ಒಟ್ಟು 4 ಕಡೆಗಳಲ್ಲಿ , 1 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅತ್ತಿಗೆ ಭೋಜನಮಾಡೆ ಸಾವಕಾಶದಿ ನೀನೂ ಮತ್ತೆ ಮತ್ತೆ ಬೇಕಾದ್ದೆಲ್ಲ ತಂದು ಬಡಿಸುವೆನೂ ಪ ಕ್ಷೀರಾನ್ನ ದಧ್ಯೋದನ್ನ ಇನ್ನು ಪರಮಾನ್ನಗಳು ಹೋಳಿಗೆ ಪಳಿದ್ಯ ಹುಳಿಕೂಟು ಉಪ್ಪಿನಕಾಯಿಗಳ ಪಚ್ಚಡಿ ಚೆನ್ನಾಗಿ ಭೋಜನ ಮಾಡೆ ನಮ್ಮಣ್ಣನ ಸಹಿತದಿ 1 ಲಾಡು ಚಿರೋಟಿ ಮಂಡಿಗೆಗಳು ಬೇಡವೆಂದು ಕಯ್ಯತೋರಿ ಬೇಡಿ ಬೇಡಿ ಹಾಕಿಸಿಕೊಂಬಿ ಜೋಡು ಜೋಡಾಗಿ ಗೂಡೆ ಗೂಡೆ ಹಪ್ಪಳ ಸಂಡಿಗೆ ಕೂಡೆ ಕೂಡೆ ಸುರಿಯುತ್ತಿದ್ದರೆ ಹಾಡು ಹೇಳುವುದಕ್ಕೆ ಬಾಯಿ ಬಿಡುವುದಿಲ್ಲವೇನÉೀ? 2 ಪಟ್ಟದರಸಿ ನಮ್ಮಣ್ಣನ ಭಾಗ್ಯದೇವತೆಯೇ ಸಿಟ್ಟುಮಾಡದೆ ಗುರುರಾಮವಿಠಲನ್ನಾ ಸ್ಮರಿಸಿಕೊಂಡು ದಿಟ್ಟೆ ಬೀಗಿತ್ತಿ 3
--------------
ಗುರುರಾಮವಿಠಲ
ಏತಕೀ ಭಯ ನೀತಿಯೇನಯ್ಯ ಪ ಮಾತುಕೇಳು ತಾಮನದಲ್ಲಿನೊಂದು ಅ.ಪ ತಬ್ಬಿಕೊಂಡಿರ್ಪ ಪ್ರಾರಬ್ದ ಬಿಡುವುದೆ ಅಬ್ಜನಾಭನಿರುವ ನಮ್ಮರಕ್ಷಿಸಲು 1 ಬೊಬ್ಬೆರೋಗ ಬಂತೆಂದಬ್ಬರ ಜನಗೈಯ್ಯೆ ಉಬ್ಬಿಉಬ್ಬಿನೀ ಊರಬಿಟ್ಟೋಡಲು 2 ಹುಲಿಗಳಂಥನರರು ಇಲಿಯ ನೋಡಿ ಬೆದರಿ ಕಳೆದುಕೊಂಬರು ತಮ್ಮ ಸರ್ವಸ್ವವ 3 ಛಳಿ ಮಳೆಯು ಬಿಸಿಲು ಗಾಳಿಯೊಳು ಬಳಲುವುದ್ಯಾಕೆ ಬುದ್ಧಿಯಿಲ್ಲದೆ 4 ಕುನ್ನಿ ನಿನ್ನಂಥವರೆಷ್ಟುಮಂದಿ ಪೋದರು ಘನ್ನಗುರುರಾಮವಿಠಲನ್ನ ನಂಬು5
--------------
ಗುರುರಾಮವಿಠಲ
ದಾರಿ ಒಳ್ಳೇದಾಗಿರಬೇಕೂ ಹರಿದಾಸನಾದ ಮೇಲೆ ಪ ಯಾರೇ ಬಂದರೂ ಸರಿ ಯಾವ ಕಾಲದಲ್ಲಿಯು ಪಾರಗಾಣದಂಥಾ ಈ ಸಂಸಾರವಾರ್ಧಿ ದಾಟುವದಿಕ್ಕೆ ಅ.ಪ ಜ್ಞಾನ ಭಕ್ತಿ ದಾನಧರ್ಮ ವೈರಾಗ್ಯದಿ ಸದ್ಗುಣಂಗಳು ತಾನೆ ತಾನಾಗೆಲ್ಲವು ಸ್ವಾಧೀನವಾಗಿರಬೇಕಾದರೆ 1 ಓದಿದರ್ಥ ಮನಕೆ ತಿಳಿದು ನಿರತವು ಸಾಧನವು ಮಾಡುತ ಅ- ನಾದಿ ಸಿದ್ಧವಾದ ತತ್ವದ ಹಾದಿ ಕಾಣಬೇಕಾದರೆ 2 ತಾಮಸಾದಿ ದುರ್ಗುಣ ನಿರ್ನಾಮವಾಗಿ ಪ್ರೇಮದಿಂ ಗುರುರಾಮವಿಠಲನ್ನ ನೆನೆವದಕ್ಕೆ 3
--------------
ಗುರುರಾಮವಿಠಲ
ಪ್ರಾಣಪತೇ ಗುರುವರೇಣ್ಯಾಗ್ರಗಣ್ಯ ಪ ಕಾಣೇ ನಿನಗೆ ಸರಿಜಾಣರ ತ್ರಿಜಗದೊಳು ಅ.ಪ ರಾಮಕೃಷ್ಣ ವೇದವ್ಯಾಸ ನೀ ಮೂರವತಾರದಿ ಪ್ರೇಮದಿ ಮಾಡಿದೆ ನಿಷ್ಕಾಮ ಮಾರ್ಗಸ್ಥಾಪಕನೆ 1 ಧಾರಾಳವಾಗಿ ನಿಲ್ಲಿಸಿ ಕ್ರೂರರೆದೆಯವೊಡೆದೆ 2 ನಿನ್ನ ನಂಬಾದವ ಬನ್ನಬಡುವ ಭವದಿ ಚೆನ್ನಗುರುರಾಮವಿಠಲನ್ನ ಮಚ್ಚಿಸಿದೆ ಧೀರಾ 3
--------------
ಗುರುರಾಮವಿಠಲ