ಒಟ್ಟು 133 ಕಡೆಗಳಲ್ಲಿ , 10 ದಾಸರು , 80 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರ ಹರ ಹರ ಹರ ಶ್ರೀ ಗುರುನಾಥಾ | ಪರಿಹರಿಸುವ ಈ ಭವ ಭವಹರ ಪ ಕಾಮಿತ ಜನರನು ಕಂಡರೆ ಕರೆವ | ಕಾಮಿತ ಫಲ ಕಲ್ಪನೆಗಳ ಜರೆವ 1 ಶಿರದೊಳು ತನ್ನಯ ಕರಕಮಲಿಡುವ | ಮರಳಿ ಜನಿಸದ ಪದವಿಯ ಕೊಡುವ 2 ಭವ ಭಯ ಸಂಶಯ ಬೀಜವ ಹುರಿವ | ಭವತಾರಕನಾಗಿಳೆಯೊಳು ಬರುವ 3
--------------
ಭಾವತರಕರು
ಆರತಿಗಾರತಿ ಬೆಳಗಿತು ತನ್ನಿಂದ ತಾನೆ |ಮಹಗುರುವಿಗೆ | ತನ್ನಿ | ಅರವೂ ಮರವೂ ಎರಡಾದರುವಿಗೆ ಬೆಳಗುವ ತಾನೇ ಪ ಸಹಸ್ರ ಸೂರ್ಯರ ಪ್ರಭೆಗಳ ಕಲೆತು ಕೋಟಿ ಶಶಿಕಿರಣಾ ಮಹತೇಜ ಫಾಕಿಸಿ ಮುಟ್ಟಿತು ಅಡಗಿತು ಗಗನಾ 1 ನಿರಂಜನ ನಿಃಶಬ್ದ ಮೂಲಕ ಬೆಳಗುವ ತಾನೇ 2 ಪರಮ ಪ್ರಕಾಶ ಪರತರ ಪರಂಜ್ಯೋತಿ ಗುರುನಾಥಾ |ತೆರವಿಲ್ಲದಾರುತಿ ಭೀಮಾಶಂಕರ ಬೆಳಗುತ 3
--------------
ಭೀಮಾಶಂಕರ
ಏನ ಮಾಡಿ ತೀರುವೆ ಸದ್ಗುರುನಾಥಗೆ ಏನಮಾಡಿ ತೀರುವೆನೀನೆಯು ಬ್ರಹ್ಮವೆಂದು ಯನ್ನಕೈಯಲಿ ಹಿಡಿದು ಕೊಟ್ಟ ಪ ವೇದಕ್ಕೆ ನಿಲುಕದಿಹ ಷಣ್ಮತಗಳ ವಾದಕ್ಕೆ ತೋರದಿಹನಾದಕ್ಕೆ ಬೇರಿಹ ನಾಮರೂಪವಳಿದಿಹಆದಿಯು ನೀನೆಯೆಂದು ಯನ್ನಕೈಯಲಿ ಪಿಡಿದು ಕೊಟ್ಟ 1 ಬುದ್ಧಿ ಮನಕೆ ಹೊರತಾ ತತ್ವಂಗಳಲಿದ್ದ ಗುಣಕೆ ಅತೀತಶುದ್ಧ ಬ್ರಹ್ಮವು ನೀನು ಸಿದ್ಧಾ ಸಿದ್ಧಾಂತೆಂದುಮುದ್ದಿಸಿ ನಿನ್ನನು ಎನ್ನ ಕೈಯಲಿ ಹಿಡಿಕೊಟ್ಟ2 ಕಾರ್ಯ ತನುವ ಧರಿಸಿ ಜನ್ಮ ಜನ್ಮಾದಿ ತೋರುವ ಜೀವವೆನಿಸಿಕಾರ್ಯ ಕಾರಣಾತೀತನಾದ ಚಿದಾನಂದನು ಬೇರಿಲ್ಲನೀನೇ ಎಂದು ಎನ್ನ ಕೈಯಲಿ ಹಿಡಿದು ಕೊಟ್ಟ 3
--------------
ಚಿದಾನಂದ ಅವಧೂತರು
ಕನಸ ಕಂಡೆ ನಿನ್ನಿನಿರುಳೊಳು ಕೇಳುಕನಸಿನ ಸೊಗಸನು ತರಳೆಚಿನುಮಯಾತ್ಮಕ ಚಿದಾನಂದ ಅವಧೂತದಿನಕರ ಪ್ರಭಾತೀತ ಗುರುನಾಥ ಬಂದಿಹ ಪ ಕಾಶ ಕೌಪೀನವನುಟ್ಟು ಚೆಲ್ವಬಾಸುರ ಕುಂಡಲವಿಟ್ಟುಕೇಶದ ಜಡೆಗಳು ಥಳಥಳಿಸಲು ಸರ್ವಭೂಷಿತನಾಗಿ ತನ್ನೆದುರಿಗೆ ನಿಂತಿಹ 1 ನೆಟ್ಟನೆ ನಡುಮನೆಯೊಳು ತಾನುನೆಟ್ಟನೆ ಬಂದು ಕುಳಿತಿಹನುಶಿಷ್ಟ ಮೂರುತಿ ತನ್ನ ಕಾಯಬೇಕು ಎಂದುಮುಟ್ಟಿ ಪಾದವ ನಾನು ಶರಣು ಮಾಡಲಿದ್ದೆ2 ಸುಂದರ ಕಳೆಯುಳ್ಳ ಸ್ವಾಮಿತಾನು ಸಿಂಧು ಕೃಪಾಕರನಾಮಿ ಎಂದಡಿಗಡಿಗೆ ಸಾಷ್ಟಾಂಗವೆರಗಿನಿಂದು ಪೂಜಿಸಿ ಕಣ್ತುಂಬ ನೋಡಿನಲಿವ 3 ನಾನಾ ಪೂಜೆಯನೆಲ್ಲವ ಮಾಡಿ ಗುರುಧ್ಯಾನದಿನಾನೋಲಾಡಿ ಮಾನವನಾಗಿನಾನು ನಿಂದಿರಲೆನ್ನ ಕಿವಿಯೊಳುನಾನು ನೀಗಿತ್ತೆಂದು ಉಪದೇಶ ನೀಡುವ4 ಈಪರಿ ಕನಸನು ಕಂಡು ಎಲ್ಲತಾಪವು ಪರಿಹಾರಗೊಂಡುಭೂಪ ಚಿದಾನಂದ ಅವಧೂತ ತಾನಾದರೂಪಾಗಿ ಬೆಳಗಿರೆ ಬೆಳಗಿರೆ ಬೆಳ್ಳನೆ ಬೆಳಕಿತ್ತು5
--------------
ಚಿದಾನಂದ ಅವಧೂತರು
ಗುರುವಿನ ನೆನೆದವನೆಲ್ಲರಿಗಧಿಕಗುರುವಿನ ನೆನೆದವನೇ ಪ ನರನಿಂದಧಿಕ ನರಪತಿಗಧಿಕಸುರರಿಂದಧಿಕ ಸುರನಾಥಗಧಿಕವರಮುನಿಗಧಿಕ ವಸುಧೆಗಳಿಗಧಿಕಗುರುಪಾದವ ನಿತ್ಯ ನೆನೆದವನಯ್ಯ 1 ಧರೆಗಿಂತಲಧಿಕ ಗಿರಿಗಿಂತಲಧಿಕಹರಿಗಿಂತಲಧಿಕ ಹರಗಿಂತಲಧಿಕಪರಕಿಂತಲಧಿಕ ಪರತರಕಧಿಕಗುರುಪಾದವ ನಿತ್ಯ ನೆನೆದವನಯ್ಯ2 ಆವವರಧಿಕ ಅವರಿಗಿಂತಧಿಕಭಾವಶುದ್ಧಿಯಿಂದ ಗುರುವಿನಸಾವಧಾನದಿ ನಿತ್ಯ ಮನದಲಿ ನೆನೆದವದೇವ ಚಿದಾನಂದ ಗುರುನಾಥನಯ್ಯ3
--------------
ಚಿದಾನಂದ ಅವಧೂತರು
ನಾಥಾ ಸಮರ್ಥ ಗುರುನಾಥಗೆ ಮಂಗಳ |ಪ್ರೀತಾ ಭಕ್ತರ ನಿಜ ದಾತಾಗೆ ಮಂಗಳ 1 ಜನನ ಮರಣ ದಾಂಟಿಸುವಗೆ ಮಂಗಳ |ಘನಕೆ ಘನವಾದ ಸ್ಥಾನ ನಿತ್ಯಗೆ ಮಂಗಳ 2 ಭೀಮಾಶಂಕರ ಗುರುಮೂರ್ತಿಗೆ ಮಂಗಳ |ಪ್ರೇಮಾ ಸ್ಫುರಿತ ನಿಜಗಿರಿಗೆ ಮಂಗಳ 3
--------------
ಭೀಮಾಶಂಕರ
ಶಂಭು ಶಂಕರ ನಿಜಲಿಂಗಗೆ ಮಂಗಳಕುಂಭಿನೀಧರ ಭೂಷ ಲಿಂಗಗೆ ಮಂಗಳ ||ಮಂಡೀಯನಾದಿ ವ್ಯೋಮಕೇಶಗೆ ಮಂಗಳ |ರುಂಡಮಾಲೆಧರ ಈಶಗೆ ಮಂಗಳ 1 ತ್ರಿಪುಟ ತ್ರಿಪುರ ಸಂಹಾರಗೆ ಮಂಗಳ ವಿಪರೀತ ಪರಿಜ್ಞಾನ ಹರಗೆ ಮಂಗಳ 2 ಜ್ಞಾನದಾತನು ಗುರುನಾಥಗೆ ಮಂಗಳ |ಏನೆಂಬೆ ಗುರುಕೃಪೆ ನಿತ್ಯಗೆ ಮಂಗಳ 3
--------------
ಭೀಮಾಶಂಕರ
ಶರಣು ಶ್ರೀದೇವದೇವಾದಿ ಸದ್ಗುರುನಾಥ ಶರಣು ಸುರಮುನಿಜನರ ಪ್ರಾಣ ಜೀವನದಾತ ಶರಣು ಪರಬ್ರಹ್ಮ ಪರಮಾನಂದ ಭರಿತ ಸಿರಿ ಅರಸ ಕರುಣಾಳು ಶ್ರೀನಾಥ ಶರಣು 1 ವೇದ ಆಗೋಚರಾನಾದಿ ಗುರು ಅನಂತ ಸಾಧುಜನ ಸಹಕಾರ ಸಂತತ ಸದೋದಿತ ಸದ್ಬ್ರಹ್ಮ ಆನಂದ ಗುಣತ್ರಯ ವಿರಹಿತ ಆದಿ ಅನಾದಿ ಅವಿನಾಶ ಗುರುನಾಥ 2 ಸಂಜೀವ ಸದ್ಗುರುನಾಥ ಶಕ್ತನಹುದಖಿಳದೊಳು ಸಕಳಾರ್ಥಪೂರಿತ ಯುಕ್ತನಹುದಯ್ಯ ಶಕ್ತಿಯು ಗುರುಸಮರ್ಥ ಮುಕ್ತಿದಾಯಕ ಮಹಿಪತಿ ಪ್ರಾಣನಾಥ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ವಚನ ಮನವು ಬಿಲ್ಲನೆ ಮಾಡಿ ತನುವು ಹೆದಿಯನೆ ಕಟ್ಟಿ ಅನುಭವದ ಅಂಬಿನಲಿ ಜನನ ಮರಣದ ಗುರಿಯ ಕೆಡಹಿದಾ ಜ್ಞಾನಸಾಗರ ಗುರುನಾಥನೆಂದು ಸ್ತುತಿಸಿದಾ ಮಹಿಪತಿಯು |
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಅನುದಿನ ಘನ ತನ್ನೊಳಗೆ ತುಂಬಿಹದು ನಿನ್ನೊಳಗೆ ದ್ರುವ ಓದಿ ಕೇಳಿ ಮರುಳಾದ್ಯೊ ಮನವೆ ಸಾಧಿಸಲಿಲ್ಲ ಸ್ವರೂಪ ವೇದವೋದಿ ವಿವದಕೆ ನೀನು ಸಾಧಿಸಿದೊ ಬಲುಕೋಪ ಭೇದವಿಡಿದು ಬಾಧೆಗೆ ಗುರಿಯಾಗಿ ಆದಿ ನಿನಗೆ ನೀ ಪಾಪ ಘನಗುರು ಕುಲದೀಪ 1 ದೇಹದ ಒಳಗಿನ ದೇವರ ತಿಳಿಯದೆ ಬಾಹ್ಯ ರಂಜನಗೆದೆರದ್ಯೊ ಸೋಹ್ಯವರಿಯದೆ ಶ್ರೀಹರಿ ಭಕ್ತಿಯ ಅಹಂಭಾವದಿ ಮೆರೆದ್ಯೊ ದೇಹಾಭಿಮಾನದಲಿ ಸೋಹಂಭಾವದ ವಾರ್ತೆಯ ಜರಿದ್ಯೊ ಸವಿ ಸುಖವನು ಮರೆದ್ಯೊ 2 ಕನಸುದೋರುವ ಜನ ಪ್ರಪಂಚವ ನೆನೆಸಿ ಬಯಸುವದ್ಯಾಕೆ ಖೂನ ತಿಳಿಯದೆ ಸತ್ತು ಹುಟ್ಟಿ ಜನಿಸಿ ಬಾಹುದು ಯಾಕೆÉ ಹೀನಯೋನಿಯ ಮುಖದಲಿ ಬೀಳುವ ದಣುವಿಕಿ ನಿನಗಿದು ಬೇಕೆ ಅನುದಿನ ನಿನಗಿದು ತಾ ಸಾಕೆ 3 ಹಾದಿತಪ್ಪಿ ನಡೆವದು ವೇದಾಂತದ ಇದು ನಿನಗುಚಿತೆ ಸಾಧು ಸಜ್ಜನರನುಸರಿಸದೆ ತಾ ಇಹುದೊಂದು ಸ್ವಹಿತೆ ಗಾದಿಯ ಮಾತೆ ಬಂದುದು ಪುರುಷಾರ್ಥೆ 4 ಶರಣ್ಹೊಕ್ಕರ ಕರುಣಿಸಿ ನೋಡುವ ಎರಡಿಲ್ಲದೆ ಗುರುನಾಥ ಕರವಿಡಿದು ಪಾರನೆ ದಾಟಿಸುವಾ ಸುರಮುನಿಜನ ಸೇವಿತ ತರಣೋಪಾಯದ ಸಾಧನದೋರುವ ತರಳ ಮಹಿಪತಿ ದಾತ ಮನವೆ ನಿನಗಿದು ಸುಪಥ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಅವಧೂತಾ ನೀ ಅವಗುಣಗಳ ನಿರ್ಧೂತಾ ದೇವನಹುದೋ ಶ್ರೀನಾಥಾ ಧ್ರುವ ಭಾವಿಸಿ ನೋಡಲು ಭಾವಕತೀತ ಭವಹರ ಗುರು ಸಾಕ್ಷಾತ ಪಾವನಗೈಸುವದಯ ಪ್ರಖ್ಯಾತ ದೇವಾದಿಗಳೊಂದಿತ 1 ಝಗಝಗಿಸುವ ಜಗಜ್ಯೋತಿ ಸ್ವರೂಪ ಅಗಣಿಗತುಣೋಪಮೋಪ ತ್ರಿಗುಣರಹಿತ ಚಿದ್ಛನ ಚಿದ್ರೂಪ ಯೋಗಿಜನರ ಪಾಲಿಪ 2 ಇಹಪರದಾತ ಮಹಿಪತಿ ಗುರುನಾಥ ಬಾಹ್ಯಾಂತ್ರ ಸದೋದಿತ ಮಹಾಮಹಿನು ನೀ ಆನಂದಭರಿತ ಸಹಕಾರ ನೀ ಸತತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಕ್ಕೊ ಇಲ್ಲೆವೆ ಅದ ನಿಜಧನಾ ತಕ್ಕೊಂಬುದು ಬಲುಕಠಿಣ ಧ್ರುವ ಅದಕೊಂದದ ಉಪಾಯ ನೋಡಿ ಸದ್ಗುರುಪಾದಕ ಮನಗೂಡಿ ಒದಗಿ ಬಾಹುದು ತಾಂ ಕೈಗೂಡಿ ಇದೇ ಸಾಧಿಸಿ ಸುಖ ಸೂರ್ಯಾಡಿ 1 ಎಡಬಲಕ ತಾಂ ತುಂಬೇದ ದೃಢಮನಕ ತಾಂ ಸಿದ್ಧದ ಮೂಢಜನರಿಗಿದೇ ದೂರದ ನೋಡೇನೆಂದರ ಬಲು ಸಾರ್ಯದ 2 ಗುರುಪಾದಲ್ಯದ ಧನಸಮಸ್ತ ಅರಿತುಕೊಂಬುದು ಮನಮಾಡಿ ಸ್ವಸ್ಥ ತರಳಮಹಿಪತಿಗಿದೆ ಸುಪ್ರಸ್ತ ಗುರುನಾಥನೆ ತಾಂ ಸುವಸ್ತಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇ ನೋಡಿರೋ ಸ್ವಯಂಪಾಕ ಸದಮಲಾನಂದಸುಖ ದ್ರುವ ಶುದ್ಧ ಮಾಡಿ ಹೃದಯಸ್ಥಳ ಇದು ಏಕಾಗ್ರ ನಿರ್ಮಳಾ ಸಾಧ್ಯಗೊಂಡು ಮನಾನುಕೂಲ ಸಿದ್ಧಿ ಇದೇವೇ ಸುಶೀಲಾ 1 ಭಕ್ತಿವೈರಾಗ್ಯೊಲಿಹೂಡಿ ನಿತ್ಯಙÁ್ಞನಾಗ್ನಿ ಒಡಗೂಡಿ ತತ್ವ ಪಂಚಪಾತ್ರೆಯಮಾಡಿ ಸತ್ಯಸಂಕಲ್ಪ ಇದೇ ನೋಡಿ2 ಸಕಲ ಸಾಮುಗ್ರಿಯ ಸಂಚಿತಾ ಪಕ್ವಆಯಿತು ಆಯಿತು ಮುಖ್ಯಮಹಿಪತಿಗಿದೆ ಸ್ವಹಿತಾ ಸುಖದೋರಿದ ಗುರುನಾಥಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇ ಪುರುಷಾರ್ಥ ಮನಜ ಪರಮಾತ್ಮ ಪಡೆವುದಿದು ವೇದಾರ್ಥ ಇದನ್ನು ಬಿಸುಟಿನ್ನು ಬಾಳುವೆ ಬದುಕನ್ನು ಮಾಡುವುದಿದುದೇ ವ್ಯರ್ಥ S ದೇಹವಿರುವಾಗಲೇ ಪೂರ್ಣಪದನಾ ದೊರಕಿಪನೆ ಜಾಣ ಮೋಹಮಾಯಾವಿಕಾರವ ದಾಂಟಿ ಪೋಗುವನೆ ಜಾಣ ಸಾಹಸದಿ ಈ ಸಾವನು ನೀಗೀ ಮೋದಿಸುವ ಜಾಣ ಉಳಿದ ನರ ಕೋಣ ಅವನಿಯುಳು ಪ್ರಾಣ ತಳೆದಿರುವುದೇ ವ್ಯರ್ಥ ತನ್ನ ಒಳಗಿರ್ವ ಸಂಪೂರ್ಣ ಸುಖತಾ ಅರಿಯುವನೆ ಜಾಣ ಭಿನ್ನವಾಗಿರ್ಧ ತೋರಿಕೆ ಇದನಾ ಭಾದಿಸುವ ಜಾಣ ಮುನ್ನ ಸುಖದುಃಖಗಳನ್ನು ನೀಗಿ ನಿಲ್ಲುವನೆ ಜಾಣ ಇವನೇ ಗುರುನಾಥಾ ಶಂಕರ ಭಗವಂತಾಪೇಳಿದ ನುಡಿ ವೇದಾರ್ಥ
--------------
ಶಂಕರಭಟ್ಟ ಅಗ್ನಿಹೋತ್ರಿ
ಏತರಿಂದ ಬ್ರಾಹ್ಮಣಿಕೆ ಪರಮಾತ್ಮನೆತಾನೆಂದು ತಿಳಿಯದ ನರನಲಿ ಪ ಜನಿವಾರ ನೋಡಿ ಬ್ರಾಹ್ಮಣ ನೆಂದರೆ ಸು-ಮ್ಮನೆ ಮರಕೆ ಬಳ್ಳಿ ಸುತ್ತಿಲ್ಲವೆಹಣೆಯ ಬಟ್ಟದ ನೋಡಿ ಬ್ರಾಹ್ಮಣ ನೆಂದರೆಹಾದಿ ಕಲ್ಲಿಗೆ ಸುಣ್ಣ ಬರೆದಿಲ್ಲವೆ1 ಜುಟ್ಟು ನೋಡಿ ಇವ ಬ್ರಾಹ್ಮಣ ನೆಂದರೆಜುಟ್ಟಿನ ಗುಬ್ಬಿಯು ತಾನಿಲ್ಲವೆಉಟ್ಟ ಧೋತ್ರವ ನೋಡಿ ಬ್ರಾಹ್ಮಣ ನೆಂದರೆಉಟ್ಟುದಿಲ್ಲವೆ ಮನೆಯ ನಡುಗಂಬ 2 ಬ್ರಾಹ್ಮಣನಾದರೆ ಬ್ರಹ್ಮ ಸರ್ವವು ಆಗಿಬ್ರಹ್ಮವಖಂಡದಿ ಭೇದವಿಲ್ಲದೆಬ್ರಹ್ಮ ಚಿದಾನಂದ ಗುರುನಾಥನಾಗಿಯೆಬ್ರಹ್ಮವ ಕಂಡವನೀಗ ಬ್ರಾಹ್ಮಣ3
--------------
ಚಿದಾನಂದ ಅವಧೂತರು