ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಿಜಯ ದಾಸರ ಭಜಿಸಿರೋ | ಸುಜನರೆಲ್ಲ ನೀವೂ ಪ ವಿಜಯ ದಾಸರ ಭಜಿಸೇ | ಕುಜನ ಮರ್ದನ ನಮ್ಮವಿಜಯ ವಿಠಲ ತಾನೇ | ನಿಜವ ತೋರುವ ಮನದೀ ಅ.ಪ. ಮುನ್ನ ಸುರಲೀಲಾ ನೆನಿಸಿ ತಾ |ಜನಿಸಿದ ತ್ರೇತಾಯುಗದಿ |ವನಧಿಜೆ ರಮಣ ಶ್ರೀ | ಹನುವ ಸೇವಿತನಾದಶ್ರೀನಿವಾಸನ ಚರಣ | ವನಜವ ಸೇವಿಸಿದಾ 1 ಸಕಲ ಸದ್ಗುಣ ಆಕರಾ |ನಿಖಿಲ ಲೋಕದ ಧಾರಕಾ |ಪಾಕಶಾಸನ ಪೂಜ್ಯ | ಗೋಕುಲರೊಡೆಯನನಿಕಂಪಾನೆನಿಸಿ ಜನಿಸಿ | ಕೃಷ್ಣನ್ನ ಪೂಜಿಸಿದ 2 ಸುರ ಪುರ ಮುನಿ ನಾರದಾ |ವರಕಲಿಯಲ್ಲಿ ಜನಿಸೇ |ತುರುಕರುವಾಗಿ ಅವರಾ | ಚರಣವ ಸೇವಿಸಿದಮರಳಿ ಅವರ ಪುತ್ರಾ | ಗುರುಮಧ್ವಪತಿ ಭೃಗುವಾ 3 ಪದಪಂಚ ಲಕ್ಷ ಗ್ರಂಥಕೇ |ಪಾದವೇ ನ್ಯೂನವಿರಲೂ | ಪದಪದ್ಯ ಸುಳ್ಹಾದಿಯಲಿ |ಪಾದ ಪೂರ್ತಿಯ ಮಾಡೆಮೋದದಲುದಿಸಿದಾ | ಬುಧನು ದಾಸಪ್ಪ ನೆನಿಸೀ 4 ಪರಮ ಕಾರುಣ್ಯ ಗುರುವೇ |ಕರವ ಪಿಡೀರಿ ಎನ್ನಾ |ಮರುತಾಂತಾರಾತ್ಮಾ ಗುರು | ಗೋವಿಂದ ವಿಠ್ಠಲನಚರಣವ ತೋರಿಸೀ | ಕರುಣದಿ ಪೋಷಿಸಿ5
--------------
ಗುರುಗೋವಿಂದವಿಠಲರು
ವ್ಯರ್ಥದಲಿ ತೋರುವನೆ ತ್ರೈಲೋಕ್ಯಕರ್ತ ಭಕ್ತನಾದರೆ ಪರಮ ಮುಕ್ತಿ ಸೇರುವುದು ಪ ಉತ್ತಾನ ಭೂಪತಿಯ ಪುತ್ರನಂತಿರಬೇಕು ಸತ್ಯವೊಂದಿರಬೇಕು ಹರಿಶ್ಚಂದ್ರನಂತೆ ಭಕ್ತಿರಸವಿರಬೇಕು ಪ್ರಹ್ಲಾದನಂತೆ ಹಸ್ತವಿರಬೇಕು ಶ್ರೀರಾಮ ಭಕ್ತನಂತೆ 1 ವ್ರತವ ಮಾಡಲು ಬೇಕು ಅಂಬರೀಶನ ಪರಿಯ ಪಥವ ನಡೆಯಲು ಬೇಕು ವಿಹಗನಂತೆ ಶತಮುಖವ ರಚಿಸಿದರೆ ಪುರುಹೂತನಂತಿಹನು ಯತಿಯಾಗಬೇಕು ಗುರುಮಧ್ವಪತಿಯಂತೆ 2 ಗೀತಸೇವನೆ ಬೇಕು ನಾರದರ ತೆರನಂತೆ ಪ್ರೀತನಾಗಲು ಬೇಕು ಪಾರ್ಥನಂತೆ ನೀತಿಶಾಸ್ತ್ರವು ಬೇಕು ಶುಕಶೌನಕರಂತೆ ಖ್ಯಾತಿಯಿರಬೇಕು ರವಿಜಾತನಂತೆ 3 ಶುದ್ದನಾಗಿರಬೇಕು ಉದ್ಧವನ ತೆರನಂತೆ ಬದ್ಧನಾಗಿರಬೇಕು ಅಕ್ರೂರನಂತೆ ಹೊದ್ದಿಕೊಂಡಿರಬೇಕು ಫಣಿರಾಜನಂದದಲಿ ಮುದ್ದಾಗಿಯಿರಬೇಕು ಆ ವಿದುರನಂತೆ 4 ವೇದವೋದಲು ಬೇಕು ವ್ಯಾಸಮುನಿಯಂದದಲಿ ಆದರಿಸಬೇಕು ತಾ ಧರ್ಮನಂದದಲಿ ಪಾದಪೂಜೆಯು ಬೇಕು ಲಂಕಾಧಿಪತಿಯಂತೆ ಭೇದ ನೋಡಲು ಬೇಕು ವಸಿಷ್ಠನಂತೆ 5 ಸ್ಮøತಿಯ ನೋಡಲು ಬೇಕು ಪಾರಾಶರಂದದಲಿ ಮಿತಿಯಿರಲು ಬೇಕು ಆ ಭೀಷ್ಮನಂದದಲಿ ಜೊತೆಯಾಗಿಯಿರಬೇಕು ಪುಂಡರೀಕನ ತೆರದಿ ವ್ರತವಿರಲು ಬೇಕು ರುಕುಮಾಂಗನಂದದಲಿ 6 ದಾನ ಮಾಡಲು ಬೇಕು ಬಲಿಯ ಪ್ರೌಢಿಕೆಯಿಂದ ಧ್ಯಾನವಿರಬೇಕು ಋಷಿ ಗಾಗ್ರ್ಯನಂದದಲಿ ಪ್ರಾಣ ಸಂದೇಹದೊಳು ಕರಿರಾಜನಂದದಲಿ ಕಾಣಬೇಕಾ ಹರಿಯ ಅಜಮಿಳನ ತೆರದಿ 7 ಜಪಗಳನು ತಪಗಳನು ದಾನಧರ್ಮಂಗಳನು ಅಪರೂಪವಾಗಿರ್ದ ಪೂಜೆಗಳನು ಉಪವಾಸವನು ಮಾಡಿ ವ್ರತ ನೇಮ ನಿಷ್ಠೆಗಳ ಕಪಟವಿಲ್ಲದೆ ರಚಿಸಿ ಕಂಡರೈ ನಿನ್ನ 8 ಇವರಂತೆ ನೋಡುವರೆ ಸ್ಥಿರವಿಲ್ಲ ಬುದ್ಧಿಗಳು ಇವರ ದಾಸರ ದಾಸ ದಾಸ ನಾನು ನಿತ್ಯ ಮನದೊಳಗೆ ನಿಲುವಂತೆ ಭಾವಿಸೈ ಕೋನೇರಿ ವರಾಹತಿಮ್ಮಪ್ಪ 9
--------------
ವರಹತಿಮ್ಮಪ್ಪ