ಒಟ್ಟು 10 ಕಡೆಗಳಲ್ಲಿ , 1 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇವರೇ ನಮ್ಮವರೂ ಇದು ಭಾಗ್ಯವುನಮಗ್ಹಗಲಿರಳೂ ಪ ಭವ ಸಮುದ್ರದಲಿ ಮುಳುಗಿಸಿ ಕಡೆಯಲಿ ಜವನಾಳ್ಗಳ ಕೈಗೊಪ್ಪಿಸಿ ಕೊಡುವ ಅ.ಪ ಧನಯೌವನ ಬಲವು | ದೇಹದ ಅನುಬಂಧಗಳಿರುವು ಮನೆಮಕ್ಕಳುವನಿತಾದಿಗಳೊಲಿವರೊ 1 ಕೇಳಿದ್ದಿಲ್ಲೆನಲೂ | ಇವನ ಹೀ- ಯಾಳಿಪರ್ ಸ್ವಜನಗಳೂ ಕಾಲಕಾಲದಿ ಬಾಡಿಗೆ ಎತ್ತಿನ ಪರಿ ಆಳಾಗಿದ್ದರೆ ಹಾ ಎಂದು ನಗುವ 2 ಇವರಾಸೆಯ ಮಾಡೀ | ನಾವುನ- ಮ್ಮವರನು ಹೋಗಾಡಿ ಕವಳಕೆ ಗತಿಯಿಲ್ಲದೆ ಪರಿಯಾಯಿತು ಕಡೆಹಾಯಿಸು ಗುರುರಾಮವಿಠ್ಠಲನೆ 3
--------------
ಗುರುರಾಮವಿಠಲ
ಈ ಊರೋಳ್ಳೇದು ಪ ದೇವರ ಕೃಪೆ ಒಂದಾದರೆ ಸಾಕು ಅ.ಪ ತಂಟೆ ಮಾಳ್ಪ ಭಂಟರೈವರ ಗೆದ್ದರೆ ತಾನೆಲ್ಲಿದ್ದರು ಭಯವಿಲ್ಲಣ್ಣ 1 ಜಲತೃಣ ಕಾಷ್ಠಕೆ ವಸತಿ ಈ ಊರು ಬಲು ಸಜ್ಜನಗಳ ನೆರೆ ಈ ಊರು ಫಲಗಳುಂಟು ಮಾಡುವುದೀ ಊರು ಹೊಲಗದ್ದೆ ತೋಟಗಳಿಹ ಊರು 2 ಕೇಳಿದ ಪದಾರ್ಥ ದೊರೆಯುವ ಊರು ವೇಳೆಗೆ ಅನುಕೂಲವು ಈ ಊರು ತಾಳ ಮೇಳ ವಾದ್ಯಗಳಿಹ ಊರು ಸೂಳೆ ಬೋಕರಿಗೆ ಕಷ್ಟದ ಊರು 3 ಕಷ್ಟಪಡುವ ನರ ಭ್ರಷ್ಟನಲ್ಲವೇ ಮೂರು ಬಿಟ್ಟು ತಿರುಗುವ ಜನರಿಗೆ 4 ನರಜನ್ಮವೆಂಬ ಊರಿಗೆ ಬಂದು ಗುರುರಾಮವಿಠ್ಠಲನ ಕರುಣನ ಪಡದರೆಕರತಲಾಮಲಕವಿದು ಕೈವಲ್ಯಕೆ 5
--------------
ಗುರುರಾಮವಿಠಲ
ಕಾಲ ಪ ಹಲವು ವಿಧದಲಿ ಚಂಚಲ ಪಡುತಲಿ ತತ್ವ ತಿಳಿಯದೆ ಅ.ಪ ಕೇಳೊ ಜ್ಞಾನಿಯಾಗದೆ 1 ಹೇಯ ಸುಖವು ಕೋರಿ ನ್ಯಾಯ ಬಿಟ್ಟು ನಡಿಯೆ ದಾಯ ತಪ್ಪುವುದು 2 ಗುರುರಾಮವಿಠ್ಠಲನ ಗುರುತರಿಯದೆ ಬರಿದೆ ಕರೆಕರೆಯಲೀ ಕಾಲ3
--------------
ಗುರುರಾಮವಿಠಲ
ದೊರೆವನಲ್ಲವೋ ಹರಿ ದೊರೆವನಲ್ಲವೊ ಪ ಪರಮಯೋಗನಿಷ್ಠೆಯಿಂದ ಇರುಳು ಹಗಲು ಸಮಾಧಿಯಲ್ಲಿ ಇರುವ ಮಹಾಯೋಗಿಗಳಿಗೆ ಅರಿಯೆ ಸಾಧ್ಯವೇ ಅ.ಪ ಸಕಲ ದಾನಧರ್ಮಗಳನು ಸರ್ವಕ್ರತುಗಳನ್ನು ಮಾಡೆ ಶಕುತರಾಗಲರಿಯರೆಂದಿಗು ಶಾಙ್ಗಪಾಣಿಯಂ 1 ರಚ್ಚೆಗಿಕ್ಕಿ ಕಾಣಬಹುದೇ ರಾಜೀವಾಕ್ಷನ 2 ಪಾಮರ ತಾನೆಂದು ಸಕಲ ನೇಮನಿಷ್ಠೆಯಿಂದಲವನ ನಾಮ ಸ್ಮರಿಸೆ ಸುಲಭನಹನು ಗುರುರಾಮವಿಠ್ಠಲನು 3
--------------
ಗುರುರಾಮವಿಠಲ
ಮಾನವನೆ ನೀ ಮರುಗದಿರೈ ಪ ನಾನು ನನ್ನದೆಂಬಭಿಮಾನದಲಿ ಅ.ಪ ಹೊಟ್ಟೆಗೋಸುಗ ಪರರಿಷ್ಟಾನು ಸಾರದಿ ಕೆಟ್ಟ ನುಡಿಗಳನು ನುಡಿಯುತಲಿ 1 ಸಾವುತಪ್ಪದೆ ಮುಂದೆ ಭಾವಿಸಿ ನೋಡದೆ ಜೀವನಕ್ಕಿಲ್ಲದೆ ನಿರ್ಜೀವಿ ನಾನೆಂದು 2 ಓಲಗ ನಷ್ಟವಾಗೋದಲ್ಲದೆ ಲಾಭವುಂಟೇನೋ3 ದುರುಳರ ಬೇಡುವರೆ ಕರೆಕರೆ ಯಾಕೆ 4 ಹಿರಿಯರು ಪೇಳಿದ ಪರಮಬೋಧೆಯಿಂದಾ ಗುರುರಾಮವಿಠ್ಠಲನ ಚರಣವ ನಂಬಿದೆ 5
--------------
ಗುರುರಾಮವಿಠಲ
ರಾಜರಯ್ಯ ನಾವು ನಮ್ಮ ರಾಜೀವಾಕ್ಷನ ಕರುಣವ ಪಡೆದರೆ ಪ ಊಂಛವೃತ್ತಿಯೇ ರಾಜ್ಯಕೋಶ | ನಿಷ್ಟ್ರ- ಪಂಚ ನಡತೆಯೇ ನಮಗೆ ಕಛೇರಿ ಪಂಚೇಂದ್ರಿಯ ಜಯಿಸುವುದು ಮ್ಯಾಜಿಸ್ಟ್ರೇಟ್ ಪಂಚವಿಷಯ ಹಂಚಿಕೆಯೇ ಸಿವಿಲ್‍ಬಾಬು 1 ದೇವಾದಾಯದ ಧನವೇ ರೆವಿನ್ಯೂ ಕಾವನು ಕೊಲ್ವನು ಹರಿಯೆಂಬವುದು ಪಾವನ ಜಡ್ಜ್‍ಮೆಂಟ್ ಕಾಪಿರಿಜಿಸ್ಟರು 2 ದೇವೇಂದ್ರಾದಿಗಳೇ ಕಲೆಕ್ಟರ್ ಸುರರು ತಾಲ್ಲೂಕಾಫೀಸರು ಧರ್ಮನಿಷ್ಠರೆಲ್ಲ ನೌಕರ ಜನಗಳು 3 ದಾನಧರ್ಮವೇ ಡಬ್ಲಿಯು ಎಸ್ಸು ಜ್ಞಾನ ಸಾಧನವೇ ವಸೂಲಿ ಲೆಖ್ಖ ಮಾನವ ವೃತ್ತಿಗಳೆಲ್ಲ ರಿಕಾರ್ಡ್ 4 ಸಪ್ತಾವರ್ಣವೇ ಸಪ್ತಾಂಗದ ಸಭೆ ಸಪ್ತಧರ್ಮವೇ ಕಾರ್ಯಗೌರವವು ಗುರೂಪದೇಶವೇ ಜ್ಞಾನಾರ್ಜನೆಯು 5 ವನಜನಯನ ಗುರುರಾಮವಿಠ್ಠಲನೆ ಸೈನು ಮೊಹರು ಮಹಾ ಚಕ್ರವರ್ತಿಯು 6
--------------
ಗುರುರಾಮವಿಠಲ
ರಾಮದೂತ ರಮ್ಯಚರಿತ ಸ್ವಾಮಿಹನುಮನೆ ಪ ಕಾಮಿತಫಲದಾತ ನಮ್ಮ ಕಾವನು ನೀನೆ ಅ.ಪ ಆಶಸಮುದ್ರವನ್ನು ದಾಟಿ ಮೋಸಗಾರರಂ ನಾಶಗೊಳಿಸಿ ದಾಶರಥಿಯ ತೋಷ ಪಡದೆ ನೀಂ 1 ತರುಣಿ ದ್ರೌಪದಿ ದೇವಿಯ ತಾತ್ಪರಿಯ ನಡೆಸಿದೆ 2 ಕಲಿಯುಗದಲಿ ಹುಲುದನುಜರಗೆಲಿದೆ ಗುರುವರ ಜಲಜನೇತ್ರ ಗುರುರಾಮವಿಠ್ಠಲನ ಕಿಂಕರ 3
--------------
ಗುರುರಾಮವಿಠಲ
ವಿರೋಧವ್ಯಾತಕಯ್ಯ ನಿಮಗಿದರೊಳು ಪ ಪರಂಪರದ ಸಂಪ್ರದಾಯಕೆ ನಿಮಗೆ ಅ.ಪ ಈಶ ನಾನೆಂಬುವದೊಂದು ಸರ್ವೇಶ ಹರಿಯಂಬೊದೊಂದು ಲೇಸಾಗಿ ಹೆಚ್ಚು ಕಡಮೆಗಳ ತಿಳಿಯುವದಿನ್ನೊಂದು 1 ಈ ಮೂರು ಮತಗಳಿಗೆ ಪ್ರೇಮವಾದಭಿಪ್ರಾಯಗಳು ನೇಮನೇಮವಾಗಿಟ್ಟು ಕೊಂಡಿರುತಿಹರೆಲ್ಲರು 2 ನಿಮ್ಮ ನಿಮ್ಮ ಮನಗಳಿಗೆ ಸಮ್ಮತವಾಗುವ ಪರಿ ಬ್ರಹ್ಮ ಜ್ಞಾನವೊಂದು ಸಂಪಾದಿಸಿದರೆ ಸಾಕು 3 ಸರಿಯಾದರ್ಥ ತೋರಿ ದಾರಿಯ ಕೊಡುವುದು 4 ಧೀರ ಶ್ರೀಗುರುರಾಮವಿಠ್ಠಲನೊಬ್ಬನೆ 5
--------------
ಗುರುರಾಮವಿಠಲ
ಶತ್ವ್ರಾಂತಕನು ಸುಜ್ಞಾನ ಭಕ್ತಿಯೇ ಕಾಂತೆ ಜನಕಜೆಜೀವಹನುಮನು ಸುಪಥಸುಗ್ರೀವ 1 ಸಾಧನಾತ್ಮಕಕೌಶಿಕನಮಖ ಕಾದುಸಲಹಿದವಿಘ್ನವೇದು ರ್ಮೇಧೆತಾಟಕಿದುಷ್ಟಸಂಗಸುಬಾಹುಮುಖಖಳರೂ ಸಾಧರವೆವರಯಜ್ಞಗೌತಮ ಭೂದಿವಿಜಸತಿಶಾಪಮೋಕ್ಷವೆ ಶೋಧನಿಷ್ಕøತಿತಾರ್ತಿಚಾಪವಧರ್ಮವೆನಿಸುವುದು 2 ಪರುಶುರಾಮ ಸಮಾಗಮವುವಿ ಸ್ತರಿಸಿನೋಡೆಸಮತ್ವವಿಪಿನಾಂ ತರವೆಕರ್ಮಸುವೃತ್ತಿಮುನಿಗಳು ರಾವಣನತಂಗಿ ಪರಿಕಿಸಲುದುರ್ವೃತ್ತಿಗಳುತತ್ ಪರಿಜನಖರಾದಿಗಳುಭ್ರಾಂತಿಯು ನೆರೆಕನಕಮೃಗದಶವದನನಿಂದ್ರಿಯಗಳೆನಿಸುವನು 3 ಅರುಣತನಯನುಧರ್ಮನೋಡೆ ಶ ಸುರಪಸುತದುಷ್ಕರ್ಮಚಪಲವೆಕಪಿಸಮೂಹಗಳು ಹಿರಿಯಮಗನೆಸಹಾಯವಾಸೆಯೆ ಶರಧಿಲಂಕೆಯೆದೇಹಲಂಕಿನಿಯೇದುರಭಿಮಾನ 4 ಮಣಿಯೆಜ್ಞಾಪಕಸ್ವಸ್ಥಚಿತ್ತತೆ ವನವಶೋಕವುತ್ರಿಜಟೆಕನಸೇ ಘನವೆನಿಪಸಂಸ್ಕಾರದುಷ್ಕರ್ಮಾಖ್ಯವನಭಂಗಾ ದನುಜಪತಿಸುತಮುಖರವಧೆಯೇ ಮುನಿಮತವುದುರ್ವೃತ್ತಿಪರಿಹರ ವನಜಸಂಭವನಸ್ತ್ರವೇಸನ್ಮಾರ್ಗವೆನಿಸುವುದು 5 ಮಮತೆಲಂಕೆಯದಹಿಸಿಮತ್ತೆಹ ಪಮಶರಧಿ ಬಂಧನವೆಯಾಸೆನಿರೋಧನಂತರವು ಕ್ರಮದಿಧರ್ಮವಿಭೀಷಣನಸುರ ದಮನವಿಂದ್ರಿಯಜಯವುಮಿಗೆ ಹೃ ತ್ಕಮಲವೇಸಾಕೇತಪುರವು ಸಮಾಧಿಯಭಿಷೇಕಾ 6 ವಧೆಯಗೈಸಿದಕಾಲಜ್ಞಾನದಿಲವಣ ಮುಖ್ಯರನು ವಿಧವಿಧದಯಜ್ಞಗಳವಿರಚಿಸಿ ಸದಮಲಾತ್ಮನುಸಕಲರಿಂದೈ ದಿದಸಹಸ್ರಪಾದನು ಶ್ರೀಗುರುರಾಮವಿಠ್ಠಲನು 7
--------------
ಗುರುರಾಮವಿಠಲ
ಹ್ಯಾಗೆ ಮುಕ್ತಿಯಾಗುವುದು ಕೂಗಿದರೇನು ಫಲ ಪ ಯೋಗವರಿತು ತನ್ನಲಿರುವ ನಾಗಶಯ್ಯನನ ನೋಡದೆ ಅ.ಪ ಅರಿತೆವೆಂದು ಹಾರಾಡುವ ಅಹಂಕಾರಿಗಳಿಗೆ 1 ವೇದಶಾಸ್ತ್ರ ಓದಲಿಲ್ಲ ವಾದವಿಲ್ಲಿ ಸಲ್ಲ ಬೋಧೆ ಮನಸಿಗಂಟಲಿಲ್ಲ ಬುದ್ಧಿಶೂನ್ಯರಿಗೆಲ್ಲ 2 ನಾವು ನಮ್ಮದೆಂಬುದು ಬಿಡದೆ ಸಾವ ಕುನ್ನಿಗಳಿಗೆ 3 ಬಾಯಿಮಾತಿಲಿಂದಲೇನು ಮಾಯವಾದಗಳೇನು ನ್ಯಾಯಮಾರ್ಗವರಿತವನು ಕಾಯದಾಸೆಮಾಡನು 4 ಗುರುರಾಮವಿಠ್ಠಲನ ಸ್ಮರಣೆಯ ಮಾಡದೆ ದುರುಳ ನರರಿಗೆ 5
--------------
ಗುರುರಾಮವಿಠಲ