ಒಟ್ಟು 3 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಳಂ ಶ್ರೀ ಗುರುವರ್ಯರಿಗೆ | ಮಂಗಳಾಂಗರಿಗೆ ಮಂಗಳಂ ಶ್ರೀ ಗುರುವರ್ಯರಿಗೆ ಪ. ರಂಗನಾಥನ ಪದ ಸರೋಜಕೆ ಭೃಂಗರೆನಿಸಿ ಮೆರೆಯುವರಿಗೆ ಅ.ಪ. ತಂದೆ ಮುದ್ದುಮೋಹನರೆಂ ತೆಂದು ಮೆರೆಯುತ ಮಂದಮತಿಯ ಬಿಡಿಸಿ ಎನ್ನ ತಂದೆಯಂತೆ ಪೊರೆಯುವರಿಗೆ 1 ನಾಗಶಯನ ಹರಿಯ ಭಜಿಪ ಭೋಗಿವರರಿಗೆ ಭಾಗವತರ ಸಂಘದೊಳಗೆ ಯೋಗಿಯಾಗಿ ಚರಿಸುವರಿಗೆ 2 ಪರಮಪ್ರಿಯರಾಗಿ ಹರಿಗೆ ಪರಮಪ್ರಿಯರೆಂದು ಕರೆಸಿಕೊಳುತ ನರಹರಿಯ ಚರಣ ಮನದಿ ಸ್ಮರಿಸುವರಿಗೆ 3 ಕರ್ಮಗಳನೆ ಕಡಿದು ಜ್ಞಾನ ಧರ್ಮಮಾರ್ಗದಿ ಧರ್ಮತತ್ವ ಬೋಧಿಸಿ ಅ- ಧರ್ಮಗಳನೆ ಬಿಡಿಸುವರಿಗೆ4 ಗೋಪಾಲಕೃಷ್ಣವಿಠ್ಠಲನ ರೂಪ ತೋರುತ ಪಾಪಗಳನೆ ತರಿದು ಭವ ಕೂಪದಿಂದ ಪೊರೆಯುವರಿಗೆ 5
--------------
ಅಂಬಾಬಾಯಿ
ಶ್ರೀ ಗುರುವರ್ಯರಿಗೆ ಜಯಮಂಗಳ ನಿತ್ಯ ಭೋಗಿಶಯನಪ್ರಿಯಗೆ ಶುಭಮಂಗಳ ಪ. ಆನಂದರತ್ನರು ಜ್ಞಾನಪ್ರಕಾಶ ಎಂದು ನಾನಾ ವಿಧದಿ ಬಿರುದು ಪೊತ್ತವಗೆ ಶ್ರೀನಿವಾಸನನು ಧ್ಯಾನವ ಮಾಳ್ಪಂಥ ಜ್ಞಾನಪೂರ್ಣರಾದ ಗುರುಗಳಿಗೆ 1 ಪರಮಪ್ರಿಯರು ಪರಿಮಳರೆಂದೆನಿಸುತ ಪರಿ ನಾಮವ ಧರಿಸಿಹಗೆ ನರಸಿಂಹನನು ಹೃತ್ಸರಸಿಜದಲಿ ಕಂಡು ಹರುಷವ ಪಡುವಂಥ ಗುರುಗಳಿಗೆ 2 ತಂದೆ ಮುದ್ದುಮೋಹನವಿಠ್ಠಲನೆಂಬಂಕಿತ ಚಂದದಿಂದ ಗುರುಗಳಿಂ ಪಡೆದವಗೆ ಬಂದ ಭಕ್ತರಿಗೆಲ್ಲ ಅಂಕಿತಕೊಟ್ಟು ಭವ ಬಂಧನವ ಬಿಡಿಸುವ ಗುರುಗಳಿಗೆ 3 ಚಂದ್ರನ ತೆರದಿ ಪರಮಾರ್ಥ ಚಂದ್ರೋದಯವ ನಿರ್ಮಿಸುವರಿಗೆ ಚಂದದಿಂದ ಪರತತ್ವ ಪೇಳುವ ಸುಂದರ ಮೂರುತಿ ಗುರುಗಳಿಗೆ 4 ಅಪಾರ ಕರುಣಾಜಲಧಿ ಎಂದೆನಿಪರಿಗೆ ಶ್ರೀಪತಿ ಪಾದವ ತೋರ್ವಂಗೆ ಗೋಪಾಲಕೃಷ್ಣವಿಠ್ಠಲನ ಧ್ಯಾನವನಿತ್ತುಕಾಪಾಡುವಂಥ ಶ್ರೀ ಗುರುಗಳಿಗೆ 5
--------------
ಅಂಬಾಬಾಯಿ