ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾವಿನಕೆರೆ 3 ನಮ್ಮೂರ ದ್ಯಾವರೇ ಬೊಮ್ಮನಪ್ಪನು ಎಂದು ಹೊಯ್ಸಿರೋ ಡಂಗುರವನು ಪ ನಿಮ್ಮ ನೆಂಟರಿಗೆಲ್ಲ ನಿಮ್ಮ ಮಕ್ಕಳಿಗೆಲ್ಲಾ ರಂಗಪ್ಪನವನೆಂದು ಸಾರಿಸಾರಿ ಅ.ಪ ಭೋರಪ್ಪನೆಂದರೂ ತಿಮ್ಮಪ್ಪನೆಂದರೂ ಈರಪ್ಪನೆಂದರೂ ಒಬ್ಬನಣ್ಣ ಸಾರಿ ಡಂಗುರವನು ಹೊಯ್ಸಿರಣ್ಣ 1 ಕುರಿಕೋಳಿ ಕೋಣಗಳ ಶಿರವ ತರಿಯಲು ಬೇಡಿ ನರರಂತೆ ಜೀವಿಗಳು ಅವುಗಳಣ್ಣ ಬರಿಯ ಭಕ್ತಿಯೇ ಸಾಕು ಗುರುಡವಾಹನನವನು ಪರಮಾತ್ಮನವನೆಮ್ಮ ಕಾಯ್ವನಣ್ಣ 2 ರಂಗ ನರಶಿಂಗನು ಗಂಗೆಯನು ಹೆತ್ತನೂ ಗಂಗೆಯನು ಹೊತ್ತವನೂ ಒಬ್ಬನಣ್ಣ ಶಿಂಗರದ ಗೋಪಾಲ ಮಾಂಗಿರಿಯ ರಂಗನೂ ಒಬ್ಬನೇ ತಾನೆಂದು ತಿಳಿಯಿರಣ್ಣ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಲಕ್ಷ್ಮೀಶ ನರಹರಿ ವಿಠ್ಠಲನೆ ಸಲಹೊ ಪ ಪಕ್ಷೀಂದ್ರ ವಾಹನನೆ ಈಕ್ಷಿಸುತ ಕರುಣದಿಂರಕ್ಷಿಸಲಿ ಬೇಕಿವಳ ಲಕ್ಷ್ಮಣಾಗ್ರಜನೇ ಅ.ಪ. ದೀನಜನ ಮಂದಾರ ಜ್ಞಾನದಾಯಕನೆ ಸುರ-ಧೇನು ಭಕ್ತರಿಗೆ ಕಾಮಿತವ ಕೊಡುವಲ್ಲಿ |ನೀನಿವಳಿಗೇ ಮೋಕ್ಷಜ್ಞಾನವನೇ ಪಾಲಿಸುತಸಾನುರಾಗದಿ ಸಲಹೊ ಪ್ರಾಣಾಂತರಾತ್ಮ 1 ಸೃಷ್ಟಿ ಸ್ಥಿತಿ ಸಂಹಾರ ಕರ್ತನೀನೆಂದೆನಿಪೆವೃಷ್ಟಿಕುಲ ಸಂಪನ್ನ ಜಿಷ್ಣು ಸಖ ಹರಿಯೇ |ಕಷ್ಟನಿಷ್ಠೂರಗಳ ಸಹಿಸುವಡೆ ಧೈರ್ಯವನುಕೊಟ್ಟು ಕೈ ಪಿಡಿಯುವುದು ಕೃಷ್ಣ ಮೂರುತಿಯೇ2 ಪತಿಯೆ ಪರದೈವ ವೆಂಬುನ್ನತದ ಮತಿಯಿತ್ತುಹಿತದಿಂದ ಹರಿಗುರು ಸೇವೆಯಲಿ ರತಿಯಸತತ ನಿನ್ನಯ ನಾಮ ಸ್ಮøತಿಯನ್ನೇ ವದಗಿಸುತಕೃತಿಪತಿಯೆ ನೀನಿವಳ ಉದ್ಧರಿಸು ಹರಿಯೇ 3 ತಾರತಮ್ಯ ಜ್ಞಾನ ವೈರಾಗ್ಯ ಭಕುತಿ ಕೊಡುಮೂರೆರಡು ಭೇಧಗಳ ಅರಿವಿತ್ತು ಹರಿಯೇಮಾರಪಿತ ಇವಳ ಹೃದ್ವಾರಿಜದಿ ತವ ರೂಪತೋರುತಲಿ ಸನ್ಮುದವ ಬೀರುವುದು ಹರಿಯೇ 4 ಸರ್ವಾಂತರಾತ್ಮನೆ ಗುರುಡವಾಹನ ದೇವಸರ್ವಜ್ಞ ಸರ್ವೇಶ ಮಮ ಕುಲ ಸ್ವಾಮೀ |ನಿರ್ವಿಘ್ನದಿಂದೆನ್ನ ಪ್ರಾರ್ಥನೆಯ ಪೂರೈಸೊಸರ್ವಸುಂದರ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಶೇಷ ಅತಿ ಶೋಭಿಸುತಿದೆ ಶ್ರೀಪತಿವಾಹನ ಪ ಚತುರದಶ ಲೋಕದಲಿ ಅಪ್ರತಿವಾಹನ ಅ.ಪ. ವಿನುತಕಶ್ಯಪ ಮುನಿಗೆ ತನಯನೆನಿಸಿದ ವಾಹನ ಅನುಜರನು ಕದ್ದೊಯ್ದ ಅತ್ಯಾಢ್ಯ ವಾಹನ ವನಧಿ ಮಧ್ಯಧಿ ನಾವಿಕರ ಭಕ್ಷಿಸಿದ ವಾಹನ ಜನಪನಾಜ್ಞದಿ ಕೂರ್ಮಾಗಜರ ನುಂಗಿದ ವಾಹನ1 ಕುಲಿಶಪಾಣಿಯ ಕೂಡೆ ಕಲಹ ಮಾಡಿದ ವಾಹನ ಒಳಹೊಕ್ಕು ಪೀಯೂಷ ತಂದ ವಾಹನ ಮಲತಾಯಿ ಮಕ್ಕಳನು ಮರುಳುಗೊಳಿಸಿದ ವಾಹನ ವಾಹನ 2 ಕಾಲನಾಮಕನಾಗಿ ಕಮಲಭವನಲಿ ಜನಿಸಿ ಕಾಲಾತ್ಮಹರಿಯ ಸೇವಿಪ ವಾಹನ ಕಾಳಗದಿ ಕಪಿವರರ ಕಟ್ಟುಬಿಡಿಸಿದ ವಾಹನ ವಾಲಖಿಲ್ಲರ ಪಿಡಿದ ವರವಾಹನ 3 ವಾಹನ ನಿಜ ರೂಪದಿ ಹರಿಸೇವೆಗೈವ ವಾಹನ ಆ ಪಿತೃಗಳಿಗಮೃತ ಪ್ರಾಪ್ತಿಸಿದ ವಾಹನ ವಾಹನ 4 ಪನ್ನಗಾಶನವಾಹನ ಪತಿತ ಪಾವನ ವಾಹನ ಸನ್ನುತಿಪ ಭಕ್ತರನು ಸಲಹುವ ವಾಹನ ಪನ್ನಗಾದ್ರಿನಿವಾಸ ಜಗನ್ನಾಥ ವಿಠ್ಠಲಗೆ ಉನ್ನತ ಪ್ರಿಯವಾದ ಶ್ರೀ ಗುರುಡವಾಹನ 5
--------------
ಜಗನ್ನಾಥದಾಸರು