ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾಸರಿವರ ನೋಡಿರೊ | ಗುರು ವಿಜಯ |ದಾಸರಿವರ ಪಾಡಿರೋ ಪ ವ್ಯಾಸರಾಜ್ಞೆಯಲಿಂದ | ವ್ಯಾಸ ಕಾಶಿಗೆ ಪೋಗಿ |ಶ್ರೀಶಾನುಗ್ರಹದಲಿ | ಭಾಸಿಸೀ ಮೆರೆದಂಥ ಅ.ಪ. ಎರಡನೆ ಯುಗದೊಳಗೆ | ಸುರಲೀಲ | ವರಕಪಿ ಎಂದೆನೆಸಿ |ಶಿರಿ ರಾಮಚಂದ್ರನ್ನ | ಚರಣ ಸೇವಕರಾಗಿಸುರ ವಿರೋಧಿಗಳ ಬಹಳ ಸಂಹರಿಸಿದ 1 ಯಾದವರಲಿ ಜನಿಸಿ | ನಿಕಂಪಾಖ್ಯ | ಶ್ರೀದಕೃಷ್ಣನ ಭಜಿಸಿ |ಮಾಧವ ಗೆದುರಾಂತ | ದೈತ್ಯರ ಸದೆಬಡಿದುಯಾದವೇಶನ ಪದ | ಕರ್ಪಿಸಿ ಮೆರೆದಂಥ 2 ಪುರಂದರ ದಾಸರ | ವರ ಗೃಹದಲಿ ಇದ್ದುಹರಿಚರಿತೆ ಶ್ರವಣದಿ | ವಿಪ್ರನಾಗ್ಯುದೀಸಿದ 3 ಮಧ್ವಪತಿಯ ನಾಮದಿ | ಭೃಗ್ವಂಶದಿ | ಮುದ್ದು ಮಗನೆನಿಸಿಮಧ್ವೇಶ ಹರಿಪಾದ | ಶ್ರದ್ಧೆಯಿಂದಲಿ ಭಜಿಸಿಮಧ್ವರಾಯರ ಮತ | ತುತಿಸಿ ಮೋದಿಸಿದಂಥ 4 ಚೀಕನಪರಿ ಕ್ಷೇತ್ರದೀ | ದಾಸಪ್ಪನು | ಆ ಕೂಸಮ್ಮನ ಉದರದಿಬೇಕಾಗಿ ಜನಿಸುತ್ತ | ಪ್ರಾಕು ಪ್ರಾರಬ್ದವನೇಕ ಬಗೆಯಲಿ ಉಂಡ | ಮಾಕಳತ್ರನ ಕಂಡ 5 ಪುರಂದರ | ದಾಸರೂಪಿಯಲಿಂದ |ಸೂಸಿ ಶಾಸ್ತ್ರವ ಮಧ್ವ | ಭಾಷ್ಯಾನು ಸಾರದಿ |ಭಾಷೆ ಕನ್ನಡದಲ್ಲಿ | ಮೀಸಲೆನಿಸಿ ಪೇಳ್ದ 6 ಧ್ಯಾನೋಪಾಸನೆ ಕರ್ಮವ | ಯೋಗ್ಯರಿಗೆ | ಗಾನಗೈದಿಹ ಸುಜ್ಞಾನೀ | ಮಾನ್ಯ ಮಾನದ ದುಷ್ಟ | ಗಾನಕೆ ಮನ ಕೊಡದೆಮೌನಿಯಾಗುವ ಮಾರ್ಗ | ದಾನವ ಮಾಡೀದ 7 ಸ್ವಪ್ನದಲ್ಲೆನಗವರೂ | ದರ್ಶನದಿ | ಕೃಪ್ಪೆಯಲನುಗ್ರಹಿಸಿ |ಅಪ್ಪಾರ ಮಹಿಮರು | ತಪ್ಪದೆ ತ್ರಯ ಬಾರಿಒಪ್ಪಿ ತೀರ್ಥವನಿತ್ತು ಕಳುಹಿದ ಮಹಾಂತ 8 ವತ್ಸರ ಕಾರ್ತೀಕ | ಸಿತ ದಶಮಿ | ಆವಗುರುವಾಸರದಿಭಾವಜ ಪಿತ ಗುರು | ಗೋವಿಂದ ವಿಠಲನಭಾವದಿ ಕಂಡು ಸುಯೋಗದಿ ಪೊರಟಂಥ 9
--------------
ಗುರುಗೋವಿಂದವಿಠಲರು
ಬಂದ ಬಂದಾ ಕದರೂರಿಂದ ನಿಂದಾ ಪ. ಬಂದ ಕದರೂರಿಂದ ಕರಿಗಿರಿ ಎಂದು ಕರೆಸುವ ಪುಣ್ಯಕ್ಷೇತ್ರಕೆ ತಂದೆ ಮುದ್ದುಮೋಹನ್ನ ಗುರುಗಳು ತಂದು ಸ್ಥಾಪಿಸೆ ತಂದೆ ಹನುಮನು ಅ.ಪ. ವ್ಯಾಸತೀರ್ಥರು ಸ್ಥಾಪಿಸಿದ ಶ್ರೀ ದಾಸಕೂಟದಿ ಉದಿಸಿದಂಥಾ ವಾಸುದೇವನ ಭಕ್ತವಂಶದಿ ಲೇಸುಮತಿಯಿಂ ಜನಿಸಿ ಭಕ್ತರ ಆಸೆಗಳ ಪೂರೈಸುತಲಿ ಬಹು ತೋಷದಂಕಿತಗಳಿತ್ತು ನಾಶರಹಿತನ ಭಕ್ತರೆನಿಸಿದ ದಾಸವರ್ಯರ ಮಂದಿರಕೆ ತಾ 1 ಶಾಲಿವಾಹನ ಶಕವು ಸಾವಿರ ಮೇಲೆ ಶತ ಎಂಟರವತ್ತೊಂದು ಕಾಲ ಫಾಲ್ಗುಣ ಕೃಷ್ಣ ಪಂಚಮಿ ಓಲೈಸುವ ಪ್ರಮಾಥಿ ವತ್ಸರ ಶೀಲ ಗುರುವಾಸರದಿ ಬುಧರ ಮೇಳದಲಿ ವೇದೋಕ್ತದಿಂದಲಿ ಶೀಲ ಶ್ರೀ ಕೃಷ್ಣದಾಸತೀರ್ಥರು ಲೀಲೆಯಿಂದ ಪ್ರತಿಷ್ಟಿಸಲು ತಾ 2 ರಾಮದೂತ ಶ್ರೀ ಹನುಮ ಬಂದನು ಭೀಮ ಬಲ ವಿಕ್ರಮನು ಬಂದನು ಶ್ರೀ ಮದಾನಂದತೀರ್ಥ ಬಂದನು ಪ್ರೇಮಭಕ್ತರ ಪೊರೆವ ಬಂದನು ಸ್ವಾಮಿಗೋಪಾಲಕೃಷ್ಣ ವಿಠಲನ ಪ್ರೇಮಭಕ್ತನು ದಾಸ ಭವನಕೆ 3
--------------
ಅಂಬಾಬಾಯಿ
ಶ್ರೀಧರಾ ನೀನೆ ಎನ್ನ ಹೃದಯ ಕಮಲದೊಳಿದ್ದು ಮಾಡಿಸಿದ್ದು ನಾ ಮಾಡಿದೆನೊ ಪ ಇಂದು ಮಾಡುವುದೇನು ಮುಂದೆ ಮಾಡತಕ್ಕದ್ದೇನು ತಂದೆ ಅ.ಪ ಹಿಂದೆ ನಿನ್ನಯ ಜನರ ವಂದಿಸದೆ ಭವ- ಬಂಧನದಿ ನಾ ನೊಂದೆನೋ ಇಂದು ತೀರಿತು ಅದಕೆ ತಕ್ಕಮುಯ್ಯವು ಎನಗೆ ಆ- ನಂದ ವಾಯಿತು ನಿನ್ನ ಕರುಣಾರಸಕೆ ಮಂದಭಾಗ್ಯನಿಗೆ ನೀ ತಂದಂಥ ಬಂಧನವ ಬಂಧಿಸಿ ಎನ್ನಿಂದ ವಂದನೆಯ ಕೊಂಡೆ1 ಮೂರು ದಿನದಲಿ ಹಿಂದೆ ತೋರಿದಂದದಿ ಎನ್ನ ಅ- ಪರಾಧಗಳ ಎಣಿಸಲಿಲ್ಲ ಬಾರಿ ಬಾರಿಗೆ ಗುರುಗಳು ಕಾದಿಹರು ಎಂದೆನ್ನ ಎಚ್ಚರಿಸಿದುದಕೆ ನಾ ಮೈಮರೆದೆನೊ ಮಾರಮಣನೇ ನೀ ಗುರುವಾಸರದಿ ತ್ವರಿತದೊಳು ಹರಿ ಗುರು ಪೂಜೆಗೆ ಕಾತರವನಿತ್ತೆ 2 ಸರ್ವಸೇವೆಯ ನೀ ಕರುಣದಿ ಸ್ವೀಕರಿಸು ಶರಣರಕ್ಷಕನಹುದೊ ನೀನು ಉರಗಗಿರಿವಾಸ ಶ್ರೀ ವೇಂಕಟೇಶನೆ ಎನ್ನ ಸರ್ವಾಪರಾಧಗಳ ಕ್ಷಮಿಸೋ ಅರಿತವನು ನಾನಲ್ಲವೆಂದೆನ್ನ ಕೈಬಿಡದೆ ದುರಿತ ಪರಿಹರಿಸಿ ಕಾಯೋ ಶೌರೆ3
--------------
ಉರಗಾದ್ರಿವಾಸವಿಠಲದಾಸರು