ಒಟ್ಟು 12 ಕಡೆಗಳಲ್ಲಿ , 3 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಮಿಪೇ ನಮಿಪೇ ನಮಿಪೇ ಶ್ರೀ ಗುರುದೇವಾ ಜ್ಞಾನಬೋಧಾ ನೀಡಿ ಮನದಾ ದೀನತನ ಬಿಡಿಸಿ ನೀನೆ ಆ ಪರಮಾತ್ಮನೆನುವಾ ಸ್ವಾನುಭವ ಹಿಡಿಸಿ ಹೀನವಿಷಯಾಸಕ್ತಿಯಾ ನೀಗಿಸಿ ಎನಗಾಗಿ ಜಗದಸುಖದ ಮರುಳು ಬಿಡಿಸಿ ಸೊಗಸ ತೋರಿಸಿದಿ ಅಘವನಳಿದು ಸೊಗಸಿನೊಳಗೆ ಖಗೆಯ ನಿಲಸಿದಿ ನೀ ಬಗೆಯ ರೋಗವೆಲ್ಲವ ನೀಗಿಸಿ ಎನಗಾಗಿ
--------------
ಶಂಕರಭಟ್ಟ ಅಗ್ನಿಹೋತ್ರಿ
ನಿನ್ನೊಳಗೆ ನೀ ತಿಳಿದುನೋಡು ನಿರ್ಮಲನಾಗಿ ಪ ನಿನ್ನೊಳಗೆ ನೀ ತಿಳಿದುನೋಡು ಚೆನ್ನಾಗಿ ಗುರುಭಕ್ತಿಯ ಮಾಡು ಭಿನ್ನಪದಾರ್ಥಗಳನ್ನು ಬಯಸದೆ ಅನನ್ಯಭಾವದಿ ನಿಜವನ್ನು ನಿತ್ಯಾತ್ಮನ ನರದೇಹದಿಂದಧಿಕವಿಲ್ಲಾ ಸ್ಥಿರವಾಗಿ ನಿಂದಿರುವುದಲ್ಲಾ ಬರಿದೆ ಕೆಡಿಸುವುದು ಸಲ್ಲಾ ಗುರುತಿಗೆ ಬೆರೆಸಲು ಬಲ್ಲಾ ಗುರುನಾಥನಿಂದುಪದೇಶವಾ ಕೈಕೊಂಡು ಇ ತರ ಪರಿಕರಂಗಳ ಆಶಾಪಾಶವಾ ವರ್ಜಿಸಿ ನಿನ್ನ ದುರಿತ ದುಃಖ ವಿನಾಶವಾಮಾಡಲು ಭವ ಶರಧಿಯ ದಾಟುವಾ ಆಯಾಸವಾ ನಿಲ್ಲುವದಿನ್ನು ಕುರಿತುಮನದಲಿ ತಿಳಿದುನೋಡು ಕಾಂಡುವ ಆರು ಅರಿಗಳ ವಿಚ್ಛೇಧನ ಮಾಡು ಅವಿದ್ಯೆಯನ್ನು ಶರಗು ಹಿಡಿದು ಹೊರಗೆ ದೂಡು ಹಮ್ಮಿನಹಲ್ಲು ಮುರಿದು ನಿನ್ನೊಳಗೆ ಕೂಡು ಹರಿಚರಣದೊಳಾಡು ಗುರುಮಂತ್ರವನುಚ್ಚರಿಸಿ ಕರ್ಪೂರವನು ಜಗದೊಳಿರುವುದೆಲ್ಲ ನಶ್ವರಸಂತೆ ನೋಡೆ ಬರುವದೆಲ್ಲ ಬಯಲಿನ ಭ್ರಾಂತಿ ಅರಿತಮಹಾತ್ಮರ ಚರಣನರಸಿಜಕೆ ಎರಗಿ ತತ್ವಾನಂದ ಭರಿತನೆಂದೆನಿಸುವ ನಿನ್ನೊಳಗೆ1 ವಾದಿಸಿ ಶುದ್ಧತತ್ವದ ಹಾದಿಯ ಬಲ್ಲವರಾದ ಸಾದು ಸತ್ಪುರುಷರಪಾದ ಕೊಡಿ ಶ್ರೀ ಗುರುಪ್ರಸಾದ ಸಾಧಿಸಿ ಸವಿಯನು ಬೇಡಿಕೊ ಬ್ರಹ್ಮಾನಂದದ ಬೋಧೆಯಿಂದ ನೀ ಲೋಲಾಡಿಕೊ ನಿತ್ಯನಿರ್ಮಲವಾದ ವಸ್ತು ನೀ ದೃಢಮಾಡಿಕೊ ಅಂತರಾತ್ಮನ ಶೋಧಿಸಿ ಸಜ್ಜಾಗಿ ನೋಡಿಕೊ ಅಷ್ಟರಮೇಲೆ ಹಾ ಧನ್ಯಧನ್ಯನೆನಿಸಿ ಮೆರೆವ ವರ್ಣಾಶ್ರಮದ ಭೇದವಳಿದು ಮಾಯೆಯ ಜರಿವೆ ನಿತ್ಯಾನಂದವಿನೋದಕೆ ಮಹಾತ್ಮರನು ಕರಿವೆ ನೋಡಲು ದ್ವೈತವಾದ ಮಿಥ್ಯವೆಂಬುದನರಿವೆ ಮಧ್ಯಾಂತ ಶ್ರೀ ಗುರುದೇವಾ ಬಹುಆದರವಿಡಿದು ಶಿಷ್ಯರಕಾವಾ ಸಂಪಾದಿಸಿಕೊಡುವಾ ಮುಕ್ತಿಯಠಾವಾ ನಿತ್ಯಾರಾಧಕರಿಗೆ ಸದ್ಗತಿಗಳನೀವಾ ತ್ರಿಮೂರ್ತಿಗಳಾದರೆಂತೆಂಬುದ ನಿನ್ನೊಳಗೆ 2 ನಿತ್ಯನಿರ್ಮಲದೊಳಗಾಡಿ ಪ್ರತ್ಯುಗಾತುಮನ ನೋಡಿ ಇತ್ತಣದ ಹಂಬಲವ ಬಿಡಬೇಕು ತನುಮನಧನ ಜೊತ್ತಾಗಿ ಶ್ರೀ ಗುರುವಿಗೆ ಕೊಡಬೇಕು ಕರುಣದವಜ್ರ ಕೆತ್ತಿದ ಕವಚವನು ತೊಡಬೇಕು ಬಿಡಬೇಕು ಇಂತಾಗಿ ಬಿಡದೆ ಮತ್ತಿ ತಾತ್ವರ್ಥವ ತಿಳಿದು ಕಾಣುಕಾಣದರೊಳು ಪ್ರತ್ಯಕ್ಷ ಹೊಳದಾಡುವ ಚಿದ್ಭಾನು ಪ್ರಕಾಶವನ್ನು ಅತ್ಯಧಿಕತೆಯಿಂದಲೀವನು ಜ್ಞಾನಿಗಳೊಳು ವಿಸ್ತಾರ ವಸ್ತು ವಿಚಾರವನು ಮಾಡಿ ನೋಡಿದರೆ ಕತ್ತಲೆ ಬೆಳಕೆರಡಿಲ್ಲದು ಸ್ವಯದಲಿ ಎತ್ತನೋಡಿದರು ಪ್ರಜ್ವಲಿಸುವುದು ತಾಂ ಉತ್ತಮಾನಂದದಿ ಸಲಿಸುವುದು ಗುರು ಭಕ್ತರ ನಿಜದಲಿ ನಿಲಿಸುವದು ಸುತ್ತು ಮುತ್ತು ಸುಳಿದು ತಾನೆ ಬಯಸುವದು ನೆತ್ತಿಯೊಳಗೆ ಹೊಳೆಯುತ್ತಿಹ ಜ್ಯೋತಿಯು ಎತ್ತಿತೋರಿತು ವಿಮಲಾನಂದ ಬ್ರಹ್ಮನ ನಿನ್ನೊಳಗೆ 3
--------------
ಭಟಕಳ ಅಪ್ಪಯ್ಯ
ಪರಾತ್ಮಾ ಶ್ರೀಶಿವಾನಂದಾ ಪ ನಮಿಸುವೇ ಪುಣ್ಯ ವಿಚಿತಾತ್ಮಾ ಮಹಾತ್ಮಾ ಸತ್ಯ ಸರ್ವಾತ್ಮಾ ಸ್ವರೂಪಾನಂದವಾ ಪಡೆವಾ ಸನ್ಮತಿಯಾ ನೀಡು ಗುರುದೇವಾ ಚರಣಕೆ ಎರಗುವೆನು ದೇವಾ 1 ಸದಾನಂದಾ ಮನೋಹರಾ ಹೃದಯದಾವಾಸ ನಿಜಸಾರಾ ಗುರುವರಾ ಶಂಕರಸ್ವರೂಪಾ ಕರುಣಿಸೈ ಬೋಧದಾನಂದಾ ಪರಾತ್ಮಾ ಶ್ರೀಶಿವಾನಂದಾ 2
--------------
ಶಂಕರಭಟ್ಟ ಅಗ್ನಿಹೋತ್ರಿ
ಪರಿಪಾಲಿಪುದೈ ಗುರುವೆ ನೆರೆನಂಬಿದೆನಯ್ಯ ಪ್ರಭುವೆ ಪ ಘಾಸಿ ಗೊಂಡೆನಲ್ಲಾ ಮಾಯಾ ಪಾಶದಿ ಸಿಲುಕಿದೆನಲ್ಲಾ | ಉ- ಪಾಯ ವನರಿಯೆ ಪಾಲಿಸೈ ಪ್ರಭವೇ 1 ಕಾಯೋ ಪ್ರಭುವೇ 2 ಉಳಿಸಿಕೊ ಗುರುದೇವಾ ನಿರುತದಿ ಮಾಡುವೆ ನಿನ್ನ ಸೇವಾ ಕರುಣಿಸು ಶ್ರೀ ರಾಘವೇಂದ್ರಾ 3
--------------
ರಾಧಾಬಾಯಿ
ಭವಾಬ್ಧಿ ದಾಂಟಿಸಿದಿ ಸದ್ಗುರುನಾಥಾ ನೀನೇ ಸ್ವರೂಪಾವಬೋಧ ನೀಡಿದಿ ತಾತಾ ಜ್ಞಾನಾಸಿಯಿಂದ ಕಡಿದೈ ಸಂಸಾರಪಾಶವ ನಾನಾತ್ಮವಳಿದು ಕಳೆದೈ ಅಜ್ಞಾನದೋಷವಾ ನಾನೆನ್ನ ರೂಪ ತಿಳಿದೆ ಪ್ರಭೋ ಶ್ರೀಗುರುದೇವಾ ನಾನೇಂ ಪೇಳ್ವೆ ನಿನ್ನ ದಿವ್ಯ ಬೋಧಪ್ರಭಾವಾ ಈ ವಿಶ್ವವೆಲ್ಲ ಕನಸಿನಂತೆ ಎನಗೆ ತೊರ್ಪುದೈ ಆವಾಗ ಬೋಧವಾಯ್ತು ನಾನರಿತೆ ಸತ್ಯವಾ
--------------
ಶಂಕರಭಟ್ಟ ಅಗ್ನಿಹೋತ್ರಿ
ವಂದೇ ವಂದೇ ವಂದೇ ನಾರಾಯಣ ಗುರುದೇವಾ ವಂದೇ ವಂದೇ ವಂದೇ ಪರಿಪೂರ್ಣ ಬ್ರಹ್ಮರೂಪ ಪರಮಾತ್ಮ ಜ್ಞಾನದೀಪ ತಾಪ ಪರಿಹರಿಪ ಜ್ಞಾನಿ ಭೂಪ ಶಿರವಿಡುವೆ ಚರಣಯುಗದೀ ಗುರುದೇವ ಎನ್ನಮನದಿ ಪರತತ್ವ ತಿಳಿವ ತೆರದಿ ಕರುಣಿಪುದು ನೀನೇ ಮುದದಿ ಜಾಗರಣ ಕನಸು ನಿದ್ರಾ ಆಗುಗಳನರಿಯುತಿರ್ದಾ ಈ ಗತಿಗಳೆಲ್ಲ ಮೀರ್ದಾ ಆ ಘನವೆ ನಿರ್ವಿಕಲ್ಪ ಅದೇ ನೀನು ಎಂದು ಪೇಳ್ದೀ ಇದು ಎಲ್ಲ ಮಿಥ್ಯವೆಂದಿ ಇದೊ ಮರಣಭಯವ ಕಳೆದಿ ನಿಜಬೋಧವಚನ ಬಲದಿ ಮರೆದಿರ್ದ ತತ್ವವಿದನು ಪರತತ್ವ ಶೋಧಕರನು ಬೊಧಿಸುತ ನೀ ನಿಜವನು ತೋರಿಸುತ ಕಾಯುವವನು ವರಜ್ಞಾನ ಜಗದಲೆಲ್ಲಾ ಮರೆದಾಡಿ ತಮವನೆಲ್ಲಾ ಪರಿಹರಿಸಲೆಂದು ನೀನೇ ಗುರುಶಂಕರನಿಗೆ ಪೇಳ್ದೀ ವಂದೇ ಶಂಕರಾ ಗುರುದೇವಾ ವಂದೇ ಶಂಕರ ಗುರುದೇವಾ ಪಾವನಚರಣಾ ತೋರೈ ಕರುಣಾ ಜ್ಞಾನಾಂಬುಧಿ ಪೂರ್ಣಾ ವಂದೇ
--------------
ಶಂಕರಭಟ್ಟ ಅಗ್ನಿಹೋತ್ರಿ
ವಂದೇ ಶಂಕರ ಗುರುದೇವಾ ವಂದೇ ಶಂಕರ ಗುರುದೇವಾ ಪಾವನ ಚರಣಾ ತೋರೈ ಕರುಣಾ ಜ್ಞಾನಾಂಬುಧಿ ಪೂರ್ಣಾ ವಂದೇ ನಿರಂಜನ ಸತ್ಯ ಸ್ವರೂಪಾ ಪ್ರತ್ಯಗಾತ್ಮನೇ ಆನಂದರೂಪಾ ನೀಡೈ ಘನಜ್ಞಾನಾ ಬೋಧಾ ಬೇಡುವೆ ನಿನ್ನೊಳ್ ಗುರುವೇ ವಂದೇ ಆತ್ಮಸ್ವರೂಪವ ಬೋಧಿಸಿ ಎನ್ನ ಮುಕ್ತ ಮಾಡುನೀ ಶ್ರೀ ಗುರುದೇವಾ ನಾರಾಯಣಪದದಾ ಜ್ಞಾನಾ ಸಾರಿದ ಶಂಕರ ಗುರುವೇ ವಂದೇ
--------------
ಶಂಕರಭಟ್ಟ ಅಗ್ನಿಹೋತ್ರಿ
ಹಾಸ್ಯದ ಮಾತಿದು ಮಾನವಗೆ ವಿಷಯೇಚ್ಛೆಯ ಜೀವನವೆಂಬುದು ಶಾಶ್ವತ ಶಾಂತಿಯ ನೀಡುವ ನಿನ್ನಯ ಪದವನೆ ಮೆರೆತಿಹದು ಗುರುವೇ ಈಶ್ವರನೀತನೆಂದು ಸಾರಿತು ಶೃತಿ ಇದ ಕೇಳುತ ನಾ ಕರುಣಾ ನಿಧಿಯೇ ನಿನ್ನ ಹೊರತಿ ನ್ನನ್ಯರು ಗತಿಯಿಲ್ಲೆನ್ನುತ ನಾ ಚರಣಕಮಲಕೆ ಮೊರೆಹೊಕ್ಕೆ ಪರಮಾನಂದಾತ್ಮ ಸ್ವರೂಪದಾ ಅರಿವನು ನೀಡಿ ಪೊರೆವುದು ಎನ್ನಶಂಕರ ಗುರುದೇವಾ
--------------
ಶಂಕರಭಟ್ಟ ಅಗ್ನಿಹೋತ್ರಿ