ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಂಚ ವೃಂದಾವನದಿ ಮೆರೆಯುತಿರುವಾ ||ಪಂಚಾಸ್ಯ ಸಂದಿಷ್ಟ ವೈಭವವ ಕೇಳಿ ಪ ವಿಪುಲ ಮತಿ ಪದಕರ್ಹ ಕಪಿಪ ರಾಮನ ಭಂಟಸ್ವಪನದಾಖ್ಯಾನವನೆ ಶಪಥ ಪೂರ್ವಕದೀ |ವಿಪ್ರಗೋಸುಗವಾಗಿ ಸುಪ್ರಕಟ ಗೈದಿಹರು ಅಪ್ರತಿಮ ಹಯಮೊಗನ ಸುಪ್ರೇಮ ಪಿಡಿದೂ 1 ಆಖ್ಯಾನ ಪೆಟ್ಟಿಗೆಯು ಅಂಧಕಾರದಲಿದ್ದುವ್ಯಾಖ್ಯಾತೃ ವೇದನಿಧಿ ಜನ್ಮತಾಳುತಲೀ |ವ್ಯಾಖ್ಯಾನ ಗೈದಾಗ್ಯು ಭಾವ ತಿಳಿಯದಲೇವೆಪ್ರಖ್ಯಾತಿ ಪಡೆಯದಲೆ ಬೀಗ ಮುದ್ರಿತದೀ 2 ಅಂಧ ಭಾವದೊಲೊಬ್ಬ ಪಂಗು ಭಾವದಲೊಬ್ಬ ಇಂದಿರೇಶನ ಮಹಿಮೆ ಪ್ರಕಟ ಗೈಯ್ಯುವಲೀ|ಅಂಧ ಪಂಗುನ್ಯಾಯ ಆಶ್ರಯಿಸಿ ಪ್ರಕಟಿಸುವಮಂದ ಜನರುದ್ಧಾರ ಕಾರ್ಯ ಗೈಸುತಲೀ 3 ಅನುಮಾನ ತೀರಥರ ಶಾಸ್ತ್ರವನೆ ಮಥಿಸುತ್ತತನುಮನ ಧನಧಾನ್ಯ ತೃಣವೆಂಬ ಕೀಲಿಯಲೀ |ಜ್ಞಾನ ಪೆಟ್ಟಿಗೆ ಬೀಗ ಮುದ್ರೆಯನೆ ತೆರೆಯುತ್ತ ಮನದ ಪಾತ್ರಿಯಲುಣ್ಣಿ ಆಖ್ಯಾನದನ್ನಾ 4 ಸಂತ ಸಂಗದಲಿಂದ ಮಂಥಿಸಲು ತತ್ವಗಳಅಂತ ರಂಗದ ಕದವು ತೆರೆದಂತರಾತ್ಮನನುಕಂತು ಪಿತನಾದ ಗುರು ಗೋವಿಂದ ವಿಠಲನ್ನಅಂತರಂಗದಿ ಕಾಂಬ ಪಂಥವಿತ್ತವರಾ 5
--------------
ಗುರುಗೋವಿಂದವಿಠಲರು
ವಿಘ್ನೇಶ ಪ್ರಿಯ ವಿಠಲ | ಸದ್ಗುಣಾರ್ಣವನೇ ಪ ದುರಿತ | ಉದ್ಧರಿಸೊ ಇವನಾ ಅ.ಪ. ಮೂಲ ಕಾರಣ ಜಗಕೆ | ಪಾಲಾಬ್ಧಿಶಯ ನಿನ್ನ ಲೀಲೆಗಳ ತೋರುತ್ತ | ಸಲಹೊ ಇವನಾಕೀಲಾಲ ಜಾಸನುತ | ಮಾಲೋಲ ಶ್ರೀ ಹರಿಯೆವ್ಯಾಳ್ಯ ವ್ಯಾಳ್ಯಕೆ ಪಾಪ | ಜಾಲಗಳ ಹರಿಸೋ 1 ಆಪ್ತ ಸತಿಸುತರಲ್ಲಿ | ವ್ಯಾಪ್ತ ನಿಹ ಹರಿಯೆಂದುಸೂಕ್ತೋಪಚಾರಗಳ | ಪ್ರಾಪ್ತಿಗೈಸುತಲೀ |ಮೌಕ್ತಿಕೋ | ಪಾಯವೇ | ದೋಕ್ತಸಮನಿಸುತಕೀರ್ತಿಕೊಡಿಸಿವಗೆ ಶ್ರೀ | ಕಾಂತ ಮೂರುತಿಯೇ2 ಪಾಂಚ ಭೌತಿಕ ದೇಹ | ಪಂಚತ್ವ ಪಡೆವುದನೆಸಂಚಿಂತನೆಯ ಕೊಟ್ಟು | ಪಂಚ ಪಂಚಾತ್ಮಾಮುಂಚೆ ತಿಳಿಸಿವಗೆ ಸ | ತ್ಪಂಚ ಭೇದ ಜ್ಞಾನವಾಂಛಿತಾರ್ಥದನಾಗೊ | ಅಂಚೆವಹಪಿತನೇ 3 ನಂದ ಮುನಿ ಮತದ ಮಕ | ರಂದ ಉಣಿಸುತ ಇವಗೆಸಂದೇಹ ಕಳೆದು ಆ | ನಂದಗಳ ನೀಯೋಇಂದಿರಾರಾಧ್ಯ ಪದ | ಮಂದಾಕಿನೀ ಜನಕಕಂದನನು ಕಾಪಾಡು | ಯೆಂದು ಪ್ರಾರ್ಥಿಸುವೇ 4 ಕಾಲ | ಯಾವ ಸಮಯದಲಿರಲಿದೇವತವ ಸಂಸ್ಮರಣೆ | ಭಾವದಲಿ ಮಾಳ್ವಾಭಾವ ಪಾಲಿಸುತಿವಗೆ | ನೀವೊಲಿಯ ಬೇಕೆಂದುದೇವ ಪ್ರಾರ್ಥಿಪೆ ಗುರೂ | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಸರ್ವಾಧಾರ ವಿಠಲ | ಶರ್ವ ನೊಡೆಯ ಪ ಸರ್ವವಿಧದಲ್ಲಿವನ | ಪೊರೆಯ ಬೇಕಯ್ಯ ಅ.ಪ. ಮಧ್ವಸಿದ್ದಾಂತದಲಿ | ಅಂಕುರವ ಪುಟ್ಟಿಹುದುಶುದ್ಧಭಾವದಲದನ | ವೃದ್ಧಿಗೈಸುತಲೀಮಧ್ವಸನ್ಮಾರ್ಗದಲಿ | ಪದ್ಮನಾಭನ ಪಾದಪದ್ಮವನೆ ಭಜಿಪಂಥ | ಅಧ್ಯಾನ ತೋರೋ 1 ಲೇಸು ಸಾಧನ ಹರಿಯ | ದಾಸ್ಯದಲಿ ಮನವಿರಿಸಿಆಶೆ ಪೂರೈಸಲ್ಕೆ | ಆಶಿಸುತ್ತಿಹನೋ |ವಸುದೇವಭಿದ ತೈ | ಜಸನ ರೂಪದಲಿ ಉಪದೇಶವಿತ್ತಂತೆ ಉಪ | ದೇಶವಿತ್ತಿಹೆನೋ 2 ಹರಿಗುರು ಸದ್ಭಕ್ತಿ | ವೈರಾಗ್ಯ ವಿಷಯದಲಿಕರುಣಿಸಿ ಪೊರೆಯೊ ಹರಿ | ಮರುತಂತರಾತ್ಮನಿರುತ ಸಜ್ಜನ ಸೇವೆ | ದೊರಕಿಸುತ ಸಾಧನವಪರಿಪರಿಯಲಿಂಗೈಸಿ | ಪೊರೆಯೊ ಸರ್ವೇಶಾ 3 ಕಂಸಾರಿ ಮನಮಾಡಿವಂಶ ಉದ್ದರಿಸಿವಗೆ | ಹಂಸಜನ ವಂದ್ಯಹಂಸೋಪಸನೆ ಮಾಳ್ವ | ಶ್ವಾಸ ಮಾನೀ ವಾಯುಶಂಸನವ ಕೈಗೊಂಡು | ಜೀವರೋದ್ಧಾರೀ 4 ಕ್ಲೇಶಮೋದದಿ ಸಮತೆ | ಲೇಸಾಗಿ ಕೊಟ್ಟಿವಗೆಪೋಷಿಸೋ ಹಯವದನ | ಬಾಸುರಾಂಗ ಹರೀಮೇಶ ಮಧ್ವೇಶ ಉಪ | ದೇಶ ಸಾರ್ಥಕ್ಯವನುಆಶಿಸುವೆ ಕರುಣಿ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು