ಒಟ್ಟು 4 ಕಡೆಗಳಲ್ಲಿ , 1 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅವನೆವೆ ಶರಣಾ ಪ ಗುರುಗರಡಿಯ ಮನಿಯೊಳು ಬೆರೆದು | ಗುರುದಾಸರ ಸಂಗವ ಬಲಿದು | ಅರಿತಾವಿನಾ ಅಲ್ಲಿಯ ಕಳೆಗಳ ತಿಳಿದು 1 ಹರಿದಾಡುವ ಚಂಚಲ ನೀಗಿ | ಗುರುಸೇವೆಯಲಿ ತತ್ಪರನಾಗಿ | ಕರುಣವ ಬೀರ್ವನು ಅರಿಸಖರೊಳಗಾಗಿ2 ಆರಿಗೆ ಹೊಲ್ಲೆಯ ತಾ ನುಡಿಯಾ | ಆರಿಂದು ನಿಷ್ಟುರ ಪಡಿಯಾ | ಧರಿಯೊಳು ಸನ್ಮತ ಮಾರ್ಗದಿ ತಾ ನಡಿಯಾ3 ದೋರಗಡುದೆ ಬಲ್ಲವಿಕೆಯನು | ಪರರವಗುಣವನು ಅರಿಸನು | ನೀರು ಹಾಲಿನ ಸಖ್ಯಕ ಪರಿಲಿಹನು4 ತನುಧನ ಮದದೊಳು ಬೆರಿತಿರದೇ ಘನದೆಚ್ಚರಿಕೆಯ ಮರೆದಿರದೇ ನೆನೆವನು ಗುರುಮಹಿಪತಿಸ್ವಾಮಿಯ ಬಿಡದೇ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇವರೆವೆ ಧನ್ಯರಲ್ಲವೆ ಈ ಶರಣರು | ಈ ಶರಣರು | ಇವರೆವೆ ಧನ್ಯರಲ್ಲವೆ ಅವನಿಲಿ ಶರಣರು ಪ ಕರುಣಾನಂದವ ಪಡೆದು | ತರಣೋಪಾಯವನರಿದು | ಜರಿವನ್ಯ ಹಂಬಲವ ಬೆರೆದು | ಭಕ್ತಿರಸದೊಳು | ನಿರಪೇಕ್ಷ ವೃತ್ತಿಯಿಂದಾ | ಚರರಿಸುತಿಹ ಶರಣರು 1 ಭವ ಕಾನನವನೆ ತೊರೆವಾ | ನಿತ್ಯ ತಾನಾರೆಂಬುದು ನರಿವಾ | ಸ್ವಾನಂದಬೋಧವನು ಮಾನ | ನೀಗಿ ಶ್ರವಣದಿ | ಸಾನುರಾಗದಲಿಂದ ತಾನುಂಬ ಶರಣರು 2 ಹರಿಯಲ್ಲರೊಳಗರಿದು | ಶರೀರ ಭಾವನೆ ಮರೆದು | ಹರುಷದ ಗುಡಿಗಟ್ಟಿಬರುವ | ನಯನೋದಕದಿ | ಗುರುಮಹಿಪತಿಸ್ವಾಮಿ ಚರಣದ ಶರಣರು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಕ್ಷತ್ರ ರಮಣ ನಯ್ಯನಿಗೊಲಿದು ಶರವನಿತ್ತೆ | ನಕ್ಷತ್ರ ದೊಲ್ಲಭನ ತಮ್ಮನ ಸುತನ ಸುಟ್ಟೆ | ನಕ್ಷತ್ರ ಇಲ್ಲದವನ ವೈರಿಗಮನನ ತಾತ | ನಕ್ಷತ್ರ ಕಾಂತಧರನೇ || ನಕ್ಷತ್ರ ಜಾತ - ನಗ್ರಜನ ಮಸ್ತಕವ ತರಿದೇ | ನಕ್ಷತ್ರ ಸಹಸ್ರ ಉಳ್ಳವನ ದ್ವಾರವನು ಕಾಯ್ದೆ | ನಕ್ಷತ್ರ ನೀನೇ ಇಂದ್ರಾದಿ ದೇವತೆಗಳಿಗೆ ಗುರುಮಹಿಪತಿಸ್ವಾಮಿ | ನಕ್ಷತ್ರ ಭೂಷಸಲಹೋ 1
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡು ನೋಡು ನಿನ್ನ ಹಿತವಾ ಪ ಇಂದು ನರದೇಹದಲ್ಲಿ ಬಂದುದೇನೋ | ಒಂದು ಪಥವರಿಯದಾ ಛಂದವೇನೋ ಅ.ಪ ಗುರುವಿನಂಘ್ರಿಯ ಕಂಡ ಗುರುತ ಅನುಭವನುಂಡ ಸೈಸ್ಯೆ | ಕರುವೇ ಬಾರೆನ್ನುತಾ ಸೈಸ್ಯೆ | ಶರಣ ಬಾರೆನ್ನುತಾ ಸೈಸ್ಯೆ | ಹರಿಯ ಭಕ್ತ ನೆನ್ನುತಾ ಧರಿಯೊಳ್ಹೀಂಗ ಹಿರಿಯರಿಂದ | ಕರಿಸ ಕೊಳ್ಳಲಾಗದೇ | ಬರಿದೆ ಭ್ರಾಂತಿಗೆ ಬಿದ್ದು | ಬರಡ ಜನ್ಮ ಮಾಡ ಬ್ಯಾಡಾ 1 ನೀಗಿ ಕೇಳು ಕೇಳು | ಆದಿ ಸನ್ಮಾರ್ಗವ ಕೇಳು ಕೇಳು | ಸಾಧನವ ಬಲಿಯೋ ನೀ | ಕಂದ ಭೂಮಿಯ ಮೇಲೆ ಹನಿ ಮಾಡದೇ 2 ಗುರುಮಹಿಪತಿಸ್ವಾಮಿ ಅರ್ಹವಿನೊಳಗೆರಕವಾದ ಧೀರ ಧೀರ| ನೀರು ಪದ್ಮ ಹೋಲುವಾ ಎರಡು ಸಮನಿನಿಸಿ ಸುಖ | ಭರಿತರಾದ ಪರಿಯಲಿ ಹರಿಯ ಧ್ಯಾನ ಬಲಿಯೋ ಮೈಯ್ಯ | ಮರೆಯಬೇಡಾ ಮನವೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು