜೋ ಭಕ್ತಮನಕಾನಂದ ಜೋ ಜೋ ಜೋ ಗೋಪಿಕಾವೃಂದ ಅ.ಪ ಗೋಕುಲಬಾಲಾ ಮುರಳೀಲೋಲಾ ಶ್ರೀಕರಶೀಲಾ ತುಳಸೀಮಾಲಾ ರಾಕಾಚಂದ್ರ ಸಮಾನಕಪೋಲ ಗೋಕುಲ ಬೃಂದಾವನ ಸಲ್ಲೀಲಾ 1 ದೇವದೇವೋತ್ತಮ ಭಾನುಪ್ರಕಾಶ ಭಾವಜಪಿತ ಸರ್ವಸುರ ಮುನಿಪೋಷಾ ಶ್ರೀವನಿತಾಪ್ರಿಯ ದನುಜವಿನಾಶ ಪಾವನ ಮಾಂಗಿರಿನಿಲಯ ರಂಗೇಶ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್