ಒಟ್ಟು 7 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿಂತೆಯಾತಕೆ ಮನವೆ ಗುರುಗಳ ಪಾದ ಚಿಂತನೆಯನು ಮಾಡದೆಪ ಸಂತತ ಬಿಡದಲೆ ಚಿಂತನೆ ಮಾಳ್ಪರ ಅಂತರಂಗವ ತಿಳಿವರು ಗುರುವರರು ಅ.ಪ ಉದಯ ಕಾಲದಲಿವರ ಧ್ಯಾನವ ಮಾಡೆ ಮದಗರ್ವ ಪರಿಹರವು ಮುದದಿಂದ ಮೂರು ವೇಳೆಗಳಲ್ಲಿ ಸ್ಮರಿಸಲು ಹೃದಯ ತಾಪವ ಕಳೆವರು ಗುರುವರರು1 ದೇಶದೇಶವ ತಿರುಗಿ ತನುಮನಗಳ ಬೇಸರಗೊಳಿಸಲೇಕೆ ಪೋಷಿಪ ಗುರುಗಳಪಾದ ನಂಬಿದ ಮೇಲೆ ವಾಸುದೇವನೆ ನಲಿವ ಮುಂದೊಲಿವ 2 ವೇದವಾದಿಗಳೆಲ್ಲರೂ ವಾದವ ಮಾಡಿ ಮಾಧವನನು ಕಾಣಿರೊ ಮೋದತೀರ್ಥರ ಮತಬೋಧನೆ ಮಾಡುವ ಸಾಧು ಗುರುಗಳನೆ ಕೂಡು ಸಂಶಯಬಿಡು3 ಚಿತ್ತದಿ ಸ್ಮರಿಸುವರು ಹರಿ ಮಹಿಮೆಯ ಭಕ್ತಿಲಿ ನಲಿಯುವರು ಚಿತ್ರಗಾಯನ ನೃತ್ಯಗಾನಗಳಿಂ ಪುರು- ಷೋತ್ತಮನನೊಲಿಸುವರು ಹರುಷಿತರು4 ಕತ್ತಲೆ ಮನೆಗಳಲ್ಲಿ ಅಡಗಿಹ ವಸ್ತು ಲಕ್ಷಪರಿಮಿತಿ ಇದ್ದರು ಹಸ್ತದಿ ಜ್ಯೋತಿಯನೆತ್ತಿ ತೋರುವ ಪರಿ ಭಕ್ತರ ಸಲಹುವರು ಗುರುವರರು 5 ಸರಸೀಜಾಕ್ಷನ ನಾಮವು ಹಗಲಿರುಳು ಬಿಡದೆ ಧ್ಯಾನಿಸುತಿರ್ಪರು ಸಿರಿನಾರಾಯಣನನ್ನು ಸ್ಮರಿಸುತ್ತ ಮನದೊಳು ಪರಮಸಂಭ್ರಮ ಪಡುವರು ಗುರುವರರು 6 ಕರುಣದಿ ಸಲಹುವರು ಶಿಷ್ಯರ ಮನ ವರಿತು ವರಗಳನೀವರು ವರ ಕಮಲನಾಭವಿಠ್ಠಲನ ಧ್ಯಾನಿಪಉರಗಾದ್ರಿವಾಸ ವಿಠ್ಠಲದಾಸರನೆ ನಂಬು7
--------------
ನಿಡಗುರುಕಿ ಜೀವೂಬಾಯಿ
ವೃಂದಾವನ ಪ್ರವೇಶಿಸಿದಂದವ ಚಂದದಿ ಪೇಳುವೆ ಪಾಲಿಪುದು ಪ ಇಂದಿರೆಯರಸನ ಪ್ರೇರಣೆಯಿಂದ ಯತಿ ವೃಂದ ತಿಲಕ ರಾಘವೇಂದ್ರರಾನಂದದಿ ಅ.ಪ ಒಂದು ದಿನವು ಶ್ರೀ ರಾಯರು ಶಿಷ್ಯರ ವೃಂದಕೆ ಪಾಠವ ಹೇಳುತಿರೆ ಅಂದು ವಿಮಾನದಿ ಕೃಷ್ಣದ್ವೈಪಾಯನ ಪ ರಂಧಾಮಕೈದಲು ನೋಡಿ ಕೈ ಮುಗಿದು 1 ಎಷ್ಟು ದಿನವು ನಾವಿಲ್ಲಿರಬೇಕೆಂದು ಶಿಷ್ಟ ಗುರುವರರು ಕೇಳಿದೊಡೆ ಕೃಷ್ಣದ್ವೈಪಾಯನರೆರಡು ಬೆಳಗುಳ ಗಟ್ಟಿಯಾಗಿ ಬೀಸಿ ತೋರಿಸಿ ಪೊರಟರು 2 ನೆರೆದ ಶಿಷ್ಯರದರರ್ಥವೇನೆನುತ ಗುರುಗಳನ್ನು ತಾವ್ ಕೇಳಿದೊಡೆ ಎರೆಡು ವರ್ಷ ತಿಂಗಳು ದಿನವೆರಡೆರಡು ಇರುವುದು ಧರೆಯೊಳಗೆಂದರು ರಾಯರು 3 ಆದವಾನಿಗೆ ಗುರು ಸಂಚಾರ ಪೋಗಿರೆ ಆ ದಿವಾನ ವೆಂಕಣ್ಣ ಬಲು ಆದರಿಸಿದ ಬಳಿ ತಾ ನವಾಬನಿಂದ ಮೋದದಿ ಕೊಡಿಸಿದ ಮಂಚಾಲೆಯನು 4 ಹಿಂದೆ ಪ್ರಹ್ಲಾದರು ಯಾಗವ ರಚಿಸಿದ ಸುಂದರ ಕ್ಷೇತ್ರವಿದೆಂಬುದನು ತಂದು ಮನಕೆ ಗುರುರಾಯರೀ ಕ್ಷೇತ್ರವ ನಂದು ಪಡೆದು ತಾವಿಲ್ಲಿಯೇ ನಿಂತರು 5 ಉತ್ತಮ ನೀಲವರ್ಣದ ಶಿಲೆಯಪಳಿರಿಸಿ ಕೆತ್ತಿಸಿ ವೃಂದಾವನತರಿಸಿ ಕ್ಷೇತ್ರರಕ್ಷಣೆಯಗಷ್ಟ ದಿಕ್ಕುಗಳಲಿ ದೇವ ಮೂರ್ತಿಗಳನು ಸ್ಥಾಪಿಸಿ ನಿಲಿಸಿದರು 6 ವೃಂದಾವನದಲಿ ಸ್ಥಾಪಿಸಲೇಳ್ನೂರು ಚಂದದ ಸಾಲಿಗಾಮಗಳ ತಂದಿಟ್ಟರೆ ಸಿದ್ಧತೆಗಳು ಸಕಲವು ಕುಂದಿಲ್ಲದಂದೆ ನಡೆದಿರಲಾಗಲೆ 7 ಮುಂದಕೆ ತಮ್ಮ ಸಂಸ್ಥಾನವ ವಹಿಸಿ ಯೋ ಗೀಂದ್ರರೆಂಬ ಪ್ರಿಯ ಶಿಷ್ಯರಿಗೆ ಸಂದಿಪ ವಿರಹದಿ ನೊಂದಿದ ಶಿಷ್ಯರ ವೃಂದವ ಬಲು ಸಂತೈಸಿದರಾಗಲೇ8 ನಲವತ್ತೇಳು ಸಂವತ್ಸರ ನಾಲ್ಕು ತಿಂ ಗಳು ಇಪ್ಪತ್ತೊಂಭತ್ತು ದಿನಕಾಲ ನಲವಿನಿಂದ ವೇದಾಂತ ಸಾಮ್ರಾಜ್ಯವ ಸಲಹಿ ಸುಕೀರ್ತಿಯ ಗಳಿಸಿದ ಬಳಿಕ 9 ಸಾವಿರದೈನೂರು ತೊಂಭತ್ಮೂರನೆ ಕ್ರತು ಸಂವತ್ಸರದ ಶ್ರಾವಣ ಕೃಷ್ಣ ದ್ವಿತೀಯದ ಗುರುವಾರ ವಾಸರ ಮುಹೂರ್ತದಿ ಗುರುವರ 10 ಹಸ್ತದಿ ಜಪಮಾಲೆ ಪಿಡಿದು ಯೋಗೀಂದ್ರರ ಹಸ್ತಲಾಘವವ ಸ್ವೀಕರಿಸಿ ಸ್ವಸ್ತಿವಾಚನಗಳ್ ವಿಪ್ರರು ಪೇಳುತಿರೆ ಅರ್ಥಿಯಲಿ ವೃಂದಾವನವ ಪ್ರವೇಶಿಸಿ 11 ಪದ್ಮಾಸನದಲಿ ಮಂಡಿಸಿ ಎದುರಲಿ ಮುದ್ದುಪ್ರಾಣೇಶನ ನೋಡುತಲಿ ಪದ್ಮನಾಭನ ಧ್ಯಾನದೊಳಿರೆ ಜಪಸರ ಬಿದ್ದು ಬಿಡಲು ಮುಚ್ಚಳಿಕೆಯನಿಡಲು 12 ನೆರೆದಿಹ ವಿಪ್ರರು ಜಯ ಜಯವೆನ್ನುತ ಪರಿಪರಿ ರಾಯರ ಪೊಗಳಿದರು ಕರಿಗಿರೀಶನ ಕರುಣ ಪಡೆದ ನಮ್ಮ ಗುರುಸಾರ್ವಭೌಮನ ಸರಿಯಾರಿಹರು 13
--------------
ವರಾವಾಣಿರಾಮರಾಯದಾಸರು
ಶ್ರೀಸತ್ಯವ್ರತರು ಶಿರಿ ಸತ್ಯವ್ರತಸುರ ತರುವೆ ನಿಮ್ಮಯಪಾದವರಶತ ಪತ್ರಕ್ಕೆಭಿನಮಿಪೇ ಪ ಪರಮ ದುರ್ಮತದ್ವಾಂತ ಭಾಸ್ಕರವರಸುಜ್ಞಾನಾಕಾಂಕ್ಷಿಯಾಗಿಹೆನಿರತ ಶ್ರೀ ಮದಾನಂದ ತೀರ್ಥರವರಸು ಭಾಷ್ಯಾಮೃತವ ನುಣಿಸೋ ಅ.ಪ. ಪೊಗಳಲೆನ್ನಳವೆ ನಿಮ್ಮಗಣಿತ ಮಹಿಮೆಯಜನದಿ ವಿಖ್ಯಾತರೆ ಗುರುವೇ |ಸುಗುಣಿತವ ಭಕ್ತರ್ಗೆ ಕಾಡುವವಿಗಡ ಅಪಸ್ಮಾರ ಕುಷ್ಠವುಮಿಗಿಲು ರೋಗಾದಿಗಳ ಕಳೆಯುತಬಗೆ ಬಗೆಂದಲಿ ಸ್ತುತ್ಯರಾಗಿಹ 1 ಸರಿತು ಪ್ರವಹದಿ ಎರಡೆರಡು ಸುತರ್ಗಳಹರಣ ಪೋಗಲು ಖೇದದೀ |ವರದ್ವಿಜನು ರಘುನಾಥಾಖ್ಯ ಭಕ್ತಿಲಿಶಿರಿಸತ್ಯವ್ರತರನು ಸೇವೆಗೈಯ್ಯುಲುಅರಿತು ಸಂತಾನಾಷ್ಟ ಕಂಗಳತ್ವರಿತ ಕರುಣಿಸಿ ಪೊರೆದಗುರುವರ2 ಶಿರಿಸತ್ಯ ಸಮಧರೀ ವೃಂದಾವನದ ಬಳಿಶಿರಿಮನ್ಯಾಯಾಸುಧೆ ಪಠಿಸೇ |ಗುರುವರರು ಸಂತುಷ್ಟ ಪಡುತಲಿಶಿರವತೂಗಲು ಅಂತರಂಗದಿವರಸುವೃಂದಾವನವು ತನ್ನಯಶಿರವ ತೂಗುತ ತೋರಿತಚ್ಛರಿ 3 ವಾದಿಭಹರ್ಯಕ್ಷ ಮೇಧಾವಿ ವಿಭುಧೇಡ್ಯಸುಧಾಪಿವೃತಿ ಕರ್ತಾರ |ಮೇಧಿನಿಯ ಸಂಚರಿಸಿದುರ್ವಾದಿಗಳ ಬಲು ಖಂಡಿಸುತಭೋಧಿಸುತ ತತ್ವಗಳ ಸುಜನಕೆಹಾದಿಮೋಕ್ಷಕೆ ತೋರ್ದ ಯತಿವರ 4 ವೇದವಿದ್ಯಾಖ್ಯ ಸತ್ಕರಜರೆಂದೆನಿಸುತ್ತಮೋದ ತೀರ್ಥರ ಸೇವೆಗೈದೂ |ಹಾದಿ ಚರಿಸುತ ಸಾಂಗ್ಲಿಕ್ಷೇತ್ರದಿಆದರದಿ ವೃಂದಾವನವ ಪೊಕ್ಕುನಾದಗುರು ಗೋವಿಂದ ವಿಠಲನಮೋದ ಧ್ಯಾನಾಸಕ್ತ ಗುರುವರ 5
--------------
ಗುರುಗೋವಿಂದವಿಠಲರು
ಶ್ರೀ ಪ್ರಸನ್ನ ರಘೂತ್ತಮ ತೀರ್ಥರ ಚರಿತ್ರೆ122ಶ್ರೀ ರಘೂತ್ತಮರಂಘ್ರಿ ರಾಜೀವಯುಗ್ಮದಲಿಶಿರಬಾಗಿ ಶರಣಾದೆ ಧನ್ಯನಾದೆಶ್ರೀರಾಮಚಂದ್ರನ ಪೂರ್ಣಾನುಗ್ರಹ ಪೂರ್ಣಪಾತ್ರರು ಎಮ್ಮ ಪಾಲಿಸುವ ಕರುಣಾಳು ಪಶ್ರೀ ಹಂಸ ಲಕ್ಷ್ಮೀಶ ಪರಮಾತ್ಮ ಸರ್ವೇಶಬ್ರಹ್ಮ ಸನಕಾದಿಗಳ ಗುರುಪರಂಪರೆಯಬ್ರಹ್ಮಪದ ಐದುವ ಶ್ರೀ ಆನಂದತೀರ್ಥರನೀರ್ರುಹ ಚರಣಂಗಳಲ್ಲಿ ಶರಣಾದೆ 1ಪಂಕೇರುಹನಾಭ ನರಹರಿಮಾಧವಅಕ್ಷೋಭ್ಯ ಜಯತೀರ್ಥ ವಿದ್ಯಾಧಿರಾಜವಾಗ್ವಜ್ರ ರಾಜೇಂದ್ರ ಕವಿವರ ಕವೀಂದ್ರವಾಗೀಶಶ್ರೀ ರಾಮಚಂದ್ರರಿಗೆ ಶರಣು2ಶ್ರೀ ರಾಮಚಂದ್ರರ ಕರಜರು ಈರ್ವರಿಗೂಎರಡನೇಯವರು ವಿದ್ಯಾನಿಧಿಯಹಸ್ತಅರವಿಂದೋತ್ಪನ್ನ ರಘುನಾಥರಿಗೆ ನಮೋ ಎಂಬೆಸೂರಿವರ ರಘುವರ್ಯರಲ್ಲಿ ಶರಣಾದೆ 3ರಘುವರ್ಯ ಗುರುರಾಜ ಕರಕಮಲ ಸಂಜಾತರಘೂತ್ತಮ ತೀರ್ಥರ ಚರಣಕಾನಮಿಪೆಅಗಣಿತಗುಣಾಂಬುಧಿ ಅಘದೂರ ರಘುಪತಿಯಹೃದ್ಗುಹಾ ಒಳಹೊರಗೆ ಕಾಂಬುವಧೀರ 4ರಾಮಚಂದ್ರಾಚಾರ್ಯ ನಾಮ ಬಾಲಕನುಬ್ರಹ್ಮಚಾರಿಯು ಧೃಢÀವ್ರತನು ಹರಿಭಕ್ತಸುಮನೋಹರಮೂರ್ತೇ ಗುಣಗುಣಾಲಂಕೃತನುಈ ಮಹಾವೇದಾಂತ ಪೀಠಕ್ಕೆ ಅರ್ಹ 5ತಮ್ಮ ಮಠ ಶಿಷ್ಯರಲು ಮಾಧ್ವ ಸಜ್ಜನರಲ್ಲೂಸುಮಹಾಪಂಡಿತರು ಇರುತಿದ್ದರೂನುಈ ಮಹಾ ಪುರುಷ ಬಾಲನೇ ತಕ್ಕವನೆಂದುನೇಮಿಸಿದರು ಪೀಠಕ್ಕೆ ರಘುವರ್ಯ ಗುರುವು 6ರಘೂತ್ತಮತೀರ್ಥ ನಾಮದಿ ತುರೀಯಾಶ್ರಮರಘುವರ್ಯರೀ ರಾಮಚಂದ್ರಗೆ ಇತ್ತುರಾಘವನ ಪೂಜಾದಿ ಸಂಸ್ಥಾನ ಅಧಿಕಾರನಿಗಮಾಂತ ಗುರುಗಳು ನಿಯಮನ ಮಾಡಿದರು 8ವೇದವೇದಾಂತ ಸಚ್ಛಾಸ್ತ್ರ ಪಂಡಿತನುವಿದ್ಯಾರ್ಥಿ ಬಹುಮಂದಿಗೆ ಪಾಠ ಪೇಳುವವಿದ್ವಾಂಸ ಓರ್ವನ್ನ ರಘುವರ್ಯ ತೀರ್ಥರುವಿದ್ಯೆಕಲಿಸಲು ಏರ್ಪಾಡು ಮಾಡಿದರು9ಶೇಷಪ್ಪನಾಯಕರ ಮಕ್ಕಳು ಈರ್ವರಲಿಜ್ಯೇಷ್ಠ ಪುತ್ರನು ವಿದ್ವಾಂಸರಲಿ ಪ್ರಮುಖಶಿಷ್ಯರೂ ಬಹು ಜನರು ಈತನಿಗೆ ಉಂಟುಭೂಷಣವೆಂದೆನಿಸಿದನು ಮಾಧ್ವ ಸಮೂಹಕ್ಕೆ 10ಸಾವಿರದ ನಾನ್ನೂರು ಎಪ್ಪತ್ತ ಒಂಭತ್ತುಸಂವತ್ಸರದಲಿ ಶಾಲಿವಾಹನದಿದಿವಸ ತದಿಗೆ ಕೃಷ್ಣ ಜ್ಯೇಷ್ಠ ಪಿಂಗಳದಿಶ್ರೀವರನಪುರಕೆ ತೆರಳಿದರು ರಘುವರ್ಯರು 11ದಯಾಳು ರಘುವರ್ಯರು ಸಮಾಧಿಸ್ಥರಾಗಲುಬಾಲ್ಯಾವಸ್ಥೆಯಲಿ ಇದ್ದ ರಘೂತ್ತಮರುವಿದ್ಯಾವ್ಯಾಸಂಗಗುರುನಿಯಮನದಂತೇಯೆಗೈಯಲಿ ಪೋದರು ಆ ವಿದ್ವಾಂಸನಲ್ಲಿ 12ಮಣೂರು ಎಂದ್ಹೆಸರುಉಳ್ಳಆ ಊರಲ್ಲಿಘನವಿದ್ವನ್ಮಣಿಯಲ್ಲಿ ಕಲಿಯುವಾಗಧನವಂತ ಊರುನಾಯಕರಘೂತ್ತಮರಲ್ಲಿಬಿನ್ನೈಸಿದ ಭೋಜನಕೆ ಬರಬೇಕೆಂದು 13ಸ್ವಾಮಿಗಳಿಗೆ ಪಾಠ ಹೇಳುವ ವಿಪ್ರನೂಆ ಮನೆಯಲಿ ಊಟಕ್ಕೆ ಬಂದಿದ್ದನೇಮ ಆಹ್ನೀಕ ಮುಗಿಸಿ ಬರಲಿಕ್ಕೇತಾಮಸವು ಆಯಿತು ವಿಲಂಬವು ಸ್ವಲ್ಪ 14ಸ್ವಾಮಿಗಳ ಬಾಲ್ಯತ್ವ ವಿದ್ಯಾರ್ಥಿತ್ವವುಆ ಮನೆಯಲಿ ಗೃಹಸ್ಥನನ್ನೂ ವಿಪ್ರನನ್ನೂ ಮೋಹಿಸಿತುತಮ್ಮ ಯೋಗ್ಯತೆ ಸ್ಥಾನ ಮರೆತು ಗರ್ವದಿವಿಪ್ರಸ್ವಾಮಿಗಳ ಲೆಕ್ಕಿಸದೆ ಕುಳಿತನು ಭೋಜನಕೆ 15ಅಂದು ರಾತ್ರಿಸ್ವಪ್ನದಲಿ ರಘುವರ್ಯ ಗುರುಗಳುಬಂದು ಪೇಳಿದರ್ತಮ್ಮ ಪ್ರೇಮಿಶಿಷ್ಯರಿಗೆಇಂದಿನಾರಭ್ಯ ಪಾಠವ ನಿಲಿಸು ವಿಪ್ರನಲಿಕುಂದುಇಲ್ಲದೆ ಹೇಳುವೆ ನೀನೇವೆ16ಈ ರೀತಿ ಸ್ವಪ್ನವು ಆಗೇ ರಘೂತ್ತಮರುವಿಪ್ರನಲಿ ಪಾಠಕ್ಕೆ ಪೋಗುವುದು ತೊರೆದುಆ ಪಂಡಿತವರ್ಯರಿಗಿಂತ ಉತ್ತಮ ರೀತಿತಾಪೇಳಿದರು ಪಾಠ ಮಠದಿ ಶಿಷ್ಯರಿಗೆ 17ಗುರುಗಳಲಿಹರಿಇಷ್ಟ ಗುರುದ್ವಾರ ಒಲಿವನುಗುರುಅನುಗ್ರಹ ಇದ್ದರೇಹರಿಅನುಗ್ರಹಗುರುಪ್ರಸಾದವ ಪಡೆದ ಶ್ರೀ ರಘೂತ್ತಮರಿಗೆಶಾಸ್ತ್ರ ಜ್ಞಾನವು ಪ್ರಜ್ವಲಿಸಿತು ಪೂರ್ಣದಲಿ 18ಜಾತಾಪರೋಕ್ಷಿಗಳು ದೇವತಾಂಶರಿಗೇವೆಜ್ಞಾತವಾಗುವ ಪದ ವಾಕ್ಯದ ತಾತ್ಪರ್ಯಈ ದೇವತಾಂಶ ಶ್ರೀ ರಘೂತ್ತಮ ಗುರುವರರುಸಂದೇಹವಿಲ್ಲದೆ ತಿಳಿದು ಬೋಧಿಸಿದರು 19ತನ್ನಲ್ಲಿ ವ್ಯಾಸಂಗ ಪೂರೈಸದ ಬಾಲಏನು ಪಾಠವ ಹೇಳೇ ಶಕ್ತನೆಂದರಿಯೆಕಾಣದೆ ಮರೆಯಾಗಿ ನಿಂತು ಆವಿಪ್ರಶ್ರವಣ ಮಾಡಿದ ಗುರುಗಳು ಬೋಧಿಸುವುದು 20ಸಂದಿಗ್ಧÀ್ದವಾಗಿ ತನಗಿದ್ದ ವಿಷಯಗಳನ್ನೂಅದ್ಭ್ಬುತ ರೀತಿಯಲಿ ಅನಾಯಾಸವಾಗಿಅತಿವಿಶದದಿ ರಘೂತ್ತಮರು ಪೇಳಲುಕೇಳಿಬಂದು ಮುಂದೆ ನಿಂತು ನಮಿಸಿದನುವಿಪ್ರ21ತಾನು ಮಾಡಿದ ಉದಾಸೀನ ಅಪರಾಧಗಳಘನದಯದಿ ಕ್ಷಮಿಸಬೇಕೆಂದು ಬೇಡುತ್ತತನು ದಂಡವತ್ ಭುವಿಯಲಿ ಬಿದ್ದು ನಮಿಸಿದನುದೀನದಯಾಳುಗುರುಅಭಯನೀಡಿದರು22ದಿಗ್ವಿಜಯ ಮಾಡುತ್ತ ಅಲ್ಲಲ್ಲಿ ದುರ್ಮತದುರ್ವಾದಿಗಳನ್ನು ಖಂಡಿಸಿ ಸಿದ್ಧಾಂತತತ್ವಬೋಧಿಸಿ ಜಗತ್ ಪ್ರಖ್ಯಾತರಾದರುಶಾಶ್ವತ ನಿಜಸುಖ ಮಾರ್ಗದರ್ಶಕರು 23ರಘುವರ್ಯ ಗುರುಗಳು ನೇರಲ್ಲು ಸ್ವಪ್ನದಲುರಘೂತ್ತಸಮರಿಗೆ ಪೇಳಿದ ಪ್ರಕಾರದಿಗ್ವಿಜಯ ಸಮಯದಿ ಸಂಸ್ಥಾನಕ್ಕೆ ಭೂಷಣಬಗೆಬಗೆ ವಸ್ತು ಪರಿವಾರ ಸೇರಿಸಿದರು 24ವೇದಾಂತ ಸಾಮ್ರಾಜ್ಯ ರಾಜಗುರುರಾಜರುಹಸ್ತಿಘೋಟಕ ಕೊಂಬು ವಾದ್ಯಮೇಳಗಳುಸುತ್ತಲೂ ವಿದ್ವಜ್ಜನ ವೇದಘೋಷದ ಮಧ್ಯಮುತ್ತು ಪಲ್ಲಕ್ಕಿಯೊಳು ಕುಳಿತರು ದೇವರ ಸಹ 25ಪೋದ ಕಡೆಗಳಲಿ ದಿಗ್ವಿಜಯ ರಾಮಾರ್ಚನೆವಿದ್ವಜ್ಜನ ಸಭೆ ವಾಕ್ಯಾರ್ಥ ಪಾಠಸಿದ್ಧಾಂತ ಸ್ಥಾಪನೆ ದುರ್ಮತ ನಿರಾಸವುಸಾಧು ಸಜ್ಜನರ ಉದ್ಧಾರ ಪ್ರತಿದಿನವು 26ಬಾದರಾಯಣನಿರ್ಣೀತ ರೀತಿಯಲಿಮಧ್ವರಾಯರು ಬರೆದ ಗ್ರಂಥಗಳಿಗೆಅದ್ಬುತ ಟೀಕೆ ಜಯತೀರ್ಥರು ಮಾಡಿಹರುಸದ್ಭಾವ ಬೋಧವು ರಘೂತ್ತಮರ ರಚನೆ 27ಟೀಕಾ ಭಾವಬೋಧರು ಎಂದು ಪ್ರಖ್ಯಾತರಘೂತ್ತಮರ ಎಲ್ಲೆಲ್ಲೂ ವಿದ್ವಜ್ಜನರುನಗರಪಟ್ಟಣ ಗ್ರಾಮ ನಾಯಕರು ಪ್ರಮುಖರುಸ್ವಾಗತ ಅರ್ಪಿಸಿ ಪೂಜಿಸಿದರು ಮುದದಿ 28ಪುಟ್ಟಿದಾರಭ್ಯಹರಿಪಾದಕಮಲದಿ ಮನಇಟ್ಟು ರಘುವರ್ಯರು ಕೊಟ್ಟ ಸಂಸ್ಥಾನಪಟ್ಟ ಆಳಿ ಸರ್ವೋತ್ತಮನನ್ನ ಸೇವಿಸಿಶ್ರೇಷ್ಠತಮ ಸುಖಪ್ರದಮಾರ್ಗತೋರಿಹರು29ಹದಿನೈದು ನೂರು ಹದಿನೇಳು ಶಕ ಮನ್ಮಥಶುದ್ಧ ಏಕಾದಶಿ ಪೌಷ್ಯದಲಿ ಹರಿಯಪಾದಸೇರಿದರು ಸಂಸ್ಥಾನ ಆಡಳಿತವೇದವ್ಯಾಸ ತೀರ್ಥರು ಮಾಡಲಿಕೆ ಬಿಟ್ಟು 30ಮತ್ತೊಂದು ಅಂಶದಲಿ ವೃಂದಾವನದೊಳುಹತ್ತಾವತಾರಹರಿದ್ಯಾನಪರರಿಹರುಭಕ್ತರು ಅಲ್ಲಲ್ಲಿ ಅರ್ಚಿಸಿ ಸೇವಿಸುವಮೃತ್ತಿಕೆಯಲ್ಲು ಸಹ ಇದ್ದು ಪಾಲಿಪರು 31ವೃಂದಾವನ ತಿರುಕೋಯಿಲೂರ್ ಮಣಂಪೂಂಡಿಎಂದು ಕರೆಯಲ್ಪಡುವ ಗ್ರಾಮದಲಿ ಇಹುದುಇಂದುಶೇಖರ ಚಾಪದಿಂದ ಉದಿಸಿದ ಪುಣ್ಯನದಿಯು ಹರಿಯುತ್ತೆ ಮಜ್ಜನವು ಅಘಹರವು 32ಮಂದಜಾಸನಮೊದಲಾದ ಸುರವೃಂದವಂದಿತ ರಮಾಪತಿಯು ರಘೂತ್ತಮಾಂತಸ್ಥವೃಂದಾವನದಿಗುರುಹರಿಭಕ್ತಿ ಪೂರ್ವಕದಿಬಂದು ಸೇವಿಪರಿಗೆ ವಾಂಛಿತÀಗಳೀವ 33ಗಾಳಿ ಬಿಸಿಲು ಮಳೆ ಮಂಜುಗಳ ಲೆಕ್ಕಿಸದೆಮಾಲೋಲನ ಧ್ಯಾನಿಸುತ ವೃಂದಾವನದೊಳುಕುಳಿತಿಹರುಪರಮಕಾರುಣಿಕಈ ಗುರುಗಳುಪಾಲಿಸುತಿಹರು ಎಮ್ಮಅನುಗಾಲದಯದಿ34ವೃಂದಾವನ ದರ್ಶನ ತೀರ್ಥ ನಮಸ್ಕಾರಪ್ರದಕ್ಷಿಣೆ ಅರ್ಚನೆ ಹಸ್ತೋದಕವಂದನೆ ಸೇವಾದಿಗಳ ಮಾಳ್ಪ ಸಜ್ಜನರಕುಂದುಕೊರತೆಗಳಳಿವ ಇಷ್ಟಾರ್ಥ ಪ್ರದರು35ಪಿಲ್ಲಿ ಶೂನ್ಯಾದಿ ವಾಮಾಚಾರ ಪೀಡೆಗಳುಗಾಳಿದುಷ್ಟಗ್ರಹ ಪೈಶಾಚಾದಿಗಳುಕಳವಳಿಕೆ ಬುದ್ದಿಭ್ರಮೆ ವ್ಯಾಧಿದಾರಿದ್ರ್ಯಾದಿಎಲ್ಲ ದೋಷಗಳನ್ನ ಪರಿಹರಿಸುವರು 36ಸವೈರಾಗ್ಯ ಜ್ಞಾನವ ಭಕುತಿ ಅಪರೋಕ್ಷವಸೇವಿಪ ಯೋಗ್ಯರಿಗೆ ಒದಗಿಸಿ ಉದ್ಧರಿಸಿಸರ್ವವಿಧದಲು ಭಾಗ್ಯ ಆಯುಷ್ಯ ಆರೋಗ್ಯಈವರು ಭಕ್ತಯಲಿ ಸ್ಮರಿಸಿ ವಂದಿಪರ್ಗೆ 37ಉತ್ತಮ ತರಗತಿ ದೇವತಾಂಶರು ಇವರುಮಧ್ವಮತದುಗಾಬ್ಧಿ ಪೂರ್ಣಚಂದ್ರಹತ್ತು ತಿಂಗಳು ಹೊತ್ತು ಹೆತ್ತ ಉತ್ತಮ ಸಾಧ್ವಿಮಾತೆಯ ಭಾಗ್ಯ ಏನೆಂಬೆ ಇಂಥವರ 38ಸೂರಿಸುರವರ ಶ್ರೀ ರಘೂತ್ತಮರ ಚರಣದಲಿಶರಣಾದೆ ಎನ್ನಯ ಎನ್ನಸೇರಿದವರಪರಿಪರಿ ಪೀಡೆಗಳ ಪಾಪಗಳ ಅಳಿದುಕಾರುಣ್ಯ ಔದರ್ಯದಿ ಪಾಲಿಸುವರು 39ಸರಿದ್ವರ ಪಿನಾಕಿನಿಯಲಿ ಕೇಶವ ಜಗವಈರಡಿಯಲಿ ಅಳೆವ ತ್ರಿವಿಕ್ರಮನು ಶಿರಿಯುಇರುತಿಹರು ಹನುಮ ಶಿವಸ್ಕಂಧ ತೀರಗಳಲಿಶರಣೆಂಬೆ ಇವರೆಲ್ಲರ್ಗು ಶ್ರೀ ರಘೂತ್ತಮರಿಗೂ 40ಕಮಲಭವಪಿತ `ಶ್ರೀ ಪ್ರಸನ್ನ ಶ್ರೀನಿವಾಸ 'ಕಮಲಾಯುತವಿಶ್ವರೂಪತ್ರಿವಿಕ್ರಮಗೂಭೀಮ ಶಿವಸ್ಕಂಧರಿಗು ಪ್ರಿಯತಮ ರಘೂತ್ತಮರಈ ಮಂಗಳ ಚರಿತ ಶ್ರೀ ಕೃಷ್ಣಾರ್ಪಿತವು 41 ಪ|| ಇತಿ ಶ್ರೀ ರಘೂತ್ತಮ ತೀರ್ಥ ಚರಿತ್ರೆ ಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು