ಇಂದು ಗುರುಪೂಜಿ ಮಾಡುವ
ನಿಂದು ಮನದೊಳು ಹರುಷಪಡುವ ಧ್ರುವ
ತಂದೆ ಸದ್ಗುರುಸೇವೆ ಮಾಡುವ
ಬಂದ ಜನ್ಮದ ಹಾದಿ ಬಿಡುವ
ಪಥ ಬ್ಯಾಗೆ ಹಿಡುವ
ಹೊಂದಿ ಸದ್ಗತಿ ಮುಕ್ತಿ ಕೊಡುವ 1
ಬಂದು ಸಾರ್ಥಕ ಮಾಡುವ
ಪಾದ ನೋಡುವ
ತಂದು ರತಿಪ್ರೇಮ ನೀಡುವ
ಒಂದು ನಾಮ ನಿಶ್ಚಯವಿಡುವ 2
ಒಂದು ಮನದಿ ಪೂಜಿಮಾಡುವ
ಎಂದು ಬಿಡದೆ ನಾಮವ ಕೊಂಡಾಡುವ
ಇಂದು ನಲಿನಲಿದಾಡುವ
ಕಂದ ಮಹಿಪತಿಸ್ವಾಮಿ ನೋಡುವ 3