ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಡಿ ಇನಿಯನ ವಶದಿ ಮನಸಿಜನಯ್ಯನ ದಯದಿಂದ ಬಾಲೆ ಪ ಮನೆಗೆಲಸಗಳನು ದಿನಗೈಯುತ ಬಲು ವಿನಯ ಸೌಶೀಲ್ಯದಿ ವನಿತೆಯರೊಳು ನೀ 1 ಪತಿಯನು ಪರದೇವತೆಯೆಂಬುವ ಮಹಾ ಮತಿಯಲಿ ಸೇವಿಸಿ ಸುತರನು ಪಡೆದು ನೀ 2 ಗುರುಜನರಿಗೆ ಸದಾಶಿರಬಾಗುತ ಬಹು ಸರಸದಿ ಸದ್ಗುಣಾಭರಣಗಳಿಂದ ನೀ 3 ರತಿಪತಿ ಪಿತನಿಗೆ ಪ್ರತಿಮೆಗಳೆನ್ನುತ ಅತಿಥಿಗಳನು ಸಂತತ ಸತ್ಕರಿಸುತ 4 ಗಿರಿಜೆಯ ಪೂಜೆಯನು ನಿರುತದಿಗೈಯುತ ಸಿರಿಕಾರ್ಪರ ನರಹರಿಯನು ಸ್ಮರಿಸುತ 5
--------------
ಕಾರ್ಪರ ನರಹರಿದಾಸರು
ಹಿತದಿ ಜೀವಿಸು ಬಾಲೆ ಪತಿಯ ಪ ಸೇವಾನುಕೂಲೆ ಕ್ಷಿತಿಯೊಳಗೆ ಪತಿವ್ರತಾ ಧರ್ಮನಿರತಳೆನಿಸಿ ಬಹುಸುತರ ಪಡೆದು ಅ.ಪ ರತಿಪತಿಪಿತನಿಗೆ ಪ್ರತಿಮೆಗಳೆನಿಸುವ ಅತಿಥಿಗಳ ಸಂತತ ಸುಶೇವಾ- ರತಳು ಬಹು ಗುಣವತಿಯಳೆನಿಸುವ 1 ಗುರುಜನರಿಗೆ ಸದಾ ಶಿರಬಾಗಿ ನಡೆಯುತ ಹರುಷದಲಿ ಹರನರಸಿಯಳ ಪದ ಸರಸಿಜದಿ ಮನವಿರಿಸಿ ಪೂಜಿಸಿ 2 ಶರಣು ಜನಕೆ ಸುರತರುವೆನಿಪ ಕಾರ್ಪರ ಸಿರಿಮನೋಹರ ನರಹರಿಯ ಶುಭ ಚರಣಯುಗಲವ ಸ್ಮರಿಸುತನುದಿನ 3
--------------
ಕಾರ್ಪರ ನರಹರಿದಾಸರು