ಒಟ್ಟು 5 ಕಡೆಗಳಲ್ಲಿ , 2 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಚನ ಮನವು ಬಿಲ್ಲನೆ ಮಾಡಿ ತನುವು ಹೆದಿಯನೆ ಕಟ್ಟಿ ಅನುಭವದ ಅಂಬಿನಲಿ ಜನನ ಮರಣದ ಗುರಿಯ ಕೆಡಹಿದಾ ಜ್ಞಾನಸಾಗರ ಗುರುನಾಥನೆಂದು ಸ್ತುತಿಸಿದಾ ಮಹಿಪತಿಯು |
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಕ್ಕೊ ಇಲ್ಲೆವೆ ಅದ ನಿಜಧನಾ ತಕ್ಕೊಂಬುದು ಬಲುಕಠಿಣ ಧ್ರುವ ಅದಕೊಂದದ ಉಪಾಯ ನೋಡಿ ಸದ್ಗುರುಪಾದಕ ಮನಗೂಡಿ ಒದಗಿ ಬಾಹುದು ತಾಂ ಕೈಗೂಡಿ ಇದೇ ಸಾಧಿಸಿ ಸುಖ ಸೂರ್ಯಾಡಿ 1 ಎಡಬಲಕ ತಾಂ ತುಂಬೇದ ದೃಢಮನಕ ತಾಂ ಸಿದ್ಧದ ಮೂಢಜನರಿಗಿದೇ ದೂರದ ನೋಡೇನೆಂದರ ಬಲು ಸಾರ್ಯದ 2 ಗುರುಪಾದಲ್ಯದ ಧನಸಮಸ್ತ ಅರಿತುಕೊಂಬುದು ಮನಮಾಡಿ ಸ್ವಸ್ಥ ತರಳಮಹಿಪತಿಗಿದೆ ಸುಪ್ರಸ್ತ ಗುರುನಾಥನೆ ತಾಂ ಸುವಸ್ತಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕರ್ಮ ಬೇರೆ | ಬ್ರಹ್ಮದೊಳಗೆ ಕ್ರಿಯಾಕರ್ಮವಿಲ್ಲ |ಕರ್ಮ ಬ್ರಹ್ಮವಲ್ಲ ಪ ಶಿವನೊಳು ನೋಡಲು ಜಗವೇ ಇಲ್ಲ | ಜಗ ಶಿವನಲ್ಲ. ಶಿವನೂ ಜಗವೂಎಂಬೊ ಮಾತು ಸಲ್ಲ | ಅರಿದಾತನೆ ಬಲ್ಲ 1 ಬೀಜದಿ ನೋಡಲು ವೃಕ್ಷವೆ ಇಲ್ಲ | ವೃಕ್ಷಬೀಜವಲ್ಲ | ವೃಕ್ಷ ಬೀಜದಿ ಫಲಸ್ವಾದವಿಲ್ಲ |ತಿಂದಾತನು ಬಲ್ಲ 2 ಪಾಮರ ನರರೆಲ್ಲ ಭವತಾರಕನ ಭಕ್ತರಲ್ಲ | ಭವತಾರಕನ ಭಕ್ತನು ನರನಲ್ಲ | ಗುರುನಾಥನೆ ಬಲ್ಲ 3
--------------
ಭಾವತರಕರು
ವಿಶ್ವಾತ್ಮ ಪರಿಪೂರ್ಣ ವಿಶ್ವವ್ಯಾಪಕ ನೀನೆ ವಿಶ್ವವಂದಿತ ವಿಶ್ವನಾಥ ನೀನೆ ಧ್ರುವ ವಿಶ್ವಾತ್ಮದಲ್ಯಾಡುವ ವಿಶ್ವಸ್ವರೂಪವು ನೀನೆ ವಿಶ್ವ ನಿರ್ಮಿತ ವಿಶ್ವಪಾಲ ನೀನೆ ವಿಶ್ವಲಿಹ ವಿಶ್ವೇಶ್ವರ ನೀನೆ 1 ವಿಶ್ವತೋ ಚಕ್ಚು ನೀ ವಿಶ್ವತೋ ಮುಖ ನೀನೆ ವಿಶ್ವತೋ ಬಹು ಸಾಕ್ಷಾತ್ ನೀನೆ ವಿಶ್ವಾಂತ್ರ ಸೂತ್ರನೆ ವಿಶ್ವಂಭರನು ನೀನೆ ವಿಶ್ವರಹಿತ ವಿರಾಜಿತನು ನೀನೆ 2 ವಿಶ್ವಾಂತರಾತ್ಮ ಭಾಸ್ಕರ ಕೋಟಿತೇಜನೆ ವಿಶ್ವಾನಂದ ಘನಮಹಿಮ ನೀನೆ ವಿಶ್ವಾತ್ಮ ಹಂಸ ಮಹಿಪತಿ ಗುರುನಾಥನೆ ವಿಶ್ವಾಸಲೋಲ ವಿಶ್ವೇಶ ನೀನೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಾಮಿ ನಮ್ಮ ದೇವದತ್ತ ಬ್ರಹ್ಮಾನಂದ ಅವಧೂತ ಸಮಸ್ತಜನದಾತ ಬ್ರಹ್ಮಾದಿಗಳೊಂದಿತ ಧ್ರುವ ಕುಡಲಿಕ್ಕೆ ತಾ ಉದಾರಿ ಬಲು ದೊಡ್ಡ ಉಪಕಾರಿ ಕಡೆಗಾಣಿಸುವ ಧೊರಿ ನಿಜ ನೀಡುತಿಹ್ಯ ಸಾರಿ ಬಡವರಿಗೆ ಆಧಾರಿ ಭಕ್ತಜನ ಸಹಕಾರಿ ಪರಿ ಮಾಡುತಿಹ್ಯ ಮನೋಹರಿ 1 ಬೀರುತಿಹ್ಯ ನಿಜನೋಡಿ ಕರದಲ್ಲಭಯ ನೀಡಿ ಗುರುತಿಟ್ಟಿದೆ ಸೂರ್ಯಾಡಿ ಶರಣರು ನಿಜಗೂಡಿ ಅರುವ್ಹೆ ಅಂಜನ ಮಾಡಿ ಕುರುವ್ಹೆದೋರುದಿದರಡಿ ಧರೆಯೊಳಿದೆ ಕೊಂಡಾಡಿ ಗುರುನಾಥನೆಂದು ಪಾಡಿ 2 ಅನಾಥ ಬಂಧುನೀತ ದೀನದಯಾಳು ಸಾಕ್ಷಾತ ಅನುದಿನದೆ ಪ್ರಖ್ಯಾತ ಘನಗುರು ಶ್ರೀನಾಥ ಮನೋಭಾವ ಪೂರಿತ ಎನಗುಳ್ಳ ದೇವದತ್ತ ದಾತ ಭಾನುಕೋಟಿ ಉದಿತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು