ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನುದಿನವು ಶ್ರವಣಮನನಾದಿ ಸಾಧನ ಮಾಡು ಇನ್ನು ಸಂಶಯವ್ಯಾತಕೊ ಪ. ಏನು ಶಪಥವ ಮಾಡಲಿ ಮತವು ಹಿರಿದೆಂದು ಜ್ಞಾನಿಗಳ ಸಮ್ಮತವೊ ಅ.ಪ. ಗುರುಮಧ್ವಶಾಸ್ತ್ರವೆ ಸಕಲ ಶಾಸ್ತ್ರಧಿಕೆಂದು ಶಿರವರಿದು ಮುಂದಿರಿಸಲೆ ಪರಮತಜಾಲವೆಲ್ಲ ವೇದವಿರುದ್ಧವೆಂದು ಶರಧಿಯನು ನಾ ದಾಟಲೆ1 ಭಾಗವತಶಾಸ್ತ್ರವೆ ಬಹು ಭಾಗ್ಯವೆಂತೆಂದು ನೆಗಹಿ ಪರ್ವತವ [ನಿಲಿಸಲೆ] ಭಾಗವತ ನಿಂದಕಗೆ ಬಹು ನರಕವೆಂತೆಂದು ಪರ್ವ- ತಾಗ್ರದಿಂ ಧುಮುಕಲೆ 2 ವಿದಿತ ದೈವರೊಳಗೆ ವಿಷ್ಣು ಉತ್ತಮನೆಂದು ವೇದಂಗಳ ಒಡನುಡಿಸಲೆ ಅಧಿಕಾರಿಗಳೊಳಗೆ ಅಂಬುಜಸಂಭವನೆಂದು [ಕಾದೆಣ್ಣೆ]ಯೊಳು ಮುಣುಗ [ಲೆ] 3 ಪರಲೋಕಸಾಧನಕೆ ತಾರತಮ್ಯಮತವೆಂದು ಗರಳವನು ಕುಡಿಯಲೆ ಹರಿದಿನಕೆ ಮರುದಿನಕೆ ಸರಿಯಿಲ್ಲವೆಂತೆಂದು ಹರಿವ ಹಾವನು ಹಿಡಿಯಲೆ 4 ಗುರುಮಧ್ವರಾಯರೆ ಆತ್ಮರಕ್ಷಕರೆಂದು ಅನಲವ ಕೈ ಪಿಡಿಯಲೆ ಅಮಿತ ಗುಣಪೂರ್ಣನೆಂದು ಅ- ಶರೀರವನು ನುಡಿಸಲೆ 5
--------------
ವಾದಿರಾಜ
ಗುರು ಸತ್ಯಜ್ಞಾನರ ಚರಣ ದರುಶನದಿ ನೂರಾರು ಜನ್ಮ ಪಾವನವಾಯಿತು ಮುದದಿ ಪ ಗುರುಗಳುಪದೇಶದಿಂ ಪರಮ ಪಾವನನಾದೆ ನರಹರಿಯ ಭಜಿಸುವ ಅಧಿಕಾರಿಯಾದೆ ಗುರುಮಧ್ವರಾಯರಾ ಗ್ರಂಥಶ್ರವಣಾದಿಗಳ ನಿರುತದಲಿ ಮಾಡುವುದಕರ್ಹನಾದೆ 1 ಗುರುಗಳುಪದೇಶವಿಲ್ಲದೆ ಮಾಡುವ ಮಂತ್ರ ಗುರುಗಳುಪದೇಶವಿಲ್ಲದ ಜ್ಞಾನವು ಗುರುಗಳುಪದೇಶವಿಲ್ಲದ ಕರ್ಮಕವನಗಳು ಉರಗವಾಸದಂತೆ ಕಾಣಯ್ಯ 2 ಅಂಕಿತವಿಲ್ಲದಾ ಪದ್ಯಗಳು ಶೋಭಿಸವು ಅಂಕಿತವು ಇಲ್ಲದಿರಬಾರದೆನುತಾ ಪಂಕಜನಾಭ ಹನುಮೇಶ ವಿಠಲನೆಂಬೊ ಅಂಕಿತವನಿತ್ತಾ ಗುರುವು ಮಾಡಿ ಮಮತಾ 3
--------------
ಹನುಮೇಶವಿಠಲ
ನಂಬಿದೆನೊ ನಿನ್ನ ಅಂಬುಜನಯನ ಕೃ ಪಾಂಬುಧೆ ದೃಢದಲಿ ಪ ಸಂಭ್ರಮದಲಿ ಕಿವಿ ತುಂಬುತಿರುವ ಆ ಡಂಬರ ವಚನಕೆ ಮುಂಬರಗೊಳ್ಳುತ ಅ.ಪ ನವ ಘನ ನಿಭಕಾಯ ನಿನ್ನಯ ಕರುಣಮಯ ಸಹಾಯ ವಿಲ್ಲದೆ ಬಿಗಿಯುತಿರುವ ಮಾಯಾ ಪಾಶವ ತೊರೆಯಲಳವೆ ಜೀಯಾ ನಿನ್ನಯ ದಯವ ಪಡೆದ ಪರಿಯನರುಹುವ ಯತಿವರೇಣ್ಯ ಗುರುಮಧ್ವರಾಯರ ಪರಮ ಸಮಯ ಸಾರಗಳನು ಸಂತತ ಶ್ರವಣ ಮನನ ಧ್ಯಾನಗಳಿಂದ ಪರಿಚಯ ಪಡೆದು ದು ಷ್ಟ ವಿಷಯಗಳಲಿ ಮತಿಯನು ಮುರಿಯುವಂತೆ ಕರುಣಿಸೋ ಸುಗುಣಾಲಯ 1 ನೀರಜದಳ ನೇತ್ರ ವರ ಸುಖ ಚಿನ್ಮಯೈಕ ಗಾತ್ರ ಸುಜನ ಮಿತ್ರ ಸುರವರ ಸರಸಿಜಭವ ಪುತ್ರ ರುಚಿರರ ಮುಕುಟಾಕ್ಷಪಾತ್ರ ನಿನ್ನಯ ವಿವಿಧ ಲೀಲೆಗಳು ಚಿತ್ರವಿಚಿತ್ರವು ಅರಿತೆನೆಂದು ತಿಳಿದು ಮೆರೆಯುತಲಿರುವ ನರರ ಮದವ ಮುರಿದು ದೈನ್ಯದಿಂದಲಿ ಮರೆತೆನೆಂದು ದಿನದಿನದಲಿ ಭಜಿಪರ ಪೊರೆವ ಪರಮ ಕರುಣಾರಸಮಯನೆ 2 ದೀನಭಕುತರನ್ನು ಪೊರೆಯುವ ದಾಸಿಯೆಂದು ನಿನ್ನ ಪೊಗಳುವ ಮಾನತತಿಗಳನ್ನು ಸಂತತ ಧ್ಯಾನ ಮಾಡಿ ಎನ್ನ ಕ್ಲೇಶವ ಮೌನದಿಂದ ಇನ್ನೂ ಸಹಿಸುತ ಜಾನಕೀಶ ತವ ಪಾದಕಮಲದ ರೇಣುವನ್ನು ಶಿರದಿ ಧರಿಸುತಲಿ ಅನು ಮಾನವನ್ನು ತೊರೆದು ಮುದದಿ ಸುವಿಮಲ ಜ್ಞಾನಮೂರ್ತೆ ಜ್ಞಾನಿವರ ಪ್ರಸನ್ನನೆ ನೀನೆ ಎನ್ನ ರಕ್ಷಕನೆಂದರಿಯುತ 3
--------------
ವಿದ್ಯಾಪ್ರಸನ್ನತೀರ್ಥರು
167ಅಂಜಿಕಿನ್ನೇತಕಯ್ಯ-ಸಜ್ಜನರಿಗೆ |ಅಂಜಿಕಿನ್ನೇತಕಯ್ಯ ಪಸಂಜೀವರಾಯರ ಸ್ಮರಣೆ ಮಾಡಿದ ಮೇಲೆ ಅ.ಪಕನಸಿನೊಳ್ ಮನಸಿನೊಳ್ ಕಳವಳವೇತಕೆಹನುಮನ ನೆನೆದರೆ ಹಾರಿ ಹೋಹುದು ಪಾಪ 1ರೋಮ ರೋಮಕೆ ಕೋಟಿ ಲಿಂಗವುದುರಿಸಿದಭೀಮನ ನೆನೆದರೆ ಬಿಟ್ಟು ಹೋಹುದು ಪಾಪ 2ಪುರಂದರವಿಠಲನ ಪೂಜೆಯ ಮಾಡುವಗುರುಮಧ್ವರಾಯರ ಸ್ಮರಣೆ ಮಾಡಿದ ಮೇಲೆ3
--------------
ಪುರಂದರದಾಸರು
ಹರಿಗೆ ಸರಿ - ಮಿಗಿಲೆನಿಪರಿಲ್ಲ ದೈವಂಗಳೊಳು |ಗುರುಮಧ್ವರಾಯರಿಗೆ ಸರಿಯಿಲ್ಲ ರಾಯರೊಳು |ಪರಮವೈಷ್ಣವರಿಗೆಣೆಯಿಲ್ಲ ಲೋಕದೊಳೆಂದುಬಿಡದೆ ಡಂಗುರವ ಹೊಯಿಸಿ ||ಬಿರುದ ಪಸರಿಸಿ ಢಕ್ಕೆಯವ ನುಡಿಸಿ ಎನ್ನುತಲಿ |ಶರಣು ಹೊಕ್ಕರ ಪಣೆಯ ದುರ್ಲೇಖಮಂ ತೊಡೆದು |ಬರೆದು ವೈಷ್ಣವಲಿಪಿಯ ಶುದ್ಧಾತ್ಮರಂಮಾಳ್ವ ಗುರುರಾಯರನು ಭಜಿಸಿರೈ 1ಭುವನಪಾವನರಪ್ಪ ಪೂರ್ಣಪ್ರಜÕರ ಸ್ತೋತ್ರ |ನವರತ್ನಮಾಲೆಯಿದು ಶ್ರೀ ವಿಷ್ಣುದಾಸರಿಗೆ |ಶ್ರವಣಮಂಗಳವಪ್ಪ ತತ್ತ್ವಾಮೃತದಸಾರಜನ್ಮ ಮೂಲೋತ್ಪಾಟನ ||ಜವನ ಗಂಟಲನೊಡೆದು ತನ್ನ ನಿಜದಾಸರಿಗೆ |ಧ್ರುವವಾಗಿ ಪರಮಪದವಿಯನಿತ್ತು ರಕ್ಷಿಸುವ |ಪವನನಂತರ್ಯಾಮಿಪುರಂದರವಿಠಲನತವಕದಿಂದಲಿ ಭಜಿಸಿರೈ 9
--------------
ಪುರಂದರದಾಸರು