ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಕ್ಕೊ ಇಲ್ಲೆ ಹಾನೆ ಅಖಂಡವಾಗಿ ಸದ್ಗುರು ನಮ್ಮ ಅಕ್ಕಿಸಿಕೋಬೇಕು ಗುಕ್ಕಿ ತನ್ನೊಳು ತಾ ಗುಹ್ಯವರ್ಮ ಧ್ರುವ ಹೇಳಬಾರದು ಇನ್ನೊಬ್ಬರಗೀ ಮಾತು ಬಹಳ ಗೂಢ ತಿಳಿದ ಮಹಿಪನೀವಾ ಲಕ್ಷಕೋಟಿಗೆ ಒಬ್ಬ ಪ್ರೌಢ ಒಳಗುಟ್ಟಿನ ಕೀಲು ತಿಳಿಯಲಿಕ್ಕೆ ಮಾಡಿ ಮನದೃಢ ಸುಳಹು ಕಂಡಮ್ಯಾಲೆ ಪ್ರಾಣಹೋದರೆ ಒಬ್ಬನು ಬಿಡಾ 1 ದೂರಿಲ್ಲ ದೂರಿಲ್ಲ ತಿಳಿಕೊಳ್ಳಿ ಪೂರ್ಣ ಅರಿತು ಬ್ಯಾಗ ತಿರುಗಿನೋಡಲು ತನ್ನೊಳು ದೋರುತಿದೆ ಬ್ರಹ್ಮಯೋಗ ಸಾರವೇ ಸುಖಗರವುತದೆ ನೋಡಿರೋ ರಾಜಯೋಗ ಪರದೆ ಇಲ್ಲದೆ ಗುರುತದೋರುವಾ ನೋಡಿ ಕಣ್ಣಾರೆ ಈಗ 2 ಗುರುಕೃಪೆಯಿಂದ ಗುರುತಕ ದೂರಿಲ್ಲ ಕೊಳ್ಳಿ ಖೂನ ಒಳಹೊರಗೆ ತುಂಬಿತುಳುಕುತದೆ ತಾನೆ ನಿಧಾನ ತರಳ ಮಹಿಪತಿ ಸ್ವಾಮಿ ನೋಡಲಿಕ್ಕೆದ ಒಂದೆ ಸಾಧನ ಸ್ವರೂಪರಿಯಲಿಕ್ಕೆ ಆಗುತ್ತದೆ ಬಲುಬ್ಯಾಗಲುನ್ಮನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರು ಸ್ವರೂಪದರಹು ಗುರುತದೋರುವ ಕುರುಹು ಗುರುವ್ಹೆ ಇರುವ್ಹಾಂಗ ದೋರುದೆ ಪರಾತ್ಪರವು ಧ್ರುವ ಅರವಿನಾಗ್ರದಲಿಹ ಕುರುಹುದೋರುವ ಖೂನ ಗುರುತವಾಗುದೆ ಗುರುಕೃಪೆಯ ಜ್ಞಾನ ಮರವಿನ ಮೂಲವನು ಮರೆದು ಬಿಡುವಸ್ಥಾನ ಅರವೆ ಅರವಾಗಿದೋರುವ ನಿಜ ನಿಧಾನ 1 ಅರಹು ಮರವನೆ ದಾಟಿ ಮೀರಿ ದೋರುವ ಕುರುಹು ಅರಿತು ಕೊಂಬುದೆ ತತ್ವದರವ್ಹಿನರಹು ತಿರುಹು ಮುರುವ್ಹಿನ ಅರುಹದೋರಿ ಕೊಡುವುದೇ ಸ್ಥಿರವು ಬೆರೆದು ಕೊಡುವದೆ ಗುರುಙÁ್ಞÀ ನಾನಂದ ಕುರುಹು 2 ಕರೆದು ಕರುಣಿಸಿ ದಯವು ಬೀರಿದನುಭವ ಸುಖವು ಗುರುಭಾನುಕೋಟಿ ಪ್ರಕಾಶ ಎನಗೆ ಅರವೆ ಅರಿವ್ಹಾಗಿ ತೋರಿತು ಮನೋನ್ಮನವಾಗಿ ತರಳ ಮಹಿಪತಿಗೆ ಘನ ಬೆಳಗೆ ಬೆಳಕು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು