ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಂಗಮನು ಇಂತಿವನು ಸರ್ವಸಂಗ ದೂರಾದವನೀಗ ಜಂಗಮ ಪ ತನ್ನ ತಿಳಿದು ತಾನಾದವ ಜಂಗಮ ಜಗವಭಿನ್ನವೆಂದು ಕಾಣದವ ಜಂಗಮಹೊನ್ನು ಹೆಣ್ಣು ಬಿಟ್ಟವನು ಜಂಗಮ ಸಂ-ಪನ್ನ ಸಾಧು ಸಂಗವಿಹ ಜಂಗಮ 1 ಒಳಗೆ ಹೊರಗೆ ಒಂದಾದವ ಜಂಗಮ ಎಲ್ಲಹೊಳೆವುದೊಂದೆ ಜ್ಯೋತಿಯು ಎಂಬುವ ಜಂಗಮಹೊಲೆಯು ಶುದ್ಧವ ಕಳೆದವ ಜಂಗಮ ಎನಗೆಕುಲವು ಛಲವು ಇಲ್ಲವೆಂಬುವ ಜಂಗಮ 2 ಅಂಗ ಲಿಂಗವಾಗಿಹ ಜಂಗಮಲಿಂಗ ಅಂಗ ಏಕವಾಗಿಹ ಜಂಗಮಮಂಗಳವೇ ನಿತ್ಯವಿಹ ಜಂಗಮ ಗುರುಲಿಂಗವಾದ ಚಿದಾನಂದ ಜಂಗಮ 3
--------------
ಚಿದಾನಂದ ಅವಧೂತರು
ಪಾಲನುತ ಶ್ರೀಶೈಲಮಂದಿರ ಮಲ್ಲಿಕಾರ್ಜುನ ರಕ್ಷಿಸು ಪ ಏಳುಕೊಳ್ಳಗಳೇಳು ನೆಲೆಗಳ ಮೇಲೆ ತೋರ್ಪ ಲಿಂಗನೆ ಕಾಲಕಾಲದಿ ಬಾಲನೆಂದೆನ್ನ ಮಲ್ಲಿಕಾರ್ಜುನ ರಕ್ಷಿಸು 1 ಶೀಲ ಭಕುತರ ಪಾಲಿಸಲು ಪಾತಾಳಗಂಗೆಯ ನಿರ್ಮಿಸಿ ಪಾಲಿಸಿದಿ ಬುವಿ ಪಾಲಿಸಿ ವರ ಮಲ್ಲಿಕಾರ್ಜುನ ರಕ್ಷಿಸು 2 ಸಾರಸೌಖ್ಯ ನೀಡುದ್ಧಾರ ಮಾಡಿದ ಮಲ್ಲಿಕಾರ್ಜುನ ರಕ್ಷಿಸು 3 ಅಂಗಜಹರ ಗಂಗಾಧರ ಗುರುಲಿಂಗಜಂಗಮಾತ್ಮಕ ಭವ ಮಲ್ಲಿಕಾರ್ಜುನ ರಕ್ಷಿಸು 4 ಕಾಲಕಾಲ ಕಾಲಕೇಶ್ವರ ಶೂಲಪಾಣಿಯೆ ನಂಬಿದೆ ಕಾಲನ ಮಹದಾಳಿ ಗೆಲಿಸೆನ್ನ ಮಲ್ಲಿಕಾರ್ಜುನ ರಕ್ಷಿಸು 5 ಕಳೆದೆ ದಿನಗಳ ಇಳೆಯ ಸುಖಮೆಚ್ಚಿ ತಿಳಿಯದೆ ತವಮಹಿಮೆಯ ಒಲಿದು ಕ್ಷಮಿಸೆನ್ನ ಬಾಲನೆಂದೆತ್ತಿ ಮಲ್ಲಿಕಾರ್ಜುನ ರಕ್ಷಿಸು 6 ಅಷ್ಟವರ್ಣ ವಿಶಿಷ್ಟಭಕ್ತಿಯ ಕೊಟ್ಟು ಕುರಣಾದೃಷ್ಟಿಯಿಂ ಅನುದಿನ ಮಲ್ಲಿಕಾರ್ಜುನ ರಕ್ಷಿಸು 7 ದುಷ್ಟಭವಕಿನ್ನು ಹುಟ್ಟಿಬರುವಂಥ ಕೆಟ್ಟ ಬವಣೆಯ ತಪ್ಪಿಸು ಇಷ್ಟದಾಯಕ ಮುಟ್ಟಿಪೂಜಿಪೆ ಮಲ್ಲಿಕಾರ್ಜುನ ರಕ್ಷಿಸು 8 ಪರಕೆ ಪರತರ ಪರಮಪ್ರಕಾಶ ವರದ ಶ್ರೀರಾಮಮಿತ್ರನೆ ಮರೆಯ ಬಿದ್ದೆನು ಕರುಣಿಸಿ ಮುಕ್ತಿ ಮಲ್ಲಿಕಾರ್ಜುನ ರಕ್ಷಿಸು 9
--------------
ರಾಮದಾಸರು
ಶರಣು ಶ್ರೀ ಗುರುಲಿಂಗ ಶರಣು ಮುನಿಜನಸಂಗ ಶರಣುಭವ ಭಯ ವಿಭಂಗಾ ಪ ಪಾವನಿ ಜಾನ್ಹವಿಯ ತೀರದಲಿ ಕಾಶೀ | ಪುರ ವಿಶ್ವನಾಥನೆನಿಸೀ | ಹರುಷದಲಿ ನಿಂದು ಮತ್ತೊಂದು ರೂಪದಲಿ ತೆರಳಿ | ಧರೆಯ ದೇಶವ ನೋಡುತಾ ಬರುತಾ 1 ಮೊದಲೆ ತಾ ಕೃಷ್ಣ - ವೇಣಿ ಮ್ಯಾಲುತ್ತರವಾಹಿನಿ | ಸದಮಲ ಸುಖ ಕಾರಿಣೀ | ಇದ ನರಿತು ನಡಿ ಮಧ್ಯೆ - ಉತ್ತರೇಶ್ವರ ನೆನಸಿ | ಮುದದಿಂದ ಬಂದು ನಿಂದು || 2 ಸಖನ ದರುಶನ ನೆವದಿ ಬರುತಿರಲು ನಾ ನಿಮ್ಮ ಪ್ರಕಟದಲಿ ಕಂಡೆ ನಿಂದು | ಭಕುತಿಯಚ್ಚರ ನೀಡು ಗುರು ಮಹೀಪತಿ ಸ್ವಾಮಿ | ಸಕಲ ಸುರರಾಜ ಮಾದ್ಯ ಧನ್ಯಾ || 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶಿವ ಶಿವ ಶಿವ ಎನ್ನಿರೊ - ಮೂಜಗದವರೆಲ್ಲಶಿವ ಶಿವ ಶಿವ ಎನ್ನಿರೊ ಪ ಆಗಮ ಸಿದ್ಧಾಂತ ಮೂಲದ ಜಪವಿದು ಶಿವಶಿವಶಿವ ಎನ್ನಿರೋ - ನಿಮ್ಮರೋಗದ ಮೂಲವ ಕೆಡಿಪ ಔಷಧವಿದು ಶಿವಶಿವಶಿವ ಎನ್ನಿರೊ 1 ಮನುಜ ಜನ್ಮದಿ ಹುಟ್ಟಿ ಮೈಮರೆದಿರಬೇಡಿ ಶಿವಶಿವಶಿವ ಎನ್ನಿರೋ - ನಿಮ್ಮತನುಮನ ಪ್ರಾಣವ ವ್ಯರ್ಥವ ಮಾಡದೆ ಶಿವಶಿವಶಿವ ಎನ್ನಿರೊ 2 ಅಪರಾಧಕೋಟಿ ತ್ಯಜಿಸಬೇಕಾದರೆ ಶಿವಶಿವಶಿವ ಎನ್ನಿರೋ - ಮುಂದೆಉಪಮಿತರೋರ್ಮಿತರರಿಯದ ಜಪವಿದು ಶಿವಶಿವಶಿವ ಎನ್ನಿರೊ3 ಜವನ ಬಾಧೆಯ ನೀವು ಜಯಿಸಬೇಕಾದರೆ ಶಿವಶಿವಶಿವ ಎನ್ನಿರೋ - ನಿಜಸವಿಮಲ ಮುಕ್ತಿಯ ಪಡೆಯಬೇಕಾದರೆ ಶಿವಶಿವಶಿವ ಎನ್ನಿರೊ 4 ಭುವನಕೆ ಬಲ್ಲಿದರಾಗಬೇಕಾದರೆ ಶಿವಶಿವಶಿವ ಎನ್ನಿರೋ - ನೀವುಭವನ ಪದವಿಯನು ಪಡೆಯಬೇಕಾದರೆ ಶಿವಶಿವಶಿವ ಎನ್ನಿರೊ 5 ಗುರುಲಿಂಗ ಜಂಗಮವ ಅರಿಯಬೇಕಾದರೆ ಶಿವಶಿವಶಿವ ಎನ್ನಿರೋ - ಮುಂದೆಪರಮಾತ್ಮನ ನೀವು ತಿಳಿಯಬೇಕಾದರೆ ಶಿವಶಿವಶಿವ ಎನ್ನಿರೊ6 ಪೃಥ್ವಿಗೆ ಸದ್ಗುರು ಆಗಬೇಕಾದರೆ ಶಿವಶಿವಶಿವ ಎನ್ನಿರೋ - ನೀವುತತ್ತ್ವಪತಿ ಆದಿಕೇಶವನ ಕೂಡಬೇಕಾದರೆ ಶಿವಶಿವಶಿವ ಎನ್ನಿರೊ7
--------------
ಕನಕದಾಸ