ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋಪಿನಿನ್ನ ಮಗನಿಗಾಗೆ-ಕೇರಿಯ ಬಿಟ್ಟು |ಪೋಪೆವೆ ಬೆಳಗಾಗೆ ಪಮಕ್ಕಳನಾಡಗೊಡ-ಮನೆಯ ಹೊಕ್ಕು |ಉಕ್ಕುವ ಪಾಲ್ ಕುಡಿವ||ಗಕ್ಕನೆ ಕಂಡರೊಡನೆ ನಮ್ಮೆಲ್ಲರ ಕೈಗೆ |ಸಿಕ್ಕದೆ ಓಡಿದನೆ 1ಮೊಸರನೆಲ್ಲವ ಸುರಿದ-ಮೇಲಿಟ್ಟಂಥ |ಹೊಸಬೆಣ್ಣೆಗೆ ತಾ ಹಾರಿದ ||ಕೊಸರಿ ನೆಲುವಿನ ಮೇಲಿರಿದ ಕೃಷ್ಣ ತಾ |ಮುಸುರೆನೊಳಗೆ ಸುರಿದ 2ಅಂತಿಂಥವನಲ್ಲ ಕಾಣೆ-ನಿನ್ನವ ಜಗ-|ದಂತರ್ಯಾಮಿಯು ಜಾಣೆ ||ಅಂತರಂಗದಲ್ಲಿ ನೋಡಲು ಪುರಂದರ-|ವಿಠಲ ಬಂದಿದ್ದ ಕಾಣೆ 3
--------------
ಪುರಂದರದಾಸರು
ಸೈಸಲಾರೆನೆಗೋಪಿನಿನ್ನ ಮಗನ ಲೂಟಿ |ಏಸೆಂದು ಪೇಳಲಮ್ಮ ||ವಾಸುದೇವನು ಬಂದು ಮೋಸದಿಂದಲಿ ಎನ್ನ |ವಾಸವಸೆಳಕೊಂಡು ಓಡಿ ಪೋದನಮ್ಮಪದೇವರ ಪೆಟ್ಟಿಗೆ ತೆಗೆದು ಸಾಲಿಗ್ರಾಮ |ಸಾವಿರ ನುಂಗುವನೆ ||ಭಾವಜನಯ್ಯಇದೇನೆಂದರೆ ನಿಮ್ಮ |ಕಾಮದೇವರು ನಾನು ಕೇಳಿಕೊ ಎಂಬನೆ 1ಅಗ್ರೋದಕತಂದು ಜಗುಲಿ ಮೇಲಿಟ್ಟರೆ |ವೆಗ್ಗಳದಲಿ ಕುಡಿವ ||ಮಂಗಳ ಮಹಿಮನ ವಿೂಸಲೆಂದರೆ ನಿಮ್ಮ |ಮಂಗಳಮಹಿಮನ ಅಪ್ಪನಾನೆಂಬುವ 2ಅಟ್ಟಡಿಗೆಯನೆಲ್ಲ ಉಚ್ಛಿಷ್ಟವ ಮಾಡಿ |ಅಷ್ಟು ತಾ ಬಳಿದುಂಬನೆ ||ವಿಷ್ಣು ದೇವರ ನೈವೇದ್ಯವೆಂದರೆ ನಿಮ್ಮ |ಇಷ್ಟದೇವರು ತೃಪ್ತನಾದನೆಂತೆಂಬುವ 3ಋತುವಾದ ಬಾಲೆಯರು ಪತಿಯೆಡೆ ಪೋಪಾಗ |ಕೃತಕದಿಂದಡಗಿಹನೆ ||ಮತಿಗೆಟ್ಟ ಪೆಣ್ಣೆ ಸುಂಕವ ಕೊಡು ಎನುತಲಿ |ಪ್ರತಿಯಾಗಿ ಮಾರನ ಸೂರೆಗೊಂಬುವನೆ 4ಅಚ್ಚಪಾಲು-ಮೊಸರುನವನೀತಮಜ್ಜಿಗೆ |ರಚ್ಚೆಮಾಡಿ ಕುಡಿವ ||ಅಚ್ಚ ಪುರಂದರವಿಠಲರಾಯನ |ಇಚ್ಛೆಯಿಂದಲಿ ನಿಮ್ಮ ಮನೆಗೆ ಕರೆದುಕೊಳ್ಳಿ 5
--------------
ಪುರಂದರದಾಸರು