ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿ ಬೇಗನೇ ಪರಮಾತ್ಮ ನೀನೈ ಪರತತ್ವನಾ ತ್ವರಿತದಲಿ ತಿಳಿಯೊ ಪ ಮೂರು ತಾಣಗಳ ಮೀರಿ ಗೋಚರಿಪ ತೋರುತಿಹ ಈ ದೇಹಾದಿಗಳಿಗೆ ಬೇರೆಯಾಗಿಪುದೆ ಪರಮಪದವು ಧೀರ ನೀನರಿಯೊ ಅದೆ ನಾನು ಎಂದು 1 ಕೋಶಪಂಚಕವ ಲೇಸಾಗಿ ಕಳೆದು ವಾಸನೆಯ ಪಾಶವನೆ ಹರಿದೊಗೆದು ಕ್ಲೇಶ ಪಡುವದನು ತ್ಯಜಿಸಿ ಮುದದಿ ನಾಶರಹಿತಾದ ಪದವು ತಾನೆಂದು 2 ಜನನಮರಣಗಳಿಗಾಚೆಗಿರುವಂಥ ಮನವಾಣಿಗಳಿಗೆ ನಿಲುಕದಿರುವಂಥ ಘನಪದವು ಇದುವೆ ಪರಮಾತ್ಮನೈ ಅನುನಯದಿ ಪೇಳ್ವ ಗುರುಶಂಕರಾರ್ಯ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಎಲೆ ಮಾನವಾ ಅಭಿಮಾನವಾ ಅವಿವೇಕವಾ ದೂಡೈ ಸುಖದುಃಖದಾ ಘನ ಮೂಲವಾ ಸುವಿವೇಕದೀ ನೋಡೈ ಪ ಪರರಿಂದ ಈ ಪರಿತಾಪವು ಬರುತಿರ್ಪುದೆಂಬುದಿದೋ ಬರಿ ಬ್ರಾಂತಿಯೋ ನಿಜವಲ್ಲವೋ ಅಲೋಚಿಸಿ ನೋಡೈ 1 ಗ್ರಹಕಾಲಗಳ್ ಘನ ಕರ್ಮಗಳ್ ಇವು ಕಾರಣಲ್ಲವಿದೋ ಮನವೇ ಇದೇ ಪರಿತಾಪದ ಘನಮೂಲವೈ ನೋಡೋ 2 ಸಟೆಯಾಗಿಹ ಸಂಸಾರವ ದಿಟವೆಂದು ತೋರ್ಪುದಿದೋ ಮನದಿಂದಲೇ ಇದು ಕಾಂಬುದೋ ಮನವಿಲ್ಲದಾಗಿಲ್ಲ 3 ಪರಮಾತ್ಮನ ಪರಿಪೂರ್ಣನ ಮರೆಮಾಡುತೀಮನವು ಹರಿದಾಡುತಾ ಸುಖದುಃಖವಾ ಗುಣಿಸುತ್ತ ತಾನಿಹುದೋ 4 ವನದಾಟಕೇ ಮರುಳಾಗದೇ ಗುರುಶಂಕರಾರ್ಯನಲಿ ಮನ ನಿಲ್ಲಿಸಿ ಈ ಮೋಹವಾ ಬಿಡು ಬೇಗ ನೀನೀಗ 5
--------------
ಶಂಕರಭಟ್ಟ ಅಗ್ನಿಹೋತ್ರಿ
ಕೇಳೈ ಈಗಾ ಈ ಕರ್ಮಯೋಗಾ ಕಳೆವುದು ಸಂಸಾರರೋಗಾ ಬಂಧಕ್ಕೆ ಈ ಕರ್ಮವೇ ಕಾರಣಾಗಿ ಬಂದಿತು ಜನುಮಾ ಅನಿವಾರ್ಯವಾಗಿ ಈ ಬಂಧವ ನೀಗಿ ಚಿರಶಾಂತಿಗಾಗಿ ಈ ಯೋಗ ಬೆರಸಿ ಇದೆ ಕರ್ಮವೆಸಗಿ ಅರ್ವಿನಿ ಫಲವಾ ಪರಮಾತ್ಮಭಾವಾ ತಳೆಯುವದೆ ಈ ಕರ್ಮಯೋಗಾ ಕಳೆವುದು 1 ವಿಷಯಾಭಿಲಾಷಾ ನೀಗಿಸಿ ಆಶಾ ಹರಿಸುವದಿದುವೇ ನಿಷ್ಕಾಮ ಕರ್ಮ ಮನಸಿನ ಮಲಿನಾ ಕಳೆದೆಲ್ಲ ಹಸನಾ ಮಾಳ್ಪುದು ಇಹುವೇ ಜಿಜ್ಞಾಸೆಯೆನ್ನಾ ಹುಟ್ಟಿಸಿ ಜ್ಞಾನಾ ಕೇಳ್ವ ಭಾನಾ ಉದಿಸುವುದು ವೈರಾಗ್ಯಭಾಗ್ಯ ಕಳೆವುದು 2 ವಿಷಧಾತುಗಳ ತಂದು ಪುಟಹಾಕಿಕೊಂಡು ಹೆಸರಾದ ಸಿದ್ಧೌಷಧಿ ಮಾಡಿಕೊಂಡು ಉಪಯೋಗ ಕಂಡು ಜಡದೇಹಗಳ ಬೇನೆ ನೀಗಿಪತೆರದಿ ಈ ಕರ್ಮವಿಷವಾ ಪುಟಹಾಕುತಿಹುದೀ ನಿಷ್ಕಾಮತನದೀ ಈ ಸೂಕ್ಷ್ಮದೇಹಾ ರೋಗ ಕಳೆವಾ ಘನವಾದ ಪರಮೋಪಾಯಾ ಇದೇ ಪೇಳ್ದೆ ಗುರುಶಂಕರಾರ್ಯ3
--------------
ಶಂಕರಭಟ್ಟ ಅಗ್ನಿಹೋತ್ರಿ