ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೂಗಿರೆ ಗುರುಗಳ ತೂಗಿರೆ ಯತಿಗಳ ತೂಗಿರೆ ದಾಸಗ್ರೇಸರರ ನಾಗಶಯನನು ರಾಗವ ಪಡೆದಂಥ ಯೋಗಿವರೇಣ್ಯರ ತೂಗಿರೆ ಪ ಈ ಮಹಿಯೊಳು ಪುಟ್ಟಿ ಶ್ರೀಮುದತೀರ್ಥ ಸು- ನಾಮದಿ ಕರೆಸುವರ ತೂಗಿರೆ ಆ ಮುದತೀರ್ಥ ಪದ್ಮನಾಭ ನಾಮದಿಂದಿರುವರ ತೂಗಿರೆ1 ರಾಮನ ತಂದಿತ್ತ ನರಹರಿ ಮುನಿಪರ ಮಾಧವ ತೀರ್ಥರ ತೂಗಿರೆ ಆಮ- ಹಾವಿದ್ಯಾರಣ್ಯರನ ಗೆಲಿದಂಥ ಶ್ರೀ ಮದಕ್ಷೋಭ್ಯರ ತೂಗಿರೆ 2 ಕಾಕಿಣಿತೀರಸ್ಥ ಟೀಕಾಚಾರ್ಯರೆಂಬೊ ನಾಕಪಾಂಶಜರನ ತೂಗಿರೆ ಶ್ರೀಕೃಷ್ಣ ತಟದಿ ಜಿತಾಮಿತ್ರರೆಂಬೊ ಪಿ- ನಾಕಿ ಅಂಶಜರನ ತೂಗಿರೆ 3 ರಾಜರಂದದಿ ಸುಖಭೋಜನ ಕೃದ್ಯತಿ ರಾಜ ಶ್ರೀಪಾದರ ತೂಗಿರೆ ವ್ಯಾಜದಿ ವಿಜಯ ಸಾಮ್ರಾಜ್ಯರೆನಿಸಿ ವ್ಯಾಸರಾಜರು ಮಲಗ್ಯಾರ ತೂಗಿರೆ 4 ವಾದಿಗಳನು ಯುಕ್ತಿವಾದದಿ ಗೆಲಿದಂಥ ವಾದಿರಾಜರನ್ನ ತೂಗಿರೆ ಮೇದಿನಿಯೊಳು ಕೃಷ್ಣದ್ವೈಪಾಯನರೆಂಬೊ ವೇದವ್ಯಾಸಾತ್ಮಜರ ತೂಗಿರೆ 5 ಪರಿಮಳ ರಚಿಸಿದ ವರಹಜ ತೀರಸ್ಥ ಇರುಳು ಕಾಲದಲಿ ತರಣಿಯ ತೋರಿದ ಗುರುಸತ್ಯ ಬೋಧರ ತೂಗಿರೆ 6 ಪರಮತ ಖಂಡನ ನಿರುತದಿ ಮಾಡಿದ ಗುರುವರದೇಂದ್ರರ ತೂಗಿರೆ ಗುರು ಭುವನೇಂದ್ರರ ಕರಜವ್ಯಾಸತತ್ವ ವರಿತ ಯತೀಶರ ತೂಗಿರೆ 7 ವರಭಾಗವತಸಾರ ಸರಸದಿ ರಚಿಸಿದ ಗುರುವಿಷ್ಣು ತೀರ್ಥರ ತೂಗಿರೆ ಪರಮ ಕ್ಷೇತ್ರಕೂಡಲಿಯೊಳಗಿರುವಂಥ ಗುರುರಘುವೀರರ ತೂಗಿರೆ 8 ಹರಿಯ ಮಹಿಮೆಯನ್ನು ಸರಸದಿ ಪೇಳಿದ ಪುರಂದರ ದಾಸರ ತೂಗಿರೆ ಹರಿಸರ್ವೋತ್ತಮನೆಂದು ಸುರಮುನಿ ಗರುಹಿದ ಗುರು ವಿಜಯದಾಸರ ತೂಗಿರೆ 9 ಬನ್ನವ ಬಿಡಿಸಿ ಶಿಷ್ಯನ್ನ ಪಾಲಿಸಿದ ಭಾಗಣ್ಣ ದಾಸರನ್ನು ತೂಗಿರೆ ಘನ್ನ ಹರಿಯಗುಣ ವರ್ಣಿಸಿದಂಥ ಜ ಗನ್ನಾಥ ದಾಸರ ತೂಗಿರೆ 10 ಮಾನವಿರಾಯರ ಪ್ರಾಣಪದಕರಾದ ಪ್ರಾಣೇಶದಾಸರ ತೂಗಿರೆ ವೇಣುಗೋಪಾಲನ್ನ ಗಾನದಿ ತುತಿಸಿದ ಆನಂದದಾಸರ ತೂಗಿರೆ 11 ವಾಸ ಆದಿಶಿಲಾಧೀಶನ್ನ ಭಜಿಸಿದ ಶೇಷ್ಠ ದಾಸರನ್ನ ತೂಗೀರೆ ಶ್ರೇಷ್ಠ ಕಾರ್ಪರ ನರಕೇಸರಿಗತಿಪ್ರೀಯ ದಾಸೋತ್ತಮರನ್ನ ತೂಗೀರೆ 12
--------------
ಕಾರ್ಪರ ನರಹರಿದಾಸರು
ಪ್ರೆಮಾಂಬುಧಿ ಶುಭದಾಯಕ ಜಯ ಜಯ 1 ಪ್ರಹ್ಲಾದಾವರ ಜಾತನೆ ಜಯಯ ಶಲ್ಯ ನೃಪಾಲಕ ಯೋಧನೆ ಜಯ ಜಯ 2 ಪುರುಹೂತಾರ್ಯ ಪೋತನೆ ಜಯ ಜಯ ಮರುತ ಪದಾರ್ಹರ ಪ್ರೀತನೆ ಜಯ ಜಯ 3 ನರಸಿಂಹಾರ್ಯರ ಪುತ್ರನೆ ಜಯ ಜಯ ಗುರುವರದೇಂದ್ರರ ಛಾತ್ರನೆ ಜಯ ಜಯ 4 ತುರುರಕ್ಷಕ ವಿಜಯಾರ್ಯರ ಜಯ ಜಯ ಕರುಣ ಪೂರ್ಣ ಪಡೆದಾತನೆ ಜಯ ಜಯ 5 ಪಂಕಜವೈರಿಯ ಭಾಗದಿ ಜಯ ಜಯ ಅಂಕಿತ ಪಡೆದ ಅಕಳಂಕನೆ ಜಯ ಜಯ 6 ಪಂಢರಿನಾಥನ ಮೂರುತಿ ಜಯ ಜಯ ಕಂಡು ಕೊಂಡಾಡಿದ ಧೀರನೆ ಜಯ ಜಯ 7 ರಂಗವಲಿದ ದಾಸ್ತೋತಮ ಜಯ ಜಯ ತುಂಗ ಮಹಿಮ ಶುಭಾಂಗನೆ ಜಯ ಜಯ 8 ನತಜನ ತತಿ ಮಂದಾರನೆ ಜಯ ಜಯ ಕೃತ ಹರಿಕಥಾಸುಧೆ ಸಾರವ ಜಯ ಜಯ 9 ಮೂಕರ ಮುಖದಿಂ ಕರುಣದಿ ಜಯ ಜಯ ವಾಕು ಪೇಳಿಸಿದ ಗುಣನಿಧಿ ಜಯ ಜಯ 10 ಮಾನವಿ ಮಂದಿರ ಮಾನಿತ ಜಯ ಜಯ ಕ್ಷೋಣಿ ವಿಬುಧ ಗಣ ಸೇವಿತ ಜಯ ಜಯ 11 ಕುಂಭಿಣಿನಾಥ ದಾಸಾಗ್ರಣಿ ಜಯ ಜಯ ನಂಬಿದೆ ನಿನ್ನ ಪದಾಂಬುಜ ಜಯ ಜಯ 12 ಸಾಧು ವರಿಯ ಪ್ರಹ್ಲಾದನೆ ಜಯ ಜಯ ಭೇದಜ್ಞಾನ ಸುಬೋಧಕ ಜಯ ಜಯ 13 ಭೂಸುರ ಕುಮುದಕೆ ಭೇಶನೆ ಜಯ ಜಯ ಭಾಸುರ ಸ್ತಂಭ ನಿವಾಸನೆ ಜಯ ಜಯ 14 ಪವನಾಗಮ ಪ್ರವೀಣನೆ ಜಯ ಜಯ ಸನ್ನುತ ಮಹಿಮನೆ ಜಯ ಜಯ 15 ತಂದೆ ನಮಗೆ ನೀನೆಂದಿಗು ಜಯ ಜಯ ಕುಂದು ಕ್ಷಮಿಸಿ ದ್ವಿಜ ವಂದ್ಯನೆ ಜಯ ಜಯ 16 ಕಂಸಾರಿಯ ಪ್ರೀಯ ಸಾಂಶನೆ ಜಯ ಜಯ ಭವ ಹಿಂಸೆಯ ಜಯ ಜಯ 17 ನಿನ್ನ ತಾಣ ಸುಕ್ಷೇತ್ರವು ಜಯ ಜಯ ನಿನ್ನ ಕವನ ಶೃತ್ಯರ್ಥವು ಜಯ ಜಯ 18 ಕಲುಷ ಕುಲಾದ್ರಿಗೆ ಕುಲಿಶನೆ ಜಯ ಜಯ ವಲಿದು ಕರಪಿಡಿದು ಸಲಹೈ ಜಯ ಜಯ 19 ಆರ್ತರಿಷ್ಟಾರ್ಥವ ಸಲಿಸಲು ಜಯ ಜಯ ಸ್ವಾರ್ಥರಹಿತರಿಗೆ ಕೀರ್ತಿಯು ಜಯ ಜಯ 20 ಎನ್ನವವ ಚನವಿದಲ್ಲವು ಜಯ ಜಯ ನಿನ್ನನು ಭವಕಿದು ಬಂದದು ಜಯ ಜಯ 21 ಮಂದ ಬುದ್ಧಿಯಲಿ ನಿಮ್ಮನು ಜಯ ಜುಯ ನಿಂದಿಪ ಮನುಜ ದಿವಾಂಧನು ಜಯ ಜಯ 22 ಧರ್ಮದ ಮಾರ್ಗವ ತೋರಿಸು ಜಯ ಜಯ ಕರ್ಮಜ ದೇವನೆ ಕೈಪಿಡಿ ಜಯ ಜಯ 23 ಅನಿಲ ಮತಾಂಬುಧಿ ಮೀನನೆ ಜಯ ಜಯ ಪ್ರಣತಾಮರಮಣಿಧೇನುವೆ ಜಯ ಜಯ 24
--------------
ಶಾಮಸುಂದರ ವಿಠಲ
ಶ್ರೀ ಗುರುವರದೇಂದ್ರರ ಸ್ತೋತ್ರಗಳು ಅಂದಣೇರಿದ ವರದೇಂದ್ರ ಮುನಿಪರ ನಿಂದು ಪಾಡುವರಫವೃಂದ ತರಿವರ ಪ ಅಂದದಿ ಭೂಸುರ ಸಂದಣಿ ಮಧ್ಯದಿ ಚಂದದಿ ಬಹು ಕರ್ಮಂದಿಗಳರಸ ಅ.ಪ ಶ್ರೀ ಮಧ್ವಮತಾಂಬುಧಿ ಸೋಮ ನಿಷ್ಕಾಮ ತಾಮಸಮತಕÀಂಜಸ್ತೋಮ ನಿಧೂಮ ಆ ಮಹಾಭಕ್ತ ಕುಮುದ ಪ್ರೇಮ ಸತ್ಕಾಮ ಕಾಮಿತ ಕಲ್ಪದ್ರುಮಗುರುಸಾರ್ವಭೌಮ ರಾಮ ಪದಾಂಬುಜ ಪ್ರೇಮದಿ ಭಜಿಸುವ ಭೂಮಿಸುರರ ಹೃತ್ತಾಮಸಹಾರಾ 1 ಉದಿತಾಕರ್À ಸಂಕಾಶ ವಿಧಿಕುಲಾಧೀಶ ಮುದದಿ ಭಜಿಸುವ ಭಕ್ತಹೃದಯನಿವಾಸ ಸದಮಲಭಕ್ತಙÁ್ಞನ ಉದಜವಿಕಾಸ ವಿಧಿಕುಲದ್ವೇಷಿ ಕುಮುದ ತತಿನಾಶ ವಿಧವಿಧದಲಿ ಹರಿಪದ ಭಜಿಸುವ ಮತಿ ವದಗಿ ಪಾಲಿಸು ಹೃದಜನಸದಯಾ 2 ಕರುಣಾನಿಧಿಯೆ ನಿನ್ನ ಚರಣ ಸೇವಕರ ಜರಮರಣಾದಿ ದೋಷತ್ವರಿತ ಪರಿಹಾರ ಶರಧಿ ವಿಹಾರ ನಿರುತದಿ ಹರಿಯನಾಮ ಸ್ಮರಿಸುವಧೀರ ವರದೇಶ ವಿಠಲನ ಕರುಣದಿ ಧರೆಯೊಳು ಮೆರೆಯುವ ಯತಿಕುಲವರಿಯ ಸುಚರಿಯಾ 3
--------------
ವರದೇಶವಿಠಲ
ಗುರುವರದೇಂದ್ರ ದಯಾಂಬುಧೇ ಶರಣಾಗತ ವತ್ಸಲ ಈಶ |ಚರಣಕಮಲಷಟ್ಪದ ಪಾಲಿಸು ಕಾಷಾಯವಸನಭೂಷಾ ಪದುರ್ಮತಭುಜಗಕುಘರ್ಮ ವಿನಾಯಕಕರ್ಮಬದ್ಧವ್ರತಾ |ಶರ್ಮತ್ರಿಧರ ಪ್ರಿಯ ಧರ್ಮಾಸಕ್ತನೆ ನಿರ್ಮಲ ಶುಭಚರಿತಾ ||ಭರ್ಮ ಸಮಾಂಗ ಅಧರ್ಮ ಶಿಕ್ಷಕರಿಚರ್ಮಾಂಬರ ಪ್ರೀತ |ಕಿರ್ಮೀರಾರಿ ಸುಶರ್ಮ ತೀರ್ಥಸಖಕರ್ಮಂದಿಪ ನಾಥ 1ಶ್ರೀ ಮನೋರಮ ಸು ತ್ರಿಧಾಮದೇವ ಶ್ರೀರಾಮ ಪದಾಸಕ್ತಾ |ಕಾಮಿತ ಫಲದಧರಾಮರವಂದಿತ ಸ್ವಾಮಿ ನಮಿಪ ಭಕ್ತ ||ಶ್ರೀಮಂದಾರಅನಾಮಯ ಸದ್ಗುಣಧಾಮನೆ ಸುವಿರಕ್ತಾ |ಪಾಮರದೂರ ಲಲಾಮ ವದಾನ್ಯ ಮಹಾಮಹಿಮನೆ ಶಕ್ತ 2ಮಾನಿ ಪೂಜ್ಯ ಸುಜ್ಞಾನಿ ಧೀರ ಸದ್ಭಾನುಚಂದ್ರ ಭಾಸ |ದೀನ ಪೋಷಕ ನಿಜಾನುಗ ಪಾಲಕ ಕ್ಷೋಣಿಪ ನಿರ್ದೋಷ ||ಸಾನುರಾಗದಲಿ ಪೋಣಿಸುಸನ್ಮತಿಮೌನಿ ಕುಲಾಧೀಶ |ನೀನಲ್ಲದೆ ಶ್ರೀ ಪ್ರಾಣೇಶ ವಿಠ್ಠಲ ತಾನೊಲಿಯನು ಲೇಶ 3
--------------
ಪ್ರಾಣೇಶದಾಸರು
ವಂದನೆ ಮಾಡಿರೈಗುರುವರದೇಂದ್ರರ ಪಾಡಿರೈ ಪಬಂದ ದುರಿತಗಳ ಹಿಂದೆ ಮಾಡಿ ಸುಖ |ತಂದುಕೊಡುವ ದಯಾಸಿಂಧುಯತೀಂದ್ರರ ಅ.ಪ.ಮರುತ ಮತಾಂಬುಧಿ ಸೋಮನೆನಿಪ ವಸುಧೇಂದ್ರ - ಸದ್ಗಣಸಾಂದ್ರ|ಗುರುಗಳಕರಕಮಲದಿ ಜನಿಸಿದ ಸುಕುಮಾರಾ - ಕುಜನ ಕುಠಾರಾ ||ನೆರೆನಂಬಿದ ಭಕುತರನನುದಿನದಲಿ ಪೊರೆವಾ - ದುರಿತವ ತರಿವಾ |ಧರೆಯೊಳು ತ್ಯಾಗದಿ ಕರ್ಣನ ಮರೆಸಿದ ನೋಡಿ - ವರಗಳ ಬೇಡಿ1ಕರಿಹಿಂಡೊಳುಹರಿಹೊಕ್ಕ ತೆರದಿ ವಾದಿಗಳ - ಕೀಳು ಮತಗಳ |ವರಶಾಸ್ತ್ರಗಳಲಿ ಗೆಲಿದು ಸುಬುದ್ಧಿಯ ವರದ - ಜಗದೊಳು ಮೆರೆದ ||ಶರಭಂಗವರದಚರಣಸರಸೀರುಹಭೃಂಗ- ವಿಷಯ ಅಸಂಗ |ಸ್ಮರಣೆಯ ಮಾಡೆ ಪಿಶಾಚ ರೋಗಗಳ ಭಯವೂ - ಮುಟ್ಟದಲಿಹವೂ 2ಸಾನುರಾಗದಲಿ ಶ್ರೀ ರಾಘವೇಂದ್ರರ ಸ್ತೋತ್ರ - ಮಾಳ್ಪ ಸುಪಾತ್ರ |ಜಾನಕಿಪತಿ ಆನಂದದೊಳಿವರಿಗೆ ಒಲಿವ - ಹೃದಯದಿ ಸುಳಿವ ||ದೀನ ದಯಾಳು ಅಪರಿಮಿತ ಮಹಿಮ ಗುಣಾಢ್ಯ - ವಾದದಿ ದಾಢ್ರ್ಯಾ |ಧ್ಯಾನಿಸೆ ಮನದೊಳು ಜ್ಞಾನ ಕೀರ್ತಿ ಸುಖ ಕೊಡುವ - ಅಘಗಳ ಕಡಿವ 3ವಿಷ್ಣುನ ಲೋಕ ಪ್ರವೇಶ ಮಾಡಿದ ಚರಿಯಾ - ಕೇಳಿರಿ ಪರಿಯಾ |ಶಿಷ್ಟ ಜನರು ವಿಶ್ವಾವಸು ನಾಮಕ ಅಬ್ದ - ಆಷಾಢ ಶುದ್ಧ ||ಷಷ್ಠಿಯು ಕುಜವಾಸರ ಉತ್ತರಾ ನಕ್ಷತ್ರಾ -ವರಪುಣ್ಯಕ್ಷೇತ್ರ |ನಟ್ಟ ನಡುವೆ ವೃಂದಾವನ ಮಧ್ಯದೊಳಿರುವಾ - ಸೌಖ್ಯವ ಸುರಿವಾ 4ಆನೆ ಹಂಡೆ ವಸನಗಳು ದ್ರವ್ಯವು ನಾನಾ - ಮಾಡಿದ ದಾನಾ |ಆ ನಗರದಿ ಬಹು ಮಂದಿಯು ಭಕುತಿಯಲಿಂದಾ - ಪೂಜಿಪ ಚಂದ ||ಸೂನುಪಡೆದು ಸುಖ ಪಡುವರು ಸರ್ವರುನಿತ್ಯ- ಈತನು ಸತ್ಯ |ನಾನೆಂತುಸಿರಲಿ ಪ್ರಾಣೇಶ ವಿಠಲನ ದಾಸಾ, ಮುನಿ ಉತ್ತಂಸಾ 5
--------------
ಪ್ರಾಣೇಶದಾಸರು