ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

* ಮುತ್ತೈದೆಯಾದೆ ನಾ ಮುರವೈರಿ ದಯದಿ ನಿತ್ಯತೃಪ್ತನು ಎನ್ನ ನಿಜಕರವ ಪಿಡಿಯೆ ಪ. ಗುರುಗಳುಪದೇಶಾಂಬುಧಿಯಲಿ ಪುಟ್ಟಿದ ಎನ್ನ ಕರೆದರು ಕಮಲಾಭಿದಾನದಿಂದ ವರುಷವೆಂಟಾಗೆ ಗುರುಜನಕ ಎನ್ನನುದಯದಿ ಸಿರಿವರನೆ ಪೊರೆ ಎಂದು ಒಪ್ಪಸಿದ ಕತದಿಂ1 ಗುರು ಕೊಟ್ಟ ಅಂಕಿತವೆ ಮಾಂಗಲ್ಯವಾಯ್ತೆನಗೆ ಗುರುವಿಟ್ಟ ನಾಮವೆ ತಿಲುಕವಾಯ್ತು ಗುರುಕರುಣವೆಂಬ ಕವಚವ ತೊಟ್ಟೆ ಹರುಷದಲಿ ಗುರು ಪ್ರೀತಿ ಎಂಬ ವಸನವನುಟ್ಟು ಮುದದಿ 2 ಗುರುವು ಬೋಧಿಸಿದ ಭಕ್ತಿ ಜ್ಞಾನ ವೈರಾಗ್ಯ ಸರಿ ಮಾಡಿ ಮೂರು ಕಾಲಿನ ಜಡೆಯನು ಪರಿಪರಿಯ ತತ್ವಗಳೆ ಚೌರಿ ರಾಗುಟಿ ಗೊಂಡ್ಯ ಗುರುವಾಜ್ಞೆ ಎಂಬ ಪುಷ್ಪವ ಧರಿಸಿ ಶಿರದಿ3 ಗುರುವಾಕ್ಯ ಶ್ರವಣವೇ ಕರ್ಣಕುಂಡಲವಾಯ್ತು ಗುರುವಿನ ನಿರ್ಮಾಲ್ಯವೇ ನಾಸಿಕಾಭರಣ ಗುರುನಾಮಗಳೆ ರತ್ನ ಪರಿಪರಿಯ ಹಾರಗಳು ಗುರುಭಕ್ತಿ ಎಂಬ ನಡು ಒಡ್ಯಾಣ ಧರಿಸಿ 4 ಗುರುವು ಪೇಳಿದ ಸದ್ಗುಣಗಳೆ ಪಾದಾಭರಣ ಗುರುವಿನ್ವಾತ್ಸಲ್ಯವೆ ಪರಿಮಳ ದ್ರವ್ಯ ಗುರು ಅನುಗ್ರಹವೆಂಬೊ ಮಂಗಳ ದ್ರವ್ಯಗಳು ಗುರು ಮಾತೆ ಎನ್ನ ಪೋಷಿಸಿ ಹರಿಗೆ ಕೊಡಲು 5 ಹೃದಯವೆ ಲಗ್ನ ಮಂಟಪ ದಿವ್ಯ ಶೃಂಗಾರ ಪದುಮಭವ ಸುರರೆ ನೆರದಿಹ ಬಂಧು ಬಳಗ ಒದಗಿ ಬಹ ಸುಜ್ಞಾನ ಸಂಬಾರ ಸಲಕರಣೆ ಮದನ ಪಿತನೆದುರಿಗೆ ನಿಲಿಸಿ ಧಾರೆಯನೆರೆಯೆ 6 ಗುರುವೆ ಜನನಿ ಜನಕ ಗುರುವೆ ಪುರೋಹಿತರು ಗುರುವಚನವೆಂಬ ಅಕ್ಷತೆ ಎರಚುತಿರಲು ಪರಮ ಜೀವಚ್ಛಾದಿ ಕದ ಪರದೆ ತೆಗೆಯುತಿರೆ ಹರಿಗೆ ಗುಣನಾಮ ಜೀರಿಗೆ ಬೆಲ್ಲ ಎರಚೆ 7 ಸುಮನೊ ವೃತ್ತಿಗಳೆಂಬ ಕಮಲದ್ಹಾರವನ್ಹಾಕಿ ಕಮಲನಾಭನ ಪದಕೆರಗಿ ನಿಲಲೂ ಕಮಲಹಸ್ತವ ಶಿರದ ಮೇಲಿಟ್ಟು ಶ್ರೀ ಕೃಷ್ಣ ಕಮಲೆ ನಿನ್ನನು ಪೊರೆವೆನೆಂಬ ಅಭಯ ಕೊಡಲು 8 ಸೂತ್ರ ಬಂಧಿಸಲು ಮುಕ್ತರಾರಾಧ್ಯ ಲಕ್ಷ್ಮೀಕಾಂತನು ಮುಕ್ತರಾರಾಧ್ಯ ಜಗದ್ಭರ್ತೃ ಮುನಿಜನವಂದ್ಯ ವ್ಯಕ್ತನಾಗಲು ಮನದಿ ಗುರು ಕಟಾಕ್ಷದಲಿ 9 ಗುರು ತಿಳಿಸಿದಂಥ ಸ್ವರೂಪದರ್ಪಣ ನೋಡಿ ಪರಮ ಸೌಭಾಗ್ಯ ಆನಂದಪಡುವೆ ಗುರುಗಳಂತರ್ಯಾಮಿ ಗೋಪಾಲಕೃಷ್ಣವಿಠ್ಠಲ ಗುರುಬಿಂಬನೇ ಎನಗೆ ಸುಖವ ಪಾಲಿಸಲಿ 10
--------------
ಅಂಬಾಬಾಯಿ
ಇದೇ ನೋಡಿರೋ ನಮ್ಮ ಊಟ ಮೇದಿನೊಯೊಳು ಪ್ರಗಟ ಧ್ರುವ ಪ್ರೇಮ ತಟ್ಟಿ ಬಟ್ಟಲು ತಳಗಿ ಕಾಮಕ್ರೋಧ ಸುಟ್ಟುಬೆಳಗಿ ನೇಮದಿಂದ ಬಡಸುವಾದಡಗಿ 1 ಪಂಚಭಕ್ಷ ಪರಮಾನ್ನಾಮುಂಚೆ ಬಡಸುವದು ಗುರುವಚನ ಸಂಚಿತ ಪುಣ್ಯಸಾಧನ 2 ತತ್ವಸಾರದೊಂದೇ ತುತ್ತು ಅತಿಹರುಷಗೊಂಡಿತು ನಿತ್ಯತೃಪ್ತಹೊಂದಿತು ಹಿತ ಮಹಿಪತಿಗಾಯಿತು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುವಚನದಲಿ ನಂಬನು ನರಭಾವ ಅವರೊಳು ಕಾಂಬನು ಕರಣ ತ್ರಯದಲಿ ಶುಂಭನು ಗುರು ಭಕ್ತ ನೆನಿಸದರೇನು ಮಾ 1 ಸರ್ವರೊಳು ಹರಿ ನೋಡದೇ ಗರ್ವದ ಗುಣಗಳೀಸಾಡದೆ ನಿಜ | ದರ್ವಿನೊಳು ಮನ ಕೂಡದೇ | ಭಾಗವತರೆನಿಸಿದರೇನು ಮಾ 2 ವಾಸನಿಯ ಬಲ ಕಡಿಯಾ ದೇವೆ | ಆಸೆಯಲಿ ಮನ ಜಡಿಯದೆ ನಿಜ | ದ್ಯಾಸದಂಡವ ಪಿಡಿಯದೆ ಸ | ನ್ಯಾಸಿಯೆನಿಸಿದರೇನು ಮಾ 3 ನುಡಿಯ ಬೀರುತ ಸಂತರಾಜನ | ರೊಡನೆ ಹಾಕುತ ಸಿಂತರಾ ತಮ್ಮ | ನಡತಿ ನೋಡಲು ಭ್ರಾಂತರಾ ತಾ | ಸಂತ ನೆನಿಸಿದರೇನು ಮಾ 4 ತಂದೆ ಮಹಿಪತಿ ಪಾದವಾ ಬೆರೆ | ಭವ | ಬಂಧ ಮಾಡದೇ ವಾತಾ | ಬಂದ ಜನಮಕಿದೇನು ಮಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿನ್ನೊಳು ನೋಡಾನಂದವ ಎನ್ನ ಮನವೆ ಚೆನ್ನಾಗಿ ಚಿನ್ಮಯವ ಇನ್ನೊಂದಿಹವೆಂಬನ್ಯ ಪಥವಳಿದು ಉನ್ಮನಿಯೊಳು ಘನಸುಖ ಅನುಭವಿಸುತ ಧ್ರುವ ಕಂಗಳ ಕೊನೆಯ ಮೆಟ್ಟಿ ಮುಂಗಡಿಯಲಿಹ ಮಂಗಳಾತ್ಮಕನ ನೋಡಿ ಲಂಘಿಸಿ ಮೂಲಸ್ಥಾನವ ತುಂಗ ವಿಕ್ರಮನ ಸಂಗ ಸುಖವನರಿದು ಅನುದಿನ ಇಂಗಿತವಾಗಿ ನೀ ಗಂಗೆಯೊಳು ಜಲ ಬೆರೆದಾ ಸುಸಂಗದಿ 1 ನಾನು ನಾನೆಂಬದಳಿದು ನಿನ್ನೊಳು ನೀನೆ ಏನೆಂದು ತಿಳಿದು ನೋಡು ಆನಂದೋ ಬ್ರಹ್ಮದಾಟವು ತಾನೆ ತಾನಾಗಿ ತನುವಿನೊಳು ತೋರುವದು ಘನಗುರುವಚನಾನುಭವದಲಿ ಸೇವಿಸಿ ಸ್ವಾನುಭವದ ಸುಖದಲಿ ಲೋಲ್ಯಾಡುತ 2 ಮರೆದು ಮಾಯದ ಮಾಟವ ಅರಿತು ನೋಡು ಬೆರೆದು ದಾಂಟಿ ತ್ರಿಕೂಟವ ತೋರುವ ದಿವ್ಯಭಾವವ ತಾರಕಗುರು ಸಾರುವ ಕರುಣ ನೋಟವ ಅರವಿನೊಳಿರು ಮಹಿಪತಿ ಗುರುಪಾದದಿ ಪರಮಾನಂದದಿ ಸುಖ ಸೂರ್ಯಾಡುತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮನವೇ ಸುಮ್ಮನೆ ಇರಬೇಡ ಅರೆನಿಮಿಷವಾದರುಮನವೇ ಸುಮ್ಮನೆ ಇರಬೇಡಪ ಕನಸಿನಂತಿಹ ಸಂಸಾರವ ನೆಚ್ಚಿಘನತರ ಪಾಪಕೆ ಗುರಿಯಾಗಬೇಡ ಅ ರೊಕ್ಕದಾಸೆಯ ಬಿಡಬೇಕು ಸ್ತ್ರೀ ಮೋಹಕೆಸಿಕ್ಕದೆ ನಡಕೊಳಬೇಕುಅಕ್ಕರು ದೇಹದೊಳಿರದಿರಬೇಕುಶಕ್ತಿಯ ಮೀರಿ ಧರ್ಮವ ಮಾಡಬೇಕುಮುಕ್ಕಣ್ಣ ಹರನ ಪೂಜಿಸಬೇಕುಮುಕ್ತಿ ಮಾರ್ಗವ ಪಡಕೊಳಬೇಕು 1 ಸರ್ವನಿಸ್ಪøಹನಾಗಬೇಕು ಸಂಸಾರದಿಚರಿಸುತಲೂ ಇರಬೇಕುಗುರುಹಿರಿಯರ ಕಂಡು ನಡೆಯಲು ಬೇಕುಪರರ ನಿಂದಿಸಿ ನುಡಿಯದೆ ಇರಬೇಕುಬರೆ ಸುಖ ದುಃಖವು ಸಮಗಾಣಬೇಕುಇರುಳು ಹಗಲು ಶಿವ ಶಿವ ಎನ್ನಬೇಕು2 ತನ್ನ ತಾನೆ ತಿಳಿಯಬೇಕು ತೋರುವ ಲೋಕವನ್ನು ದೃಶ್ಯವೆಂದಿರಬೇಕುತನ್ನಂತೆ ಸಕಲರ ನೋಡಲು ಬೇಕುಮಾನ್ಯರ ಕಂಡರೆ ಮನ್ನಿಸಬೇಕುಅನ್ಯನಾದರು ಹಿತವನೆ ಮಾಡಬೇಕುಪ್ರಸನ್ನ ರಾಮೇಶನನೆನಹಿರಬೇಕು 3 ವಣಗಿದ ಕಂಭದೊಳೊಗೆದುಬಣಗು ದಾನವನ ಗೆಲಿದುಕುಣಿಕುಣಿದಾಡಿದೆಯಂತೆ ಯಾಕಯ್ಯ ಶ್ರೀಕೃಷ್ಣಸೆಣಸಿದ ರಾಕ್ಷಸನ ಗೆಲಿದುವಿನಯದೆ ಪ್ರಹ್ಲಾದಗೊಲಿದುಅಣಿಯರ ಲೋಕವ ಕಾಯ್ದೆ ಎಲೆಸತ್ಯಭಾಮೆ 4 ಬಲು ಚಂದವಾಯಿತಯ್ಯ ಲೋಕಾ-ವಳಿಯೊಳು ದೊಡ್ಡವನಯ್ಯಬಲಿಯ ಕೂಡೆ ದಾನವ ಬೇಡುವರೆ ಕೃಷ್ಣಬಲಿಯ ದಾನವನ್ನೇ ಬೇಡಿಇಳೆಯ ಮೂರಡಿಯ ಮಾಡಿಸಲಹಿದೆ ಸರ್ವಸುರರ ಎಲೆ ಸತ್ಯಭಾಮೆ 5 ಧರಣೀಪಾಲಕರ ಗೆಲಿದಗರ್ವವಿರಲಿ ಹೆತ್ತತಾಯಶಿರವನರಿದ ದುರುಳರುಂಟೆ ಹೇಳಯ್ಯ ಕೃಷ್ಣಗುರುವಚನವನ್ನು ಮೀರೆನರಕಲೋಕವೆಂದು ಕಾಯಶಿರವನರಿದು ಮರಳಿ ಪಡೆದ ಎಲೆ ಸತ್ಯಭಾಮೆ6 ಮೂರು ಲೋಕವರಿಯೆ ಸೀತಾನಾರಿಯ ಕಳೆದುಕೊಂಡುಊರೂರ ತಿರುಗಿದೆಯಂತೆ ಯಾಕಯ್ಯಾ ಕೃಷ್ಣನೀರೊಳು ಸೇತುವ ನಿಲಿಸಿವೀರ ರಾವಣನ ಜಯಿಸಿವಾರಿಜಾಕ್ಷಿಯ ತಂದೆನೆ ಎಲೆ ಸತ್ಯಭಾಮೆ 7 ದುರುಳ ಪರಮಹಂಸರಂತೆಕರದಿ ನೇಗಿಲ ಹಿಡಿದೆಶರಖಡ್ಗಗಳಿಲ್ಲವೇನೋ ಶ್ರೀಕೃಷ್ಣರಾಯಸುರರಿಪು ಪ್ರಲಂಬಾದಿಗಳಶಿರವನರಿದು ಜೈಸಿದಂಥಾಗುರುತಿನ ಆಯುಧ ಕಾಣೆ ಎಲೆ ಸತ್ಯಭಾಮೆ8 ಮಂದಿಯ ಮುಂದೆ ಬತ್ತಲೆನಿಂದು ಓಡಾಡಿದೆಯಂತೆಚಂದವಾಯ್ತು ನಿನ್ನ ನಡತೆ ಹೇಳೆಲೋ ಕೃಷ್ಣಹಿಂದೆ ತ್ರಿಪುರದ ನಾರೀವೃಂದವ ಮೋಹಿಸಿ ಸರ್ವವೃಂದಾರಕರ ಪೊರದೆ ಎಲೆ ಸತ್ಯಭಾಮೆ 9 ದೊರೆತನವು ನಿನ್ನದೆಂದುಧರಣೀದೇವತೆಯು ಬಂದುಮೊರೆಯಿಟ್ಟಳದೇಕೋ ಪೇಳೋ ಶ್ರೀಕೃಷ್ಣರಾಯತುರಗವನೇರಿ ಖಡ್ಗವಧರಿಸಿ ಯವನ ಸೈನ್ಯವನ್ನುಮುರಿದು ಧರೆಯ ಪೊರೆದೆ ಕಾಣೆ ಎಲೆ ಸತ್ಯಭಾಮೆ 10 ಇಂತು ಕೇಳ್ದ ಸತ್ಯಭಾಮಾಕಾಂತೆಯ ಮಾತಿಗೆ ಮೆಚ್ಚಿಕಾಂತೆಯರೊಳು ಕಟ್ಟಾಣಿ ಬಾರೆಂದು ಕರೆದುಕಂತುಜನಕ ಕೆಳದಿಪುರದಕಾಂತ ಗೋಪಾಲಕೃಷ್ಣನುಸಂತಸವ ಮಾಡಿದನಿನ್ನೆಂತು ಪೇಳ್ವೆನೆ11
--------------
ಕೆಳದಿ ವೆಂಕಣ್ಣ ಕವಿ
ಯತಿರಾಜಂ ಭಜರೇ ರಾಘವ ಸದ ಗತಿ ತಂ ಭಜರೆ ಕಲುಷಿತ ಕುಟಿಲ ಮನಸೇ ಪ ಯತಿಪಾದ ತೀರ್ಥವೆ ಗತಿಯೆಂಬರಸನಿಗೆ ಪತಿತಪಾವನ ತನ್ನ ಪದವ ತೋರುವನಯ್ಯ ಅ.ಪ ಗುರುವಚನವೇ ವೇದ ಗುರುನಾಮ ಸುಖದಾ ಗುರುಪೂಜೆ ಪರಂಧಾಮ ಗುರುವೆ ಶ್ರೀರಾಮ ಗುರುರಾಘವೇಂದ್ರ ಮಾಂಗಿರಿಯ ರಂಗಯ್ಯ ಗುರುರಾಜ ಪ್ರಹ್ಲಾದ ಚಿರ ಸುಖದಾತಾರ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಥವೇರಿ ಬರುತಿಹ ಗುರುವರನ್ಯಾರೆ ಪೇಳಮ್ಮಯ್ಯಾ ಪ ಟೀಕಾಕೃಧ್ಯ ತಿವರನಮ್ಮ ಅ.ಪ ಸ್ವೀಕರಿಸಿ ಮಾರುತನವತರಿಸಿ ಶೃತಿಸಮ್ಮತ ಶ್ರೀಮಧ್ಭಾಷ್ಯವತಾರಚಿಸಿ ಛಾತ್ರರಿಗೆ ವಿವರಿಸೆ ಕೇಳುತಲನುದಿನದಿ ಮಹಿಮ ಸುರಪತಿಯು ಕಾಣಮ್ಮ 1 ದೇಶಪಾಂಡ್ಯರಕುವರ ಕೇಳಲು ಗುರುವಚನ ಸಂಸಾರ ಸುಖವನ ಜಯ ತೀರಥರಮ್ಮ 2 ಸ್ಥಾಪಿಸಿದರು ಮುದದಿ ಶುದ್ಧಮಾಯಿ ಸುಭಟಧ್ವಜನಿಯ ಓಡಿಸಿದ ವಾಕ್ಸಾಯಕದಿಂದ ಮಧ್ವರಾಜಕೃತ ಸದ್ಗ್ರಂಥಗಳ ವಿಸ್ತಾರ ಮಾಡಿದ ಯತಿಧೀರಾ ಗೆಲಿದ ಪ್ರಸಿದ್ಧ ಕಾಣಮ್ಮ 3 ಚಾಮೀಕರಕೃತ ಚಾಮರ ಛತ್ರಗಳಿಂದ ಸೇವಿಪದ್ವಿಜರಿಂದ ಶ್ರವಣಕೆ ಪೀಯೂಷ ಭವಬಾಧೆ ಬಿಡಿಸಿದ ಶ್ರೀಮಳಖೇಡ ಸುಧಾಮ ಕಣಮ್ಮ4 ತೋಷಿತ ಬುಧನಿಕರ ಪಾವನತರಚರಿಯ ಶರಣುಜನಕೆ ಸುರತರುವೆನಿಸಿದ ಜಯರಾಯಾ ವಿದ್ವಜ್ಜನಗೇಯಾ ಧರೆಯೊಳು ಸಿರಿಕಾರ್ಪರ ನರಸಿಂಹನೆ ಪರನೆಂದರುಹಿದ ಗುರುವರನಮ್ಮ5
--------------
ಕಾರ್ಪರ ನರಹರಿದಾಸರು