ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇವರೇ ನಮ್ಮವರೂ ಇದು ಭಾಗ್ಯವುನಮಗ್ಹಗಲಿರಳೂ ಪ ಭವ ಸಮುದ್ರದಲಿ ಮುಳುಗಿಸಿ ಕಡೆಯಲಿ ಜವನಾಳ್ಗಳ ಕೈಗೊಪ್ಪಿಸಿ ಕೊಡುವ ಅ.ಪ ಧನಯೌವನ ಬಲವು | ದೇಹದ ಅನುಬಂಧಗಳಿರುವು ಮನೆಮಕ್ಕಳುವನಿತಾದಿಗಳೊಲಿವರೊ 1 ಕೇಳಿದ್ದಿಲ್ಲೆನಲೂ | ಇವನ ಹೀ- ಯಾಳಿಪರ್ ಸ್ವಜನಗಳೂ ಕಾಲಕಾಲದಿ ಬಾಡಿಗೆ ಎತ್ತಿನ ಪರಿ ಆಳಾಗಿದ್ದರೆ ಹಾ ಎಂದು ನಗುವ 2 ಇವರಾಸೆಯ ಮಾಡೀ | ನಾವುನ- ಮ್ಮವರನು ಹೋಗಾಡಿ ಕವಳಕೆ ಗತಿಯಿಲ್ಲದೆ ಪರಿಯಾಯಿತು ಕಡೆಹಾಯಿಸು ಗುರುರಾಮವಿಠ್ಠಲನೆ 3
--------------
ಗುರುರಾಮವಿಠಲ
ರಾಜರಯ್ಯ ನಾವು ನಮ್ಮ ರಾಜೀವಾಕ್ಷನ ಕರುಣವ ಪಡೆದರೆ ಪ ಊಂಛವೃತ್ತಿಯೇ ರಾಜ್ಯಕೋಶ | ನಿಷ್ಟ್ರ- ಪಂಚ ನಡತೆಯೇ ನಮಗೆ ಕಛೇರಿ ಪಂಚೇಂದ್ರಿಯ ಜಯಿಸುವುದು ಮ್ಯಾಜಿಸ್ಟ್ರೇಟ್ ಪಂಚವಿಷಯ ಹಂಚಿಕೆಯೇ ಸಿವಿಲ್‍ಬಾಬು 1 ದೇವಾದಾಯದ ಧನವೇ ರೆವಿನ್ಯೂ ಕಾವನು ಕೊಲ್ವನು ಹರಿಯೆಂಬವುದು ಪಾವನ ಜಡ್ಜ್‍ಮೆಂಟ್ ಕಾಪಿರಿಜಿಸ್ಟರು 2 ದೇವೇಂದ್ರಾದಿಗಳೇ ಕಲೆಕ್ಟರ್ ಸುರರು ತಾಲ್ಲೂಕಾಫೀಸರು ಧರ್ಮನಿಷ್ಠರೆಲ್ಲ ನೌಕರ ಜನಗಳು 3 ದಾನಧರ್ಮವೇ ಡಬ್ಲಿಯು ಎಸ್ಸು ಜ್ಞಾನ ಸಾಧನವೇ ವಸೂಲಿ ಲೆಖ್ಖ ಮಾನವ ವೃತ್ತಿಗಳೆಲ್ಲ ರಿಕಾರ್ಡ್ 4 ಸಪ್ತಾವರ್ಣವೇ ಸಪ್ತಾಂಗದ ಸಭೆ ಸಪ್ತಧರ್ಮವೇ ಕಾರ್ಯಗೌರವವು ಗುರೂಪದೇಶವೇ ಜ್ಞಾನಾರ್ಜನೆಯು 5 ವನಜನಯನ ಗುರುರಾಮವಿಠ್ಠಲನೆ ಸೈನು ಮೊಹರು ಮಹಾ ಚಕ್ರವರ್ತಿಯು 6
--------------
ಗುರುರಾಮವಿಠಲ