ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುತಕೆ ಮುಟ್ಟದೆ ಗುರುತದ ಮಾತನು ಆಡಬೇಡ |ಗುರುವಿನ ಸನ್ಮುಖ ಗರ್ವ ಅಹಂಕಾರ ಮಾಡಬೇಡ ಪ ನರಜನ್ಮಕೆ ಬಂದು (ಅಸಿದ್ಧದವರ ಕಾಡಬೇಡ) ಗುರುವಿನ ಭಕ್ತಿಯ ಮಾಡದವನ ಮೋರೆ ನೋಡಬೇಡ 1 ಮನದೊಳಗಿನ ಮಾತು ಸದ್ಗುರುವಿನ ಮುಂದೆ ಮುಚ್ಚಬೇಡ |ಧನವಗಳಿಸಿಕೊಂಬ ನಾ ಬಲು ದೊರೆಯೆಂದು ನೆಚ್ಚಬೇಡ 2 ಎನ್ನ ನೆಂಟರ ಚಿಂತಿಯ ಮನೆಯೊಳು ಸೇರಬೇಡ |ಜ್ಞಾನಬೋಧನ ಪ್ರಭು ಗೋವಿಂದನ ಮಾತು ಮೀರಬೇಡ 3
--------------
ಜ್ಞಾನಬೋದಕರು
ಮುಖ್ಯಬೇಕು ಗುರುಭಕ್ತಿಗೆ ತಾ ಸದ್ಭಾವನೆ ಸಪ್ರೇಮ ಸಿಕ್ಕಿ ಬಾಹ್ವ ಸಾಧಿಸಿ ತನ್ನೊಳು ಶ್ರೀಗುರುಸರ್ವೋತ್ತಮ ಧ್ರುವ ಸೋಹ್ಯ ತಿಳಿದರೆ ಸಾಧಿಸಿಬಾಹುದು ಶ್ರೀಗುರುವಿನ ಶ್ರೀಪಾದ ದೇಹ ನಾನಲ್ಲೆಂಬು ಭಾವನಿ ಬಲಿವುದು ತಾ ಸರ್ವದಾ ಗುಹ್ಯಮಾತು ಗುರುತಕೆ ಬಾಹುದು ಸದ್ಗುರು ಸುಪ್ರಸಾದ ಬೋಧ 1 ಕೀಲು ತಿಳಿದರೆ ಕಿವಿ ಸಂದಿಲ್ಯಾದೆ ಮೂಲಮಂತರದ ಖೂನ ಕೂಲವಾದರೆ ಗುರುದಯದಿಂದಲಿ ಕೇಳಿಸುವದು ಪೂರ್ಣ ಮ್ಯಾಲೆ ಮಂದಿರದೊಳು ತಾ ತುಂಬೇದ ಥಳಥಳಿಸುವ ವಿಧಾನ ಶೀಲ ಸುಪಥ ಸಾಧಿಸಿ ಸದ್ಗತಿ ಸಾಧನ 2 ಟೂಕಿ ಬ್ಯಾರ್ಯಾದೆ ಏಕೋಭಾವದಿ ಕೇಳಿರೊ ನೀವೆಲ್ಲ ಹೋಕು ಹೋಗಿ ಹುಡುಕಿದರೆ ತಾ ಎಂದಿಗೆ ತೋರುವದಲ್ಲ ಶೂನ್ಯ ಜೋಕೆಯಿಂದ ಜಾಗಿಸಿಕೊಡುವಾ ಮಹಿಪತಿಗುರು ಮಹಾಮಲ್ಲ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶರಣಾರ್ಥಿ ಶಿವಶರಣಾರ್ಥಿ | ಹರಿಹರ ಎಂದು ಶಿವಪದ ಕಂಡವಗೆ ಪ ಗುರುವಿಗೆರಗೆ ನಿಜ ಗುರುತಕೆ ಬಂದಿನ್ನು | ಧರೆಯೊಳು ಪುಣ್ಯ ಜಂಗಮನೆ ವಾಸಿ | ಅರಹುಮರಹು ಮೀರಿ ಸಹಜಾವಸ್ಥಿಗೆ | ಬೆರದಿಹ ಶರಣಗೆ 1 ಎದೆಸೆಜ್ಜೆಯೊಳಗಿಹ ಘನಲಿಂಗ ಪೂಜಿಸಿ | ಮುದದಿಂದ ಭಕ್ತಿಯ ಪಾವುಡದೀ | ಸದ್ಭಾವ ಸೂತ್ರದಿ ಆವಗುಧರಿಸಿಹ | ವಿದಿತ ಲಿಂಗಾಂಗಿಗೆ 2 ಆಶೆಯಸುಟ್ಟು ವಿಭೂತಿಯ ಹಚ್ಚಿದ | ಧ್ಯಾಸದಂಡ ಕೈಲಿ ಪಿಡಿದು | ಲೇಸಾದ ಸುಗುಣ ರುದ್ರಾಕ್ಷಿಯ ತೊಟ್ಟು | ಭಾಸಿಪ ಸಂತಗೆ 3 ಶಾಂತಿಯ ತೊಡರವ ಕಟ್ಟಿ ವಿವೇಕದ | ಮುಂತಾದ ಕಾಷಾಯ ಪೊದ್ದಿಹನಾ | ಸಂತತ ಗುರುಧರ್ಮ ಭಿಕ್ಷೆಯನುಂಡು | ವಿಶ್ರಾಂತಿಯ ಮಠ ಹಿಡಿದ ವಿರಕ್ತಗೆ 4 ಶರಣನೆನುತಾ ಅನ್ಯರ ಶರಣರ ಮಾಡೀ | ಶರಣ ತಾನೆಂಬ ವೃತ್ತಿಯನುಳಿದು | ದ್ಧರಿಸಿದ ಮೂರ್ತಿಗೆ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು