ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮರುಳು ಜೀವ ಏನು ಕಾಣುವೆ ಕೊನೆಗೆ ಪ ಸರ್ವಸಮರ್ಪಣೆ ಮಾಡದೆ ಇದರೊಳು ಅ.ಪ ಯಮನವರೆಳೆಯದೆ ಬಿಡುವರೆ ಛೀ ಹುಚ್ಚಾ 1 ಇಂದ್ರಿಯಂಗಳು ನಿನ್ನಾಧೀನವಲ್ಲ ಬಂದಮಾರ್ಗ ಸುಖ ಮರೆತು ಹೋದೆಯಲ್ಲ ಮುಂದಿನ ಗತಿ ಗೋತ್ರ ಮೊದಲಿಗೆ ಇಲ್ಲ ಮುಪ್ಪುತನವು ಹತ್ತಿರೇ ಬಂದಿತಲ್ಲ 2 ಕರ್ಮವೆಂಬುವುದೊಂದು ಅನಾದಿಯಾಗಿ ಧರ್ಮವ ಗಳಿಸುವವನೆ ಪರಮತ್ಯಾಗಿ ನಿರ್ಮಲ ಮನದಿ ದುರಾಶೆಯ ನೀಗಿ ಮರ್ಮವನರಿತುಕೊಂಡವನೇ ಮಹಾಯೋಗಿ3 ಭೋಗದಾಸೆಯ ಬಿಡು ಮೂರುದಿನದ ಬಾಳು ಕೂಗುತಿಹವು ಶೃತಿ ಸ್ಮøತಿಪುರಾಣಗಳು 4 ಸತಿಸುತರನು ನಾನೆ ಸಾಕುವೆನೆಂದು ಮತಿಗೆಟ್ಟು ಭ್ರಾಂತಿ ಹೊಂದುವೆ ನೀ ಮುಂದು ಮಿತಿಯ ಬರಹ ತಪ್ಪುವುದಿಲ್ಲ ಎಂದು ಪತಿ ಗುಣಸಿಂಧು 5 ಆಹಾರ ನಿದ್ರೆಯಲ್ಲವೆ ನಿನ್ನ ಆಟ ಸಾಹಸ ನೋಡೆ ಮಾಳಿಗೆಯ ಓಡ್ಯಾಟ ಮೋಹದಿಂದಲಿ ಮುಂದೆ ಬರುವುದು ಗೂಟ ಮೂಜಗದೊಳಗೆಲ್ಲಾ ಇದು ಗೊಂಬೆ ಆಟ 6 ಕಾಮಕ್ರೋಧಗಳು ಬಿಡಲಾರೆಯೇನೊ ಪಾಮರ ಜೀವ ಅಸ್ವಾತಂತ್ರಾ ನೀನೊ ಯಾಮಯಾಮಕೆ ಗುರುರಾಮವಿಠಲನಂಘ್ರಿ ನೇಮದಿಂದಲಿ ಭಜಿಸಿ ಸುಖವಾಗುವುದು ಕಾಣೊ7
--------------
ಗುರುರಾಮವಿಠಲ
ಮರುಳು ಮನುಜ ಹರಿಯ ಧ್ಯಾನಿಸೋ ಸ್ಥಿರವಿಲ್ಲವೀದೇಹ ಪ ಬರಿದೆ ಹೊನ್ನು ಮಣ್ಣಿಗಾಗಿ ಇರುಳು ಹಗಲು ವ್ಯರ್ಥವಾಗಿ ಕರೆಕರೆಯನು ಪಡುವೆಯಲ್ಲೊ ಅ.ಪ ತಂದೆ ತಾಯಿ ಸತಿಯು ಸುತರು ಬಂಧು ಬಳಗಗಳಾರಿದ್ದರು ಕರ್ಮ ತಪ್ಪಿಪರಾರು ಸಂದೇಹವಿಲ್ಲೆಂದು ತಿಳಿದು 1 ಜನರು ನಿನ್ನ ಸೇರುತಿಹರು ಕೊನೆಗೆ ಯಾರು ದಿಕ್ಕು ಕಾಣೆ ಮನೆಯಬಿಟ್ಟು ಹೋಗುವಾಗ 2 ಗುರುರಾಮವಿಠಲನಂಘ್ರಿ ಸ್ಮರಿಸಿ ಸ್ಮರಿಸಿ ಹರುಷ ಪೊಂದಿ ಪಾಪಿಯೆನ್ನಿಸಿಕೊಳ್ಳಬೇಡವೊ 3
--------------
ಗುರುರಾಮವಿಠಲ