ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

* ನೆರದು ಗೋಪಿಯರೆಲ್ಲಾರು ಕೃಷ್ಣಯ್ಯನ ಶೆರಗಪಿಡಿದುಕೊಂಡು ಅರುಹಿದರತಿ ಬೇಗದಿ ಪ. ಹಾಲು ಕರವುತಿರಲು ತೊಲೆಗೆ ನಿಚ್ಚಣಿಕೆಯ ಹಾಕದೆ ಸುರಿದಾನು ನೆಲವಿನ ಪಾಲ್ಮೊಸರಾ 1 ಅಂಮೈಯ್ಯಾ ಇಲ್ಲಾ ಕಾಣೆ ಇವಳು ಯಂನ್ನಾ ಸುಂಮ್ಮಾನೆ ದೂರುವಳು ಹುಂಮ್ಮಿಂದ ನಾನವಳ ಅಟ್ಟಕ್ಕೆ ನೆಗವೊರೆ ಬೊಮ್ಮ ಜಟ್ಟಿಗನೆ ನಾನು 2 ಮತ್ತೊರ್ವಳಿಂತೆಂದಳು ನಿಂನಮಗ ಹತ್ತಿ ಗವಾಕ್ಷಿಯಿಂದಾ ಬಚ್ಚಿಟ್ಟ ಬೆಣ್ಣೆಯನೆಲ್ಲಾವ ಮೆದ್ದಾನು ಮಕ್ಕಳಿಗಿಲ್ಲದಂತೆ 3 ಗಡಿಗೆ ಬೆಣ್ಣೆಯ ಮೆಲ್ವಾರೆ ಇವನ ಹೊಟ್ಟೆ ಕೆರೆಭಾವಿಯೇನೆ ಅಮ್ಮಾ ಹುಡುಗರಿಗೆ ಎಂದು ಬಚ್ಚಿಟ್ಟ ಬೆಣ್ಣೆಯನೆಲ್ಲಾ ಹೊಡೆದರವರ ಮಕ್ಕಳು 4 ಮಲಗೋಮಂಚದ ಮೇಲೆ ನಾ ಮಲಗೀರೆ ಮೊರೆವ ಹಾವನು ಪಿಡಿದು ಅರಿಯದಂತೆ ಬಂದು ಮುಸುಕಿ- ನೊಳಗಿಟ್ಟು ಅರಿಯಾದೆ ಹೋದನಂಮಾ 5 ಹರನಡುಗುವ ಹಾವನು ನಾ ಪಿಡಿವಾರೆ ತರಳಾನು ತಡೆಕಾರನೆ ಹರಕೆಯ ಹೊತ್ತುದವಪ್ಪಿಸದಿದ್ದರೆ ಗುರುತು ತೋರÀಲು ಬಂತೇನೊ 6 ಮಕ್ಕಳ ಪಡೆದವರುಯಿಲ್ಲದ ಕಳ ವಿಕ್ಕಲಿ ಬಹುದೆ ಕೃಷ್ಣಗೆ ಸಿಕ್ಕಿದ ತಪ್ಪು ಸಹಿತವೆ ತಂದರೆ ನಾನು ತಕ್ಕ ಬುದ್ದಿಯ ಪೇಳುವೆ 7 ಅಣುಮಯರೂಪ ಕಾಣೆ ನಿಂನಯ ಮಗ ಚಿನುಮಯ ರೂಪ ಕಾಣೆ ಚಿನುಮಯ ರೂಪ ಹೆಳ ವನಕಟ್ಟೆ ಆದಿಕೇಶವ ರಂಗನೆ8
--------------
ಹೆಳವನಕಟ್ಟೆ ಗಿರಿಯಮ್ಮ
ಉದ್ಧವನು ಯಮುನೆಗೆ ಪೋಗುವಾಗಗದ್ದಲವ ಕೇಳಿದನು ಗೋಪನಾರಿಯರ ಪ ಎದ್ದು ಗೋಪಿಯರೆಲ್ಲ ಮುದ್ದು ಮುಖವನೆ ತೊಳೆದುತಿದ್ದಿ ತಿಲ್ಕವನಿಟ್ಟು ಬಾಲ್ಯದಲ್ಲೆಶ್ರದ್ಧೆಪೂರ್ವಕ ಹರಿಯ ಪದ್ಮಂಗಳಿಗೆ ನಮಿಸಿಉದ್ಧಾರ ಮಾಡೆಂದು ಪ್ರಾರ್ಥಿಸಿದರು 1 ಅಂಗಳಕೆ ಥಳಿಹಾಕಿ ರಂಗವಾಲಿಯನಿಕ್ಕಿಮಂಗಳಾತ್ಮಕ ದೀಪ ಮನೆಯ ಮುಂದತೆಂಗುಬಾಳೆ ಸ್ತತ್ಥ ಫಲಂಗಳ್ಹೊಸ್ತಲಿಕಿಟ್ಟುರಂಗಗರ್ಪಿತವೆಂದು ನುಡಿದಲಾಗ 2 ವಾಲೆ ಸರಪಣಿಯಾ ಕಿವಿಯಲಿಟ್ಟುಮಂದಹಾಶ್ಯದಿ ಮುಖದಿ ಮುಖರೆನಿಟ್ಟು3 ಕಾಲಿಕಾಲ್ಕಡ್ಗ ರುಳಿಯು ಘಾಲು ಪೈಝಣಕಾಲುಂಗ್ರಗಳು ಪಿಲ್ಲೆ ಕಾಲಿನಲ್ಲೆಸಾಲುಗೆಜ್ಜೆಗಳುಳ್ಳ ಮೇಲೆ ಕಾಂಚಿಯನುಟ್ಟುಮುಕ್ತಮಾಲೆಗಳು ಕೊರಳಲ್ಲೆ ಲೋಲಪದಕ 4 ಕಂಕಣವು ಕರದಲ್ಲಿ ವಂಕಿ ತಾಯಿತ ಭುಜದಿಬಿಂಕದಿಂದಲೆ ಮಂಲಿ ಹೆರಳ್ಹಾಕಿಅಂಕೆಯಿಲ್ಲದ ಸರ್ವಲಂಕಾರಗಳನಿಟ್ಟುಪಂಕಜಾಕ್ಷನ ಮನದಿ ಸ್ಮರಿಸಿದ 5 ಲೋಲಾಕ್ಷಿ ಗೋಪಿಯರು ಭಾಳ ವಸ್ತ್ರಗಳಿಟ್ಟುಲೋಲ ಲತೆಯಂತೆ ಬಳುಕಾಡುತಮಾಲೆ ಹೆಗಲ್ಹಾಡುತಿರೆ ಮೇಲೆ ಸ್ವರಗಳನೆತ್ತಿನೀಲವರ್ಣನ ಮಹಿಮಿ ಪಾಡಿದರು 6 ಬಂಗಾರದ ತಬಕಿನಲಿ ಮಂಗಳಾರುತಿಯೆತ್ತಿಶೃಂಗಾರ ಪದಗಳನೆ ಪಾಡುತಲೆರಂಗು ನೀಲದ ರತ್ನದುಂಗುರವು ಬೆರಳಲ್ಲೆರಂಗಗಾರತಿ ಬೆಳಗಿ ಬೇಡಿದರು 7 ಕಂದರ್ಪ ಶರಾದರತಿ 8 ಘಿಲ್ಲು ಘಿಲುಕೆಂದು ಮೈಯ್ಯಲ್ಲಿ ವಸ್ತ್ರದ ಶಬ್ದಪುಲ್ಲಾಕ್ಷಿಯರು ಕಡಿದ ಮಥನ ಶಬ್ದನಲ್ಲೆರ್ಹಾಡುವ ಕಂಠದಲ್ಲೆ ಗಾಯನದ ಶಬ್ದಎಲ್ಲ ಶಬ್ದವು ಸ್ವರ್ಗ 9 ನಿಂತು ನಿಜಕರದಿಂದ ಮಂತಧಾಮವ ಪಿಡಿದುಕಂತುಪಿತ ಕೃಷ್ಣನ್ನ ಪಾಡುತಲೆಕಾಂತೆರೆಲ್ಲರು ಮಸರು ಕಡೆವ ಶಬ್ದವ ಕೇಳಿಭ್ರಾಂತಿಯಲಿ ಉದ್ಧವನು ನಿಂತನಲ್ಲೆ 10 ಅವರ ಭಕುತಿಯ ನೋಡಿ ಅನುದಿನದಿ ಉದ್ಧವನುಅವರ ಪಾದದ ಧೂಳಿ ಸ್ವೀಕರಿಸಿದಅವರರುಹದೊಳಗೆನ್ನ ಆಗಲುದಯವು ಎಂದಅವರೊಳಗೆ ಅವರಂತೆ ಅನುಕರಿಸಿದ 11 ಇಂಥ ಪರಿಯಲಿ ಗೋಪಕಾಂತೆ ಕಾಲಾಪಗಳುನಿಂತು ನೋಡುತ ತನ್ನ ಮೈಯ್ಯ ಮುರಿದಭ್ರಾಂತನಾಗುತಲೆ ಅವರಂತೆ ಮಥನವ ಮಾಡಿಅವರಂತೆ ಕರಗಳ ಮಾಡಿ ನಲಿದು ಕುಣಿವ 12 ಎರಡು ಸಾಲಲಿ ದೀಪ ಕರಗಳಂಬಾರಗಳುತುರವು ತರಿಸುವ ದನಿಯು ಮಥನ ಶಬ್ದಸರಸಿಜಾಕ್ಷಿಯರೆಲ್ಲ ಗಾಯನ ಮಾಡುವ ಶಬ್ದಬೆರಗಾಗಿ ಕೇಳಿದನು ಪರಿಹರುಷದಿ 13 ಮಂದ ಸುಗಂಧಡಗಿತು 14 ಸರಸಿಜಾಕ್ಷಿಯರೆಲ್ಲ ಪರಮಪುರುಷನ ಸ್ಮರಿಸಿಸುರಿಸುತಲಿ ಕಣ್ಣೀರು ಪರವಶದಲೇನೆರಗು ಬೀಳಲು ಹೊರದೆ ಹೆರಳ ಮಾಲೆಯ ಮರೆದುಬರೆದ ಚಿತ್ರಗಳಂತೆ ಪರಿಯಾದರು 15 ವಾರಿಜಾಕ್ಷಿಯರ್ಹರಿಯ ಧ್ಯಾನಮನದಲಿ ಕೃಷ್ಣಸಾರ ಸುಂದರ ಮೂರ್ತಿಯಳೆ ಕಾಣುತಮದ ಜಾನಕನ ಮಾತನಾಡುತ ಮನದಿಪಾರುಗಾಣದೆ ಸುಖದ ವಾರಿಧಿಯೊಳು 16 ಮನೆಯ ಹಂಬಲವಿಲ್ಲ ಮಾವನಂಕೆಯಿಲ್ಲಮೊದಲೆಯಿಲ್ಲ ಅತ್ತಿ ಪತಿಗಳಂಜಿಕೆಮಾರಜನಕನ ಕೂಡ ಮೈಯ್ಯಕೈಯನ ಮುರಿದುಮಾಧವನೆ ಪಾಲಿಸೆಂದೊದರಿದಾರು 17 ಮಂದಜಾಕ್ಷರು ಮಾಳ್ಪ ನಂದಬಾಲನ ಕಥೆಯಆನಂದದಲಿ ಕೇಳಿ ಉದ್ಧವನುಇಂದಿರೇಶನ ಚರಣ ದ್ವಂದ್ವ ಸ್ಮರಿಸುತಮಧುರೆಲ್ಹಿಂದ ಬಂದ್ಹೇಳಿದನು ನಂದಸುತಗೆ 18
--------------
ಇಂದಿರೇಶರು
ಎತ್ತಣ ಪಯಣವೋ ಕೃಷ್ಣಯ್ಯ ನಿನ ಗಿತ್ತ[ಏನವ]ಸರ ಏಕೋ ರಂಗಯ್ಯ ಪ ಹೆತ್ತತಾಯಿಯ ಮುಂದಾಡದೆ ಇ ನ್ನೆತ್ತ ಯಾರಿಗೆ ಲೀಲೆ ತೋರುವೆ ಅ.ಪ ಗೊಲ್ಲ ಗೋಪಿಯರೆಲ್ಲ ಚೆಲ್ಲಾಟದಿಂದ ನಿನ್ನ ಗಲ್ಲವ ಹಿಡಿದುಕೊಂಡು ಅಲ್ಲಾಡಿಸಿ ಸೊಲ್ಲು ಸೊಲ್ಲಿಗೆ ಮುತ್ತಿಟ್ಟು ನೋಯಿಸಿದರೆಂದು ಬಿಲ್ಲ ಹಬ್ಬವ ನೋಡಲೊಲ್ಲದೆ ಪೋಪೆನೆಂಬೆ 1 ನೂರೆಂಟು ಕನ್ನೆಯರೋರಂತೆ ನಿನ್ನ ಬಳಿ ಸೇರಿರ್ಪುದನು ಕಂಡು ಕಲಹಪ್ರಿಯ ನಾರಿಯೊಬ್ಬಳ ತನಗಾರಿಸಿ ಕುಡಲೆಂದು [ಯಾರಬಳಿ ಮಸಲತ್ತು ಮಾಡಹೊರಟೆಯೊ] 2 ಬಾಲೆ ರುಕ್ಮಿಣಿಯನು ದುರಳಶಿಶು ಪಾಲಂಗೀಯುವರೆಂದು ಪೇಳಿದ್ದೆಯಲ್ತೆ ಬಾಲೆಯ ತರ್ಪೆನೆಂದೇ ಶ್ರೀ ಮಾಂಗಿರಿಯ ರಂಗ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೆರೆದು ಗೋಪಿಯರೆಲ್ಲರು - ಕೃಷ್ಣಯ್ಯನಕರವ ಪಿಡಿದುಕೊಂಡುಭರದಿಂದ ಬಂದು ಯಶೋದೆಗೆ ಚಾಡಿಯಅರುಹಿದರತಿ ವೇಗದಿ ಪ ಬಲು ಕಳ್ಳ ನಿನ್ನ ಮಗ - ಯಶೋದೆ ಕೇಳೆಹಾಲು ಕರೆಯುತಿರಲುತೊಲೆಗೆ ನಿಚ್ಚಣಿಕೆಯನೆ ಹಾಕದೆ ಸುರಿದನುನೆಲುವಿನ ಪಾಲ್ಮೊಸರ 1 ಅಮ್ಮಯ್ಯ ಇಲ್ಲ ಕಾಣೆ - ಇವಳು ಎನ್ನಸುಮ್ಮನೆ ದೂರುವಳೆಹಮ್ಮಿಂದ ನಾನವಳ ಅಟ್ಟಕ್ಕೆ ನೆಗೆಯಲುಬೊಮ್ಮ ಜಟ್ಟಿಗನೇನಮ್ಮ2 ಮತ್ತೆ ಮುತ್ತಿನಂಥ - ನಿನ್ನೀ ಮಗಹತ್ತಿ ಗವಾಕ್ಷದಿಂದಎತ್ತಿಟ್ಟ ಬೆಣ್ಣೆಯನೆಲ್ಲದ ಮೆದ್ದನುಹೆತ್ತ ಮಕ್ಕಳಿಗಿಲ್ಲದಂತೆ 3 ಗಡಿಗೆ ಬೆಣ್ಣೆ ಮೆಲ್ಲಲು - ಎನ್ನ ಹೊಟ್ಟೆಮಡುವು ಭಾವಿಯೇನೆಹುಡುಗರಿಗರಿಯದೆ ಎತ್ತಿಟ್ಟ ಬೆಣ್ಣೆಯಹೊಡೆದರವರ ಮಕ್ಕಳು 4 ಮರೆತು ಮಂಚದ ಮೇಲೆ - ನಾ ಮಲಗಿರಲುಹರಿವ ಹಾವನೆ ತಂದುಅರಿಯದಂತೆ ಬಂದು ಮುಸುಕಿನೊಳಗಿಟ್ಟುಸರಸರ ಪೋದನಮ್ಮ 5 ಹರಿದಾಡುವ ಹಾವನು - ನಾ ಹಿಡಿಯಲುತರಳ ನಾ ತಡೆಗಾರನೆಹರಕೆಯ ಹೊತ್ತುದನೊಪ್ಪಿಸದಿರಲುಗುರುತು ತೋರಲು ಬಂತೇನೊ6 ಕಕ್ಕಸ ಕುಚಗಳಮುಸುಕಿನೊಳಗೆ ಹಿಡಿದ 7 ಕೇಳು ಕೇಳೆಲೆ ಅವ್ವ - ಇವಳು ಬೇ-ತಾಳನಂತಿರುವಳುಬಾಲಕ ನಾನವಳುದ್ದಕೆ ನೆಗೆವೆನೆಜೋಲುವ ತೊಗಲಿಗಾಗಿ 8 ಮಕ್ಕಳು ಪಡೆದವರು - ಇಲ್ಲದ ಕಳವಿಕ್ಕಬಹುದೆ ಕೃಷ್ಣಗೆಸಿಕ್ಕ ತಪ್ಪು ಸಮೇತ ಎಳೆತಂದರೆತಕ್ಕ ಬುದ್ಧಿಯ ಹೇಳುವೆ 9 ಅಣುಘನರೂಪ ಕಾಣೆ - ನಿನ್ನೀ ಮಗಚಿನುಮಯ ರೂಪ ಕಾಣೆಘನ ಮಹಿಮನು - ಇಂಗಳಗೊಂದಿಯಚೆನ್ನಕೇಶವರಾಯ ಕಾಣೆ 10
--------------
ಕನಕದಾಸ
ಮಾಧವ ಸ್ವಾಮಿ ಪ. ಬಿಕ್ಕಿ ಬಿಕ್ಕಿಯಳುತ ಬಂದ ಗೋಪಿಯ ಕಂದಉಕ್ಕಿಹರಿವ ಕಣ್ಣನೀರ ತೊಡೆದಳೆಶೋದೆಅಕ್ಕರದಿಂದಲಿ ಮಗನ ಅತಿಮುದ್ದನಾಡಿಮಕ್ಕಳ ಮಾಣಿಕ್ಯವೆ ನೀ ಮನೆಯೊಳಗಾಡೈ 1 ಹಳ್ಳಿಯ ಮಕ್ಕಳು ಎನ್ನ ಬೈದರಮ್ಮಕಳ್ಳನೆಂದು ಎನ್ನಕೂಡೆ ಆಡಲೊಲ್ಲರುಮೆಲ್ಲನೆ ಬೈಯುತ್ತ ಬರಲು ಕಲ್ಲಲಿಟ್ಟರಮಯ್ಯಅಲ್ಲಿಂದಂಜಿ ಅಳುತ ನಾನು ಓಡುತ ಬಂದೆ 2 ಬಾಗಿಲ ಗೊಲ್ಲರು ಗೋಪಗೋಪಿಯರೆಲ್ಲಹಗಲುಗಳ್ಳ ಹಾಲು ಬೆಣ್ಣೆ ಚೋರನೆಂದರುಮಗುವೆಂದೆನಿಸಿಕೊಂಡು ಮನೆಯೊಳಗಾಡೈಹೋಗುನ್ನಂತ ಉಡುಪಿಯಲ್ಲಿ ಮುದ್ದು ಹಯವದನರಾಯ 3
--------------
ವಾದಿರಾಜ
ಯಾದವರಾಯ ಬೃಂದಾವನದೊಳು ವೇಣುನಾದವ ಮಾಡುತಿರೆ ಪ ರಾಧೆ ಮುಂತಾದ ಗೋಪಿಯರೆಲ್ಲಮಧುಸೂದನ ನಿಮ್ಮನು ಸೇವಿಸುತ್ತಿರೆ ಅ ಸುರರು ಅಂಬರದಿ ಸಂದಣಿಸಿರೆ ಅ-ಪ್ಸರ ಸ್ತ್ರೀಯರು ಮೈಮರೆದಿರೆಕರದಲಿ ಕೊಳಲನೂದುತ ಪಾಡುತಸರಿಗಮ ಪದನಿ ಸ್ವರಗಳ ನುಡಿಸುತ 1 ಹರಬ್ರಹ್ಮರು ನಲಿದಾಡುತಿರೆ ತುಂ-ಬುರು ನಾರದರು ಪಾಡುತಿರೆಪರಿಪರಿ ವಿಧದಲಿ ರಾಗವ ನುಡಿಸುತತುರು ಹಿಂಡುಗಳ ಕೂಡುತ ಪಾಡುತ2 ತುರು ಹಿಂಡುಗಳ ತರತರದಲಿ ತನ್ನಕರದಿಂ ಬೋಳೈಸಿ ಸಂತೈಸುತಅರವಿಂದ ನಯನ ಆದಿಕೇಶವರಾಯಕರುಗಳ ಸಹಿತ ಗೋವ್ಗಳ ತಿರುಹುತ3
--------------
ಕನಕದಾಸ
ಹರಿಯೆ, ಕುಣಿಯೆನುತ -ನರ -ಹರಿಯೆ, ಕುಣಿಯೆಂದು ಕುಣಿಸಿದರಯ್ಯ ಪಲೋಕವ ತಾಳ್ದನ ಮನೆಯಲಿ ಪುಟ್ಟಿ |ತೂಕದ ನುಡಿಗಳ ಕದ್ದವನ ||ನಾಕರಿಸಲು ನಿಜ ಗೋಪರೂಪದಿಂದ |ಆಕರಿಸಿದನಾ ಕುಣಿಸಿದರಯ್ಯ 1ಎಡೆಯಿಲ್ಲದೆ ನಡೆವನ ಕೂಡಿರುವವನ |ಹಿಡಿಲೆಂಬನ ಒಡಹುಟ್ಟಿದನ ||ಒಡೆಯನ ಕಂದನ ವೈರಿಯ ಬಂಡಿಯ |ಹೊಡೆದ ಮಹಾತ್ಮನ ಕುಣಿಸಿದರಯ್ಯ 2ಒಣಗಿದ ಮರ ಎಲೆಯಿಲ್ಲದ ಬಳ್ಳಿ |ಬಣತಿಗೆ ಪುಟ್ಟಿದ ವನದಲ್ಲಿ ||ಕ್ಷಣ ಮುನ್ನರಿಯದೆ ಅದರ ಆಹಾರಕೆ |ಫಣಿಯ ಮೆಟ್ಟಿದನ ಕುಣಿಸಿದರಯ್ಯ 3ಮಾವನೊಡನೆ ಮನೆಮಾಡಿ ಗೋಕರ್ಣದಿ |ಆ ವುರಗನ ಮೇಲ್ಮಲಗಿದನ ||ಮೂವರ ಮೊಲೆಯುಂಡ ಮೂಲೋಕವರಿಯದ |ಮೂವರಣ್ಣನೆಂದು ಕುಣಿಸಿದರಯ್ಯ 4ಗೋಕುಲದೊಳಗಿನ ಗೋಪಿಯರೆಲ್ಲ |ಏಕಾಂತದಿ ತಮ್ಮೊಳು ತಾವು ||ಶ್ರೀಕಾಂತನ ನಮ್ಮ ಪುರಂದರವಿಠಲನ |ಏಕ ಮೂರುತಿಯೆಂದು ಕುಣಿಸಿದರಯ್ಯ 5
--------------
ಪುರಂದರದಾಸರು