ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಸುಕಾಲ ಸುಪರ್ವಕಾಲ ಧ್ರುವ ಇಂದು ಸುಕಾಲ ಇಂದು ಸುಕಾಲ ಸುಪರ್ವಕಾಲ 1 ಇಂದು ಸುಕಾಲ ಬಂದ ಗೋಪಾಲ ಸಂಧಿಸಿ ಮನದೊಳಗಾದನುಕೂಲ 2 ಇಂದು ಸುದಿನ ಚಂದವಾಯಿತು ಎನ್ನಮನ ಉನ್ಮನ3 ಭಿಕ್ಷೆ ನೋಡುವ ಲಕ್ಷ ಒಡಿಯ ಪೂರಿಸಿದ ಬೇಡುವಪೇಕ್ಷ4 ಇಂದು ಆನಂದ ಹೊಂದಿ ಮಹಿಪತಿಗುರುಪಾದಾರವಿಂದ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕರುಣಾ ಸಾಗರ ಬಿರುದ ತರಣೋಪಾಯದೋರುದ ಸ್ಮರಿಸೊ ಮನವೆ ಸದಾ ಶ್ರೀಗುರುನಾಮಗೊಂಬುದ 1 ತ್ವರಿತ ಪುಣ್ಯಗೈಸುದ ಸ್ಮರಿಸೊ ಮನವೆ ಸದಾ ಶ್ರೀಗುರುನಾಮಗೊಂಬುದ 2 ಹರುಷನಾಗಿ ಸೂಸುದ ಗುರುತವಾಗಿ ಭಾಸುದ ಸ್ಮರಿಸೊ ಮನವೆ ಸದಾ ಶ್ರೀಗುರುನಾಮಗೊಂಬುದ 3 ಅರಹುಪೂರ್ಣನೀಡುವ ಕುರುಹುಮಾಡಿ ಕೂಡುದ ಸ್ಮರಿಸೊ ಮನವೆ ಸದಾ ಶ್ರೀಗುರುನಾಮಗೊಂಬುದ 4 ಹರಿಯ ತಂದುಗುಡುದ ಸಿರಿಯ ಸೌಖ್ಯಲಿಡುದ ಸ್ಮರಿಸೊ ಮನವೆ ಸದಾ ಶ್ರೀಗುರುನಾಮಗೊಂಬುದ 5 ಸಾರಸೇವಿಸುವದ ಗುರುಪಾದಾರವಿಂದ ಸ್ಮರಿಸೊ ಮನವೆ ಸದಾ ಶ್ರೀಗುರುನಾಮಗೊಂಬುದ 6 ಬೆರೆದು ಘನಗೂಡುದ ಹರುಷ ಮಹಿಪತಿಗ್ಯಾಗುದ ಸ್ಮರಿಸೊ ಮನವೆ ಸದಾ ಶ್ರೀಗುರುನಾಮಗೊಂಬುದ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಧಿಸಿ ನೋಡಿ ಸುವೃತ್ತಿ ಭೇದಿಸಿಕೂಡಿ ಸುಮುಕ್ತಿ ಧ್ರುವ ಹಿಡಿದು ಸಾರುವ ಶ್ರುತಿ ನಿಜಗೂಡಿ ಗೂಡಿನೊಳಗೆ ಬೆರೆದಾಡಿ ಇಡಾಪಿಂಗಳ ನಾಡಿ ನಡುವಾವಿನ ಜಾಡೆ ಹಿಡಿದು ಘನಗೂಡಿ 1 ಏರಿನೋಡಲು ಆರು ಚಕ್ರತಾಂ ದೋರುತದೆ ಸುಪಥ ತಿರುಗಿನೋಡಲು ತನ್ನೊಳು ತಾ ಅಮೃತ 2 ಹಿಡಿದು ಗುರುಪಾದಾರವಿಂದ ಪಡೆದ ಮಹಿಪತಿ ಅನಂದ ಗೂಢ ಗುರುತವಾಯಿತು ಬಲು ಚಂದ ಕಡಿದ್ಹೋಯಿತು ಭವಬಂಧ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು