ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡದಿಲ್ಲದ ಚಿತ್ರ ನಾ ಕಂಡೆ ಪ ಕೋತಿ ಸತ್ತುದ ಕಂಡೆ ಕೋಣನಳಿದುದ ಕಂಡೆಮಾತಿಗೆ ಬಾರದ ನಾಯ ಹರಿ ತಿಂಬುದ ಕಂಡೆ 1 ಕಾಗೆ ಕಣ್ಣು ಹೋದುದ ಕಂಡೆ ಕಳ್ಳರ ತಲೆ ಬಿದ್ದುದ ಕಂಡೆಕೋಗಿಲೆ ಕೊನೆಯಲಿ ಕೂಗಿದುದ ಕಂಡೆ 2 ಮರವ ಕಡಿದುದ ಕಂಡೆ ನೆರಳಲಿ ನಿಂತುದ ಕಂಡೆಬರಿಯ ವೋಡಲಿ ಹಾಲ ಕರೆದುಂಬುದ ಕಂಡೆ 3 ನೀರ ಮೇಲೆ ಒಲೆ ಉರಿವುದ ಕಂಡೆಮೇರುವಿನ ಶಿಖರದಿ ಜ್ಯೋತಿಯ ಕಂಡೆ 4 ಇರುಳು ಹಗಲು ಒಂದಾಗಿ ಇರುವುದ ಕಂಡೆಗುರು ಚಿದಾನಂದ ಬ್ರಹ್ಮವ ಗುರುತಿಲ್ಲದ ಕಂಡೆ5
--------------
ಚಿದಾನಂದ ಅವಧೂತರು
ಯೋಗಿ ದಿವಾಳಿ ತನ್ನಉದ್ಯೋಗವುಡುಗಿ ಕೈಗಂಟು ಮುಳುಗಲು ಪ ಕ್ಲೇಶ ಪಂಚಕವೆಂಬ ಕಡು ತವಕವದು ಹರಿಯಿತುಈಷಣತ್ರಯವೆಂಬ ಇಟ್ಟ ಉದ್ರಿನಿಂತಿತು1 ತಪ್ತನಾಲಕು ಒಡವೆ ತಾರದಲ ಹೋಯಿತುಲಿಪ್ತಿ ಇಂದ್ರಿಯ ಲಾಭ ಲಿಂಗಾರ್ಪಿತವಾಯಿತುಗುಪ್ತ ಜೀವವು ತಾನು ಗುರುತಿಲ್ಲದೆ ಮುಳುಗಿತು2 ದೇಣಿಗಾರನು ಚಿದಾನಂದನು ಒಂದೇ ಕುಳಿತುದೇಣಿಯ ಸಲಿಸೆಂದು ಗಾಣಗತಿಯನೆ ಮಾಡಿದೇಣಿಯಕೆ ಸರ್ವವೆಲ್ಲ ಧಾರೆಯನೆರೆದೆಮಾಣದಲೆ ತನ್ನಾಳು ಮಗನ ಮಾಡಿಕೊಂಡ3
--------------
ಚಿದಾನಂದ ಅವಧೂತರು