ಒಟ್ಟು 5 ಕಡೆಗಳಲ್ಲಿ , 1 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಂದೆತಾಯಿ ನೀನೆ ಬಾ ಬೇಗನೆ ಪ ಮಂದರೋದ್ಧಾರ ಮನ್ಮಥ ಜನಕ ಆ- ಮಾಧವ ವಾಸುದೇವ ಗೋವಿಂದ ಮಧುಸೂಧನ ದಾಶರಥೇ ಸಂಕರ್ಷಣ ತ್ರಿವಿಕ್ರಮ ಹೃಷಿಕೇಶ ನಾರಸಿಂಹ ಪರಬ್ರಹ್ಮ 1 ಪದ್ಮನಾಭಾಚ್ಯುತ ದಾಮೋದರ ಜ- ಪ್ರದ್ಯುಮ್ನಧೋಕ್ಷಜ ನಾರಾಯಣ ಅನಿ- ರುದ್ಧ ವಿಷ್ಣು ಭೂಧರ ಉಪೇಂದ್ರ 2 ಅರಿತು ಚತುರ್ವಿಂಶತಿ ನಾಮವ ಶರಣರದುರಿತವ ಪರಿಹರಿಸುವನಮ್ಮ ಗುರುರಾಮವಿಠಲನೆ ನಿನ್ನನೆ ನಾಂ 3
--------------
ಗುರುರಾಮವಿಠಲ
ಬಂದಿರುವೆನು ಭೂಜಾತೆ | ಶರ- ದಿಂದುವದನೆ ವೋ ಸೀತೆ ಪ ಕೂಗುವುದೇತಕೆ ನಿಮ್ಮಯ ಪೆಸರೇ ನೀಗ ತಿಳಿಸಿರೈ ಸ್ವಾಮಿ | ನುಡಿ ಭಾಗವತ ಜನಪ್ರೇಮಿ ಅ.ಪ ಹೀನತಮವ ಮುರಿದಜಗೆ ಶೃತಿಗಳಿತ್ತ ಮೀನಾವತಾರನೆ ನಾನು | ಬಾ ಜಾನಕಿ ಬೇಗನೆ ನೀನು ಮೀನಾದರೆ ನೀರೊಳಗಿರುವುದು ಸರಿ ಮಾನಿನಿಯಲಿ ಕಾರ್ಯವೇನು | ನಡಿ ದೀನ ಜನರ ಸುರಧೇನು 1 ಕಮಲನಯನೆ ನಾ ಪೂರ್ವದಿ | ಗಜ- ಗಮನೆಯೆ ನೋಡನುರಾಗದಿ ಭ್ರಮೆಯಾತಕೆ ಕೇಳ್ ಕಠಿಣಾಂಗಗೆ ನಾ ಸಮಳೆ ನಿನಗೆ ನೀ ನೋಡು | ಸಂ ಭ್ರಮವಿದ್ದಲಿ ನಲಿದಾಡು 2 ವರಹಾರೂಪನೆ ಕಾಮಿನಿ | ಓ ತರುಣಿಯರೊಳಗೆ ಶಿರೋಮಣಿ ವರಾಹನಾದರೆ ಅಡವಿಯ ತಿರುಗುತ- ಲಿರದೇತಕೆ ಇಲ್ಲಿ ಬಂದೆ | ನಡಿ ಪರಿಪರಿ ಮೃಗಗಳ ಹಿಂದೆ 3 ಕರುಳ ಬಗೆದ ನರಸಿಂಹ | ನಾನು ಪರಮ ಪುರಷ ಪರಬ್ರಹ್ಮ ನರಸಿಂಹನು ನೀನಾದರೆ ನಡಿನಡಿ ಗಿರಿಗುಹೆಯೊಳಗಿರು ಹೋಗೈ | ಬಹು ಪರಿನುಡಿಗಳು ನಿನಗೇಕೈ 4 ಭೂಮಿಯ ದಾನವ ಬೇಡಿ ಬಲಿಯ ಗೆದ್ದ ವಾಮನ ನಾನೆಲೆ ನಾರಿ | ಸು ತ್ರಾಮಾದ್ಯರಿಗುಪಕಾರಿ ಬ್ರಾಹ್ಮಣನಾದರೆ ನಮಿಸುವೆ ಚರಣಕೆ ಹೋಮಧ್ಯಾನ ಜಪಮಾಡೈ | ನಿ ಷ್ಕಾಮ ಜನರ ಪಥನೋಡೈ 5 ದುರುಳನೃಪರ ಸಂಹರಿಸವನಿಯ ಭೂ ಸುರರಿಗೆ ಕೊಟ್ಟೆನೆ ದಾನವು | ಕೇಳ್ ಪರಶುರಾಮಾಭಿದಾನವು ವರಮಾತೆಯ ಶಿರವರಿದವ ನೀನಂತೆ ಸರಸವೇತಕೆನ್ನಲ್ಲಿ | ಮನ ಬರುವಲ್ಲಿಗೆ ತೆರಳಲ್ಲಿ 6 ತಾಯನುಡಿಗೆ ತಮ್ಮಗೆ ರಾಜ್ಯವ ಕೊಟ್ಟು ಪ್ರಿಯದಿ ವನದೊಳಗಿದ್ದೆನೆ | ದೈ ತ್ಯೇಯ ನಿಕರವನು ಗೆದ್ದೆನೆ ಸ್ರೀಯರಲ್ಲಿ ಹಿತವೇನು | ಕಮ ಲಾಯತಾಕ್ಷ ನಡಿ ನೀನು 7 ನಾರಿಯರನು ಕೂಡಿ ರಾಸ ಕ್ರೀಡೆಯೊಳ್ ತೋರಿದೆ ಪರಿಪರಿ ಚಿತ್ರವ | ವಿ- ಜಾರ ಪುರಷನಿಗೆ ಹೋಲುವಳಲ್ಲವು ಸಾರ ಪತಿವ್ರತೆ ನಾನು | ಇ- ನ್ನ್ಯಾರು ತಿಳಿಸು ಮತ್ತೆ ನೀನು 8 ಪತಿವ್ರತೆಯರ ಸದ್‍ವ್ರತವ ಕೆಡಿಸಿದಾ ಪ್ರತಿಮ ಬುದ್ಧನೆ ಲತಾಂಗಿ | ಓ ಮತಿವಂತಳೆ ಮೋಹನಾಂಗಿ ಕೃತಕವಾಡದಿರು ಒಲ್ಲೆ | ಕೇ ಳತಿ ಮೋಹಕ ನೀ ಬಲ್ಲೆ 9 ಹಲವು ನುಡಿಗಳೇನು ಕಲಿಯುಗಾಂತದಲಿ ಮಲೆತ ಮನುಜರನು ಕೊಲ್ವೆನೆ | ಓ ಲಲನೆ ನೋಡು ಬಲು ಚೆಲ್ವನೇ ಕಲಿತನವ ತೋರಿಸದಿರು ಈ ಪರಿ ಹಲವು ವೇಷ ನಿನಗೇಕೆ | ಕೇ ಳೆಲವೊ ಸ್ವಾಮಿ ನುಡಿ ಜೋಕೆ 10 ವೇಷವಲ್ಲ ಸರ್ವೇಶ ನಾನು ಪರಿ- ಪೋಷಿಸುವೆನು ನಿಜಭಕ್ತರ | ಸಂ- ತೋಷಿಸುವೆನು ಧರ್ಮಯುಕ್ತರ ಪೋಷಿಸುವನು ನೀನಾದರೆಲ್ಲಿ ನಿನ್ನ ವಾಸಪೇಳು ನಿಜವೀಗಾ | ಪರಿ ಹಾಸವೇಕೆ ನುಡಿಬೇಗ 11 ಪರಮಾತ್ಮನು ನಾ ಕೇಳೆ | ಎನ್ನ ಮರತೆಯೇನೆ ಎಲೆ ಬಾಲೆ ಅರಿತೆನೀಗ ಬಹು ಸಂತಸವಾಯಿತು ಎರಗುವೆ ಚರಣಕೆ ನಾನು | ನಿನ್ನ ಸರಿಯಾರೈ ದೊರೆ ನೀನು 12 ಧರೆಯೊಳಯೋಧ್ಯಾ ಪುರದರಸನ ಮಗ ಗುರುರಾಮವಿಠಲನೆ ನಾನು | ಓ ತರುಣಿ ನಿನಗೊಲಿದು ಬಂದೆನು ಧರಣಿ ತನಯೆ ನಸುನಾಚಿಕೆಯಿಂದಲಿ ಣಗಳನು ತೊಳೆದಳು ಬೇಗ 13
--------------
ಗುರುರಾಮವಿಠಲ
ಮಂದಮತಿಯೇ ಮಾನವಾ ಪ ಹಿಂದೊ ಮುಂದೊ ಎಂದು ಯೋಚಿಸದಿರು ಅ.ಪ ಸತತವು ಲಕ್ಷ್ಮೀಪತಿಯ ಭಜಿಸು 1 ಭಾವದಿ ತಿಳಿದತಿಭಕ್ತಿಯೊಳಿರು 2 ಈ ಚರಾಚರಕು ಗೋಚರಿಸುವ ಕಂಜ- ಲೋಚನನೆಂದು ನಿನ್ನ ನಾಚಿಕೆ ಬಿಡು 3 ಕೊರಳು ನೋಯುವಂತೆ ಕೂಗುತಲಿರು 4 ಪರದಲಿ ಮುಕ್ತಿಯು ಇಹದಲಿ ಸೌಖ್ಯವು ಗುರುರಾಮವಿಠಲನೆ ಕರುಣಿಸುವನು 5
--------------
ಗುರುರಾಮವಿಠಲ
ಸರ್ವಾಂತರ್ಯಾಮಿ ನಿನಗೆ ಪ ದೇವತಿರ್ಯಗ್ ಮನುಷ್ಯಾದಿ ಜಂತುಗಳಲ್ಲಿ ದಿವಿಭುವಿ ಪಾತಾಳದೊಳ ಹೊರಗಿರುವಗೆ ಅ.ಪ ಪ್ರಾಣ ಪ್ರತಿಷ್ಟೆಗೋಳಕತ್ರಯ ಚಿಂತನೆ ನೀನೆ ಕರುಣದಿ ಮನ್ಮಾನಸದೊಳು ಪೊಳ- ದೇನೇನು ಮಾಡಿಸಲದು ನಿನಗರ್ಪಿತ 1 ಅಣುವಿನೊಳಣುವಾಗಿ ಮಹತ್ತಿನೊಳ್ಮಹತ್ತಾಗಿ ಎಣÉಸಲೆನ್ನಳವೆ ನಿನ್ನಯ ಮಹಾಮಹಿಮೆಯ ವಿನುತಿಸುವುದು ಕೊನೆಗಾಣದೆ ಶೃತಿ ತತಿ 2 ಶ್ವೇತದ್ವೀಪಾನಂತಾಸನ ವೈಕುಂಠ ಆ- ಪ್ರೀತಿಯಿಂದಲಿ ನಿನ್ನ ಭಜಿಸುತಿರುವ ಭಕ್ತ- ವ್ರಾತವ ಸಲಹುವ ಗುರುರಾಮವಿಠಲನೆ 3
--------------
ಗುರುರಾಮವಿಠಲ
ಸ್ನಾನಾ ಮಾಡೈಯ ಸರ್ವಾಧಾರಾ ಪ ಜಾನಕೀವಲ್ಲಭ ನೀನೆ ನಿರ್ಮಲ ಮೂರ್ತಿಅ.ಪ ಸ್ಮರಿಸಿದ ಮಾತ್ರದಿ ಪರಿಶುದ್ಧ ಮಾಳ್ಪೆನೆಂ ದುರುತರ ಶೃತಿಗಳು ಪೊಗಳುತಿಹವು ನಿನ್ನ 1 ಕ್ಷೀರದದಾಜ್ಯ ಮಧುಶರ್ಕರ ಫಲಗಳಿಂ ನಾರಿಕೇಳೋದಕದಿಂದ ಪಂಚಾಮೃತ 2 ಗಂಗೆ ಗೋದಾವರಿ ಯಮುನೆ ಸರಸ್ವತಿ ಸಿಂಧು ಕಾವೇರಿ ಜಲಗಳಿಂ3 ಪುನಗು ಕೇಸರಿ ಕರ್ಪೂರ ಕಸ್ತೂರಿ ಪರಮದ್ರವ್ಯವು ನವರತ್ನ ಮುತ್ತುಗಳಿಂದ 4 ಭಾಗವತಪ್ರಿಯ ಗುರುರಾಮವಿಠಲನೆ 5
--------------
ಗುರುರಾಮವಿಠಲ