ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಪವ ಮಾಡಿದರೇನು ತಪವ ಮಾಡಿದರೇನುವಿಪರೀತ ಕಪಟಗುಣ ಕಲುಷವಿದ್ದವರು ಪ ಆದಿಗುರುವರಿಯದೆ ಅತ್ತಲಿತ್ತಲು ತೊಳಲಿವೇದಶಾಸ್ತ್ರವನೋದಿ ಬಾಯಾರಲುಹಾದಿಯನು ಕಾಣದಂತಿರುತಿರ್ದು ಹಲವೆಂಟುವಾದ ತರ್ಕದೊಳಿದ್ದ ಭೇದವಾದಿಗಳು 1 ತುಂಬಿ ಬತ್ತಿದಂತೆಮಡದಿ ಮಕ್ಕಳಿಗೆಂದು ಒಡವೆ ವಸ್ತ್ರವ ಗಳಿಸೆಹಿಡಿಯಲಾ ಯಮನವರ ಕಟ್ಟಿಗೊಳಗಾಗಿ 2 ಚಳಿಮಳೆಯ ಅತಿ ಕಾರುಗತ್ತಲೆಯೊಳಗೆ ಎದ್ದುಹೊಳೆಯೊಳಗೆ ಮುಳುಗಿ ಜಪ ತಪವ ಮಾಡಿಕಳವಳಿಸಿ ನೂರೆಂಟು ಹಲುಬಿ ಬಳಲಲು ಬೇಡನಳಿನಾಕ್ಷ ಆದಿಕೇಶವನ ನೆನೆ ಮನವೆ 3
--------------
ಕನಕದಾಸ
ನಮೋ ನಮೋ ಸುಶೀಲೇಂದ್ರ | ಗುರುವರಿಯ ವೈಷ್ಣವ ಸುಮತವಾರಿಧಿ ಚಂದ್ರ | ಸಕುವಿ ಸಂಸ್ತುತ | ಅಮಿತ ಸದ್ಗುಣ ಸಾಂದ್ರ || ಸುಮತಾಹಿವೀಂದ್ರ ಪ ನಮಿಪ ಜನರಿಗೆ ಅಮರ ಭೂರುಹ ಸಮಸುಖಪ್ರದ ವಿಮಲ ಚರಿತನೆ ಯಮಿವರ್ಯ ಸುವೃತೀಂದ್ರ ಮಾನಸ ಕಮಲರವಿ ಮಹಿ ಸುಮನಸಾಗ್ರಣಿ ಅ.ಪ ಅಸಮ ಮಹಿಮೋದರ | ತವಸುಪ್ರಭಾವವ ಸುಜನ ವಂದಿತ ಸ್ವಶನ ಸುಮತೋದ್ಧಾರ || ದಯ ಪಾರವಾರ || ವಸುಧೆಯೊಳು ಮೊರೆಹೊಕ್ಕ ಜನರಿಗೆ ಕುಶಲಪ್ರದ ನೀನೆಂದು ಬುಧ ಜನ ಉಸುರುವದು ನಾ ಕೇಳಿ ನಿನ್ನ ಪದ ಬಿಸಜ ನಂಬಿದೆ ಪೋಷಿಸನುದಿನ 1 ದೀನಜನ ಸುಖದಾತ | ಸುಕೃತೀಂದ್ರ ಕೋಮಲ ಬಾಣಲೋಕ ವಿಖ್ಯಾತÀ || ದ್ವಿಜಕುಲಕೆ ನಾಥ || ಕ್ಷೋಣಿಯೊಳು ನೀ ಒಲಿದ ಮಾತ್ರದಿ ಮೌನಿವರ್ಯ ಶ್ರೀ ರಾಘವೇಂದ್ರರು ಸಾನುರಾಗದಿ ಸಲಹುವರು ಪವ ಮಾನ ಶಾಸ್ತ್ರ ಪ್ರವೀಣ ಜಾಣ 2 ಪಿಂಗಲೇಂದ್ರ ಪ್ರಕಾಶ | ಸುಪವಿತ್ರ ವರದತ ರಂಗಿಣಿ ತಟವಾಸ | ಸದ್ಧರ್ಮ ಸ್ಥಾಪಕ ಮಂಗಳಾಂಗ ಯತೀಶ | ಪಾಪೌಘನಾಶ || ತುಂಗವಿಕ್ರಮ ಶಾಮಸುಂದರನಂಘ್ರಿ ಕಮಲಕೆ ಭೃಂಗ ಭವಗಜಸಿಂಗ ಕರುಣಾ ಪಾಂಗದೀಕ್ಷಿಸೆ ಇಂಗಿತಜ್ಞರ ಸಂಗಪಾಲಿಸು 3
--------------
ಶಾಮಸುಂದರ ವಿಠಲ
ಭೋ ದಾತಾ ಬಾರೋಗುರುವರಿಯಾ || ನಂಬಿದೆ ನಾನಿನ್ನ ಪಾದ ಭೂನಾಥ ದಾಸಾಗ್ರಣಿ ಪ ದೀನ ಜನರ ಧೇನು ಚಿಂತಾಮಣಿ ಮಾನಿತ ನಿನ್ನ ಅನುದಿನ ಪಾಲಿಸು ಘನ ಹರಿನಾಮವ | ಸ್ತಂಭ ನಿವಾಸನೆ ದಯತೋರೋ 1 ಪೋತನೊಳೀಪರಿ ಯಾತಕೆ ನಿರ್ದಯ ತಾತನೆ ನಿನಗೆ ರೀತಿಯ ನೋಡೈ | ಸುತನಪರಾಧವ ಪಾತಕ ಬಿಡಿಸೊ ಮತಿ ಬೀರೋ 2 ಕರುಣಿಸು ಶಾಮಸುಂದರ ವಿಠಲ | ವರಿಚರಿ ತಾಮೃತ ಸವಿಯನು ಎನಗೆ | ಸೂರಿವರೇಣ್ಯನೆ ಮೂಕÀಗೊಲಿದಂತ | ತ್ವರಿತದಿ ನೋಡೈ ತಡವ್ಯಾತಕೆ 3
--------------
ಶಾಮಸುಂದರ ವಿಠಲ
ಹನುಮ-ಭೀಮ-ಮಧ್ವ ಸ್ತೋತ್ರ ಅಪಮೃತ್ಯು ಪರಿಹರಿಸೊ ಅನಿಲದೇವಾ ಕೃಪಣ ವತ್ಸಲನೆ ಕಾಯ್ವರ ಕಾಣೆ ನಿನ್ನುಳಿದು ಪ ನಿನಗಿನ್ನು ಸಮರಾದ ಅನಿಮಿತ್ತ ಬಂಧುಗಳು ಎನಗಿಲ್ಲವಾವಾವ ಜನ್ಮದಲ್ಲಿ ಅನುದಿನ ನೀನೆಮ್ಮನುದಾಸೀನ ಮಾಡುವುದು ಅನುಚಿತವು ಜಗಕೆ ಸಜ್ಜನ ಶಿಖಾಮಣಿಯೆ 1 ಕರಣಮಾನಿಗಳು ನಿನ್ನ ಕಿಂಕರರು ಮೂಲೋಕ ದೊರೆಯು ನಿನ್ನೊಳಗಿಪ್ಪ ಸರ್ವಕಾಲ ಪರಿಸರನೆ ಈ ಭಾಗ್ಯ ದೊರೆತನಕೆ ಸರಿಯುಂಟೆ ಗುರುವರಿಯ ನೀ ದಯಾಕರನೆಂದು ಮೊರೆ ಹೊಕ್ಕೆ 2 ಭವರೋಗ ಮೋಚಕನೆ ಪವಮಾನರಾಯಾ ನಿ ನ್ನವರನು ನಾನು ಮಾಧವಪ್ರಿಯನೇ ಜವನ ಬಾಧೆಯ ಬಿಡಿಸು ಅವನಿಯೊಳು ಸುಜನರಿಗೆ ದಿವಿಜಗಣ ಮಧ್ಯದಲಿ ಪ್ರವರ ನೀನಹುದಯ್ಯ 3 ಜ್ಞಾನಾಯು ರೂಪಕನು ನೀನಹುದೋ ವಾಣಿ ಪಂ ಚಾನನಾದ್ಯಮರರಿಗೆ ಪ್ರಾಣದೇವಾ ದೀನವತ್ಸಲನೆಂದು ನಿನ್ನ ಮೊರೆ ಹೊಕ್ಕೆ ದಾನವಾರಣ್ಯ ಕೃಶಾನು ಸರ್ವದ ಎಮ್ಮ 4 ಸಾಧನ ಶರೀರವಿದು ನೀ ದಯದಿ ಕೊಟ್ಟದ್ದು ಸಾಧಾರಣವು ಅಲ್ಲ ಸಾಧುಪ್ರಿಯಾ ವೇದವದೋದಿತ ಜಗನ್ನಾಥ ವಿಠಲನ ಮೋದ ಕೊಡು ಸತತ5
--------------
ಜಗನ್ನಾಥದಾಸರು