ಒಟ್ಟು 4 ಕಡೆಗಳಲ್ಲಿ , 1 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜೋ ಜೋಯನುತಲಿ ಗೋಪಿ ವಾಣಿಲಿತೂಗಿದಳು ಕೃಷ್ಣನ್ನ ಜೋ ಜೋ ಪ ರನ್ನ ಖಚಿತ ತೊಟ್ಟಿಲದೊಳಗ ಚಿನ್ನಾಂಬರದ್ಹಾಸಿಗಿ ಹಾಕಿ ಉನ್ನತ ಮಹಿಮನ ತಂದಿರಿಸಿ ಚೆನ್ನಾಗಿ ಪಿಡಿದ್ಹೆಡೆಯಾಡಿಸುತಾ 1 ದುಷ್ಟ ಸೋದರ ಮಾವನ ತಲೆಯಾ ಅಷ್ಟಮಿ ದಿವಸದ ರಾತ್ರಿಯಲಿ ಸ್ಪಷ್ಟದಿ ಪ್ರಕಟಿಸಿದೈಧರಿಲಿ 2 ಸುರರ ಮನೋಬಯಕೆಯವೃಕ್ಷಾ ಗುರುಮಹಿಪತಿಸುತ ಗಧ್ಯಕ್ಷಾ ಗಿರುವೆನೀ ಮಾಡು ಸಂರಕ್ಷಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡಿರೈ ಜನಾ ರಂಜನೆಯಲ್ಲಿ | ನೋಡಿರೈ ಜನಾ | ಮಾಡದೆ ಹಿರಿಗುರು ಭಕ್ತಿಯ ಶೀಲದಿ | ರೂಢಿಯ ಡಂಭಕ ಹರಿದಾಡುವದು ಪ ಸಾಧು ಸಂತರ ಮನೆಯಲ್ಲಿ | ಆದರವಿಲ್ಲಾ ಮನದಲ್ಲಿ | ಮೇದಿನಿಯಲಿ ನುಡಿಸಿದ್ಧಿಯ ಹೇಳಲು | ಸಾಧಿಸಿ ಹೋಗುತ ಬಾಗುತಲಿಹುದು 1 ಚಂದನವಿಡಿದು ತೆಯ್ವಲ್ಲಿ | ಒಂದು ಬಾರದು ನೊಣವಲ್ಲಿ | ಕುಂದದೆ ಎಂಜಲ ತೊಳೆವಾಸ್ಥಳದಲ್ಲಿ | ಸಂದಿಸಿ ಮುಕುರುವ ಸಂದಲಿ ಯಂದದಿ 2 ಪರಗತಿ ಸಾಧನ ವರಿಯರು | ಬರಿದೆ ಭ್ರಾಂತಿಗೆ ಬೆರೆವರು | ಗುರುಮಹಿಪತಿಸುತ ಪ್ರಭು ಕಲ್ಪತರು | ಸೇರದೆ ಬೊಬ್ಬುಲಿ ಮರಕೆಳಗಾಡುವ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮೂರ್ಖರ ವಡಂಬಡಿಸಲಾಗವದೆಂದೆಂದು ಪ ಮಳಲ ತಂದಿಕ್ಕಿ ಗಾಣದೊಳಗ ಸಾಯಸದಿಂದ | ಬಲಿದು ಎಣ್ಣೆಯ ತೆಗೆಯಲಿಬಹುದು 1 ಗಿರಿಗಳಂದದಿ ಬಹಥೆರೆಗಳ ಕಡಿಯುತ | ಶರಧಿಯದಾಟಿ ಹೋಗಲು ಬಹುದು 2 ಇಳೆಯೊಳು ತಿರುಗುತ ದೇಶ ದೇಶಗಳನು | ಮೊಲದಾ ಕೋಡವ ದೊರಕಿಸಬಹುದು 3 ತೋರುವ ಮೃಗಜಲ ಹಿಡಿದು ಪ್ರಾಶನ ಮಾಡಿ | ನೀರಡಕಿ ಶಾಂತ ಮಾಡಿಲಿಬಹುದು 4 ಮೊಸಳಿದಾಡಿಯೊಳಿಹ ಅಮೌಲಿಕ ರತ್ನ ತನ್ನ | ವಶವನೆ ಮಾಡಿಕೊಳ್ಳಲಿಬಹುದು 5 ಪರಿ | ಶಿರಸದಿ ಬೇಗ ಧರಿಸಲಿಬಹುದು 6 ಗುರುಮಹಿಪತಿಸುತ ಪ್ರಭು ಗುರುತಿಲ್ಲವರಾ | ನೆರಳಿಗೆ ದೂರ ಕೈ ಮುಗಿವನು 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀಮತ್ಕಾಂಚನ ಕೋಟಿರನ್ನತನಯಾ | ಕ್ಷೀರಾಂಬುನಿಧಿ ಮಧ್ಯದಿ | ನೇಮದಿಂ ನಿಜಧಾಮದಲ್ಲಿ ರಮೆಯಾ | ಒಡಗೂಡಿ ಸುರಸಿದ್ಧದೀ | ಸಾಮಗಾಯನ ಪ್ರಿಯನಾಗಿನಿರುತಾ | ಪಾಲಿಪ ಲೋಕಂಗಳಂ | ಮಾಧವ ದಯಾನಿಧೇ ವಧುವರಾ | ಕುರ್ಯಾತ್ಸದಾ ಮಂಗಳಂ | 1 ಭಾನುಕೋಟಿಯ ತೇಜದಿಂ ಬೆಳಗುವಾ | ಮುಕಟವು ಮಸ್ತಕದಿ | ಶ್ರೀ ನೀಲಾಳಕ ಭಾಲಮಧ್ಯಮೆರೆವಾ | ಕೇಶರ ಪೌಂಡ್ರಕದಿ | ಸೂನಾಸಿಕದಿ ವಾರಜಾಕ್ಷಅಧರಿಂ | ದೊಪ್ಪುವ ಕರ್ಣಂಗಳಂ | ತಾನೀಕುಂಡಲ ಭೂಷಣಾ ವಧುವರಾ | ಕುರ್ಯಾತ್ಸದಾ ಮಂಗಳಂ 2 ಶ್ರೀ ಲಕ್ಷ್ಮೀ ನಿಜಶಾರದಾಗಿರಿಸುತೇ | ಭಾರತೀ - ಶಚಿ- ಭಾಮಿನೀ | ಕಾಲಿಂದೀವರ ನರ್ಮದಾ ಸರಸ್ವತೀ | ಗಂಗಾ ತ್ರಿಪಥಗಾಮಿನೀ | ಪಾಲಿಸುವ ಗೋದಾವರೀ ಭೀಮರಥೀ | ಶ್ರೀ ಕೃಷ್ಣ ವೇಣಿಂಗಳಂ | ಮೇಲೆ ಕಾವೇರಿತುಂಗೆ ತಾವಧುವರಾ | ಕುರ್ಯಾತ್ಸದಾ ಮಂಗಳಂ 3 ವಾರಿಜಾಸನ ವಾಯು ಶಂಕರಗುರು | ತ್ವಂಹೇಂದ್ರ ವಸಿಷ್ಠನು | ಭಾರದ್ವಾಜ ಪರಾಶರಾತ್ರಿ ಭೃಗು ಕ- ಶ್ಯಪ ಕೌಶಿಕ ಶ್ರೇಷ್ಠನು | ಕಾರುಣೀ ಜಮದಗ್ನಿ ರಾಮ ಮರಿಚೀ | ವ್ಯಾಸಾದಿ ಋಷಿ ಪುಂಗಳಂ | ನಾರದಾದಿ ಮುನೀಂದ್ರರೀ ವಧುವರಾ | ಕುರ್ಯಾತ್ಸದಾ ಮಂಗಳಂ 4 ಇಂದ್ರೋವಹ್ನಿ ಪಿತೃಪತಿ - ನಿಋಋತಿ | ಮಕರೇಶ ಪ್ರಭಂಜನಾ | ಸಾಂದ್ರೈಶ್ವರ್ಯ ಕುಬೇರ ಈಶದಿಕ್ಪಾ ಲಾದಿತ್ಯಶಶಿರಂಜನಾ | ಚಂದ್ರಾತ್ಮಜನುಭೌಮದೇವಗುರುತಾ | ಕವಿಮಂದ ಗ್ರಹಂಗಳಂ | ಸಾಂದ್ರಾಗೀಹ ಸಮಸ್ತಗಿರೀ ವಧುವರಾ | ಕುರ್ಯಾತ್ಸದಾ ಮಂಗಳಂ 5 ಶ್ರೀ ಮತ್ಸ್ಯಾಕೃತಿ ಕೂರ್ಮನಾಗಿ ವರಹಾ | ನರಸಿಂಹನೆಂದೆ ನಿಸಿದಾ | ವಾಮನಾಭೃಗುವರ್ಯರಾಮರಘುಪಾ | ಯದುವಂಶದಲಿ ಜನಿಸಿದಾ | ತಾ ಮತ್ತೇ ನಿಜ ಬೌದ್ಧಕಲ್ಕಿ ಎನಿಸೀ | ತಾಳ್ದಾವತಾರಂಗಳಂ | ಶ್ರೀ ಮನೋಹರ ದೇವಕೀ ವಧುವರಾ | ಕುರ್ಯಾತ್ಸದಾ ಮಂಗಳಂ 6 ಕಾಶೀ ಕಂಚಿ ಅವಂತಿಕಾ ವರಪುರೀ | ದ್ವಾರಾವತೀ ಮಥುರಾ | ದೋಷನಾಶಿಕ ಪುಣ್ಯಕ್ಷೇತ್ರ ಬದರೀ | ಶೇಷಾದ್ರಿವರ ಸೇತುಬಧ ತುಹಿನಾ | ರಜತಾದ್ರಿ ಸೈಲಂಗಳಂ | ಈ ಸಪ್ತಾಂಬುಧೀ ಸರ್ವದೀ ವಧುವರಾ | ಕುರ್ಯಾತ್ಸದಾ ಮಂಗಳಂ 7 ದಶರಥಾತ್ಮಜನಾದ ರಾಮಜಗದೀ | ಜನಕಾತ್ಮಜಾ ಸೀತೆಯಾ | ಕುಶಲದೀ ನರಲೀಲೆಯಿಂದ ಮೆರೆವಾ ವೈಭವ ಸಂಗsತಿಯಾ ಉಸರೀದಾ ಗುರುಮಹಿಪತಿಸುತ ಕ- ನ್ನಡ ಭಾಡೆ ಶ್ಲೋಕಂಗಳಂ | ವಸುಧೆಯಲಿ ಸ್ಮರಿಸುವವರಿಂಗೆ ಕೊಡುವಾ | ರಘುನಾಥ ಜಯಮಂಗಳಂ 8
--------------
ಕಾಖಂಡಕಿ ಶ್ರೀ ಕೃಷ್ಣದಾಸರು