ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋಪಿನಾಥ ವಿಠಲ | ನೀ ಪಾಲಿಸಿವಳಾ ಪ ಶ್ರೀಪತಿಯೆ ಕರುಣಾಳು | ಕೈ ಪಿಡಿದು ಸಲಹೊ ಅ.ಪ. ನಿತ್ಯ ಮಂಗಳನೆಯುಕ್ತಿಯಲಿ ನಿನ್ನಿಂದ | ಸ್ವಪ್ನ ಸೂಚಿಸಿದಂತೆಇತ್ತಿಹೆನು ಅಂಕಿತವ | ಸಾರ್ಥಕವ ಪಡಿಸೊ 1 ಶೃಂಗಾರ ಮೂರುತಿಯೆ | ಮಂಗಳಾಂಗನೆ ದೇವಹೆಂಗಳೀಗೆ ಸುಜ್ಞಾನ | ಭಕ್ತಿಯನೆ ಇತ್ತೂಅಂಗನಾಮಣಿಯಂತೆ | ಸಿಂಗರಿಸುತಿವಳನ್ನುಭಂಗಗೈ ಅಜ್ಞಾನ | ಭ್ರಾಂತಿ ಜ್ಞಾನವನು 2 ಭಾಗವತರೊಡನಾಟ | ಯೋಗಕರುಣಿಸು ದೇವನಾಗಾರಿವಾಹನನೆ | ಯೋಗಿಜನವಂದ್ಯಾಆಗುಹೋಗುಗಳೆಲ್ಲ | ನೀನಿಚ್ಛೆ ಸಂಕಲ್ಪಆಗು ಮಾಡೈ ದೇವ | ಮನದಭೀಷ್ಟಗಳಾ 3 ತತ್ವ ಪತಿಗಳಿಗೆಲ್ಲ | ಮರುತನೆ ಅಧಿಕೆಂಬತತ್ವವನೆ ತಿಳಿಸುತ್ತಾ | ಕಾಪಾಡೊ ಇವಳಾಪ್ರತ್ಯಹತ್ ತವನಾಮ | ಸಂಸ್ತುತಿಯ ಕರುಣಿಸುತಉತ್ತಾರಿಸೋ ಭವವನ್ನು | ಪ್ರತ್ಯಗಾತುಮನೆ 4 ಗೋವುಗಳ ಪರಿಪಾಲ | ಗೋವರ್ದನೋದ್ದರನೆಗೋಪಿಜನಪ್ರಿಯ | ಗೋಪಾಲ ಬಾಲಾಗಾವಲ್ಗಣೀವರದ | ಬಿನ್ನಪವ ಸಲಿಸಯ್ಯಕಾವುದಾನತರ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ದಾಸರಾಗಿರೊ ವೈಷ್ಣವ ದಾಸರಾಗಿರೊ ದಾಸರಾಗಿ ಬಯಲಾಸೆಯ ನೀಗಿ ರ- ಮೇಶನ ಗುಣವಾರಾಶಿಯೊಳಿರಿಸುವ ಪ. ಸುಂದರ ಮಾನಾನಂದತೀರ್ಥಮತ ಸಾಂದ್ರ ಸುಖಾಂಬುಧಿಮಿಂದ ಮಹಾತ್ಮರ 1 ದಿವ್ಯಲೋಕಜನ ಭವ್ಯೋಭಯವಿಧ ಕಾವ್ಯರಚನ ಲಾತವ್ಯಯತೀಂದ್ರರ 2 ಸೀತಾಪತಿ ರಘುನಾಥನ ಮನದೊಳ- ಗಾತು ಭಜಿಪ ಗಣನಾಥ ಜನಕನ 3 ಶ್ರೀ ಮಹೇಶ ವಟು ವಾಮನ ಪದಯುಗ ಸಾಮಜವಾಹನ 4 ಕಾಕರಟನದೊಳ ಭೀಕರ ಮತವ ನಿ- ರಾಕರಿಸಿರುವ ಸುಧಾಕರ ಮೂರ್ತಿಯ 5 ತಂತ್ರ ದೀಪಿಕಾ ಯಂತ್ರವ ರಚಿಸಿದ ಮಂತ್ರಾಲಯವರ ಮಂತ್ರದೇವತೆಯ 6 ಗೋಪಿನಾಥನೆ ಭೂಪನೆಂದು ಸಂ- ತಾಪವ ಬಿಡಿಸುವ ಶ್ರೀಪಾದರ ಪದ 7 ಮಂದಕಲಿಯ ಕಾಲಿಂದಲೊರಿಸಿದ ಪು- ರಂದರದಾಸರ ಹೊಂದಿ ಹರಿಯ ನಿಜ8 ಸುಜನ ಹೃದಂಬುಜ ಸುಖಕರ ದಿನಮಣಿ ವಿಜಯರಾಜ ಪದ ಭಜನೆಯ ಮಾಡುತ 9 ಭಂಗುರ ಭವಭಯ ಭಂಗದ ಸುಗುಣ ತರಂಗನ ಒಲಿಸಿದ ಮಂಗಳ ಮಹಿಮರ 10 ಹರಿಕಥಾಮೃತದ ತೆರೆಗಳೊಳಾಡುವ ಪರತರಸಾರವ ಸುರಿದ ಮಹಾತ್ಮರ 11 ಸಿಡುಕರ ಸಂಸ್ಕøತಿ ಕಡಲೊಳು ಮುಳುಗಲು ಬಿಡದಲೆ ಕೈಪಿಡಿದೊಡೆಯನ ತೋರ್ಪರ 12 ಅರಿಷಡ್ವರ್ಗವ ತರಿದು ಬಿಸುಟು ಶ್ರೀ- ವರನ ಕೃಪಾರಸ ಸುರಿಸಿದ ಧನ್ಯರ 13 ಮೂಕನ ವಾಗ್ಮಿಯ ಮಾಡಿ ಮುರಾರಿಗೆ ಸಾಕ ಕೊಟ್ಟಿ ದೀನಾಕರದಾಸರ 14 ಮಾತಿಗೆ ಕಂಸಾರಾತಿನಲಿಯೆ ಜಗ ನ್ನಾಥರೆಂ¨ ವಿಖ್ಯಾತಿ ಪಡೆದವರ 15 ತಾಪತ್ರಯಗಳ ತಪ್ಪಿಸಿ ವೆಂಕಟ ಭೂಪನ ಸದಯಾರೋಪಗೈದವರು 16
--------------
ತುಪಾಕಿ ವೆಂಕಟರಮಣಾಚಾರ್ಯ
ಪದ್ಮನಾಭರ ಭಜಿಸೋ ಹೇ ಮನುಜಾನೀ ಪ ಮಧ್ವರಾಯರ ಕರಪದ್ಮ ಸಂಭವರಾದ ಅ.ಪ ಮತ್ತ ಮಾಯಿಗಳೆಂಬೊ ಹಸ್ತಿಗಣಕೆ ಪಂಚ ವಕ್ತ್ರರೆಂದೆನಿಸಿದ ಪೃಥ್ವೀಸುರಸೇವಿತ 1 ಪ್ರೀತಿಯಿಂದಲಿ ಗೋಪಿನಾಥನರ್ಚಿಸಿ ಸುಖ ತೀರ್ಥ ಗ್ರಂಥಕೆ ಸವ್ಯಾಖ್ಯಾತ್ರರೆಂದೆನಿಸಿದ 2 ಧರೆಯೊಳು ಶರಣರ ಪೊರಿವ ಕಾರ್ಪರನರ ಹರಿಯನೊಲಿಸಿದಂಥ ಪರಮ ಮಹಿಮರಾದ3
--------------
ಕಾರ್ಪರ ನರಹರಿದಾಸರು
ಬಾರೊ ಗೋಪಿನಾಥ ನಿನ್ನಗಲಿರಲಾರೆನೊ ಪ ಶೌರಿ ಅ.ಪ ವಾರಿಚರ ಕೂರ್ಮನೆ ಧಾರುಣಿ ತಂದನೆ ತೋರ ಕೊರಳ ಹಾರ ವರಮೃಗರೂಪನೆ 1 ಮೇದಿನಿ ಪಾಲಕರ ಕೊಂದು ವೈರಿ 2 ಬೆತ್ತಲೆ ನಿಂತು ದುಷ್ಕøತ್ಯ ಮಾಳ್ಪರ ಕೊಂದು ಉತ್ತಮ ತುರಗವೇರಿದ ಭೃತ್ಯವತ್ಸಲ ದೇವ 3 ವಿಜಯ ರಾಮಚಂದ್ರವಿಠಲರಾಯನೆ ಸುಜನ ವಂದಿತ ನಿನ್ನ ಭಜನೆಯ ಪಾಲಿಸೊ 4
--------------
ವಿಜಯ ರಾಮಚಂದ್ರವಿಠಲ
ಶ್ರೀ ಪಾದರಾಜರ ಶ್ರೀ ಪಾದಾರ್ಚನೆ ಮಾಳ್ಪ- ರೀ ಪೃಥುವಿಯೊಳು ಧನ್ಯರು ಪ ಗೋಪಿನಾಥ ಪದಾಬ್ಜ ಮಧುಪ ದ- ಯಾ ಪಯೋನಿಧಿ ಸುಜನರಂತಃ- ಸ್ತಾಪಹಾರಕ ಗೋಪ ಸಕಲ ಕ- ಲಾಪವಿದ ತಾಪತ್ರಯಾಪಹ ಅ.ಪ. ಊರೆಲ್ಲಿ ತೋರೆಷ್ಟು ದೂರದಲ್ಲಿಹುದೆಂದು ಹೀರ ವರ್ಣರು ಬಂದು ಕೇಳಲು ತೋರಿ ತುರುಗಳ ಗತಿಯ ಸೂರ್ಯನ ತೋರಿ ತಮ್ಮಯ ಪೋರ ವಯಸನು ಸೂರಿಗಳೇ ನೀವರಿಯರೆನ್ನುತ ಚಾರು ಉತ್ತರವಿತ್ತ ಧೀರರ 1 ಭೂದೇವನನು ಕೊಂದು ಬಾಧೆಗಾರದೆ ನೃಪ ತಾ ದೈನ್ಯದಲಿ ನಿಂದು ಬೇಡಲು ಪಾದ ಪದ್ಮಾ- ರಾಧನೆಯ ತೀರ್ಥವನು ಪ್ರೋಕ್ಷಿಸಿ ಆದರದಲೀಕ್ಷಿಸುತ ಭೂಪನ ಕಾದ ಕಾಂಚನದಂತೆ ಮಾಡಿದ 2 ಶಂಕಿಸಿ ದ್ವಿಜವೃಂದ ಆತಂಕಗೊಳ್ಳುತಲಿರೆ ಮಂಕುಗಳಾ ಡೊಂಕು ತಿದ್ದಲು ಬಿಂಕದಲಿ ತರಿಸಿ ಗೇರೆಣ್ಣೆ ಪಂಕದೊಳಗದ್ದಿರುವ ವಸ್ತ್ರಕೆ ಕಲುಷ ಹಾರಿಸಿ ಕಿಂಕರ ಮನಶಂಕೆ ಬಿಡಿಸಿದ 3 ಹರಿಗರ್ಪಿಸಿದ ನಾನಾ ಪರಿಯ ಶಾಖವ ಭುಂಜಿಸೆ ನರರು ತಾವರಿಯದೆ ಜರಿಯುತ್ತಿರೆ ಹರುಷದಿಂದಲಿ ಹಸಿಯ ವಸ್ತುಗ- ಳಿರವ ತೋರಿಸಿ ಮರುಳ ನೀಗಿಸಿ ಶರಣು ಶರಣೆನಲವರ ಪಾಲಿಸಿ ಮೆರೆದ ಬಹು ಗಂಭೀರ ಗುರುವರ 4 ಘೋರಾರಣ್ಯದಿ ದಿವ್ಯ ಕಾಸಾರ ನಿರ್ಮಿಸಿ ನಾರಸಿಂಹನ ನೆಲಸಿ ಊರು ಮಂದಿಯು ನೋಡುತಿರಲಾ- ವಾರಿ ಮಧ್ಯದಿ ಬಂದ ಗಂಗೆಗೆ ಸೀರೆ ಕುಪ್ಪಸ ಬಾಗಿನಂಗಳ ಧಾರೆಯೆರೆದಪಾರ ಮಹಿಮರ 5 ಫಣಿ ಬಂಧ ನಿವಾರಿಸಿ ಭಾಷಿಸಿ ಫಣಿಪನ್ನ ತೋಷಿಸಿ ಕಾಶಿ ಗಯಾ ಶ್ರೀ ಮುಷ್ಣದ್ವಾರಕ ಶೇಷಗಿರಿ ಮೊದಲಾದ ಪುಣ್ಯ ಪ್ರ- ದೇಶಗಳ ಸಂಚರಿಸಿ ಭಕ್ತರ ದೋಷರಾಶಿಯ ನಾಶಗೈಸಿದ 6 ಕಸ್ತೂರಿತಿಲಕ ಶ್ರೀಗಂಧ ಲೇಪನದಿಂದ ನಿತ್ಯ ಮಹೋತ್ಸವಗೊಳುತ ಮುತ್ತಿನಂಗಿಯ ಮೇಲ್ಕುಲಾವಿಯು ರತ್ನ ಕೆತ್ತಿದ ಕರ್ಣಕುಂಡಲ ಬಿತ್ತರದಿ ಧರಿಸುತ್ತ ರಥವನು ಹತ್ತಿ ಬರುತಿಹ ಸ್ತುತ್ಯ ಬಿರುದಿನ 7 ಆರ ಬೃಂದಾವನ ಸೇವೆಯ ಮಾಡಲು ಕ್ರೂರ ಭೂತಗಳೆಲ್ಲ ದೂರವು ಆರ ಬೃಂದಾವನದ ಮೃತ್ತಿಕೆ ನೀರು ಕುಡಿಯಲು ಘೋರಕ್ಷಯ ಅಪ- ಸ್ಮಾರ ಗುಲ್ಮಾದಿಗಳ ಉಪಟಳ ಹಾರಿ ಪೋಪುದು ಆ ಮುನೀಶ್ವರ 8 ಪರವಾದಿಗಳ ಬೆನ್ನುಮುರಿವ ವಜ್ರದ ಡಾಣೆ ಶರಣ ರಕ್ಷಾ ಮಣಿಯೆ ದುರಿತ ತಿಮಿರಕೆ ಮೆರೆವ ದಿನಮಣಿ ಎನಿಸಿ ಪೂರ್ವ ಕವಾಟ ನಾಮಕ ಪುರದ ನರಕೇಸರಿ ಕ್ಷೇತ್ರದಿ ಸ್ಥಿರದಿ ಶ್ರೀ ಕಾಂತನನು ಭಜಿಸುವ 9
--------------
ಲಕ್ಷ್ಮೀನಾರಯಣರಾಯರು