ಒಟ್ಟು 7 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೀರ್ಥ ಪಿಡಿದವರೆಲ್ಲ ತಿರುನಾಮಧಾರಿಗಳೆ - ಜನ್ಮ ಪ ಸಾರ್ಥಕವಿಲ್ಲದವರೆಲ್ಲ ಭಾಗವತರೆ ಅ ಮೂಗ್ಹಿಡಿದು ನೀರೊಳಗೆ ಮುಳುಗಿ ಜಪತಪ ಮಾಡಿನಿಗಮಾಗಮ ಪುರಾಣಗಳನೋದಿ ತಿಳಿದುಬಾಗಿ ಪರಸ್ತ್ರೀಯರನು ಬಯಸಿ ಕಣ್ಣಿಡುವಂಥಯೋಗ ಭ್ರಷ್ಟರೆಲ್ಲ ದೇವ ಬ್ರಾಹ್ಮಣರೆ ? 1 ಪಟ್ಟೆ ನಾಮವ ಬಳಿದು ಪಾತ್ರೆ ಕೈಯಲಿ ಹಿಡಿದು ಗುಟ್ಟಿನಲಿ ಜಪಿಸುವ ಗುರುತರಿಯದೆಕೆಟ್ಟ ಕೂಗನು ಕೂಗಿ ಹೊಟ್ಟೆಯನು ಹೊರೆವಂಥಪೊಟ್ಟೆಗುಡುಮಗಳೆಲ್ಲ ಪರಮ ವೈಷ್ಣವರೆ ? 2 ಲಿಂಗಾಂಗದೊಳಗಿರುವ ಚಿನ್ಮಯವ ತಿಳಿಯದೆಅಂಗಲಿಂಗದ ನೆಲೆಯ ಗುರುತರಿಯದೆಜಂಗಮ ಸ್ಥಾವರದ ಹೊಲಬನರಿಯದ ಇಂಥಭಂಗಿಮುಕ್ಕಗಳೆಲ್ಲ ನಿಜ ಲಿಂಗವಂತರೆ ? 3 ಅಲ್ಲಾ ಖುದಾ ಎಂಬ ಅರ್ಥವನು ತಿಳಿಯದೆಮುಲ್ಲ ಶಾಸ್ತ್ರದ ನೆಲೆಯ ಮುನ್ನರಿಯದೆಪೊಳ್ಳು ಕೂಗನು ಕೂಗಿ ಬಗುಳಿ ಬಾಯಾರುವಂಥಕಳ್ಳ ಸುಳ್ಳರಿಗೆಲ್ಲ ವೀರ ಸ್ವರ್ಗವುಂಟೆ ?4 ವೇಷ ಭಾಷೆಯ ಕಲಿತು ಗೋಸಾಯಿ ಉಡೆದೊಟ್ಟುಆಸೆಯನು ತೊರೆಯದೆಯೆ ತಪಕೆ ಕುಳಿತುವಾಸನೆಯ ಗುರುತಿನಾ ಹೊಲಬನರಿಯದ ಇಂಥವೇಷಧಾರಿಗಳೆಲ್ಲ ಸಂನ್ಯಾಸಿಗಳೆ ? 5 ಆರು ಚಕ್ರದ ನೆಲೆಯ ಅಷ್ಟಾಂಗ ಯೋಗದಲಿಮೂರು ಮೂರ್ತಿಯ ಮೂರು ಕಡೆಯೊಳಿರಿಸಿಮಾರ ಪಿತನಹ ಕಾಗಿನೆಲೆಯಾದಿ ಕೇಶವನಸಾರಿ ಭಜಿಸಿದವರಿಗೆ ಕೊರೆವ ಕೊರತೆಯುಂಟೆ ? 6
--------------
ಕನಕದಾಸ
ದಾಸನೆನಿಸು ಜೀಯಾ ಶ್ರೀ ವರದೇಶ ವಿಠಲರಾಯಾ ದಾಸರಥಿಯೆ ಯನ್ನಾಶೆ ತಳೆದು ನಿರ್ದೋಷನೆನಿಸಿ ಬಹು ಮೀಸಲು ಮನವಿತ್ತು ಪ ವರದೇಂದ್ರರ ಆಜ್ಞಾದಿಂದಲಿ ಗುರುವರ ಮಹಾಪ್ರಾಜ್ಞಾ ವರದೇಶ ವಿಠಲೆಂಬ ಗುರುತಿನ ಮುದ್ರಿಕೆ ಪರಮ ಪಾಮರಗೆ ತ್ವರ ಕರುಣಿಸಿದಕೆ 1 ಶೂನ್ಯ ನಾನು ಸರ್ವದ ಹೀನ ವಿಷಯ - ರತನು ವಾನರನ ತರದಿ ಮಾಣಿಕೆಂಬ ತೆರ ಹೀನನೆನಿಸದಲೆ ಪೋಣಿಸು ಸನ್ಮತಿ2 ಏಸು ಪೇಳಲಿನ್ನಾ ಶ್ರೀ ವರ- ದೇಶ ವಿಠಲ ನಿನ್ನಾ ದಾಸರ ವಚನಕೆ ದೋಷ ಬಾರದಂತೆ ಲೇಸು ಭಕುತಿ ಜ್ಞಾನ ದಾಸ್ಯವಿತ್ತು ತವ 3
--------------
ವರದೇಶವಿಠಲ
ನಾನೇ ಭ್ರಮಿಸಿದೆನೋ ವಿಷಯ ಸಂಗ ನೀನೇ ನಲಿದಿತ್ತೆಯೋ ಪ. ಗಾನಲೋಲನೆ ಕೃಷ್ಣ ಏನೆಂಬುದರಿಯೆನೊ ಮೌನಿ ಜನಪ್ರಿಯ ಧ್ಯಾನಗಮ್ಯನೆ ರಂಗ ಅ.ಪ. ನೂಕುತ ದಿನ ಕಳೆದೆ ಕಾಕು ಯುಕುತಿಯಲ್ಲಿ ವ್ಯಾಕುಲ ಮನಕಿಲ್ಲ ಶ್ರೀಕಾಂತ ನಿನ್ನಿಚ್ಛೆ ಸುಖದುಃಖ ನಿಕರವ 1 ಆಟ ಪಾಟ ನೋಟವೂ ಊಟ ಕೂಟ ಕಾಟ ಕರ್ಮಗಳೆಲ್ಲವೂ ಹಾಟಕಾಂಬರ ನಿನ್ನಾಟವÉನ್ನಲುಭವ ದಾಟಿಸುವವೊ ತೆರೆ ಏಟಿಗೆ ಕೊಡುವುವೋ 2 ನರಕಕೆ ಕಾರಣವೋ ಹೇ ಶ್ರೀನರ ಹರಿ ನಿನ್ನ ಪ್ರೀತಿ ಕರವೋ ಸಂಚಿತ ಕರ್ಮ ಹರಿಸುತ ವರ ಸುಖ ಪಾಲಿಪ ಗುರುತಿನ ಪರಿಯೋ 3 ದೇಹಕ್ಕೆ ಹಿತಕರವೋ ಇಲ್ಲವೆ ಮನ ದಾಹಕ್ಕೆ ಮೃತ ಕರವೋ ದೇಹ ಮೋಹಾದಿಗಳಳಿದು ನಿಶ್ಚಲ ತತ್ವ ಶ್ರೀಹರಿ ತೋರುವ ತೆರವೊ ಒಂದರಿಯೆ 4 ಪಾಪಕ್ಕೆ ಹಿತಕರವೋ ಇಲ್ಲವೆ ಮನ ದಾಹಕ್ಕೆ ಮೃತ ಕರವೋ ದೇಹ ಮೋಹಾದಿಗಳಳಿದು ನಿಶ್ಚಲ ತತ್ವ ಶ್ರೀಹರಿ ತೋರುವ ತೆರವೊ ಒಂದರಿಯೆ 5 ಪಾಪಕ್ಕೆ ಕಾರಣವೋ ಈ ಕರ್ಮಗಳ ಳಾಪದುದ್ಧಾರಕವೋ ಗೋಪಾಲಕೃಷ್ಣವಿಠ್ಠಲನೆ ಮದ್ಗುರು ಬಿಂಬ ವ್ಯಾಪಾರದ್ವಯ ನಿಂದು ನೀ ಪ್ರೀತನಾಗಲೊ 6
--------------
ಅಂಬಾಬಾಯಿ
ಮನವೇ ಸುಮ್ಮನೆ ಇರಬೇಡ ಅರೆನಿಮಿಷವಾದರುಮನವೇ ಸುಮ್ಮನೆ ಇರಬೇಡಪ ಕನಸಿನಂತಿಹ ಸಂಸಾರವ ನೆಚ್ಚಿಘನತರ ಪಾಪಕೆ ಗುರಿಯಾಗಬೇಡ ಅ ರೊಕ್ಕದಾಸೆಯ ಬಿಡಬೇಕು ಸ್ತ್ರೀ ಮೋಹಕೆಸಿಕ್ಕದೆ ನಡಕೊಳಬೇಕುಅಕ್ಕರು ದೇಹದೊಳಿರದಿರಬೇಕುಶಕ್ತಿಯ ಮೀರಿ ಧರ್ಮವ ಮಾಡಬೇಕುಮುಕ್ಕಣ್ಣ ಹರನ ಪೂಜಿಸಬೇಕುಮುಕ್ತಿ ಮಾರ್ಗವ ಪಡಕೊಳಬೇಕು 1 ಸರ್ವನಿಸ್ಪøಹನಾಗಬೇಕು ಸಂಸಾರದಿಚರಿಸುತಲೂ ಇರಬೇಕುಗುರುಹಿರಿಯರ ಕಂಡು ನಡೆಯಲು ಬೇಕುಪರರ ನಿಂದಿಸಿ ನುಡಿಯದೆ ಇರಬೇಕುಬರೆ ಸುಖ ದುಃಖವು ಸಮಗಾಣಬೇಕುಇರುಳು ಹಗಲು ಶಿವ ಶಿವ ಎನ್ನಬೇಕು2 ತನ್ನ ತಾನೆ ತಿಳಿಯಬೇಕು ತೋರುವ ಲೋಕವನ್ನು ದೃಶ್ಯವೆಂದಿರಬೇಕುತನ್ನಂತೆ ಸಕಲರ ನೋಡಲು ಬೇಕುಮಾನ್ಯರ ಕಂಡರೆ ಮನ್ನಿಸಬೇಕುಅನ್ಯನಾದರು ಹಿತವನೆ ಮಾಡಬೇಕುಪ್ರಸನ್ನ ರಾಮೇಶನನೆನಹಿರಬೇಕು 3 ವಣಗಿದ ಕಂಭದೊಳೊಗೆದುಬಣಗು ದಾನವನ ಗೆಲಿದುಕುಣಿಕುಣಿದಾಡಿದೆಯಂತೆ ಯಾಕಯ್ಯ ಶ್ರೀಕೃಷ್ಣಸೆಣಸಿದ ರಾಕ್ಷಸನ ಗೆಲಿದುವಿನಯದೆ ಪ್ರಹ್ಲಾದಗೊಲಿದುಅಣಿಯರ ಲೋಕವ ಕಾಯ್ದೆ ಎಲೆಸತ್ಯಭಾಮೆ 4 ಬಲು ಚಂದವಾಯಿತಯ್ಯ ಲೋಕಾ-ವಳಿಯೊಳು ದೊಡ್ಡವನಯ್ಯಬಲಿಯ ಕೂಡೆ ದಾನವ ಬೇಡುವರೆ ಕೃಷ್ಣಬಲಿಯ ದಾನವನ್ನೇ ಬೇಡಿಇಳೆಯ ಮೂರಡಿಯ ಮಾಡಿಸಲಹಿದೆ ಸರ್ವಸುರರ ಎಲೆ ಸತ್ಯಭಾಮೆ 5 ಧರಣೀಪಾಲಕರ ಗೆಲಿದಗರ್ವವಿರಲಿ ಹೆತ್ತತಾಯಶಿರವನರಿದ ದುರುಳರುಂಟೆ ಹೇಳಯ್ಯ ಕೃಷ್ಣಗುರುವಚನವನ್ನು ಮೀರೆನರಕಲೋಕವೆಂದು ಕಾಯಶಿರವನರಿದು ಮರಳಿ ಪಡೆದ ಎಲೆ ಸತ್ಯಭಾಮೆ6 ಮೂರು ಲೋಕವರಿಯೆ ಸೀತಾನಾರಿಯ ಕಳೆದುಕೊಂಡುಊರೂರ ತಿರುಗಿದೆಯಂತೆ ಯಾಕಯ್ಯಾ ಕೃಷ್ಣನೀರೊಳು ಸೇತುವ ನಿಲಿಸಿವೀರ ರಾವಣನ ಜಯಿಸಿವಾರಿಜಾಕ್ಷಿಯ ತಂದೆನೆ ಎಲೆ ಸತ್ಯಭಾಮೆ 7 ದುರುಳ ಪರಮಹಂಸರಂತೆಕರದಿ ನೇಗಿಲ ಹಿಡಿದೆಶರಖಡ್ಗಗಳಿಲ್ಲವೇನೋ ಶ್ರೀಕೃಷ್ಣರಾಯಸುರರಿಪು ಪ್ರಲಂಬಾದಿಗಳಶಿರವನರಿದು ಜೈಸಿದಂಥಾಗುರುತಿನ ಆಯುಧ ಕಾಣೆ ಎಲೆ ಸತ್ಯಭಾಮೆ8 ಮಂದಿಯ ಮುಂದೆ ಬತ್ತಲೆನಿಂದು ಓಡಾಡಿದೆಯಂತೆಚಂದವಾಯ್ತು ನಿನ್ನ ನಡತೆ ಹೇಳೆಲೋ ಕೃಷ್ಣಹಿಂದೆ ತ್ರಿಪುರದ ನಾರೀವೃಂದವ ಮೋಹಿಸಿ ಸರ್ವವೃಂದಾರಕರ ಪೊರದೆ ಎಲೆ ಸತ್ಯಭಾಮೆ 9 ದೊರೆತನವು ನಿನ್ನದೆಂದುಧರಣೀದೇವತೆಯು ಬಂದುಮೊರೆಯಿಟ್ಟಳದೇಕೋ ಪೇಳೋ ಶ್ರೀಕೃಷ್ಣರಾಯತುರಗವನೇರಿ ಖಡ್ಗವಧರಿಸಿ ಯವನ ಸೈನ್ಯವನ್ನುಮುರಿದು ಧರೆಯ ಪೊರೆದೆ ಕಾಣೆ ಎಲೆ ಸತ್ಯಭಾಮೆ 10 ಇಂತು ಕೇಳ್ದ ಸತ್ಯಭಾಮಾಕಾಂತೆಯ ಮಾತಿಗೆ ಮೆಚ್ಚಿಕಾಂತೆಯರೊಳು ಕಟ್ಟಾಣಿ ಬಾರೆಂದು ಕರೆದುಕಂತುಜನಕ ಕೆಳದಿಪುರದಕಾಂತ ಗೋಪಾಲಕೃಷ್ಣನುಸಂತಸವ ಮಾಡಿದನಿನ್ನೆಂತು ಪೇಳ್ವೆನೆ11
--------------
ಕೆಳದಿ ವೆಂಕಣ್ಣ ಕವಿ
ಯಾರಿಗುಸುರಲಿ ಸಾರತತ್ವ ವಿ ಚಾರ ಭವದೂರಾ ಪ ಚಾರು ಸೇರಿ ಮುಕ್ತಿಯ ಸೊರೆವಿಡಿವುದಿನ್ಯಾರಿಗುಸುರಲಿ ಅ.ಪ. ಶ್ರೀ ಗುರುನಾಥನ ಕಟಾಕ್ಷದಿ ತ್ಯಾಗಿಸಿ ಸಂಸಾರದ ಗೊಡವೆಯ ಯೋಗಿಯಂದದೊಳಿದ್ದು ಆಗಮ ನಿಗಮಾರ್ಥಕೆ ಸಿಲುಕದ ಯೋಗ ಘನವನೊಳಗೊಂಡಿಹ ಅಂಗದ ಯೋಗಾನಂದದುಯ್ಯಾಲೆಯ ತೂಗಿ ನೆಲೆಗೆ ನಿಂದಿಹ ನಿಜಸುಖವಿನ್ಯಾರಿಗುಸುರಲಿ 1 ಉದರದ ನಾಭಿಯ ನೀಳದ ತುದಿ ಹೃದಯ ವಾರಿಜದೊಳಗಿಪ್ಪ ಶಿವ ಸದನ ಲಿಂಗವ ಕಂಡು ಅದು ಇದು ಬೇರ್ಪಡಿಸದೆ ಹೃದಯದಿ ಚದುರ ಸಾಧು ಸತ್ಪುರುಷರ ಮತದಲಿ ಮುದದಿ ಮುಕ್ತಿ ಮಾನಿನಿಗೆ ಮಂಗಲ ಮದುವೆಯಾದ ಮನಸಿನ ಮಹಾ ಗೆಲವಿನ್ಯಾರಿಗುಸುರಲಿ 2 ನೆತ್ತಿಯೊಳ್ ಹೊಳೆ ಹೊಳೆವ ಚಿದಾ ದಿತ್ಯನ ಪ್ರಕಾಶವ ಕಂಡು ಚಿತ್ತದಿ ನಲಿದಾಡಿ ಉತ್ತಮಾನಂದಾತ್ಮರಸ ಸವಿ ಯುತ್ತ ಚಪ್ಪರಿದು ಶರಣರ ಮೊತ್ತದೊಡನೆ ಕುಣಿಕುಣಿದು ಬ್ರಹ್ಮನ ಗೊತ್ತು ತಿಳಿದ ಗುರುತಿನ ವಿಸ್ತರವಿನ್ಯಾರಿಗುಸುರಲಿ 3 ಕುಂದುವ ಕಾಯದ ಸುಖಿಕೆಳೆಸದೆ ಹೊಂದಿದ ಸರ್ವಾಂಗದ ಶೋಧಿಸಿ ಒಂದೇ ದೇವನೊಳಾಡಿ ವಂದಿಸಿ ಗುರುಹಿರಿಯರ ಚರಣಕೆ ಹೊಂದಿ ಹೊಂದಿ ಓಲಾಡುವ ಅರಿಗಳ ಬಂದಿಯೊಳಗೆ ಸಿಲುಕದೆ ಬ್ರಹ್ಮಾ ನಂದರಸಾಮೃತ ಸವಿದಿಹ ಸುಖವಿನ್ಯಾರಿಗುಸುರಲಿ 4 ಹಲವು ಯೋನಿಯೊಳಗೆ ಹೊರಳ ಕುಲ ಛಲ ಶೀಲವ ಮೂರಡಗಿಸಿ ಸುಲಭ ವಂಶದೊಳುಂಡು ಮಲಿನ ಮಾಯಾಮೋಹಕೆ ಸಿಲುಕದೆ ಬಲೆಯ ಛೇದಿಸಿ ಮುಕ್ತಾಂಜ್ಯದ ಬಗೆ ಇನ್ಯಾರಿಗುಸುರಲಿ 5
--------------
ಭಟಕಳ ಅಪ್ಪಯ್ಯ
ಶುಭ ಚರಣಕೆ ಹೊಯ್ಯಂದ ಹಂಗುರವ | ಹೊಯ್ಯಂದ ಡಂಗುರವ ಹೊಯ್ಯಂದ ಡಂಗುರವ ಹೊಯ್ಯಂದ ಡಂಗುರವ ಪ ಸಂತರೊಳಗ ಮಹಂತನು ಈತನೇ | ನಿಂತರೆ ನೆರೆಯಲಿ ಸ್ವರ್ಗದ ಸುಖವುಂಟು | ಇಂತಿಪ್ಪ ಪ್ರಪಂಚ ಪರಮಾರ್ಥವೆನಿಸಿದ | ಕರತಲ ಮಲಕಂತೆ ತೋರಿದ 1 ಗುರು ಎಂದರೆ ಹಗದೊಳು ತಾನೇ ತಾನೇ | ಮರಳು ಮಂಕಗಳಿಗೆ ಗುರುತನ ಥರವೇ | ನÉರೆಯಂತ್ರ ಮಂತ್ರದಿ ಸಿಂತ್ರಗೆಡಹುದಲ್ಲಾ | ಪರಬ್ರಹ್ಮ ಇದೆಕೋ ಯಂದಯ್ಯ ತೋರುವ2 ನರ ನಲ್ಲಾ ನರನಲ್ಲಾ ಅವತಾರ ದೇಹೆಂದು | ಧರೆಯೊಳು ಮುಂಡಿಗೆ ಹಾಕುವೆ ಇದಕಿನ್ನು | ಗುರುತಿನ ಮಾತವ ಅರಿತನು ನಂದನ ಘನ | ನೆರೆ ಸಂಶಯಾತ್ಮಗ ದುರ್ಗತಿ ತಪ್ಪದು
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಮೋ ನಮೋ ರಾಮ ಕಳುಹಿಸಿದನಮ್ಮಾ |ಮಮ ಸ್ವಾಮಿ ಬದುಕಿಹನೆ ಪೇಳೋ ತಮ್ಮ ಪವಾಸುದೇವನು ಜಗದ ಸೃಜಿಸುವನು ಕೆಡಿಸುವನು |ನಾಶವೆಲ್ಲಿಹದು ರಘುವರ್ಯಗಮ್ಮಾ ||ವಾಸವಾಗಿರೆ ವನದಿಮೃಗತರಲು ಪೋಗಿ ಜಗ- |ದೀಶ ನುಡಿದನು ಕಡೆಯ ಮಾತು ತಮ್ಮ 1ಖಳಮಾಯೆಯಲಿ ಬರಲು ರಾಘವನು ಸಂಹರಿಸೆ |ನೆಲಕುರುಳಿ ಕೂಗಿದನು ಅವನೇ ಅಮ್ಮಾ ||ಬಲುವಿಂದ ಲಕ್ಷ್ಮಣನ ಬೈದು ಅಟ್ಟಿದೆ ನಾನು |ಜಲಜಾಕ್ಷನೋರ್ವನಿಹನೇನೋ ತಮ್ಮ 2ಅನುಜಯುಕ್ತದಿ ದೇವ ಕಪಿದಂಡು ನೆರಹಿಹನು |ಹನುಮಂತ ನಾ ರಾಮದೂತನಮ್ಮಾ ||ಇನಿತು ಸತ್ಯವೊ ಅನೃತವೊ ನಂಬಿಗ್ಯಾಗದು |ಮನದ ಅನುಮಾನ ಬಿಡುವಂತೆ ಮಾಡೋ ತಮ್ಮ 3ಸಿರಿಕಾಂತ ಶ್ರೀಮಂತ ಕರುಣದಲಿ ಕೊಟ್ಟಿಹನು |ಗುರುತಿನುಂಗುರವನಿದು ನೋಡಿರಮ್ಮಾ ||ಪರಮಾತ್ಮನಿಗೆ ದೂತನಹುದುಶುಭವಾರ್ತೆಗಳೆ |ಇರುವನೆಲ್ಲೆದು ವಿಸ್ತರಿಸೆಲೊ ತಮ್ಮಾ 4ಕಾನನದೆ ಚರಿಸುತ ರವಿಸುತಗೊಲಿದು ಶುಕ್ರಜನ |ಹಾನಿ ಮಾಡಿದನಲ್ಲೇ ಇರುವನಮ್ಮಾ ||ಜಾನಕಿಯೆಂದೆನ್ನನು ನಿತ್ಯದಲಿ ನೆನೆಸಿ |ಏನು ಮಾಡುವನೊ ಪೇಳುವದೋ ತಮ್ಮ 5ನಿನ್ನಗಲಿ ವ್ಯಾಕುಲದಿ ನರರಂತೆ ಕೇಶವನು |ಅನ್ನ ಉದಕವನೆಲ್ಲಾ ಜರಿದನಮ್ಮಾ ||ಪನ್ನಗಾರಿ ಧ್ವಜನು ದನುಜರ ಗೆಲಿದು |ಯನ್ನ ಕೂಡುವದು ನಾ ಕಾಣೆ ತಮ್ಮ 6ತಾಯೆ ರಾವಣನಳಿದು ನಾನೊಯ್ವೆ ನಿನ್ನೀಗ |ನೋಯಿಸದೆ ಹರಿಗೀಡು ಆವನಮ್ಮಾ ||ನಾಯಕನು ನೀಂ ಭೃತ್ಯರೊಳು ತ್ವರಿತ ಬಹುದೆಂದು |ಕಾಯಜಪಿತನಿಗೆ ಬಿನ್ನೈಸೊ ತಮ್ಮ 7ಪೋಗಿ ಬರುವೆನು ನಿಮ್ಮ ಗುರುತು ಏನಿದೆ ಕೊಟ್ಟು |ಬೇಗನಪ್ಪಣೆಯೆನಗೆ ಈವದಮ್ಮಾ ||ನಾಗಶಯನಗೆ ರಾಗಟೆಯನಿತ್ತು ಪದಕೆ ತಲೆ |ಬಾಗಿರುವಳೇಳದಲೆಯೆನ್ನೋ ತಮ್ಮ 8ನಳಿನಮುಖಿಯೆ ನಮೋ ನಮೋ ದಯೆಯಿರಲಿ ಸ್ವಲ್ಪ ದಿನ |ದೊಳಗೆ ಬರುವೆವು ಚಿಂತೆ ಬೇಡವಮ್ಮ ||ಭಳಿ ಭಳಿರೆ ಪ್ರಾಣೇಶ ವಿಠ್ಠಲನ ಪೂರ್ಣ ದಯೆ |ಗಳಿಸಿ ಅಜಪಟ್ಟವನು ಆಳೋ ತಮ್ಮ 9
--------------
ಪ್ರಾಣೇಶದಾಸರು