ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನವೇ ನೀನೆಚ್ಚರಿಕೆ ಬಿಡದಿರು ಅನುದಿನವು ಹರಿಧ್ಯಾನದೊಳಗಿರು ಪ ವನಿತೆ ಧನಧಾರಿಣಿಯ ನೆಚ್ಚಿ ತನುವೆ ತಾನೆಂಬುದನುಚಿತವು ಅ.ಪ ಬರಿಯಕೈಯಲಿ ಭೂಮಿಗಳಿಸಿದೆ ದುರಿತಭಾರವ ಧರಿಸಿರ್ಪೆ ನರರೆ ಹರಿಸುವರಾರೋ ಕಾಣಿರ ಅರಿತುಕೊಂಡಿರೆ ತಿಳಿಸಿರೈ 1 ಕಾಯವಸ್ಥಿರ ಹೇಮಸಂಸ್ಕøತಿ ಮಾಯಾಪಾಶದ ಬಲೆಗೆ ಸಿಲ್ಕಿ ನಾಯಿನರಿಯಂದದಲಿ ತೊಳಲಿ ಸಾಯವರ ಕಂಡಳುವದೇಕೋ 2 ಜಾತಿಧನವಧಿಕಾರ ಖ್ಯಾತಿಗೆ ಆತುರದೊಳಭಿಮಾನ ಪಡುವೇ ಪಾತಕರೆ ಹಿಂಜರಿಯದಂತೇ ಪ್ರೀತಿಯಿಂ ಪರಪೀಡೆಗೈವೇ 3 ಪೊಡವಿಯೊಳ್ ಪೆಣ್ ಬಾಲ ವೃದ್ಧರು ಬಡವರಾರ್ತರು ಕುಂಟಕುರುಡರು ಎಡೆಯ ಜೀವಿಗಳನ್ನು ಕರುಣದಿ ಕಾಣೆಲೋ ಕಡುಜಾಣನೇ 4 ಸತ್ತಮೇಲೇನೆಂದು ಯೋಚಿಸು ಮುತ್ತಿ ಕತ್ತಿಯೊಳಿರಿವರೈ [ಮ]ತ್ತಕ್ಷಣದ ಫಲಕಾಶೆಪಡದಿರು ಸತ್ಯವಂ ಪಿಡಿ ನಿತ್ಯವೂ 5 ಯಮುನೆ ಹೊಕ್ಕರು ಯಮನು ಬಿಡನೂ ಅಮಮ ನರಕದೊಳಿಳಿಪರೈ ರಮಾರಮಣನ ಒಲುಮೆಗಾಗಿ ಶ್ರಮಿಸಿ ಪರರುಪಕಾರಿಯಾಗೋ6 ಪತಿತಪಾವನ ಜಾಜಿಕೇಶವ ನತಿಶಯದಿ ತಾ ಜಗವ ಪಾಲಿಪ ಚತುರ್ವೇದ ಶ್ರುತಿ ಪ್ರಮಾಣವ ಮತಿಯುತರು ಮೀರುವರೆ ಮರುಳೇ 7
--------------
ಶಾಮಶರ್ಮರು
ಮಲ್ಲಮರ್ಧನ ರಾಣಿ - ಮಹ ಲಕ್ಷುಮೀ ಪ ಖುಲ್ಲ ಜನರೆದೆದಲ್ಲಣೆಯೆ | ಕೊಲ್ಲಾಪುರ ನಿಲಯೆ ಅ.ಪ. ಪ್ರಕೃತಿ ಚೇತಾತ್ಮೆ ಜಡ | ಪ್ರಕೃತಿ ದ್ರವ್ಯದ ಕಾರ್ಯವಿಕೃತಿ ಗೊಳಿಸುತ ಮೊದಲು | ವೈಕೃತವು ತದನಂತರಾ |ವ್ಯಕುತಿ ಗೈಯುತ ಲಿಂಗ | ಪ್ರಕೃತಿ ಕಾರ್ಯವ ಮಾಡಿಸುಕೃತ ತ್ರಿವಿಧರ ಸಹಜ | ಪ್ರಕೃತಿ ಶಬ್ದನಿಗೀವೇ 1 ಪರಿಭವ ಕಾರ್ಯನೀ ಮಾಳ್ಪೆ ಪ್ರಜ್ಞಾಂತ | ಪ್ರೇಮ ರೂಪದಲೀಈ ಮಹತ್ತುಪಕಾರ | ಸಾಮಸನ್ನುತ ಹರಿಯನೇಮದಿಂದಲಿ ಗೈವ | ಭಾಮೆಗಾ ನಮಿಪೇ 2 ಹರಿಕಾರ್ಯ ಸತ್ಸಾಧ್ಯೆ | ವಿರಜೆ ರೂಪದಿ ಹರಿಯೆ ||ವರ ಮಂದಿರಾವರಣ | ನೆರೆ ವಿರಚಿಸೀ |ಸರುವ ಸಜ್ಜೀವ ತವ | ಸರಿತದೋಲ್ ಅವಭೃತವವಿರಚಿಸಲು ಜಡ ಪ್ರಕೃತಿ | ಹರಿಸುವೆಯೆ ದಯದೀ 3 ಶ್ರೀ ಸಿತ ದ್ವೀಪಾದಿ | ಆ ಸುರೂಪವ ತಾಳಿವಾಸುದೇವನ ಸೇವೆ | ಆಶೆಯಲಿ ಗೈವೇ |ಈಸು ತವ ಮಹಿಮೆಯನು | ತೋಷದಲಿ ಸ್ತುತಿಪರಭಿಲಾಷೆ ಸಲಿಸುತ ತೋರ್ಪೆ | ವಾಸುದೇವನ ರೂಪ 4 ಸತಿ ಪತಿ ತೋರೇ 5
--------------
ಗುರುಗೋವಿಂದವಿಠಲರು
ಯಾಕೆ ಈ ದಾಸನನು ಸಲಹಲೊಲ್ಲೆ ಶ್ರೀಕಾಂತ ಭಕ್ತನನು ಕಾಯಲೊಲ್ಲೆ ಪ ತರಳತನದಲಿ ನಾನು ಪಾಪಗಳ ಮಾಡಿದರೆ ಪರಮಾತ್ಮ ಸದ್ಗುರುವೆ ತಿಳಿದು ಮಾಡಿದನೇ ನಿರುತ ಯೌವನದಲ್ಲಿ ಪಾಪಗಳ ಮಾಡಿದರೆ ಅರಿತು ಮಾಡಿದೆನೆಂದು ಬಗೆದೆಯಾ ಹರಿಯೇ 1 ಈಗ ವಾರ್ಧಿಕ್ಯದಲಿ ಪಾಪಮಾಡಿದೆನೆಂದು ನಾಗೇಶಶಯನನೇ ಮುನಿದೆಯಾ ಹರಿಯೇ ಜಾಗುಮಾಡದೆ ನೀನು ಅಜಮಿಳಗೆ ವಲಿದಂತೆ ಬೇಗನೇ ಸಲಹಯ್ಯ ನಾಮಸ್ಮರಿಸುವೆನೊ2 ಹರಿಸೇವೆಯನ್ನು ನಾ ಭಕ್ತಿಯಲಿ ಗೈವೇ ಹರುಷದಿಂ ಹರಿಯೆಂನ ಪಾಪಗಳ ಕ್ಷಮಿಸುತ್ತ ಸಿರಿ ಚನ್ನಕೇಶವನೆ ಮುನಿಯದಿರು ತಂದೆ 3
--------------
ಕರ್ಕಿ ಕೇಶವದಾಸ
ಸರೋಜದಳ ನೇತ್ರೀ | ಅಜಸತಿ ಗಾಯತ್ರೀಪದ | ಸರೋರುಹವ ನಮಿಪೆ | ಸುರ ಜೇಷ್ಠನ ಪ್ರಿಯೆಮುರಾರಿ ಪದ ತೋರು || ಕರುಣವ ನೀ ಬೀರು ಪ ನಿತ್ಯ ಹರಿಯ ಪದಚಿತ್ತದೊಳಗೆ ಇರಸು | ಗುಣವ ಪೊಗಳಿಸು ಅ.ಪ. ವೀಣೆ ಹಸ್ತಳೆ | ಗಾನಲೋಲ ಪ-ದಾನುರಾಗದಿ | ಗಾನ ಗೈವೆ ವೇ |ದಾನುಸಾರ ಬ್ರ | ಹ್ಮಾಣಿ ತುತಿಸುತವೇಣುಗೋಪನ | ಪ್ರೀಣ ನವ ಗೈವೇ 1 ಹಂಸವಾಹಳೆ ಹಂಸ ಹರಿಪದ ಪಾಂಸು ಶಿರದಿ ಅ | ಸಂಶಯದಿ ಧೃತ ಅಂಶ ಅವತಾ ರಾಂಶದೊಳು ನಿ-ಸ್ಸಂಶಯಳೆ ಪzಸÀ | ಪಾಂಸು ಯಾಚಿಪೆ 2 ನಾಲಿಗಿಂದಲಿ | ಬಾಲ ಗೋಪನ |ಶೀಲ ಗುಣಕ್ರಿಯ ಜಾಲ ನುಡಿಸು ವಿಶಾಲಫಣೆ ಕಮ | ಲಾಸನನ ಪ್ರಿಯೆ |ಪೇಳಲಳವೆ ವಿ | ಶಾಲ ತವಗುಣ3 ಪಾದ ನಂಬಿದೆ 4 ಕಾವ ಕೊಲ್ವನು | ಮಾವಿನೋದಿಯಭಾವ ಬಲ್ಲಳೆ | ದೇವ ಮಾತೆಯ |ಭಾವದೊಳು ಗುರು | ಗೋವಿಂದ ವಿಠಲನಪಾವನದ ಪದ | ಭಾವವನು ಕೊಡು 5
--------------
ಗುರುಗೋವಿಂದವಿಠಲರು