ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಷ್ಣಾರ್ಯರು ಮನವೇ ಲಾಲಿಸಿ ಕೇಳೊ ಬಿನ್ನೈಸುವೆನೊ ನಿನಗೆ ಚೆನ್ನಾಗಿ ವಡೆಯಾನಾ ಪಾದದಲ್ಲಿ ಭಕುತಿಯನ್ನೆ ಮಾಡಿ ಮಮತೆ ವಿಷಯಾದಿ ಅಹಂಕಾರ ಬುದ್ಧಿಯನ್ನೇ ಬೀಸಾಟಿ ದೃಢವಾಗಿ ಧೈರ್ಯದಿಂದ ಇದೇ ಸಾಧನವೆಂದುಗುಪಿತಾದಲ್ಲಿ ಸಂಚರಿಸೆ ಪಾಣಿಯಾ ಪಿಡಿದುತಾ ವಾಣಿ ಅರಸ ನಿರ್ಮಾಣವ ತೋರಿಸುವ ಪ್ರಾಣದೇವರು ಪ್ರಾಣವಪ್ಪಿಸಿ ಸಾಕುವಬಿಡದೆ ಪಂಚಪ್ರಾಣಾತ್ಮಕನಾದ ತಂದೆವರದಗೋಪಾಲವಿಠಲರೇಯಾನ ಭಜಿಸು ಬಿಡದೆ 1 ಇಂದು ಸಾಧನವೆಂದು ತಿಳಿದು ನಿನ್ನಿಂದ ನೀನೇ ಹಿಗ್ಗಿ ಕುಗ್ಗಾದೀರು ಮಗ್ಗುಲೊಳಗಿದ್ದ ಮಧ್ವದ್ವೇಷಿ ಬಂದು ಮದ್ದು ಹಾಕಿ ಮಣಿಸೂವ ಮಧ್ವರಾಯರ ಪಾದಪದ್ಮದಲ್ಲಿ ಬುದ್ಧಿಯನಿಟ್ಟರೆ ಬಾಧೆಯ ತಪ್ಪಿಸಿ ಉದ್ಧರಿಸುವ ಮುದ್ದು ಮುಖದ ತಂದೆವರದಗೋಪಾಲ- ವಿಠಲರೇಯಾನವಲಿಸು ಬಿಡದೆ 2 ಅನಾದಿ ಕಾಲದಿಂದ ನಿಜ ಗುರುರಾಯನು ನಿನ್ನೊಳಿದ್ದು ಜನಿಸಿ ಬಂದ ಸಾಧನ ಬಿಟ್ಟು ಸುಖದುಃಖ ಜಲಮಯ ಸಂಸಾರದೊಳಗೆ ಬಿದ್ದು ಬಾಯ್ಬಿಡುವಿ ಕಂಡ್ಯಾ ಆ ಗುರುರಾಯರ ಮೂರುತಿ ನಿನ್ನೊಳು ನೋಡುತ್ತ ಪಾಡುತ್ತ ಸುಖಿಯಾಗಿ ಸಕಲ ಕರ್ಮಗಳಾಚರಿಸಿ ತದ್ವಾರ ನವನಿಧಿ ರಾಜನ ಚರಣಕ್ಕೆ ಆರೋಪಿಸೆ ಕೈಗೊಂಡು ಹೊಸಹೂವ ಸುಂದರ ಮೂರುತಿ ತಂದೆವರದಗೋಪಾಲವಿಠ್ಠಲರೇಯಾನ ನಿಲ್ಲಿಸೊ ಬಿಡದೇ 3 ಅವರ ಬಳಿಯಲ್ಲಿ ಪೋಗಿ ನೀನೂ ನಿನ್ನದು ಎನ್ನದಿರು ಕಂಡ್ಯಾ ಮುನ್ನ ನಿನಗೆ ಘನ್ನವಾದ ವೈರಾಗ್ಯ ಪುಟ್ಟುವಾದೂ ಇನ್ನು ನೀನು ಮನದಾಶೆ ಎಂಬ ಪಿಶಾಚೀಗೆ ಒಳಗಾಗಿ ಏನಾಹೋದೋ ನಿನ್ನ ಘಾಸಿಯನರಿತು ಕ್ಲೇಶಾಪಾಶಾಗಳಿದ್ಯಾಡಿಪಶುಪತಿಪಿತನ ಪಡೆದ ತಂದೆವರದಗೋಪಾಲವಿಠಲರೇಯಾನ ವಲಿಸೋ ಬಿಡದೆ4 ಸದಾಕಾಲದಲ್ಲಿ ಇವರ ಸ್ಮರಣೆ ಮಾಡಿ ಧ್ಯಾನಕೆ ತಂದು ಯೋಗಾದಿ ನೋಡುವಾದೆ ಮಹಾ ನಿಜವಾದ ಭಕುತಿ ಇವರ ಪಾದಸ್ಮರಣೆ ಮಾಡಾದ ಮನುಜರಿಗೆ ಶ್ರೀಪದ್ಮ ರಮಣಾನು ಸೃಷ್ಟಿಸೂವ ಆ ಮನುಜಗೋಸುಗ ನರಕ ನರಕಾದೊಳಗಿಟ್ಟು ಕುಟ್ಟುವ ಕ್ಷಣ ಬಿಡದೆ ಎಷ್ಟು ಮಾಡಿದರೇನು ಉತ್ತುಮೋತ್ತಮರೆಲ್ಲ ಸೋತ್ತುಮರಾಯರ ದ್ರೋಹಮಾಡಿ ತುತ್ತುತುತ್ತೀಗೆ ಹಾಕಿಸಿಕೊಂಡು ಕುತ್ತೀಗೆ ಕಟ್ಟಿ ನಿತ್ಯಾದಲ್ಲಿ ಸ್ಮರಣೆಯ ಮಾಡಿದರೆ ನೃತ್ಯವಾಗೈಸುವ ಭಕ್ತಾವತ್ಸಲ ತಂದೆವರದಗೋಪಾಲವಿಠಲರೇಯಾನ ನಿಲ್ಲಿಸೋ ಬಿಡದೆ 5 ಜತೆ :ನವವಿಧಭಕುತಿಯನ್ನೇ ಅರಿತು ಗುರುಪೂಜೆ ಮಾಡಲು ತದ್ವಾರಾ ವಲಿದಾ ತಂದೆವರದಗೋಪಾಲವಿಠ್ಠಲಾ 6
--------------
ತಂದೆವರದಗೋಪಾಲವಿಠಲರು
ವೇಣು ಗೋಪಾಲವಿಠ್ಠಲರೇಯ ನಿನ್ನ ಪದ ರೇಣು ನಂಬಿದ ಮಾನವ ಏನು ಅರಿಯದಲಿಪ್ಪ ನೀನೊಲಿದು ಕರುಣದಲಿ ಜ್ಞಾನ ಭಕುತಿಯ ಕೊಡುವುದು ಸ್ವಾಮಿ ಪ ಪರದೈವ ನೀನೆಂದು ಮೂಢಮತಿಯಾದವನು | ಪರಿಪೂರ್ಣವಾಗಿ ನಿರುತ | ನೆರೆ ನಂಬಿದೆನು ನಾನಾ ಪ್ರಕಾರದಲಿ ಸ್ಮರಣೆ ಮಾಡುತ ಮನದಲಿ | ತರತಮ್ಯ ಭಾವದಲಿ ಮಾರ್ಗವನೆ ತೋರಿ ವಿ ಸ್ತರ ಮಾಡು ಇವನ ಕೀರ್ತಿ ಕರುಣಾಕರನೆ ನಿನ್ನ ಮೊರೆಹೊಕ್ಕ ಶರಣನ್ನ ಕರಪಿಡಿದು ಪಾಲಿಸುವುದು ಸ್ವಾಮಿ1 ಲೌಕಿಕವೆಲ್ಲಿನಗೆ ವೈದಿಕವೆಂದೆನಿಸಿ | ಸಾಕುವುದು ಸಾಕಾರನೆ ನೂಕು ದುರಳದಿಂದ ಬಂದ ವಿಪತ್ತುಗಳ ತಾಕಗೊಡದಂತೆ ವೇಗ ಶುಭ | ವಾಕು ನೇಮಿಪುದು ಸತತ ನಾಕಜನ ಬಲವಾಗಿ ರಕ್ಷಿಸಲಿ ಸುರತರುವೆ ಶ್ರೀ ಕಾಂತ ನಿನ್ನಿಂದಲಿ ಸ್ವಾಮಿ 2 ಓರ್ವನ ಪೆಸರುಗೊಂಡು ಪೇಳಲೇತಕೆ ಇನ್ನು | ಸರ್ವರನು ಈ ವಿಧದಲಿ | ಊರ್ವಿಯೊಳಗೆ ಇಟ್ಟು ಉದ್ಧರಿಸಿ ಉರುಕಾಲ ನಿವ್ರ್ಯಾಜದವನ ಮಾಡಿ ಸರ್ವರಗೋಸುಗ ತುತಿಸುತಲಿ ಯೋಗ್ಯರಿಗೆ ಸರ್ವದಾ ಕೃಪೆಮಾಡು ಎಂಬೆ ಸಿರಿ ವಿಜಯವಿಠ್ಠಲ ನಿನ್ನ ಶರ್ವ ತುತಿಸಿ ಕಾಣ ನಾನೊಬ್ಬ ಪೊಗಳುವನೆ 3
--------------
ವಿಜಯದಾಸ