ಒಟ್ಟು 8 ಕಡೆಗಳಲ್ಲಿ , 7 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಮ್ಮನ ತೊಡೆಯ ಮೇಲೆ ನಮ್ಮ ಕೃಷ್ಣ ಸುಮ್ಮನೆ ಮಲಗಿಹನು ಪ ಸುಮ್ಮೊನದಿ ಸುಖದಿಂ ನಲಿದಾಡುತ ಅ.ಪ ಮಣ್ಣ ಮೆದ್ದುದ ಕಂಡು ಗೋಪಿದೇವಿ ಚಿಣ್ಣನ ಬಾಯಿನೋಡೆ ಕಣ್ಣಿಗೆ ಬ್ರಹ್ಮಾಂಡ ತೋರಿಸಿದಂಥ ಪರಬ್ರಹ್ಮ 1 ತರಳ ತರಲೆ ಮಾಡೆ ತಾಯಿಯು ಹೊರಳೆಗೆ ಕಟ್ಟಲಾಗಿ ಸುರತರುಗಳ ಮುರಿದು ನಿಜತರವ ಗೈದ ನಿತ್ಯಾತ್ಮ 2 ಕಾಲಲೊದೆದು ಕೊಂದು ಧಾತಾ ದೇವೇಂದ್ರರ ಶಿರಬಾಗಿಸಿದ ಪೂತಗುಣ 3 ಹಾಲುಕೊಡೆನೆ ಬಾಲ ಸಂಜೆಗೆ ಹಸುವ ಕರೆವೆನೆನಲು ಲೀಲೆಯಿಂ ಕಣ್ಣ ಮುಚ್ಚಿ ಕತ್ತಲೆ ಕವಿಸಿದ ದೈವ 4 ಗೋಪೀಜನಗಳೊಡನೆ ಗೋಪಾಲನು ಸ್ತ್ರೀಲೋಲನಾಗಿ ಕುಣಿದು ರಥಾಂಗಪಾಣಿ 5 ನವನೀತ ಚೌರ್ಯಮಾಡಿದ ನಾರೀಜನರ ವಸ್ತ್ರಾಪಹರ ಗೈದ ಅವನೀಭಾರವ ಕಳೆದ ಮಾಯಾಮೂರ್ತಿ ದೇವಶಿಖಾಮಣಿ6 ಭೂಮಿಪಾಲನೆ ಮಾಡಿದ ಹಿಂಸಕರ ವಂಶವಳಿಪ ಹಂಸಲೋಲ ಜಾಜಿಶ್ರೀಶ 7
--------------
ಶಾಮಶರ್ಮರು
ಆನೆ ಬಂದಿದೆ ಇದಿಗೊ ಮದ್ದಾನೆ ಪ ಜ್ಞಾನಿಗಳೊಳಾಡುವ ಮದ್ದಾನೆ ಅ ದೇವಕಿಯೊಳು ಪುಟ್ಟಿದಾನೆ - ವಸುದೇವನ ಪೆಸರೊಳೈತಂದ ಮದ್ದಾನೆಶ್ರೀ ವಾಸುದೇವನೆಂಬಾನೆ - ಗೋಪಿದೇವಿಯ ಗೃಹದೊಳಾಡುವ ಪುಟ್ಟಾನೆ 1 ನೀಲವರ್ಣದ ನಿಜದಾನೆ - ಸ್ವರ್ಣಮಾಲೆಗಳಿಟ್ಟು ಮೆರೆವ ಚಲುವಾನೆಶ್ರೀಲೋಲನೆನಿಪ ಪಟ್ಟದಾನೆ - ದುಷ್ಟಕಾಲಿಂಗನ ಪೆಡೆಯ ಮೆಟ್ಟಿ ತುಳಿದಾನೆ 2 ಬಾಲೇಂದು ಮುಖದ ಮರಿಯಾನೆ - ಕದ್ದುಪಾಲನ್ನು ಕುಡಿದ ಮರಿಯಾನೆಕೈಲಿ ಗಿರಿಯನೆತ್ತಿದಾನೆಕಾಳ್ಕಿಚ್ಚನ್ನು ನುಂಗಿದ ಪಟ್ಟದಾನೆ 3 ಧೇನುಕಾಸುರನ ಕೊಂದಾನೆತನಗೆ ಜೋಡಿಲ್ಲದಿಹ ನಿಜದಾನೆಮಾನವರಿಗೆಲ್ಲ ಸಿಲ್ಕದಾನೆಶೌನಕಾದಿಗಳೊಂದಿಗಿಪ್ಪಾನೆ 4 ಮಲ್ಲರೊಡನೆ ಗೆಲಿದಾನೆ - ಕಡುಖುಲ್ಲ ಕಂಸನ ಕೆಡಹಿದಾನೆ - ವಿದ್ಯೆ ಸಾಂದೀಪರಲಿ ಕಲಿತ ಮರಿಯಾನೆಸಲೆ ಭಕ್ತರ ಕಾವ ಪುಟ್ಟಾನೆ 5 ತರಳೆ ರುಕ್ಮಿಣಿಯ ತಂದಾನೆ - ಬಹುಕರುಣದಿಂ ಪಾಂಡವರ ಪೊರೆದಾನೆವರ ವೇಲಾಪುರದೊಳಿಪ್ಪಾನೆಸಿರಿಯಾದಿಕೇಶವನೆಂಬ ಮದ್ದಾನೆ 6
--------------
ಕನಕದಾಸ
ಈ ಪರಿಯ ಸೊಬಗಾವ ದೇವರಲಿ ನಾ ಕಾಣೆಗೋಪಿದೇವಿಯ ತನಯ ಗೋಪಾಲ ಬಾಲಗಲ್ಲದೆ ಪ ದೊರೆಯ ತನದಲಿ ನೋಡೆ ಧರಣಿ ಜಾತೆಯ ರಮಣಸಿರಿಯ ತನದಲಿ ನೋಡೆ ಶ್ರೀಕಾಂತನುಹಿರಿಯ ತನದಲಿ ನೋಡೆ ಸರಸಿಜೋದ್ಭವನ ಪಿತನುಗುರುವು ತನದಲಿ ನೋಡೆ ಆದಿಗುರುವು 1 ಪಾವನತ್ವದಿ ನೋಡೆ ದೇವಿ ಗಂಗಾಜನಕದೇವತ್ವದಲಿ ನೋಡೆ ದಿವಿಜರೊಡೆಯಲಾವಣ್ಯದಲಿ ನೋಡೆ ಲೋಕ ಮೋಹನ ಪಿತನುಜವ ಧೈರ್ಯದಲಿ ನೋಡೆ ಅಸುರಾಂತಕ2 ಗಗನದಲಿ ಸಂಚರಿಪ ವೈನತೇಯ ವಾಹನಜಗವನು ಪೊತ್ತಿರ್ಪ ಶೇಷ ಶಯನಕಾಗಿನೆಲೆಯಾದಿಕೇಶವರಾಯಗಲ್ಲದೆಮಿಗಿಲು ದೈವಗಳಿಗೀ ಭಾಗ್ಯಮುಂಟೆ 3
--------------
ಕನಕದಾಸ
ಗೋಪಿದೇವಿ ಎಂತು ಪೇಳಲೆ ನಾನೆಂತು ತಾಳಲೆ ಪ ಶ್ರೀಪತಿ ಬಂದು ನಿಂದು ಏಕಾಂತವನ್ನ ಆಡುತಾನೆ | ಪಾಪ ಇಂಥಾದುಂಟೇನೆ ಕೇಳೆ ಲಕ್ಷ್ಮೀಕಾಂತನೀತನೆ || ಮಂಥನ ಮಾಡುವಲ್ಲಿ ಮಂಥಣಿಯ ಒಡೆದನು | ಕುಂತಳವ ಪಿಡಿದು ಎನ್ನ ಕುಳ್ಳಿರಿಸಿದಾ ಕಿರಿಬೆವರನೊರಸಿದಾ 1 ಚಿಕ್ಕಮಕ್ಕಳ ಕೂಡಿ ಚಕ್ಕನೆ ತಾ ಬಂದು ಬೇಗ | ಬೆಕ್ಕು ಕುನ್ನಿ ಮರ್ಕಟವ ತಂದನಮ್ಮಾ ಇದು ಚಂದವೇನಮ್ಮ || ಉಕ್ಕುತಿಹ ಪಾಲ್ಗೊಡಗಳ ಉರುಳಿಸಿದಾ ಸುಮ್ಮನೆ | ಚೊಕ್ಕವೇನೆ ಸುಮ್ಮನೆ ಮೊಸರ ಸುರಿದಾ ಮೀಸಲು ಮುರಿದಾ 2 ರಕ್ಕಸರ ಗಂಡ ನಮ್ಮ ರಾಜ್ಯದೊಳಗಿವಗಿನ್ನು | ತಕ್ಕ ಬುದ್ದಿಯ ಪೇಳುವರದಾರು ಮೀರಿದ ಗೋಪಗೆ || ಸಿಕ್ಕ ಪಿಡಿದೇವೆಂದರೆ ಸಿಕ್ಕನಮ್ಮ ಇವ ಗುಡಿವಡ್ಡಿ ಬೇಡವೇ | ಕಕ್ಕಸದಲಿ ಬಲು ಕಕ್ಕಲಾತಿಯಲಿ 3 ಬಿರಬಿರನೆ ತಾ ಬಂದು ಬೆದರಿ ಎನಗಂದು | ಹರವಿಯ ಹಾಲು ಕುಡಿದಾ ತಾ ಎತ್ತ ಓಡಿದನೆ || ವಾರಿಗಣ್ಣಿನಿಂದಲಿ ನೋಡಿ ಒದಗಿ ಬಳಿಗೆ ಬಂದು | ತೋರವಾದ ಕುಚಗಳ ಪಿಡಿದಾನೆ ಬಲಿದನೇನೆ 4 ಹಾರ ಪದಕವು ಹಿಡಿ ಹಿಡಿ ಎಂದು ಎನ್ನ ಕೂಡ | ಸರಸವನಾಡಲಿಕ್ಕೆ ಅರಸನೇನೆ ನಮಗೆ ಪುರುಷನೇನೆ || ಪುರುಷರು ಕಂಡರೆನ್ನ ಪರಿಪರಿ ಬಾಧಿಸ್ಯಾರು | ತರಳನ ಕರೆದ್ಹೇಳು ತಿದ್ದಿ ನೀನು ಇವಗೆ ಬುದ್ಧಿ5 ಚಂಡನಾಡುತಲಿ ಚಿಕ್ಕ ಮಿಂಡಿಯರ ಕಂಡು ತಾನು | ಚಂಡು ಅಂತ ಕುಚಗಳ ಪಿಡಿದಾನೆ ಇಂಥದುಂಟೇನೆ || ಭಂಡು ಮಾಡತಾನೆ ಭಂಡಿಯ ಗೋವಳಗಿಂದು | ದಂಡಿಸವ್ವಾ ದಂಡವನು ಕೊಡು ನೀನು 6 ಚಂಡ ಪ್ರಚಂಡನಿವನು ಗೋಪಿಕೆಯರಿಗೆಲ್ಲ | ಉದ್ದಂಡನಿವನು ತಂಡ ತಂಡದಲಿ ತುರು- || ಹಿಂಡುಗಳ ಕಾಯುವ ಗೊಲ್ಲಬಾಲಕನಮ್ಮಾ |ಪಾಂಡುರಂಗ ವಿಜಯವಿಠ್ಠಲರಾಯ ಬಲು ದಿಟ್ಟನಿವನು7
--------------
ವಿಜಯದಾಸ
ಬಂದಾ ಬಂದಾ ಉಡುಪಿಲಿ ನಿಂದ ನಿಂದಾ ಪ. ಬಂದ ಗೋಪೇರ ವೃಂದಗಳ ತಾ ನಂದು ದಣಿಸುತ ಸುಂದರಾಂಗನು ಮಂದರೋದ್ಧರ ಬೃಂದೆಯಿಂದಲಿ ಅ. ಮುದ್ದುಸುರಿಸುತ ಗೋಕುಲದೊಳಿರೆ ಕದ್ದು ಬೆಣ್ಣೆಯ ತಿಂದನೆನುತಲಿ ಸುದ್ದಿ ತಾಯಿಗೆ ಪೇಳಿ ಸತಿಯರು ಗದ್ದಲದಿ ತನ್ನ ಗಾರು ಮಾಡಲು ಮುದ್ದು ಯತಿಗಳು ಎದ್ದು ಪೂಜಿಸಿ ಮುದ್ದಿ ಬೆಣ್ಣೆ ನೇವೇದ್ಯವಿಡುತಿರೆ ಸದ್ದು ಇಲ್ಲದೆ ತಿಂದು ಸುಖದಲಿ ಇದ್ದೇನೆಂಬುವ ಬುದ್ಧಿಯಿಂದಲಿ 1 ಭಾರವಿಳುಹಲು ಕೋರೆ ಭೂಮಿಯು ನಾರದಾದ್ಯರ ನುತನು ತಾ ಬರೆ ನಾರಿಯರು ಮನ ಬಂದ ತೆರದಲಿ ಜಾರ ಚೋರನೆನುತ್ತ ಬೈಯ್ಯಲು ಧೀರ ಯತಿಗಳು ಸೇರಿ ಪರಬೊಮ್ಮ ಶ್ರೀರಮಣನೆನ್ನುತ ಸ್ತುತಿಸುವೋ ವಾರುತಿಗೆ ಮೈದೋರಿ ಭಕುತರ ಪಾರಿಗಾಣಿಪೆನೆಂಬ ನೆವದಲಿ 2 ಹಸಿದುಗೋಪರÀ ಯಜ್ಞವಾಟಕೆ ಅಶನ ಬೇಡಲು ಕಳುಹೆ ಗೊಲ್ಲರ ಪಸುಳರಿಗೆ ನೈವೇದ್ಯವಿಲ್ಲದೇ ವಶವೆ ಕೊಡಲೆಂದೆನ್ನೆ ಋಷಿಗಳು ವಸುಧಿಪತಿ ಸರ್ವೇಶನೆಂದರಿ ದಸಮಯತಿಗಳು ಕ್ಷಣ ಕ್ಷಣಕ್ಕೆ ಷ ಡ್ರಸದ ಆರೋಗಣೆಯ ಮಾಡಿಸೆ ಕುಶಲದಲಿ ಮೃಷ್ಟಾನ್ನ ಭುಜಿಸಲು 3 ಬಾಲ ಕಂದಗೆ ತೊಡಿಗೆ ತೊಡಿಸಲು ಲೀಲೆಯಿಂದಲಿ ಗೋಪಿದೇವಿಯು ಕಾಳ ಮಡುವಿಲಿ ಧುಮಿಕಿ ಎಲ್ಲವ ಕಳೆದು ಬರೆ ಆಟಗಳ ಪರೆವೆಲಿ ಶೀಲಯತಿಗಳು ವಾರ ವಾರಕೆ ಬಾಲ ತೊಡಿಗೆ ಶೃಂಗಾರಗೈಯ್ಯಲು ಆಲಯವ ಬಿಟ್ಟೆಲ್ಲಿ ಪೋಗದೆ ಓಲಗವ ಕೈಕೊಳ್ವೆನೆನ್ನುತ 4 ಗೋಪಜನ ಗೋವ್ಗಳನೆ ಕಾಯಲು ಗೋಪಿಯರು ತನ್ನ ಗುಲ್ಲು ಮಾಡಲು ಪಾಪಿ ಕಂಸ ಅಟ್ಟುಳಿಯ ಪಡಿಸಲು ಭೂಪತಿಯ ಪದವಿಲ್ಲದಿರಲು ಈ ಪರಿಯ ಬವಣೆಗಳ ತಾಳದೆ ಗೋಪ್ಯದಿಂದಿಲ್ಲಡಗಿ ನಿಂತು ಗೋಪಾಲಕೃಷ್ಣವಿಠಲ ಯತಿಗಳ ಗೌಪ್ಯಪೂಜೆಯಗೊಂಬ ವಿಭವಕೆ 5
--------------
ಅಂಬಾಬಾಯಿ
ಮಂಗಳಾಂಗ ಶ್ರೀಕೃಷ್ಣಗೆ ಸುದತಿಯರು ಮಂಗಳಾರತಿ ಎತ್ತಿರೆಪ ಭವ ಭಯ ಭಂಗ ಶುಭಗುಣಸಾಂದ್ರನಿಗೆ ಜಯ ಅ.ಪ ಕೂರ್ಮ ಕ್ರೋಡ ನೃಹರಿಗೆ ದಾನವ ಬೇಡಿದಗೆ ಮಾನದಿ ಭೃಗು ಶ್ರೀರಾಮ ಶ್ರೀಕೃಷ್ಣಗೆ ಬುದ್ಧ ಕಲ್ಕ್ಯನಿಗೆ ಜಯ 1 ಅನಿರುದ್ಧ ಮೂರುತಿಗೆ ಪಕ್ಷಿವಾಹನ ಹರಿಗೆ ಕುಕ್ಷಿಯೊಳೀರೇಳು ಜಗವನಿಂಬಿಟ್ಟಗೆ ಲಕ್ಷ್ಮೀನಾರಾಯಣ ಶ್ರೀ ಶ್ರೀಶನಿಗೆ ಜಯ 2 ಗೋಕುಲದೊಳು ಗೋಪಾಲಕರೊಡಗೂಡಿ ಗೋವ್ಗಳ ಕಾಯ್ದವಗೆ ಗೋವರ್ಧನಗಿರಿ ಎತ್ತಿದ ಧೀರಗೆ ಗೋಪಿದೇವಿಗೆ ಬಾಲಲೀಲೆಯ ತೋರ್ದಗೆ 3 ವೃಂದಾವನದಿ ಮೃತ್ತಿಕೆ ಮೆಲ್ಲುವೆನೆಂದು ವೃಂದಾರಕರು ನುಡಿಯೆ ನಂದ ಯಶೋದೆಯರು ಬಂದು ತೋರೆನಲು ಛಂದದಿಂದ ವಿಶ್ವರೂಪವ ತೋರ್ದಗೆ 4 ಕಾಳಾಹಿವೇಣಿಯರೊಡಗೂಡಿ ನಲಿವಗೆ ಕಾಳಿಂದಿ ರಮಣನಿಗೆ ಕಾಲಕರ್ಮಕೆ ಈಶನಾದ ಸ್ವಾಮಿಗೆ ಕಾಳಿಮರ್ದನ ಕಮಲನಾಭವಿಠ್ಠಲನಿಗೆ 5
--------------
ನಿಡಗುರುಕಿ ಜೀವೂಬಾಯಿ
ಗುಮ್ಮನ ಕರೆಯದಿರೆ-ಅಮ್ಮ ನೀನು |ಗುಮ್ಮನ ಕರೆಯದಿರೆ ಪಸುಮ್ಮನೆ ಇರುವೆನು ಅಮ್ಮಿಯ ಬೇಡೆನು |ಮಮ್ಮು ಉಣ್ಣುತ್ತೇನೆ ಅಮ್ಮ ಅಳುವುದಿಲ್ಲ ಅ.ಪಹೆಣ್ಣುಗಳಿರುವಲ್ಲಿಗೆ-ಹೋಗಿ ಅವರ-|ಕಣ್ಣ ಮುಚ್ಚುವುದಿಲ್ಲವೆ ||ಚಿಣ್ಣರ ಬಡಿಯೆನು ಅಣ್ಣನ ಬೈಯೆನು |ಬೆಣ್ಣೆಯ ಬೇಡೆನು ಮಣ್ಣ ತಿನ್ನುವುದಿಲ್ಲ 1ಬಾವಿಗೆ ಹೋಗೆ ಕಾಣೆ-ಅಮ್ಮ ನಾನು-|ಹಾವಿನ ಮೇಲಾಡೆ ಕಾಣೆ ||ಆವಿನ ಮೊಲೆಯೂಡೆ ಕರುಗಳನ್ನು ಬಿಡೆ |ದೇವರಂತೆ ಒಂದು ಠಾವಲಿ ಕೊಡುವೆ 2ಮಗನ ಮಾತನು ಕೇಳಬೇಡ-ಗೋಪಿದೇವಿ-|ಮುಗುಳುನಗೆಯ ನಗುತ ||ಜಗದ ಒಡೆಯ ಶ್ರೀಪುರಂದರವಿಠಲನ |ಬಿಗಿದಪ್ಪಿಕೊಂಡಳು ಮೋಹದಿಂದಾಗ 3
--------------
ಪುರಂದರದಾಸರು
ಗೋಪಾಲ ಶ್ರೀಕೃಷ್ಣ ಮೂರುತಿ ನೀನೇಕಾಪಾಡೆನ್ನನುಜಿಷ್ಣುಸಾರಥಿ ಪತಾಪತ್ರಯದೊಳ್ ನೊಂದೆ ತಪಗೈಯ್ಯಲರಿಯೆನು ನೀಕೃಪೆಯೊಳನುದಿನರೂಪತೋರಿಸು ದೇವಾ ಅ.ಪದೇವಕಿಯುದರದಿ ಜನಿಸಿಗೋಪಿದೇವಿಗೆ ತನಯನೆಂದೆನಿಸಿಜೀವ ಘಾತಕೆ ಬಂದ ಪೂತನಿಯಸು ಹೀರಿಗೋವುಗಳನು ಮೇಸಿದೆ 1ದೈತ್ಯರ ಕೊಂದು ಗೋವರ್ಧನವೆತ್ತಿದೇಕಾಮದಿ ಬಂದ ಬಾಲಕಿಯರನು ಕೂಡಿದೇಹಾವಿನ ಹೆಡೆಯ ಮೇಲೆ ನಲಿದು ಬಿಲ್ ಹಬ್ಬದಿಮಾವ ಕಂಸನ ಮುರಿದು ಕರುಣದಿತಾಯಿ ತಂದೆಯ ಸೆರೆಯ ಬಿಡಿಸಿದೆ 2ಶರಧಿಮಧ್ಯದಿ ಮನೆಮಾಡಿದೇಅಲ್ಲಿಭರದಿಂದಷ್ಟಮ ಸ್ತ್ರೀಯರಲಿ ಕೂಡಿದೇನರಮುರಶಾದ್ಯರ ಮುರಿದು ಷೋಡಶ ಸಹಸ್ರತರುಣಿಯರೊಡಗೂಡಿದೇ ಪಾರಿಜಾತತರುವ ನೀನೊಲಿದು ತಂದೆ ಪಾಂಡವರೊಳುಭರಿತ ಕೃಪೆಯ ತೋರಿದೆಧುರದಿಮಾಗಧಚೈದ್ಯ ಧರಣಿಪಾಲರ ಗೆಲ್ದುತರುಣಿ ದ್ರೌಪದಿಗ್ವರವ ಪಾಲಿಸಿನರಗೆ ಸಾರಥಿಯಾದೆ ಶ್ರೀಹರೀ 3ಸಂಧಾನವೆಸಗಿ ಪಾಂಡವರಕರ-ದಿಂದ ಕೊಲ್ಲಿಸಿದೆ ಕೌರವರಚಂದ ಧರ್ಮರಾಯಗೆ ಪಟ್ಟ ಕಟ್ಟಿಸೀನಿಂದಶ್ವಮೇಧಗೈಸಿ ನೀ ಸುರಗಣವೃಂದ ಸಂತಸ ಬಡಿಸಿ ಯಾದವಕುಲ ಮುಗಿಲದಿಂದಲಿಸುಂದರಾಂಗವ ಬಿಟ್ಟು ಕ್ಷೀರಸಿಂಧುವಿಗೈದೆಚಂದದಲಿ ಗೋವಿಂದದಾಸನೆಬಂದು ಮಂಗಲ ಮುಖವ ತೋರಿಸೋ 4
--------------
ಗೋವಿಂದದಾಸ